
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ
ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.
ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.
ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.
‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ
ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ
ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.
ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು
ಅಲುಗಾಡಿಸಬಹುದು.
ಕರ್ನಾಟಕದ ಒಂದೊಂದು ಬಾಶೆಯ ಮೇಲೆ ಮೂವತ್ತಕ್ಕೂ
ಹೆಚ್ಚು ಬಿಡಿ ಬರಹಗಳನ್ನು ಇಲ್ಲಿ ಬರೆದಿದ್ದಾರೆ.
ಕರ್ನಾಟಕದ ಸುಮಾರು ನಲವತ್ತು ಬಾಶೆಗಳ ಹಂಚಿಕೆಯನ್ನ
ಇನ್ನು ಮುಂದೆ ಪರಿಚಯಿಸಲಾಗುವುದು.
48
ನೇಪಾಲಿ
ನೇಪಾಲಿ ಬಾರತದ ಅನುಸೂಚಿತ ಬಾಶೆಗಳಲ್ಲಿ ಒಂದು. ಇದು ಕರ್ನಾಟಕದಲ್ಲಿ ೧೯,೨೬೩ ಮಂದಿಯನ್ನು ಹೊಂದಿ ರಾಜ್ಯದ ಇಪ್ಪತ್ತೆರಡನೆ ದೊಡ್ಡ ಬಾಶೆಯಾಗಿದೆ. ಇದು ರಾಜ್ಯದ ೦.೦೩೧% ಜನತೆಯನ್ನು ಒಳಗೊಳ್ಳುತ್ತದೆ. ದೇಶದಲ್ಲಿ ಒಟ್ಟು ನೇಪಾಲಿ ಮಾತಾಡುವವರ ಸಂಕೆ ೨೯,೨೬,೧೬೮ ಆಗಿದೆ. ಕರ್ನಾಟಕದಲ್ಲಿ ಇದರ ೦.೬೫೮% ಪ್ರತಿಶತ ಮಂದಿ ಇದ್ದಾರೆ. ದೇಶದಲ್ಲಿ ನೇಪಾಲಿ ಬಾಶೆಯ ಒಳಗೆ ನೇಪಾಲಿ ಮಾತ್ರ ಒಂದು ತಾಯ್ಮಾತು ಆಗಿದೆ. ಇದರ ಜೊತೆಗೆ ಕೆಲವೆ ಮಂದಿಯನ್ನು ಒಳಗೊಂಡಿರುವ ಇತರ ಗುಂಪು ಇದೆ. ಕರ್ನಾಟಕದಲ್ಲಿ ಇತರ ಎಂಬ ಗುಂಪು ದಾಕಲಾಗಿಲ್ಲ.
ನೇಪಾಲಿ ಮಾತಾಡುವ ಹೆಚ್ಚಿನ ಮಂದಿ ಕರ್ನಾಟಕದಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಕಂಡುಬರುತ್ತಾರೆ. ಬೆಂಗಳೂರು ನಗರದಲ್ಲಿ ನೇಪಾಲಿಗರ ಸಂಕೆ ೧೨,೮೯೩. ಇದು ಒಟ್ಟು ಕರ್ನಾಟಕದ ನೇಪಾಲಿಗರ ೬೬.೯೩೧% ಆಗುತ್ತದೆ. ಆನಂತರ ಮಯ್ಸೂರು ಜಿಲ್ಲೆಯಲ್ಲಿ ೧,೧೭೯ ಮಂದಿ ದಾಕಲಾಗಿದ್ದಾರೆ. ಇದು ಒಟ್ಟು ಕರ್ನಾಟಕದ ನೇಪಾಲಿಯ ೬.೧೨೦% ಆಗುತ್ತದೆ. ಉಳಿದ ಜಿಲ್ಲೆಗಳಲ್ಲಿ ನೇಪಾಲಿ ಮಾತಾಡುವವರು ಸಾವಿರಕ್ಕಿಂತ ಕಡಿಮೆ ಮಂದಿ ದಾಕಲಾಗಿದ್ದಾರೆ. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿಯೂ ನೇಪಾಲಿ ದಾಕಲಾಗಿದೆ. ಹದಿನಾರು ಜಿಲ್ಲೆಗಳಲ್ಲಿ ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮಂದಿ ನೇಪಾಲಿ ಮಾತುಗರು ದಾಕಲಾಗಿದ್ದರೆ ಹನ್ನೆರಡು ಜಿಲ್ಲೆಗಳಲ್ಲಿ ನೂರಕ್ಕಿಂತ ಕಡಿಮೆ ಮಂದಿ ದಾಕಲಾಗಿದ್ದಾರೆ.
ಇಲ್ಲಿ ಕೆಳಗೆ ನೇಪಾಲಿ ಮಾತುಗರ ಜನಸಂಕೆಯನ್ನು ಅಟ್ಟದಲ್ಲಿ ತೋರಿಸಿದೆ.
ಪ್ರದೇಶ | ಜಿಲ್ಲೆಯ ಜನಸಂಕೆ | ಮಾತುಗರು | ಆ ಜಿಲ್ಲೆಯ % | ಆ ಬಾಶೆಯ % |
ಕರ್ನಾಟಕ | 6,10,95,297 | 19,263 | 0.031% | 100% |
ಬೆಂಗಳೂರು ನಗರ | 96,21,551 | 12,893 | 0.134% | 66.391% |
ಮಯ್ಸೂರು | 30,01,127 | 1,179 | 0.039% | 6.120% |
ಉತ್ತರ ಕನ್ನಡ | 14,37,169 | 838 | 0.058% | 4.350% |
ದಕ್ಶಿಣ ಕನ್ನಡ | 20,89,649 | 740 | 0.035% | 3.841% |
ಬೆಳಗಾವಿ | 47,79,661 | 558 | 0.011% | 2.896% |
ಬೆಂಗಳೂರು ಗ್ರಾಮಂತರ | 9,90,923 | 395 | 0.039% | 2.050% |
ಬಳ್ಳಾರಿ | 24,52,595 | 260 | 0.010% | 1.349% |
ದಾರವಾಡ | 18,47,023 | 234 | 0.012% | 1.214% |
ಉಡುಪಿ | 11,77,361 | 215 | 0.018% | 1.116% |
ಕೊಡಗು | 5,54,519 | 213 | 0.038% | 1.105% |
ಕೋಲಾರ | 15,36,401 | 182 | 0.011% | 0.944% |
ರಾಮನಗರ | 10,82,636 | 163 | 0.015% | 0.846% |
ಮಂಡ್ಯ | 18,05,769 | 158 | 0.008% | 0.820% |
ತುಮಕೂರು | 26,78,980 | 145 | 0.005% | 0.752% |
ಶಿವಮೊಗ್ಗ | 17,52,753 | 143 | 0.008% | 0.742% |
ಹಾಸನ | 17,76,421 | 137 | 0.007% | 0.711% |
ಚಿಕ್ಕಬಳ್ಳಾಪುರ | 12,55,104 | 133 | 0.010% | 0.690% |
ಚಿಕ್ಕಮಗಳೂರು | 11,37,961 | 120 | 0.010% | 0.622% |
ರಾಯಚೂರು | 19,28,812 | 66 | 0.003% | 0.342% |
ದಾವಣಗೆರೆ | 19,45,497 | 64 | 0.003% | 0.332% |
ಬಾಗಲಕೋಟೆ | 18,89,752 | 63 | 0.003% | 0.327% |
ಗದಗ | 10,20,791 | 63 | 0.006% | 0.327% |
ಕಲಬುರಗಿ | 25,66,326 | 62 | 0.002% | 0.321% |
ವಿಜಯಪುರ | 21,77,331 | 55 | 0.002% | 0.285% |
ಕೊಪ್ಪಳ | 13,89,921 | 51 | 0.003% | 0.264% |
ಯಾದಗಿರಿ | 11,74,271 | 40 | 0.003% | 0.207% |
ಹಾವೇರಿ | 15,97,668 | 34 | 0.002% | 0.176% |
ಚಿತ್ರದುರ್ಗ | 16,59,456 | 31 | 0.001% | 0.160% |
ಬೀದರ | 17,03,300 | 18 | 0.001% | 0.093% |
ಚಾಮರಾಜನಗರ | 10,20,791 | 10 | 9.796% | 0.051% |
ನೇಪಾಲಿ ಮಾತುಗರ ಹಂಚಿಕೆ

0 ಪ್ರತಿಕ್ರಿಯೆಗಳು