ಬಸವರಾಜ ಕೋಡಗುಂಟಿ ಅಂಕಣ- ನೂರು ಕೊರಳು

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು ಅಲುಗಾಡಿಸಬಹುದು.

ಈ ವಾರದ ಅಂಕಣದಲ್ಲಿ ಕಾರವಾರ ಜಿಲ್ಲೆಯ ಬಗ್ಗೆ ಬೆಳಕು ಚೆಲ್ಲಲಾಗಿದೆ.

4

ಕಾರವಾರ 

ಕಾರವಾರದಲ್ಲಿ ಕಡಿಮೆ ಎಂದರೂ ಸುಮಾರು ನಲ್ವತ್ತೊಂಬತ್ತು ಬಾಶೆಗಳು ಮತ್ತು ತೊಂಬತ್ತು ತಾಯ್ಮಾತುಗಳು ದಾಕಲಾಗಿವೆ. ಒಂದು ಜಿಲ್ಲೆಯಲ್ಲಿ ಇಶ್ಟು ಸಂಕೆಯ ಬಾಶೆಗಳು, ತಾಯ್ಮಾತುಗಳು ಇರುವುದು ಆ ಜಿಲ್ಲೆಯ ಪರಿಸರ, ಸಮಾಜ ಇವುಗಳ ಸಂಕೀರ‍್ಣತೆಯನ್ನು ಪ್ರತಿನಿದಿಸುತ್ತಿರುತ್ತದೆ. ಕಾರವಾರ ಜಿಲ್ಲೆಯಲ್ಲಿ ಕನ್ನಡ ಮಾತುಗರು 55% ಇದ್ದಾರೆ. ಕನ್ನಡದೊಂದಿಗೆ ಕೊಂಕಣಿ, ಉ‌ರ‌್ದು ಮತ್ತು ಮರಾಟಿ ಇವು ಒಂದು ಲಕ್ಶಕ್ಕಿಂತ ಹೆಚ್ಚು ಮಾತುಗರನ್ನು ಹೊಂದಿರುವ ಜಿಲ್ಲೆಯ ಪ್ರದಾನ ಬಾಶೆಗಳು. ಈ ಬಾಶೆಗಳನ್ನು ಸರಕಾರದ ವಿವಿದ ಪಾಲಸಿಗಳಲ್ಲಿ, ಸಾಮಾಜಿಕ ಚಟುವಟಿಕೆಗಳಲ್ಲಿ, ಹಲವು ಬಗೆ ಸ್ತಳೀಯ ಅವಶ್ಯಕತೆಗಳಲ್ಲಿ ಬಳಸಬಹುದು. ಟಿಬೆಟನ್, ನವಾಯಿತಿ, ಲಂಬಾಣಿ ಇಂತಾ ಸಣ್ಣ ಬಾಶೆಗಳು ಇಲ್ಲಿ ಪರಿಗಣಿಸುವಶ್ಟು ಸಂಕೆಯಲ್ಲಿ ಕಾಣಿಸುತ್ತವೆ. ಮಲಯಾಳಂ ಕೂಡ ಇವುಗಳ ಜೊತೆ ಪರಿಗಣಿಸುವಶ್ಟು ಸಂಕೆಯಲ್ಲಿರುವುದನ್ನು ಕಾಣಬಹುದು.

ಉತ್ತರ ಕನ್ನಡ ಇಲ್ಲವೆ ಕಾರವಾರ ಜಿಲ್ಲೆಯಲ್ಲಿನ ಜನಗಣತಿ ಕೊಟ್ಟಿರುವ ಬಾಶಿಕ ಮಾಹಿತಿಯನ್ನು ಕೆಳಗೆ ಪಟ್ಟಿ ಮಾಡಿ ತೋರಿಸಿದೆ. ರಾಜ್ಯದ ಹೆಚ್ಚು ಸಂಕೀರ‍್ಣವಾದ ಬಾಶಿಕ ರಚನೆಯನ್ನು ಹೊಂದಿರುವ ಜಿಲ್ಲೆಗಳಲ್ಲಿ ಕಾರವಾರ ಕೂಡ ಒಂದಾಗಿದೆ.

ಬಾಶೆತಾಯ್ಮಾತುಒಟ್ಟು ಮಾತುಗರುಗಂಡುಹೆಣ್ಣು
ಆಸ್ಸಾಮಿ28244
 ಆಸ್ಸಾಮಿ27234
 ಇತರ110
ಬೆಂಗಾಲಿ 778513265
 ಬೆಂಗಾಲಿ778513265
ಬೊಡೊ 220
 ಬೊಡೊ/ಬೊರೊ220
ಡೋಗ್ರಿ 1477671
 ಡೋಗ್ರಿ1477671
ಗುಜರಾತಿ 887450437
 ಗುಜರಾತಿ645331314
 ಸವರಾಶ್ಟ್ರ/ಸವರಾಶ್ಟ್ರಿ422
 ಇತರ238117121
ಹಿಂದಿ 19566109908576
 ಬಗೇಲಿ/ಬಗೇಲ್‍ಕಂಡಿ321
 ಬಂಜಾರಿ1638578
 ಬರ್‍ಮವುರಿ/ಗಡ್ಡಿ110
 ಬೋಜ್ಪುರಿ310182128
 ಚತ್ತೀಸ್‍ಗರಿ211
 ದುಂಡಾರಿ633
 ಗರ‍್ವಾಲಿ18108
 ಹರಿಯಾಣ್ವಿ773938
 ಹಿಂದಿ1038462254159
 ಕುಮವುನಿ431
 ಲಮಾಣಿ/ಲಂಬಾಡಿ690134963405
 ಮಗದಿ/ಮಗಹಿ1798
 ಮಾರ‍್ವಾರಿ789414375
 ಪಹರಿ1165
 ಪವಾರಿ/ಪೊವಾರಿ624
 ರಾಜಸ್ತಾನಿ632367265
 ಸುಗಾಲಿ110
 ಇತರ24114497
ಕನ್ನಡ 795570399818395752
 ಕನ್ನಡ795334399698395636
 ಕುರುಬ/ಕುರುಂಬ20410599
 ಪ್ರಾಕ್ರುತ/ಪ್ರಾಕ್ರುತ ಬಾಶಾ20911
 ಇತರ1266
ಕಾಶ್ಮೀರಿ 1156649
 ಕಾಶ್ಮೀರಿ1156649
ಕೊಂಕಣಿ 261807130164131643
 ಕೊಂಕಣಿ251862125466126396
 ಕುಡುಬಿ/ಕುಡುಂಬಿ372116
 ಮಾಲ್ವಾನಿ532
 ನವಾಯಿತಿ981946305189
 ಇತರ844440
ಮಯ್ತಿಲಿ 21147
 ಮಯ್ತಿಲಿ21147
ಮಲಯಾಳಂ 1043755184919
 ಮಲಯಾಳಂ933149524379
 ಯರವ532
 ಇತರ1101563538
ಮಣಿಪುರಿ 352114
 ಮಣಿಪುರಿ352114
ಮರಾಟಿ 1367756960067175
 ಆರೆ 734
 ಮರಾಟಿ1367206957367147
 ಇತರ482424
ನೇಪಾಲಿ 838701137
 ನೇಪಾಲಿ838701137
ಓಡಿಯಾ 352226126
 ಓಡಿಯಾ347222125
 ಇತರ541
ಪಂಜಾಬಿ 18311964
 ಪಂಜಾಬಿ18311964
ಸಂಸ್ಕ್ರುತ 93885
 ಸಂಸ್ಕ್ರುತ93885
ಸಂತಾಲಿ 101
 ಸಂತಾಲಿ101
ಸಿಂದಿ 401822
 ಕಚ್ಚಿ321517
 ಸಿಂದಿ835
ತಮಿಳು 469325172176
 ಕೊರವ321517
 ತಮಿಳು463924902149
 ಇತರ221210
ತೆಲುಗು 1957098799691
 ತೆಲುಗು1953098609670
 ಇತರ401921
ಉ‌ರ‌್ದು 1700378491685121
 ಉ‌ರ‌್ದು1700108489985111
 ಇತರ271710
ಆವೊ 220
 ಮೊಂಗ್ಸೇನ್220
ಬಿಲಿ/ಬಿಲೊಡಿ 336162174
 ವಾಗ್ದಿ101
 ಇತರ335162173
ಬೊಟಿಯ 40036931
 ಬೊಟಿಯ3323320
 ಇತರ683731
ಚಾಂಗ್ 110
 ಚಾಂಗ್110
ಕೂರ‍್ಗಿ/ಕೊಡಗು 784137
 ಕೂರ‍್ಗಿ/ಕೊಡಗು1596
 ಕೊಡವ633231
ದಿಮಾಸಾ 211
 ದಿಮಾಸಾ211
ಇಂಗ್ಲೀಶು 1035251
 ಇಂಗ್ಲೀಶು1035251
ಗದಬ 101
 ಗದಬ101
ಗಾರೊ 110
 ಗಾರೊ110
ಕಾಂದೇಶಿ 425217208
 ಇತರ425217208
ಕಾಸಿ 707
 ಕಾಸಿ707
ಕಿನ್ನವುರಿ 606
 ಕಿನ್ನವುರಿ606
ಕೊಡ/ಕೊರ 562432
 ಕೊಡ/ಕೊರ562432
ಕೊಮ್ 844
 ಕೊಮ್844
ಕೊಂಡ 110
 ಕೊಂಡ110
ಕುರುಕ್/ಓರಆನ್ 743440
 ಕುರುಕ್/ಓರಆನ್743440
ಲಡಾಕಿ 23821523
 ಲಡಾಕಿ23821523
ಮಾವೊ 110
 ಮಾವೊ110
ಮೊನ್ಪ 17015416
 ಮೊನ್ಪ17015416
ಮುಂಡ 29290
 ಮುಂಡ29290
ಶೇರ‍್ಪಾ 330
 ಶೇರ‍್ಪಾ330
ತಮಂಗ್ 110
 ತಮಂಗ್110
ತಂಗ್ಸಾ 321
 ಇತರ321
ತಾಡೊ 110
 ತಾಡೊ110
ಟಿಬೆಟನ್ 1057377222851
 ಟಿಬೆಟನ್1057377222851
ತುಳು 1454713741
 ತುಳು1454713741
ಇತರ 1220786434

ಕಾರವಾರ ಜಿಲ್ಲೆಯಲ್ಲಿ ಒಟ್ಟು ಬಳಕೆಯಲ್ಲಿರುವ ಬಾಶೆಗಳು, ಜನಗಣತಿಯ ಪ್ರಕಾರ ನಲ್ವತ್ತೆಂಟು. ಮತ್ತು ಇತರ ಎಂಬ ಒಂದು ಗುಂಪು. ಇತರ ಗುಂಪಿನಲ್ಲಿ 1220 ಮಂದಿ ಮಾತುಗರು ದಾಕಲಾಗಿದ್ದರೂ ಇದನ್ನು ಕಡಿಮೆ ಸಂಕೆ ಎಂದು ಪರಿಗಣಿಸಿ ಒಂದು ಬಾಶೆ ಎಂದು ಲೆಕ್ಕಿಸಿದರೆ ಕಾರವಾರ ಜಿಲ್ಲೆಯ ಬಾಶೆಗಳ ಸಂಕೆ ಒಟ್ಟು ನಲ್ವತ್ತೊಂಬತ್ತು ಆಗುತ್ತದೆ. ಇನ್ನು ತಾಯ್ಮಾತುಗಳನ್ನು ಗಮನಿಸಿದಾಗ ಒಟ್ಟು ಎಂಬತ್ತೊಂಬತ್ತು ತಾಯ್ಮಾತುಗಳು ದಾಕಲಾಗಿರುವುದು ಕಾಣಿಸುತ್ತದೆ.

ಇದರೊಟ್ಟಿಗೆ ಇತರ ಎಂಬ ಬಾಶೆ ಗುಂಪಿನಲ್ಲಿ ಇರುವ ಮಾತುಗರನ್ನು ಒಂದು ತಾಯ್ಮಾತಿಗೆ ಸಂಬಂದಿಸಿದವರು ಎಂದು ಲೆಕ್ಕಿಸಿದರೂ ಜಿಲ್ಲೆಯ ತಾಯ್ಮಾತುಗಳ ಸಂಕೆ ತೊಂಬತ್ತು ಆಗುತ್ತದೆ. ಇತರ ಎಂಬ ಗುಂಪನ್ನು ಹದಿನಯ್ದು ಬಾಶೆಗಳೊಳಗೆ ದಾಕಲಿಸಿದೆ. ಅವುಗಳೆಂದರೆ, ಆಸ್ಸಾಮಿ, ಗುಜರಾತಿ, ಹಿಂದಿ, ಕನ್ನಡ, ಕೊಂಕಣಿ, ಮಲಯಾಳಂ, ಮರಾಟಿ, ಓಡಿಯಾ, ತಮಿಳು, ತೆಲುಗು, ಉ‌ರ‌್ದು, ಬಿಲಿ/ಬಿಲೊಡಿ, ಬೊಟಿಯ, ಕಾಂದೇಶಿ ಮತ್ತು ತಂಗ್ಸಾ. ಹೀಗೆ ಇತರ ಎಂಬ ಗುಂಪನ್ನು ಹೊರತುಪಡಿಸಿ ಹೆಸರಿಸಲಾದ ತಾಯ್ಮಾತುಗಳ ಸಂಕೆ ಎಪ್ಪತ್ನಾಲ್ಕು ಆಗುತ್ತವೆ. 

ಕಾರವಾರ ಜಿಲ್ಲೆಯಲ್ಲಿ ಕನ್ನಡವು ಅತಿ ಹೆಚ್ಚು ಮಂದಿ ಮಾತಾಡುವ ಬಾಶೆಯಾಗಿದೆಯಾದರೂ ಜಿಲ್ಲೆಯ ಪ್ರತಿಶತತೆಯಲ್ಲಿ ಅದು ಕಡಿಮೆ ಇದೆ. ಕಾರವಾರ ಜಿಲ್ಲೆಯಲ್ಲಿ ಒಟ್ಟು ಜನಸಂಕೆ 14,37,169 ಇದೆ. ಇದರಲ್ಲಿ ಕನ್ನಡ ಮಾತಾಡುವ 7,95,570 ಮಂದಿ ಇದ್ದಾರೆ. ಇದು ಒಟ್ಟು ಜಿಲ್ಲೆಯ 55.356%ದಶ್ಟು ಇದೆ. ಕೊಂಕಣಿ ಬಾಶೆಗೆ 2,61,807 (18.216%) ಮಂದಿ ಇದ್ದಾರೆ. ಉ‌ರ‌್ದು ಬಾಶೆಗೆ 1,70,037 (11.831%) ಮಂದಿ ಮತ್ತು ಮರಾಟಿ ಬಾಶೆಗೆ 1,36,775 (9.516%) ಮಂದಿ ಮಾತುಗರು ಇದ್ದಾರೆ. ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತುಗರು ಇರುವ ಬಾಶೆಗಳು ಇವು.

ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಇರುವ ನಾಲ್ಕು ಬಾಶೆಗಳು ಇವೆ. ಅವುಗಳೆಂದರೆ ತೆಲುಗು – 19,570 (1.361%), ಹಿಂದಿ – 19,566 (1.361%), ಟಿಬೆಟನ್ – 10,573 (0.735%) ಮತ್ತು ಮಲಯಾಳಂ – 10,437 (0.726%). ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರು ತಮಿಳು – 4,693 (0.326%) ಮತ್ತು ತುಳು – 1,454 (0.101%) ಬಾಶೆಗಳಿಗೆ ದಾಕಲಾಗಿದ್ದಾರೆ. ಇವುಗಳೊಂದಿಗೆ ಇತರ ಎಂಬ ಗುಂಪಿನಲ್ಲಿಯೂ ಸಾವಿರಕ್ಕೂ ಹೆಚ್ಚು ಮಂದಿ ಅಂದರೆ 1,220 (0.084%) ಮಂದಿ ದಾಕಲಾಗಿದ್ದಾರೆ.

ಹದಿಮೂರು ಬಾಶೆಗಳಿಗೆ ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮಂದಿ ಮಾತುಗರು ದಾಕಲಾಗಿದ್ದಾರೆ. ಅವುಗಳೆಂದರೆ, ಗುಜರಾತಿ, ನೇಪಾಲಿ, ಬೆಂಗಾಲಿ, ಕಾಂದೇಶಿ, ಬೊಟಿಯ, ಓಡಿಯಾ, ಬಿಲಿ/ಬಿಲೊಡಿ, ಲಡಾಕಿ, ಪಂಜಾಬಿ, ಮೊನ್ಪ, ಡೋಗ್ರಿ, ಕಾಶ್ಮೀರಿ ಮತ್ತು ಇಂಗ್ಲೀಶು. ಹಾಗೆಯೆ ನೂರಕ್ಕಿಂತ ಕಡಿಮೆ ಮಂದಿ ಮಾತಾಡುವ ಒಟ್ಟು ಇಪ್ಪತ್ತಯ್ದು ಬಾಶೆಗಳು ಪಟ್ಟಿಯಲ್ಲಿ ಕಾಣಿಸುತ್ತವೆ. ಜನಗಣತಿ ಒದಗಿಸುವ ಕಾರವಾರ ಜಿಲ್ಲೆಯ ಬಾಶಿಕ ಮಾಹಿತಿಯನ್ನು ಕೆಳಗಿನಂತೆ ಪಟ್ಟಿ ಮಾಡಿ ತೋರಿಸಿದೆ. 

ಸಾಪೇಕ್ಶ ಸಂಕೆಬಾಶೆಸಂಕೆ%
ಒಂದು ಲಕ್ಶಕ್ಕಿಂತ ಹೆಚ್ಚುಕನ್ನಡ7,95,57055.356%
’’ಕೊಂಕಣಿ 2,61,80718.216%
’’ಉ‌ರ‌್ದು1,70,03711.831%
’’ಮರಾಟಿ1,36,775 9.516%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುತೆಲುಗು19,570 1.361%
’’ಹಿಂದಿ19,566 1.361%
’’ಟಿಬೆಟನ್10,5730.735%
’’ಮಲಯಾಳಂ10,437 0.726%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುತಮಿಳು4,693 0.326%
’’ತುಳು1,4540.101%
ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚುಗುಜರಾತಿ, ನೇಪಾಲಿ, ಬೆಂಗಾಲಿ, ಕಾಂದೇಶಿ, ಬೊಟಿಯ, ಓಡಿಯಾ, ಬಿಲಿ/ಬಿಲೊಡಿ, ಲಡಾಕಿ, ಪಂಜಾಬಿ, ಮೊನ್ಪ, ಡೋಗ್ರಿ, ಕಾಶ್ಮೀರಿ, ಇಂಗ್ಲೀಶು4,9720.287%
ನೂರಕ್ಕಿಂತ ಕಡಿಮೆಇಪ್ಪತ್ತಯ್ದು ಬಾಶೆಗಳು4950.034%
ಒಟ್ಟು ಮಾತುಗರು14,37,169100%

ಈಗ ಜನಗಣತಿ ಒದಗಿಸುವ ತಾಯ್ಮಾತುಗಳನ್ನು ಪರಿಗಣಿಸಬಹುದು. ಆಗ ಜಿಲ್ಲೆಯ ಬಾಶೆಗಳ ಪಟ್ಟಿಯಲ್ಲಿ ಹಲವು ಬದಲಾವಣೆಗಳು ಆಗುತ್ತವೆ.

ಹಿಂದಿ ಬಾಶೆಯ ಒಳಗೆ ಕರ‍್ನಾಟಕದ ಸಂದರ‍್ಬದಲ್ಲಿ ಪ್ರಾಮುಕ್ಯತೆ ಪಡೆಯುವ ಕೆಲವು ಬಾಶೆಗಳ ಪಟ್ಟಿಯನ್ನು ಇಲ್ಲಿ ಕೊಟ್ಟಿದೆ.

ಹಿಂದಿ 19,566

ಬಂಜಾರಿ 163

ಬೋಜ್ಪುರಿ 310

ಹಿಂದಿ 10,384

ಲಮಾಣಿ/ಲಂಬಾಡಿ 6,901

ಮಾರ‍್ವಾರಿ 789

ರಾಜಸ್ತಾನಿ 632

ಸುಗಾಲಿ 1

ಹಿಂದಿ ಬಾಶೆಗೆ ಜಿಲ್ಲೆಯಲ್ಲಿ ಒಟ್ಟು 19,566 ಮಂದಿ ಮಾತುಗರಿದ್ದು ಇದರೊಳಗೆ ಹಿಂದಿಗೆ 10,384 ಮಾತುಗರು ಇದ್ದಾರೆ. ಇದು ಜಿಲ್ಲೆಯ ಹಿಂದಿಯ 53.071% ಮತ್ತು ಜಿಲ್ಲೆಯ 0.722% ಆಗುತ್ತದೆ. ಲಮಾಣಿ ಹೆಸರಿನಲ್ಲಿ 6,901, ಬಂಜಾರಿ ಹೆಸರಿನಲ್ಲಿ 163 ಮತ್ತು ಸುಗಾಲಿ ಹೆಸರಿನಲ್ಲಿ 1 ಮಾತುಗರು ಜಿಲ್ಲೆಯಲ್ಲಿ ದಾಕಲಾಗಿದ್ದಾರೆ. ಇವು ಮೂರು ಸೇರಿ ಲಂಬಾಣಿಯ ಮಾತುಗರ ಸಂಕೆ 7,065 ಆಗುತ್ತದೆ. ಇದು ಜಿಲ್ಲೆಯ ಒಟ್ಟು ಹಿಂದಿಯ 36.108% ಮತ್ತು ಜಿಲ್ಲೆಯ 0.491% ಆಗುತ್ತದೆ. ಹಾಗಾಗಿ ಲಂಬಾಣಿ ಸಾವಿರಕ್ಕೂ ಹೆಚ್ಚು ಮಂದಿ ಮಾತುಗರಿರುವ ಬಾಶೆಗಳ ಪಟ್ಟಿಗೆ ಸೇರುತ್ತದೆ. ಕಾರವಾರ ಜಿಲ್ಲೆಯಲ್ಲಿ ಕೊಂಕಣಿಯ ಒಳನುಡಿಗಳು ಮಹತ್ವವನ್ನು ಪಡೆದುಕೊಳ್ಳುತ್ತವೆ.

ಕೊಂಕಣಿ ಮಾತಾಡುವ ಒಟ್ಟು ಮಾತುಗರ ಸಂಕೆ 2,61,807 ಆಗಿದೆ. ಇದರಲ್ಲಿ ಕೊಂಕಣಿ ಮಾತಾಡುವವರು 2,51,862 ಇದೆ. ಇದು ಜಿಲ್ಲೆಯ ಒಟ್ಟು ಕೊಂಕಣಿಯ 96.201% ಮತ್ತು ಜಿಲ್ಲೆಯ 17.524% ಆಗುತ್ತದೆ. ನವಾಯಿತಿ ಮಾತಾಡುವ 9,819 ಮಂದಿ ಜಿಲ್ಲೆಯಲ್ಲಿ ದಾಕಲಾಗಿದ್ದಾರೆ. ಇದು ಜಿಲ್ಲೆಯ ಕೊಂಕಣಿಯ 3.750% ಮತ್ತು ಜಿಲ್ಲೆಯ 0.683% ಆಗುತ್ತದೆ. ನವಾಯಿತಿ ಸಾವಿರಕ್ಕೂ ಹೆಚ್ಚು ಮಂದಿ ಮಾತುಗರ ಬಾಶೆಗಳ ಪಟ್ಟಿಗೆ ಸೇರುತ್ತದೆ. ಮಲಯಾಳಂ ಬಾಶೆಯಲ್ಲಿ ಇತರ ಎಂಬ ಗುಂಪಿನಲ್ಲಿ 1,101 ಮಂದಿ ದಾಕಲಾಗಿದ್ದಾರೆ. ಇದು ಮಲಯಾಳಂ ಬಾಶೆಯ 10.549% ಮತ್ತು ಜಿಲ್ಲೆಯ 0.076% ಆಗುತ್ತದೆ. ಈ ಮಾತುಕತೆಯನ್ನು ಗಮನದಲ್ಲಿ ಇಟ್ಟುಕೊಂಡು ಮೇಲೆ ಕೊಟ್ಟಿರುವ ಜಿಲ್ಲೆಯ ಬಾಶೆಗಳ ಚಿತ್ರವನ್ನು ಇನ್ನೊಮ್ಮೆ ಬಿಡಿಸಿ ತೋರಿಸಬಹುದು.

ಸಾಪೇಕ್ಶ ಸಂಕೆಬಾಶೆಸಂಕೆ%
ಒಂದು ಲಕ್ಶಕ್ಕಿಂತ ಹೆಚ್ಚುಕನ್ನಡ7,95,33455.340%
’’ಕೊಂಕಣಿ2,51,86217.524%
’’ಉ‌ರ‌್ದು1,70,01011.829%
’’ಮರಾಟಿ1,36,7209.513%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುತೆಲುಗು19,5301.358%
’’ಟಿಬೆಟನ್10,5730.735%
’’ಹಿಂದಿ10,3840.722%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುನವಾಯಿತಿ9,8190.683%
’’ಮಲಯಾಳಂ9,3310.649%
’’ಲಂಬಾಣಿ7,0650.491%
’’ತಮಿಳು46390.322%
’’ತುಳು1,454 0.101%
’’ಇತರ 1,220 0.084%
’’ಮಲಯಾಳಂ-ಇತರ1,1010.076%

ಜಿಲ್ಲೆಯ ಹತ್ತು ದೊಡ್ಡ ಬಾಶೆಗಳ ಪಟ್ಟಿಯನ್ನು ಕೆಳಗೆ ಕೊಟ್ಟಿದೆ.

ಪ್ರದೇಶಜಿಲ್ಲೆಯ ಜನಸಂಕೆಕ್ರಸಂಪ್ರದಾನ ಬಾಶೆಮಾತುಗರು%
ಉತ್ತರ ಕನ್ನಡ14,37,1691ಕನ್ನಡ7,95,33455.340%
2ಕೊಂಕಣಿ2,51,86217.524%
  3ಉ‌ರ‌್ದು1,70,01011.829%
  4ಮರಾಟಿ1,36,7209.513%
  5ತೆಲುಗು19,5301.358%
  6ಟಿಬೆಟನ್10,5730.735%
  7ಹಿಂದಿ10,3840.722%
  8ನವಾಯಿತಿ9,8190.683%
  9ಮಲಯಾಳಂ9,3310.649%
  10ಲಂಬಾಣಿ7,0650.491%

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

March 17, 2022

ನಿಮಗೆ ಇವೂ ಇಷ್ಟವಾಗಬಹುದು…

‘ವೀರಲೋಕ’ದಿಂದ ಉತ್ತರಪರ್ವ

‘ವೀರಲೋಕ’ದಿಂದ ಉತ್ತರಪರ್ವ

ಸಾಮಾನ್ಯವಾಗಿ ಸಾಹಿತ್ಯಲೋಕದಲ್ಲಿ ಕೇಳಿಬರುವ ಮಾತು… ಎಲ್ಲಾ ಪ್ರಶಸ್ತಿಗಳು, ವೇದಿಕೆಗಳು, ಅಧಿಕಾರ, ಅವಕಾಶಗಳು ಒಂದು ಭಾಗದ ಜನರಿಗೇ ದಕ್ಕುತ್ತವೆ....

ಬೆಂಬಿಡದ ದಾಹ

ಬೆಂಬಿಡದ ದಾಹ

** ಎದ್ದೆ. ಕಣ್ಬಿಟ್ಟಾಗ ರೂಮು ಅರೆ ಕತ್ತಲಾಗಿತ್ತು, ಫ್ಯಾನ್ ಎರಡರ ಸ್ಪೀಡಿನಲ್ಲಿ ತಿರುಗುತ್ತಿತ್ತು, ಮೊಬೈಲ್ ಚಾರ್ಜ್ ಆಗುತ್ತಿತ್ತು,...

0 Comments

Submit a Comment

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This