ಬಸವರಾಜ ಕೋಡಗುಂಟಿ ಅಂಕಣ – ಬೀದರ ಜಿಲ್ಲೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು

ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ ವೈವಿಧ್ಯತೆಯತ್ತ

ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಈ ವಾರದ ಅಂಕಣದಲ್ಲಿ ಬೀದರಜಿಲ್ಲೆಯ ಬಗ್ಗೆ ಬೆಳಕು

ಚೆಲ್ಲಲಾಗಿದೆ.

18

ಬೀದರ ಜಿಲ್ಲೆ ಕರ‍್ನಾಟಕದ ಸೂಕ್ಶ್ಮ ಬಾಶಿಕ ಪರಿಸರಗಳಲ್ಲಿ ಒಂದು. ಬೀದರಿನಲ್ಲಿ ಕಡಿಮೆ ಎಂದರೂ ಮೂವತ್ನಾಲ್ಕು ಬಾಶೆಗಳು ಬಳಕೆಯಲ್ಲಿವೆ. ಹಾಗೆ, ಕನಿಶ್ಟ ಅರ‍್ವತ್ತಯ್ದು ತಾಯ್ಮಾತುಗಳು ಬಳಕೆಯಲ್ಲಿವೆ. ಜಿಲ್ಲೆಯಲ್ಲಿ ಕನ್ನಡ ಅತಿ ಹೆಚ್ಚು ಮಂದಿ ಮಾತಾಡುವ ಬಾಶೆಯಾಗಿದೆಯಾದರೂ ಕನ್ನಡ ಮಾತಾಡುವವರ ಪ್ರತಿಶತತೆ ಗಮನೀಯ. ಜಿಲ್ಲೆಯಲ್ಲಿ ಕನ್ನಡ ಬಳಸುವವರ ಪ್ರಮಾಣ 52.962% ಆಗಿದೆ. ಆನಂತರ ಮರಾಟಿ ಮತ್ತು ಉರ‍್ದು ಇವು ಸುಮಾರು ಮೂರು ಲಕ್ಶದಶ್ಟು ಮಂದಿ ಮಾತುಗರನ್ನು ಹೊಂದಿವೆ. ತೆಲುಗು ಮತ್ತು ಲಂಬಾಣಿ ಹಾಗೆಯೆ ಇವುಗಳ ಜೊತೆಯಲ್ಲಿ ಹಿಂದಿ ದೊಡ್ಡ ಸಂಕೆಯ ಮಾತುಗರನ್ನು ಹೊಂದಿವೆ.

***

ಈ ಬರವಣಿಗೆಯಲ್ಲಿ ಬೀದರ ಜಿಲ್ಲೆಯ ಬಾಶೆಗಳನ್ನು ಚರ‍್ಚಿಸಿದೆ. ಮೊದಲಿಗೆ ಜನಗಣತಿ ಕೊಟ್ಟಿರುವ ಬೀದರ ಜಿಲ್ಲೆಯ ಮಾಹಿತಿಯನ್ನು ಅಟ್ಟದಲ್ಲಿ ಕೊಟ್ಟಿದೆ.

ಬಾಶೆಒಳನುಡಿಒಟ್ಟುಗಂಡುಹೆಣ್ಣು
ಆಸ್ಸಾಮಿ351322
ಆಸ್ಸಾಮಿ351322
ಬೆಂಗಾಲಿ358180178
ಬೆಂಗಾಲಿ358180178
ಡೋಗ್ರಿ 24195
ಡೋಗ್ರಿ24195
ಗುಜರಾತಿ1209597612
ಗುಜರಾತಿ930466464
ಇತರ 279131148
ಹಿಂದಿ 1158296012455705
  ಅವದಿ220
ಬಂಜಾರಿ420021632037
ಬೋಜ್ಪುರಿ15912138
ಗರ‍್ವಾಲಿ13103
ಹರಿಯಾಣ್ವಿ63621
ಹಿಂದಿ534222779125631
ಕುಮವುನಿ550
ಲಮಾಣಿ/ಲಂಬಾಡಿ571752954027635
ಮಗದಿ/ಮಗಹಿ440
ಮಾರ‍್ವಾರಿ 492256236
ಮೇವಾರಿ110
ಮೇವಾತಿ110
ಪಹರಿ440
ರಾಜಸ್ತಾನಿ1529260
ಇತರ1367264
ಕನ್ನಡ902186459275442911
ಕನ್ನಡ902111459239442872
ಕುರುಬ/ಕುರುಂಬ826
ಇತರ673433
ಕಾಶ್ಮೀರಿ18511570
ಕಾಶ್ಮೀರಿ18511570
ಕೊಂಕಣಿ1084761
ಕೊಂಕಣಿ1004258
ಕುಡುಬಿ/ಕುಡುಂಬಿ853
ಮಯ್ತಿಲಿ251510
ಮಯ್ತಿಲಿ251510
ಮಲಯಾಳಂ490240250
ಮಲಯಾಳಂ478233245
ಯರವ1275
ಮಣಿಪುರಿ21516
ಮಣಿಪುರಿ21516
ಮರಾಟಿ313573159957153616
  ಆರೆ338143195
  ಕೋಳಿ110
ಮರಾಟಿ313176159785153391
ಇತರ582830
ನೇಪಾಲಿ18108
ನೇಪಾಲಿ18108
ಓಡಿಯಾ297165132
ಓಡಿಯಾ297165132
ಪಂಜಾಬಿ463250213
  ಬಾಗ್ರಿ110
ಪಂಜಾಬಿ462249213
ಸಂಸ್ಕ್ರುತ321
ಸಂಸ್ಕ್ರುತ321
ಸಿಂದಿ331716
ಸಿಂದಿ311516
ಇತರ220
ತಮಿಳು243612341202
  ಕಯ್ಕಾಡಿ450220230
ಕೊರವ1413723690
ತಮಿಳು573291282
ತೆಲುಗು724603660335857
ತೆಲುಗು724383659435844
ಇತರ22913
ಉರ‍್ದು292209151114141095
ಉರ‍್ದು292182151102141080
ಬನ್ಸಾರಿ110
ಇತರ261115
ಅರಾಬಿಕ್/ಅರ‍್ಬಿ17125
ಅರಾಬಿಕ್/ಅರ‍್ಬಿ17125
ಬಿಲಿ/ಬಿಲೋಡಿ1598178
ಮವ್ಚಿ110
ಪರಡಿ1588078
ಬೋಟಿಯಾ101
ಇತರ101
ಕೂರ‍್ಗಿ/ಕೊಡಗು432419
ಕೂರ‍್ಗಿ/ಕೊಡಗು312
ಕೊಡವ402317
ಇಂಗ್ಲೀಶು895435
ಇಂಗ್ಲೀಶು895435
ಗೊಂಡಿ727352375
ಗೊಂಡಿ727352375
ಹಲಬಿ101
ಇತರ101
ಕೊಡ/ಕೊರ1789
ಕೊಡ/ಕೊರ1789
ಲಹಂದ211
ಇತರ211
ಲಕೇರ್422
ಮರ422
ಮುಂಡ17170
ಇತರ17170
ಟಿಬೇಟನ್101
ಟಿಬೇಟನ್101
ತುಳು1065848
ತುಳು1065848
ಇತರ1547480

ಬೀದರ ಜಿಲ್ಲೆಯ ಜನಗಣತಿಯ ಬಾಶಿಕ ಮಾಹಿತಿ ತುಸು ಸಂಕೀರ‍್ಣವಾಗಿದೆ. ಇಲ್ಲಿ ಒಟ್ಟು ಮೂವತ್ಮೂರು ಬಾಶೆಗಳನ್ನು ಮತ್ತು ಇತರ (154) ಎಂಬ ಒಂದು ಗುಂಪನ್ನು ದಾಕಲಿಸಿದೆ. ಇತರ ಎಂಬುದನ್ನು ಒಂದೆ ಬಾಶೆ ಎಂದು ಗಣಿಸಿದರೆ ಬೀದರ ಜಿಲ್ಲೆಯಲ್ಲಿ ಒಟ್ಟು ಗಣತಿ ತೋರಿಸಿದ ಬಾಶೆಗಳ ಸಂಕೆ ಮೂವತ್ನಾಲ್ಕು ಆಗುತ್ತದೆ. ಇದರಲ್ಲಿ ತಾಯ್ಮಾತುಗಳ ಸಂಕೆ ಅರವತ್ನಾಲ್ಕು. ಇತರ ಎಂಬ ಬಾಶೆಯ ಗುಂಪಿನೊಳಗೆ ಒಂದೆ ತಾಯ್ಮಾತು ಎಂದು ಪರಿಗಣಿಸಿದರೆ ಬೀದರ ಜಿಲ್ಲೆಯ ಒಟ್ಟು ತಾಯ್ಮಾತುಗಳ ಸಂಕೆ ಅರವತ್ತಯ್ದು. ಹನ್ನೊಂದು ಬಾಶೆಗಳ ಒಳಗೆ ತಾಯ್ಮಾತಿನ ಪಟ್ಟಿಯಲ್ಲಿ ಇತರ ಎಂಬ ಒಂದು ಗುಂಪನ್ನು ತೋರಿಸಿದೆ. ಅವು, ಗುಜರಾತಿ, ಹಿಂದಿ, ಕನ್ನಡ, ಮರಾಟಿ, ಸಿಂದಿ, ತೆಲುಗು, ಉರ‍್ದು, ಬೋಟಿಯಾ, ಹಲಬಿ, ಲಹಂದ ಮತ್ತು ಮುಂಡ. ಹಾಗಾದರೆ ಹೆಸರಿಸಲಾದ ಒಟ್ಟು ತಾಯ್ಮಾತುಗಳ ಸಂಕೆ ಅಯ್ವತ್ನಾಲ್ಕು.

ಬೀದರ ಜಿಲ್ಲೆಯಲ್ಲಿ 2011ರ ಜನಗಣತಿ ಪ್ರಕಾರ ಇರುವ ಮಂದಿಯ ಸಂಕೆ 17,03,300. ಬೀದರ ಜಿಲ್ಲೆಯಲ್ಲಿ ಕನ್ನಡ ಮಾತನಾಡುವವರ ಸಂಕೆ ಒಟ್ಟು ಜಿಲ್ಲೆಯ ಜನಸಂಕೆಯಲ್ಲಿ ಅರ‍್ದದಶ್ಟು ಇದೆ. ಕನ್ನಡ ಮಾತಾಡುವವರ ಸಂಕೆ 9,02,186, ಅಂದರೆ 52.966% ಪ್ರತಿಶತ ಆಗುತ್ತದೆ. ಉಳಿದ ಅರ‍್ದದಶ್ಟು ಅಂದರೆ ಸುಮಾರು 47.033% ಪ್ರತಿಶತ ಮಂದಿ ಇತರ ಮಾತುಗಳನ್ನು ಆಡುತ್ತಾರೆ. ಕನ್ನಡದ ನಂತರ ಮರಾಟಿಯನ್ನಾಡುವ 3,13,573 (18.409%) ಮಂದಿ ಜಿಲ್ಲೆಯಲ್ಲಿ ಇದ್ದಾರೆ. ಉರ‍್ದು ಬಾಶೆಗೆ 2,92,209 (17.155%) ಮಂದಿ ಮಾತುಗರು ಇದ್ದಾರೆ. ಹಿಂದಿ 1,15,829 (6.800%) ಮಂದಿಯನ್ನು ಹೊಂದಿದೆ. ಈ ನಾಲ್ಕು ಬಾಶೆಗಳು ಜಿಲ್ಲೆಯಲ್ಲಿ ಒಂದು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತುಗರನ್ನು ಹೊಂದಿವೆ. ಒಂದು ಲಕ್ಶಕ್ಕಿಂತ ಕಮ್ಮಿ ಮತ್ತು ಹತ್ತು ಸಾವಿರಕಿಂತ ಹೆಚ್ಚು ಮಂದಿ ಮಾತುಗರು, ತೆಲುಗು ಬಾಶೆಗೆ 72,460 (4.254%) ಇದ್ದಾರೆ. ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರನ್ನು ತಮಿಳು 2,436 (0.143%) ಮತ್ತು ಗುಜರಾತಿ 1,209 (0.070%) ಹೊಂದಿವೆ. ಒಂಬತ್ತು ಬಾಶೆಗಳನ್ನು ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮಂದಿ ಮಾತಾಡುತ್ತಿದ್ದಾರೆ. ಅವು, ಗೊಂಡಿ, ಮಲಯಾಳಂ, ಪಂಜಾಬಿ, ಬೆಂಗಾಲಿ, ಓಡಿಯಾ, ಕಾಶ್ಮೀರಿ, ಬಿಲಿ/ಬಿಲೋಡಿ, ಕೊಂಕಣಿ ಮತ್ತು ತುಳು. ಇವುಗಳ ಜೊತೆಗೆ ಇತರ ಎಂಬ ಗುಂಪಿನಲ್ಲಿಯೂ 154 ಮಂದಿ ದಾಕಲಾಗಿದ್ದಾರೆ. ಹದಿನೇಳು ಬಾಶೆಗಳನ್ನಾಡುವವರು ನೂರಕ್ಕಿಂತ ಕಡಿಮೆ ಇದ್ದಾರೆ. ಈ ಬಾಶೆಗಳನ್ನು ಕೆಳಗೆ ಪಟ್ಟಿ ಮಾತುಗರ ಸಂಕೆಯಾನುಸಾರ ಮಾಡಿ ತೋರಿಸಿದೆ.

ಸಾಪೇಕ್ಶ ಸಂಕೆಬಾಶೆಸಂಕೆ%
ಒಂದು ಲಕ್ಶಕ್ಕಿಂತ ಹೆಚ್ಚುಕನ್ನಡ9,02,18652.966%
’’ಮರಾಟಿ3,13,57318.409%
’’ಉರ‍್ದು2,92,20917.155%
’’ಹಿಂದಿ1,15,8296.800%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುತೆಲುಗು 72,4604.254%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುತಮಿಳು2,4360.143%
’’ಗುಜರಾತಿ1,2090.070%
ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚುಗೊಂಡಿ, ಮಲಯಾಳಂ, ಪಂಜಾಬಿ, ಬೆಂಗಾಲಿ, ಓಡಿಯಾ, ಕಾಶ್ಮೀರಿ, ಬಿಲಿ/ಬಿಲೋಡಿ, ಇತರ, ಕೊಂಕಣಿ, ತುಳು3,0470.178%
ನೂರಕ್ಕಿಂತ ಕಡಿಮೆ ಹದಿನೇಳು ಬಾಶೆಗಳು3510.020%
ಒಟ್ಟು ಮಾತುಗರು17,03,300100%

ಇನ್ನು ತಾಯ್ಮಾತುಗಳನ್ನು ಚರ‍್ಚೆಗೆ ತೆಗೆದುಕೊಳ್ಳಬಹುದು. ಬೀದರ ಜಿಲ್ಲೆಯಲ್ಲಿ ಹಿಂದಿಯ ಒಳಗೆ ಹದಿನಯ್ದು ತಾಯ್ಮಾತುಗಳನ್ನು ಪಟ್ಟಿ ಮಾಡಿದೆ. ಅವುಗಳಲ್ಲಿ ಕರ‍್ನಾಟಕದ ಸಂದರ‍್ಬದಲ್ಲಿ ಪ್ರಮುಕವಾದವುಗಳ ಪಟ್ಟಿ ಕೆಳಗೆ ಕೊಟ್ಟಿದೆ.

ಹಿಂದಿ 1,15,829 60,124 55,705 

ಬಂಜಾರಿ 4,200 2,163 2,037

ಬೋಜ್ಪುರಿ 159 121 38

ಹಿಂದಿ 53,422 27,791 25,631

ಲಮಾಣಿ/ಲಂಬಾಡಿ 57,175 29,540 27,635

ಮಾರ‍್ವಾರಿ 492 256 236

ರಾಜಸ್ತಾನಿ 152 92 60

ಲಂಬಾಣಿ ಮಾತನಾಡುವ 57,175 ಮಂದಿ ಇದ್ದಾರೆ. ಅದರೊಟ್ಟಿಗೆ ಲಂಬಾಣಿಯ ಇನ್ನೊಂದು ಹೆಸರಾದ ಬಂಜಾರಿ ಎನ್ನುವುದರೊಳಗೆ 4,200 ಮಂದಿ ಇದ್ದಾರೆ. ಇವೆರಡನ್ನು ಸೇರಿಸಿದಾಗ ಒಟ್ಟು ಲಂಬಾಣಿ ಮಾತಾಡುವ ಬೀದರ ಜಿಲ್ಲೆಯ ಜನಸಂಕೆ 61,375 ಆಗುತ್ತದೆ. ಇದು ಜಿಲ್ಲೆಯ ಹಿಂದಿಯ 52.987%, ಜಿಲ್ಲೆಯ 3.603% ಆಗುತ್ತದೆ. ಹಿಂದಿ ಮಾತಾಡುವ 53,422 ಮಂದಿ ಇದ್ದು, ಇದು ಜಿಲ್ಲೆಯ ಒಟ್ಟು ಹಿಂದಿಯ 46.121% ಮತ್ತು ಜಿಲ್ಲೆಯ 3.136% ಆಗುತ್ತದೆ. ಈಗ ಒಂದು ಲಕ್ಶಕ್ಕಿಂತ ಹೆಚ್ಚು ಮಂದಿಗಳಿರುವ ಬಾಶೆಗಳ ಪಟ್ಟಿಯಿಂದ ಕೆಳಗಿಳಿಯುತ್ತದೆ. ಲಂಬಾಣಿ ಮತ್ತು ಹಿಂದಿ ಇವೆರಡು ಒಂದು ಲಕ್ಶಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಮಾತಾಡುವ ಬಾಶೆಗಳ ಪಟ್ಟಿಗೆ ಬರುತ್ತವೆ.

ತಮಿಳಿನಲ್ಲಿ 2,436 ಮಂದಿ ದಾಕಲಾಗಿದ್ದಾರೆ. ಇದರಲ್ಲಿ ಕಯ್ಕಾಡಿ (450) ಮತ್ತು ಕೊರವ 1,413 ಸೇರಿ ಕೊರವದ ಒಟ್ಟು ಮಾತುಗರ ಸಂಕೆ 1,863. ಇದು ಒಟ್ಟು ಜಿಲ್ಲೆಯ ತಮಿಳಿನ 58.004% ಮತ್ತು ಜಿಲ್ಲೆಯ 0.109% ಆಗುತ್ತದೆ. ಈಗ ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಕಡಿಮೆ ಮಂದಿ ಮಾತಾಡುವ ಬಾಶೆಗಳ ಪಟ್ಟಿಯಿಂದ ತಮಿಳು ಕೆಳಗಿಳಿಯುತ್ತದೆ ಮತ್ತು ಕೊರವ ಅಲ್ಲಿಗೆ ಬರುತ್ತದೆ. ಈ ಚರ್ಚೆಯನ್ನು ಜಿಲ್ಲೆಯ ತಾಯ್ಮಾತುಗಳ ಸಂಕೆಯನ್ನು ಗಮನದಲ್ಲಿ ಇಟ್ಟುಕೊಂಡು ಬೀದರಿನ ಬಾಶೆಗಳನ್ನು ಕೆಳಗಿನ ವಿನ್ಯಾಸದಲ್ಲಿ ತೋರಿಸಬಹುದು.

ಸಾಪೇಕ್ಶ ಸಂಕೆಬಾಶೆಸಂಕೆ%
ಒಂದು ಲಕ್ಶಕ್ಕಿಂತ ಹೆಚ್ಚುಕನ್ನಡ9,02,11152.962%
’’ಮರಾಟಿ3,13,17618.386%
’’ಉರ‍್ದು2,92,18217.153%
ಒಂದು ಲಕ್ಶಕ್ಕಿಂತ ಕಡಿಮೆ ಹತ್ತು ಸಾವಿರಕ್ಕಿಂತ ಹೆಚ್ಚುತೆಲುಗು72,4384.252%
ಲಂಬಾಣಿ61,3753.603%
ಹಿಂದಿ53,4223.136%
ಹತ್ತು ಸಾವಿರಕ್ಕಿಂತ ಕಡಿಮೆ ಒಂದು ಸಾವಿರಕ್ಕಿಂತ ಹೆಚ್ಚುಕೊರವ1,8630.109%
’’ಗುಜರಾತಿ1,2090.070%

ಜಿಲ್ಲೆಯ ಹತ್ತು ದೊಡ್ಡ ಬಾಶೆಗಳ ಪಟ್ಟಿಯನ್ನು ಕೆಳಗೆ ಕೊಟ್ಟಿದೆ.

ಪ್ರದೇಶಜಿಲ್ಲೆಯ ಜನಸಂಕೆಬಾಶೆಮಾತುಗರುಜಿಲ್ಲೆಯ %ಜಿಲ್ಲೆಯಲ್ಲಿ ಸ್ತಾನ
ಬೀದರ17,03,300ಕನ್ನಡ9,02,11152.962%1
ಮರಾಟಿ3,13,17618.386%2
ಉರ‍್ದು2,92,18217.153%3
ತೆಲುಗು72,4384.252%4
ಲಂಬಾಣಿ61,3753.603%5
ಹಿಂದಿ53,4223.136%6
ಕೊರವ1,8630.109%7
ಗುಜರಾತಿ1,2090.070%8
ಗೊಂಡಿ7270.042%9
ತಮಿಳು5730.033%10

‍ಲೇಖಕರು Admin

June 23, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: