ಬಸವರಾಜ ಕೋಡಗುಂಟಿ ಅಂಕಣ – ಮಂಡ್ಯ ಜಿಲ್ಲೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು

ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ ವೈವಿಧ್ಯತೆಯತ್ತ

ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಈ ವಾರದ ಅಂಕಣದಲ್ಲಿ ಮಂಡ್ಯ ಜಿಲ್ಲೆಯ ಬಗ್ಗೆ

ಬೆಳಕು ಚೆಲ್ಲಲಾಗಿದೆ.

23

ಮಂಡ್ಯ ಜಿಲ್ಲೆಯಲ್ಲಿ ಹೆಚ್ಚಿನ ಸಂಕೆಯ ಕನ್ನಡ ಮಾತುಗರು ಕಂಡುಬರುತ್ತಾರೆ. ಜಿಲ್ಲೆಯಲ್ಲಿ ಕನ್ನಡ ಮಾತಾಡುವವರ ಪ್ರತಿಶತತೆ ೯೨%ರಶ್ಟು ಇದೆ. ಕನ್ನಡದ ನಂತರ ಉರ‍್ದು ದೊಡ್ಡ ಸಂಕೆಯ ಮಾತುಗರನ್ನು ಹೊಂದಿದೆ. ಆನಂತರ ತಮಿಳು ಮತ್ತು ತೆಲುಗು ಪರಿಗಣಿಸುವಶ್ಟು ಸಂಕೆಯ ಮಾತುಗರನ್ನು ಹೊಂದಿವೆ. ಮಂಡ್ಯ ಜಿಲ್ಲೆಯಲ್ಲಿ ಕಡಿಮೆ ಎಂದರೂ ಮೂವತ್ತೆರಡು ಬಾಶೆಗಳು ಬಳಕೆಯಲ್ಲಿವೆ, ಕಡಿಮೆ ಎಂದರೂ ಅರವತ್ತು ತಾಯ್ಮಾತುಗಳು ಇವೆ.

***

ಮಂಡ್ಯ ಜಿಲ್ಲೆಯ ಬಾಶೆಗಳ ಮಾಹಿತಿಯನ್ನು ಜನಗಣತಿ ಕೊಟ್ಟಿರುವಂತೆ ಇಲ್ಲಿ ಪಟ್ಟಿ ಮಾಡಿದೆ.

ಬಾಶೆತಾಯ್ಮಾತುಒಟ್ಟು ಮಾತುಗರುಗಂಡುಹೆಣ್ಣು
ಆಸ್ಸಾಮಿ16115
ಆಸ್ಸಾಮಿ16115
ಬೆಂಗಾಲಿ1277354
ಬೆಂಗಾಲಿ1277354
ಗುಜರಾತಿ851451400
ಗುಜರಾತಿ833440393
ಸವರಾಶ್ಟ್ರ/ಸವರಾಶ್ಟ್ರಿ1275
ಇತರ642
ಹಿಂದಿ860447973807
ಬಂಜಾರಿ624
ಹಿಂದಿ583733632474
ಲಮಾಣಿ/ಲಂಬಾಡಿ1804926878
ಮಾಳ್ವಿ550
ಮಾರ‍್ವಾರಿ617325292
ರಾಜಸ್ತಾನಿ322171151
ಇತರ1358
ಕನ್ನಡ1659823831662828161
ಬಡಗ422
ಕನ್ನಡ1659740831619828121
ಕುರುಬ/ಕುರುಂಬ19109
ಇತರ603129
ಕಾಶ್ಮೀರಿ1073
ಕಾಶ್ಮೀರಿ1073
ಕೊಂಕಣಿ675326349
ಕೊಂಕಣಿ667321346
ಕುಡುಬಿ/ಕುಡುಂಬಿ642
ಇತರ211
ಮಲಯಾಳಂ238711591228
ಮಲಯಾಳಂ238311571226
ಯರವ312
ಇತರ110
ಮಣಿಪುರಿ808
ಮಣಿಪುರಿ808
ಮರಾಟಿ793039943936
ಮರಾಟಿ 792339903933
ಇತರ743
ನೇಪಾಲಿ1586593
ನೇಪಾಲಿ1586593
ಓಡಿಯಾ803743
ಓಡಿಯಾ803743
ಪಂಜಾಬಿ774334
ಪಂಜಾಬಿ774334
ಸಂಸ್ಕ್ರುತ110
ಸಂಸ್ಕ್ರುತ110
ಸಿಂದಿ853
ಸಿಂದಿ853
ತಮಿಳು241171190512212
ತಮಿಳು241171190512212
ತೆಲುಗು234571174411713
ತೆಲುಗು234571174411713
ಉರ‍್ದು765003831238188
ಉರ‍್ದು764973830938188
ಇತರ330
ಅರಾಬಿಕ್/ಅರ‍್ಬಿ633
ಅರಾಬಿಕ್/ಅರ‍್ಬಿ633
ಬಿಲಿ/ಬಿಲೊಡಿ211
ಇತರ211
ಬೊಟಿಯ18108
ಇತರ18108
ಕೂರ‍್ಗಿ/ಕೊಡಗು895138
ಕೂರ‍್ಗಿ/ಕೊಡಗು281315
ಕೊಡವ613823
ಇಂಗ್ಲೀಶು844539
ಇಂಗ್ಲೀಶು844539
ಕೊಯ101
ಕೊಯ101
ಕುಕಿ110
ಕುಕಿ110
ಕುರುಕ್/ಓರಆನ್101
ಕುರುಕ್/ಓರಆನ್101
ಲುಶಾಯಿ/ಮಿಜೊ440
ಲುಶಾಯಿ/ಮಿಜೊ440
ಮುಂಡ523
ಮುಂಡ523
ಮುಂಡಾರಿ101
ಮುಂಡಾರಿ101
ಟಿಬೆಟನ್413
ಟಿಬೆಟನ್413
ತುಳು671341330
ತುಳು671341330
ಇತರ533419

ಮಂಡ್ಯ ಜಿಲ್ಲೆಯಲ್ಲಿ ಒಟ್ಟು ಮೂವತ್ತೊಂದು ಬಾಶೆಗಳು ಬಳಕೆಯಲ್ಲಿವೆ ಎಂದು ಜನಗಣತಿ ಪಟ್ಟಿಸಿದೆ. ಇವುಗಳ ಜೊತೆಗೆ ಇತರ ಎಂಬ 53 ಮಂದಿ ಮಾತ್ರ ಇರುವ ಗುಂಪೊಂದನ್ನೂ ಕೊಟ್ಟಿದೆ. ಇದನ್ನು ಒಂದು ಬಾಶೆ ಎಂದು ಲೆಕ್ಕಿಸಿದಾಗ ಜಿಲ್ಲೆಯಲ್ಲಿ ಮೂವತ್ತೆರಡು ಬಾಶೆಗಳು ಇರುವುದು ತಿಳಿಯುತ್ತದೆ. ಅಯ್ವತ್ತೊಂಬತ್ತು ತಾಯ್ಮಾತುಗಳನ್ನು ಜನಗಣತಿ ಪಟ್ಟಿ ಮಾಡಿದೆ. ಇತರ ಗುಂಪಿನಲ್ಲಿ ಇರುವ ತಾಯ್ಮಾತು ಒಂದು ಎಂದು ಲೆಕ್ಕಿಸಿ ತಾಯ್ಮಾತುಗಳು ಸಂಕೆ ಅರವತ್ತು ಎಂದೆನ್ನಬಹುದು. ಇವುಗಳಲ್ಲಿ ಒಂಬತ್ತು ಬಾಶೆಗಳಲ್ಲಿ ಇತರ ಎಂಬ ಗುಂಪುಗಳನ್ನು ತೋರಿಸಿದೆ. ಇತರ ಗುಂಪನ್ನು ಒಳಗೊಂಡಿರುವ ಬಾಶೆಗಳು ಹೀಗಿವೆ, ಗುಜರಾತಿ, ಹಿಂದಿ, ಕನ್ನಡ, ಕೊಂಕಣಿ, ಮಲಯಾಳಂ, ಮರಾಟಿ, ಉರ‍್ದು, ಬಿಲಿ/ಬಿಲೊಡಿ ಮತ್ತು ಬೊಟಿಯ. ಇವುಗಳ ಹೊರತಾಗಿ ಅಯ್ವತ್ತು ತಾಯ್ಮಾತುಗಳನ್ನು ಜಿಲ್ಲೆಯಲ್ಲಿ ಹೆಸರಿಸಲಾಗಿದೆ.

ಮಂಡ್ಯ ಜಿಲ್ಲೆಯಲ್ಲಿ ಜನಗಣತಿ ವರದಿ ಪ್ರಕಾರ ಜನಸಂಕೆ 18,05,769 ಇದೆ. ಇದರಲ್ಲಿ ಅತಿ ಹೆಚ್ಚು ಮಂದಿ ಅಂದರೆ 16,59,823 ಕನ್ನಡ ಮಾತಾಡುವವರಾಗಿದ್ದಾರೆ. ಇದು ಜಿಲ್ಲೆಯ 91.917% ಆಗುತ್ತದೆ. ಇದು ಅತಿ ಹೆಚ್ಚು ಪ್ರಮಾಣ ಎಂದು ಹೇಳಬಹುದು. ಉಳಿದ ಸುಮಾರು 8 ಪ್ರತಿಶತ ಮಂದಿ ಬೇರೆ ಬೇರೆ ಬಾಶೆಗಳನ್ನು ಆಡುವವರು. ಜಿಲ್ಲೆಯಲ್ಲಿ ಹತ್ತು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತಾಡುವ ಒಂದೆ ಬಾಶೆ ಕನ್ನಡ. ಆನಂತರ ಒಂದು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತಾಡುವ ಯಾವುದೆ ಬಾಶೆ ದಾಕಲಾಗಿಲ್ಲ. ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಮಾತಾಡುವ ಮೂರು ಬಾಶೆಗಳು ದಾಕಲಾಗಿವೆ. ಅವುಗಳೆಂದರೆ, ಉರ‍್ದು – 76,500 (4.236%), ತಮಿಳು – 24,117 (1.335%) ಮತ್ತು ತೆಲುಗು – 23,457 (1.299%). ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರು ಇರುವ ಮೂರು ಬಾಶೆಗಳು ಇವೆ. ಹಿಂದಿ – 8,604 (0.476%), ಮರಾಟಿ – 7,930 ( 0.439%) ಮತ್ತು ಮಲಯಾಳಂ – 2,387 (0.132%). ಒಂದು ಸಾವಿರಕ್ಕಿಂತ ಕಡಿಮೆ ಮಾತುಗರು ಇರುವ ಅಯ್ದು ಬಾಶೆಗಳು ಇವೆ. ಅವುಗಳೆಂದರೆ ಗುಜರಾತಿ, ಕೊಂಕಣಿ, ತುಳು, ನೇಪಾಲಿ ಮತ್ತು ಬೆಂಗಾಲಿ. ನೂರಕ್ಕಿಂತ ಕಡಿಮೆ ಮಂದಿ ಮಾತುಗರು ಇರುವ ಬಾಶೆಗಳು ಇಪ್ಪತ್ತು ಇವೆ. ಈಗ ಜಿಲ್ಲೆಯ ಬಾಶೆಗಳನ್ನು ಕೆಳಗಿನಂತೆ ಮಾತುಗರ ಸಂಕೆಯಾದರಿಸಿ ವಿನ್ಯಾಸಗೊಳಿಸಿ ತೋರಿಸಬಹುದು.

ಸಾಪೇಕ್ಶ ಸಂಕೆಬಾಶೆಸಂಕೆ%
ಹತ್ತು ಲಕ್ಶಕ್ಕಿಂತ ಹೆಚ್ಚು ಕನ್ನಡ16,59,823 91.917%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುಉರ‍್ದು76,500 4.236%
’’ತಮಿಳು24,117 1.335%
’’ತೆಲುಗು 23,457 1.299%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುಹಿಂದಿ8,604 0.476%
’’ಮರಾಟಿ 7,930 0.439%
’’ಮಲಯಾಳಂ 2,387 0.132%
ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚುಗುಜರಾತಿ, ಕೊಂಕಣಿ, ತುಳು, ನೇಪಾಲಿ, ಬೆಂಗಾಲಿ2,4820.137%
ನೂರಕ್ಕಿಂತ ಕಡಿಮೆ ಮಾತುಗರಿರುವ ಬಾಶೆಗಳುಇಪ್ಪತ್ತು ಬಾಶೆಗಳು4690.025%
ಒಟ್ಟು ಮಾತುಗರು18,05,769100%

ಮಂಡ್ಯ ಜಿಲ್ಲೆಯ ದಾಕಲಾದ ತಾಯ್ಮಾತುಗಳನ್ನು ಗಮನಿಸಿದಾಗ ಜಿಲ್ಲೆಯ ಬಾಶೆಗಳಲ್ಲಿ ಸ್ವಲ್ಪ ಬದಲಾವಣೆ ಕಾಣಿಸುತ್ತದೆ. ಹಿಂದಿ ಬಾಶೆಯೊಳಗಿನ ಅಂಕಿಸಂಕೆಗಳನ್ನು ಇಲ್ಲಿ ಗಮನಿಸಬಹುದು. ಕರ‍್ನಾಟಕದ ಸಂದರ‍್ಬದಲ್ಲಿ ಮುಕ್ಯವೆನಿಸುವ ಕೆಲವು ಬಾಶೆಗಳ ಮಾಹಿತಿಯನ್ನು ಕೆಳಗೆ ಪಟ್ಟಿಸಿದೆ.

ಹಿಂದಿ 8,604

ಬಂಜಾರಿ 6

ಹಿಂದಿ 5,837

ಲಮಾಣಿ/ಲಂಬಾಡಿ 1,804

ಮಾರ‍್ವಾರಿ 617

ರಾಜಸ್ತಾನಿ 322

ಮಂಡ್ಯ ಜಿಲ್ಲೆಯಿಂದ ವರದಿಯಾದ ಒಟ್ಟು ಹಿಂದಿ ಮಾತುಗರು 8,604. ಆದರೆ, ಇದರಲ್ಲಿ ಹಿಂದಿ ಮಾತಾಡುವವರು 5,837 ಆಗಿದ್ದಾರೆ ಮತ್ತು ಲಂಬಾಣಿ ಮಾತಾಡುವವರು 1,810 ಆಗಿದ್ದಾರೆ. ಲಂಬಾಣಿ ಬಾಶೆಯಲ್ಲಿ ಲಮಾಣಿ ಹೆಸರಿನ 1,804 ಮತ್ತು ಬಂಜಾರಿ ಹೆಸರಿನ 6 ಮಂದಿ ಸೇರಿದ್ದಾರೆ. ಇನ್ನುಳಿದ ಬಾಶೆಗಳ ಸಂಕೆ ಗಣನೀಯವಾಗಿಲ್ಲ. ಜಿಲ್ಲೆಯ ತಾಯ್ಮಾತುಗಳನ್ನು ಗಮನದಲ್ಲಿರಿಸಿಕೊಂಡು ಮೇಲೆ ಕೊಟ್ಟಿರುವ ಮಂಡ್ಯ ಜಿಲ್ಲೆಯ ಬಾಶೆಗಳ ಪಟ್ಟಿಯನ್ನು ಮತ್ತೊಮ್ಮೆ ಕೊಟ್ಟಿದೆ. ಹತ್ತು ಸಾವಿರಕ್ಕಿಂತ ಕಡಿಮೆ ಮಾತುಗರಿರುವ ಬಾಶೆಗಳ ಪಟ್ಟಿಯಲ್ಲಿ ಹಿಂದಿಯ ಜೊತೆಗೆ ಈಗ ಲಂಬಾಣಿ ಸೇರಿಕೊಳ್ಳುತ್ತದೆ. 

ತಾಯ್ಮಾತುಗಳ ಅಂಕಿಸಂಕೆಯನ್ನು ಗಮನದಲ್ಲಿ ಇರಿಸಿಕೊಂಡು ಜಿಲ್ಲೆಯ ಬಾಶೆಗಳ ಪಟ್ಟಿಯನ್ನು ಕೆಳಗಿನಂತೆ ಮರುರೂಪಿಸಬಹುದು.

ಸಾಪೇಕ್ಶ ಸಂಕೆಬಾಶೆಸಂಕೆ%
ಹತ್ತು ಲಕ್ಶಕ್ಕಿಂತ ಹೆಚ್ಚು ಕನ್ನಡ16,59,74091.913%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುಉರ‍್ದು76,4974.236%
’’ತಮಿಳು24,1171.335%
’’ತೆಲುಗು23,4571.299%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುಮರಾಟಿ7,9230.438%
’’ಹಿಂದಿ5,8370.323%
’’ಮಲಯಾಳಂ2,3830.131%
’’ಲಂಬಾಣಿ1,8100.100%

ಜಿಲ್ಲೆಯ ಹತ್ತು ದೊಡ್ಡ ಬಾಶೆಗಳ ಪಟ್ಟಿಯನ್ನು ಕೆಳಗೆ ಕೊಟ್ಟಿದೆ.

ಪ್ರದೇಶಜಿಲ್ಲೆಯ ಜನಸಂಕೆಬಾಶೆಮಾತುಗರುಜಿಲ್ಲೆಯ %ಜಿಲ್ಲೆಯಲ್ಲಿ ಸ್ತಾನ
ಮಂಡ್ಯ18,05,769ಕನ್ನಡ16,59,74091.913%1
ಉರ‍್ದು76,4974.236%2
ತಮಿಳು24,1171.335%3
ತೆಲುಗು23,4571.299%4
ಮರಾಟಿ7,9230.438%5
ಹಿಂದಿ5,8370.323%6
ಮಲಯಾಳಂ2,3830.131%7
ಲಂಬಾಣಿ1,8100.100%8
ಗುಜರಾತಿ8510.047%9
ತುಳು6710.037%10

‍ಲೇಖಕರು Admin

July 28, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: