‘ಬಹುರೂಪಿ’ ಪ್ರಕಾಶನ ಪ್ರಕಟಿಸಿರುವ ಎನ್ ಎಸ್ ಶಂಕರ್ ಅವರ ಹೊಸ ಕೃತಿ ಇಂದು ಬಿಡುಗಡೆಗೊಂಡಿತು.
‘ಅವಧಿ ಲೈವ್’ನಲ್ಲಿ ಖ್ಯಾತ ಚಿಂತಕಿ ಎನ್ ಗಾಯತ್ರಿ ಅವರು ‘ಆಜಾದಿ ಕನ್ಹಯ್ಯ ದಲಿತ ದನಿ ಜಿಗ್ನೇಶ್’ ಕೃತಿಯನ್ನು ಬಿಡುಗಡೆ ಮಾಡಿದರು.
ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ರಾಜ್ಯ ಕಾರ್ಯದರ್ಶಿ ಸಿದ್ಧನಗೌಡ ಪಾಟೀಲ್ ಮುಖ್ಯ ಅತಿಥಿಯಾಗಿದ್ದರು.
‘ಸುದ್ದಿ ಟಿ ವಿ’ಗೆ ಸಲಹಾ ಸಂಪಾದಕರಾಗಿದ್ದ ಸಮಯದಲ್ಲಿ ಎನ್ ಎಸ್ ಶಂಕರ್ ಅವರು ನಡೆಸಿದ್ದ ಕನ್ಹಯ್ಯ ಕುಮಾರ್ ಹಾಗೂ ಜಿಗ್ನೇಶ್ ಮೇವಾನಿ ಅವರ ಸಂದರ್ಶನವನ್ನು ಈ ಕೃತಿ ಒಳಗೊಂಡಿದೆ.
ಇಂದು ಜರುಗಿದ ಇಡೀ ಕಾರ್ಯಕ್ರಮ ಹಾಗೂ ಸಂವಾದವನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ
ನೆಲೆ ಕಳೆದುಕೊಂಡು ಅಸ್ತಿತ್ವಕ್ಕೆ ಹಪಹಪಿಸುತ್ತಿರುವ ಕಮ್ಯುನಿಸ್ಟ್ ಚಳುವಳಿಯ ಮಾಜಿಗಳಿಗೆ ಕನ್ಹಯ್ಯ ಕುಮಾರ್ ಅವರು ‘ಭರವಸೆಯ ಬೆಳಕಾಗಿ’ ಕಂಡಿರುವುದು ಸದ್ಯದ ಅನಿವಾರ್ಯತೆಯಾಗಿರಬಹುದು. ಆದರೆ ಇಡೀ ಭಾರತಕ್ಕೆ ಅವರು ಭರವಸೆಯ ಬೆಳಕು ಎಂದು ಬಿಂಬಿಸಲು ಹೊರಟ ಈ ಹಿರಿಯರನ್ನು ಕಂಡು ಮನಸ್ಸು ಮುದುಡಿತು.
ಕನ್ಹಯ್ಯ ಕುಮಾರ ಒಬ್ಬ ಒಳ್ಳೆಯ ಮಾತುಗಾರ, ವಿಚಾರವಂತ..ಆದರೆ ಅವನ ತುಕ್ಡೆ ತುಕ್ಡೆ ಮಾತುಗಳನ್ನು ಮರೆಯಲು ಸಾಧ್ಯವಿಲ್ಲ…