ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ
ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.
ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.
ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.
‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ
ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ
ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.
ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು
ಅಲುಗಾಡಿಸಬಹುದು.
ಕರ್ನಾಟಕದ ಒಂದೊಂದು ಬಾಶೆಯ ಮೇಲೆ ಮೂವತ್ತಕ್ಕೂ
ಹೆಚ್ಚು ಬಿಡಿ ಬರಹಗಳನ್ನು ಇಲ್ಲಿ ಬರೆದಿದ್ದಾರೆ.
ಕರ್ನಾಟಕದ ಸುಮಾರು ನಲವತ್ತು ಬಾಶೆಗಳ ಹಂಚಿಕೆಯನ್ನ
ಇನ್ನು ಮುಂದೆ ಪರಿಚಯಿಸಲಾಗುವುದು.
35
ಮರಾಟಿ ಕರ್ನಾಟಕದ ನಾಲ್ಕನೆ ಅತಿದೊಡ್ಡ ಬಾಶೆ. ಕರ್ನಾಟಕದಲ್ಲಿ ಮರಾಟಿ ಮಾತುಗರ ಸಂಕೆ 20,64,906 ಆಗಿದೆ. ಇದು ದೇಶದ ಒಟ್ಟು ಮರಾಟಿ ಮಾತುಗರ 2.487% ಆಗುತ್ತದೆ. ಮರಾಟಿ ಬಾಶೆಯಲ್ಲಿ ಮೂರು ತಾಯ್ಮಾತುಗಳು ಮತ್ತು ಇತರ ಎಂಬ ಒಂದು ಗುಂಪು ದಾಕಲಾಗಿವೆ. ಅವು, ಆರೆ (50,339), ಕೋಳಿ (9), ಮರಾಟಿ (20,13,090) ಮತ್ತು ಇತರ (1,468). ಇಲ್ಲಿ ಮರಾಟಿ ಮಾತಾಡುವ ಬಹುದೊಡ್ಡ ಸಂಕೆಯ ಮಂದಿ ಇದ್ದಾರೆ. ಅದರೊಟ್ಟಿಗೆ ಆರೆ ಮಾತಾಡುವವರ ಸಂಕೆಯೂ ಪರಿಗಣಿಸುವಶ್ಟಿದೆ.
ಮರಾಟಿ ಮಾತಾಡುವವರನ್ನು ಗಮನಿಸಿದಾಗ ಹೆಚ್ಚಿನ ಸಂಕೆಯ ಮರಾಟಿಗರು ಬೆಳಗಾವಿ (8,93,878) ಜಿಲ್ಲೆಯಲ್ಲಿ ಇರುವುದು ಕಾಣಿಸುತ್ತದೆ. ಕರ್ನಾಟಕದ ಮರಾಟಿಗರ ಒಟ್ಟು ಸುಮಾರು 45% ಮಂದಿ ಅಂದರೆ ಸುಮಾರು ಒಂಬತ್ತು ಲಕ್ಶದಶ್ಟು ಮಂದಿ ಬೆಳಗಾವಿಯಲ್ಲೆ ಇದ್ದಾರೆ. ಇದರ ಹೊರತಾಗಿ ಬೀದರಿನಲ್ಲಿ (3,13,176) ಮೂರು ಲಕ್ಶಕ್ಕೂ ಹೆಚ್ಚು ಮಂದಿ, ಬೆಂಗಳೂರಿನಲ್ಲಿ (1,84,459) ಎರಡು ಲಕ್ಶದಶ್ಟು ಮಂದಿ ಮತ್ತು ಕಾರವಾರ (1,36,720) ಜಿಲ್ಲೆಯಲ್ಲಿ ಒಂದೂವರೆ ಲಕ್ಶದಶ್ಟು ಮಂದಿ ಇದ್ದಾರೆ. ಕರ್ನಾಟಕದ 75%ಕ್ಕೂ ಹೆಚ್ಚು ಮಂದಿ ಮರಾಟಿಗರು ಈ ನಾಲ್ಕು ಜಿಲ್ಲೆಗಳಲ್ಲಿಯೆ ದಾಕಲಾಗಿದ್ದಾರೆ. ಉಳಿದಂತೆ ಹದಿಮೂರು ಜಿಲ್ಲೆಗಳಲ್ಲಿ ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಮತ್ತು ಇನ್ನೂ ಹದಿಮೂರು ಜಿಲ್ಲೆಗಳಲ್ಲಿ ಹತ್ತು ಸಾವಿರಕ್ಕಿಂತ ಕಡಿಮೆ ಮಂದಿ ಇದ್ದಾರೆ.
ಇಲ್ಲಿ ಕೆಳಗೆ ಮರಾಟಿ ಮಾತುಗರ ಜನಸಂಕೆಯನ್ನು ಅಟ್ಟದಲ್ಲಿ ತೋರಿಸಿದೆ.
ಪ್ರದೇಶ | ಜಿಲ್ಲೆಯ ಜನಸಂಕೆ | ಮಾತುಗರು | ಆ ಜಿಲ್ಲೆಯ % | ಆ ಬಾಶೆಯ % |
ಕರ್ನಾಟಕ | 6,10,95,297 | 20,13,090 | 3.295% | 100% |
ಬೆಳಗಾವಿ | 47,79,661 | 8,93,878 | 18.701% | 44.403% |
ಬೀದರ | 17,03,300 | 3,13,176 | 18.386% | 15.556% |
ಬೆಂಗಳೂರು | 96,21,551 | 1,84,459 | 1.917% | 9.162% |
ಉತ್ತರ ಕನ್ನಡ | 14,37,169 | 1,36,720 | 9.513% | 6.791% |
ಕಲಬುರಗಿ | 25,66,326 | 63,290 | 2.466% | 3.143% |
ದಾರವಾಡ | 18,47,023 | 58,169 | 3.149% | 2.889% |
ವಿಜಯಪುರ | 21,77,331 | 53,734 | 2.467% | 2.669% |
ಶಿವಮೊಗ್ಗ | 17,52,753 | 36,759 | 2.097% | 1.825% |
ಮಯ್ಸೂರು | 30,01,127 | 33,708 | 1.123% | 1.674% |
ಉಡುಪಿ | 11,77,361 | 33,323 | 2.830% | 1.655% |
ಬಾಗಲಕೋಟೆ | 18,89,752 | 28,032 | 1.483% | 1.392% |
ಬಳ್ಳಾರಿ | 24,52,595 | 19,910 | 0.811% | 0.989% |
ದಕ್ಶಿಣ ಕನ್ನಡ | 20,89,649 | 18,585 | 0.889% | 0.923% |
ದಾವಣಗೆರೆ | 19,45,497 | 17,621 | 0.905% | 0.875% |
ತುಮಕೂರು | 26,78,980 | 13,265 | 0.495% | 0.658% |
ಕೋಲಾರ | 15,36,401 | 10,426 | 0.678% | 0.517% |
ರಾಯಚೂರು | 19,28,812 | 10,175 | 0.527% | 0.505% |
ಚಿಕ್ಕಮಗಳೂರು | 11,37,961 | 9,817 | 0.862% | 0.487% |
ಹಾವೇರಿ | 15,97,668 | 9,542 | 0.597% | 0.473% |
ಯಾದಗಿರಿ | 11,74,271 | 9,487 | 0.807% | 0.471% |
ಮಂಡ್ಯ | 18,05,769 | 7,923 | 0.438% | 0.393% |
ಗದಗ | 10,20,791 | 7,813 | 0.765% | 0.388% |
ಹಾಸನ | 17,76,421 | 7,483 | 0.421% | 0.371% |
ಕೊಪ್ಪಳ | 13,89,921 | 6,961 | 0.500% | 0.345% |
ರಾಮನಗರ | 10,82,636 | 6,914 | 0.638% | 0.343% |
ಚಿತ್ರದುರ್ಗ | 16,59,456 | 6,212 | 0.374% | 0.308% |
ಬೆಂಗಳೂರು ಗ್ರಾಮಾಂತರ | 9,90,923 | 6,117 | 0.617% | 0.289% |
ಚಿಕ್ಕಬಳ್ಳಾಪುರ | 12,55,104 | 5,476 | 0.436% | 0.272% |
ಕೊಡಗು | 5,54,519 | 2,717 | 0.489% | 0.134% |
ಚಾಮರಾಜನಗರ | 10,20,791 | 1,398 | 0.136% | 0.069% |
ಮರಾಟಿ ಮಾತುಗರ ಹಂಚಿಕೆ
| ಇನ್ನು ಮುಂದಿನ ವಾರಕ್ಕೆ |
0 ಪ್ರತಿಕ್ರಿಯೆಗಳು