ಬಸವರಾಜ ಕೋಡಗುಂಟಿ ಅಂಕಣ – ಬೆಂಗಾಲಿ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ

ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ

ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಕರ‍್ನಾಟಕದ ಒಂದೊಂದು ಬಾಶೆಯ ಮೇಲೆ ಮೂವತ್ತಕ್ಕೂ

ಹೆಚ್ಚು ಬಿಡಿ ಬರಹಗಳನ್ನು ಇಲ್ಲಿ ಬರೆದಿದ್ದಾರೆ.

ರ‍್ನಾಟಕದ ಸುಮಾರು ನಲವತ್ತು ಬಾಶೆಗಳ ಹಂಚಿಕೆಯನ್ನ

ಇನ್ನು ಮುಂದೆ ಪರಿಚಯಿಸಲಾಗುವುದು.

44

ಬೆಂಗಾಲಿ ದೇಶದ ದೊಡ್ಡ ಮತ್ತು ಅನುಸೂಚಿತ ಬಾಶೆಗಳಲ್ಲಿ ಒಂದು. ದೇಶದಲ್ಲಿ ಬೆಂಗಾಲಿ ಮಾತಾಡುವವರ ಸಂಕೆ ೯,೭೨,೩೭,೬೬೯ ಇದೆ. ಇದರಲ್ಲಿ ಬೆಂಗಾಲಿ, ಚಕ್ಮಾ, ಹಯ್ಜೊಂಗ್/ಹಜೊಂಗ್, ರಾಜಬನ್ಸಿ ಎಂಬ ನಾಲ್ಕು ತಾಯ್ಮಾತುಗಳು ಮತ್ತು ಇತರ ಎಂಬ ಒಂದು ಗುಂಪು ಇದೆ. ಇದರಲ್ಲಿ ಕರ‍್ನಾಟಕದಲ್ಲಿ ಕಾಣಿಸುವ ಒಟ್ಟು ಬೆಂಗಾಲಿಗಳು ೮೭,೯೬೩. ಕರ‍್ನಾಟಕದಲ್ಲಿ ಬೆಂಗಾಲಿ ಹದಿನಾಲ್ಕನೆ ಅತಿದೊಡ್ಡ ಬಾಶೆಯಾಗಿದೆ. ಇದರಲ್ಲಿ ಬಹುತೇಕರು ಬೆಂಗಾಲಿ ತಾಯ್ಮಾತನ್ನು ಆಡುವವರಾಗಿದ್ದಾರೆ. ಬೆಂಗಾಲಿ ತಾಯ್ಮಾತಿನ ಮಂದಿ ೮೭,೮೮೯ ಆಗಿದ್ದಾರೆ. ಇದರ ಹೊರತಾಗಿ ಚಕ್ಮಾ (52), ಹಯ್ಜೊಂಗ್/ಹಜೊಂಗ್ (1) ಎಂಬೆರಡು ತಾಯ್ಮಾತುಗಳು ಮತ್ತು ಇತರ (21) ಎಂಬ ಇನ್ನೊಂದು ಗುಂಪು ದಾಕಲಾಗಿವೆ.
ಕರ‍್ನಾಟಕದ ಬೆಂಗಾಲಿ ಬಾಶೆಯ ಮಾತುಗರು ದೇಶದ ಬೆಂಗಾಲಿಯ ೦.೧೪೩% ಆಗಿದ್ದಾರೆ. ಕರ‍್ನಾಟಕದಲ್ಲಿ ದಾಕಲಾದ ಬಹುತೇಕ ಬೆಂಗಾಲಿಗಳು ಬೆಂಗಳೂರು ನಗರ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಕಂಡುಬರುತ್ತಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಬೆಂಗಾಳಿಗರ ಸಂಕೆ ೬೧,೪೦೯ ಮತ್ತು ರಾಯಚೂರು ಜಿಲ್ಲೆಯಲ್ಲಿ ೧೩,೪೪೧ ಆಗಿದೆ. ಇದು ಕ್ರಮವಾಗಿ ಒಟ್ಟು ಕರ‍್ನಾಟಕದ ೬೯.೮೭೧% ಮತ್ತು ೧೫.೨೯೩% ಪ್ರತಿಶತ ಆಗುತ್ತದೆ. ಇವುಗಳ ನಂತರ ಮೂರು ಜಿಲ್ಲೆಗಳಲ್ಲಿ ಸಾವಿರಕ್ಕಿಂತ ಹೆಚ್ಚು ಮಂದಿ ಬೆಂಗಾಳಿಗರು ಸಿಗುತ್ತಾರೆ. ಅವುಗಳೆಂದರೆ, ಮಂಗಳೂರು (೨,೦೩೩), ಮಯ್ಸೂರು (೧,೩೯೬) ಮತ್ತು ಬೆಳಗಾವಿ (೧,೦೬೯). ಇವುಗಳ ಹೊರತಾಗಿ ಹತ್ತೊಂಬತ್ತು ಜಿಲ್ಲೆಗಳಲ್ಲಿ ಸಾವಿರಕ್ಕೂ ಕಡಿಮೆ ಆದರೆ ನೂರಕ್ಕೂ ಹೆಚ್ಚು ಮಂದಿ ಬೆಂಗಾಲಿಗರು ಕಾಣಸಿಗುತ್ತಾರೆ. ಉಳಿದ ಎಂಟು ಜಿಲ್ಲೆಗಳಲ್ಲಿ ನೂರಕ್ಕೂ ಕಡಿಮೆ ಮಂದಿ ದಾಕಲಾಗಿದ್ದಾರೆ.
ಇಲ್ಲಿ ಕೆಳಗೆ ಕರ‍್ನಾಟಕ ಬೆಂಗಾಲಿ ಮಾತುಗರ ಜಿಲ್ಲಾವಾರು ಪಟ್ಟಿಯನ್ನು ಕೊಟ್ಟಿದೆ.
ಪ್ರದೇಶ
ಜಿಲ್ಲೆಯ ಜನಸಂಕೆ
ಮಾತುಗರು
ಆ ಜಿಲ್ಲೆಯ %
 ಆ ಬಾಶೆಯ %

ಕರ‍್ನಾಟಕ
6,10,95,297
87,889
0.143%
100%

ಬೆಂಗಳೂರು ನಗರ 
96,21,551
61,409
0.638%
69.871%

ರಾಯಚೂರು 
19,28,812
13,441
0.696%
15.293%

ದಕ್ಶಿಣ ಕನ್ನಡ 
20,89,649
2,033
0.097%
2.313%

ಮಯ್ಸೂರು 
30,01,127
1,396
0.046%
1.588%

ಬೆಳಗಾವಿ
47,79,661
1,069
0.022%
1.216%

ಕೊಡಗು
5,54,519
941
0.169%
1.070%

ಬೆಂಗಳೂರು ಗ್ರಾಮಂತರ
9,90,923
893
0.090%
1.016%

ಬಳ್ಳಾರಿ
24,52,595
843
0.034%
0.959%

ಉತ್ತರ ಕನ್ನಡ
14,37,169
778
0.054%
0.885%

ದಾರವಾಡ 
18,47,023
641
0.034%
0.729%

ಶಿವಮೊಗ್ಗ
17,52,753
623
0.035%
0.708%

ಉಡುಪಿ 
11,77,361
528
0.044%
0.600%

ಕೋಲಾರ
15,36,401
451
0.029%
0.513%

ತುಮಕೂರು
26,78,980
377
0.014%
0.428%

ಕಲಬುರಗಿ 
25,66,326
375
0.014%
0.426%

ಬೀದರ 
17,03,300
358
0.021%
0.407%

ಹಾಸನ
17,76,421
317
0.017%
0.360%

ದಾವಣಗೆರೆ
19,45,497
262
0.013%
0.298%

ಯಾದಗಿರಿ 
11,74,271
151
0.012%
0.171%

ರಾಮನಗರ 
10,82,636
150
0.013%
0.170%

ಬಾಗಲಕೋಟೆ 
18,89,752
138
0.007%
0.157%

ಮಂಡ್ಯ
18,05,769
127
0.007%
0.144%

ಕೊಪ್ಪಳ
13,89,921
111
0.007%
0.126%

ಚಿಕ್ಕಮಗಳೂರು
11,37,961
110
0.009%
0.125%

ಚಿಕ್ಕಬಳ್ಳಾಪುರ
12,55,104
99
0.007%
0.112%

ವಿಜಯಪುರ
21,77,331
89
0.004%
0.101%

ಚಿತ್ರದುರ‍್ಗ
16,59,456
84
0.005%
0.095%

ಗದಗ 
10,20,791
61
0.005%
0.069%

ಹಾವೇರಿ
15,97,668
30
0.001%
0.034%

ಚಾಮರಾಜನಗರ
10,20,791
8
7.837%
0.009%

ಬೆಂಗಾಲಿ ಮಾತುಗರ ಹಂಚಿಕೆ

‍ಲೇಖಕರು Admin

January 12, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: