ಬಸವರಾಜ ಕೋಡಗುಂಟಿ ಅಂಕಣ – ದಕ್ಶಿಣ ಕನ್ನಡ ಜಿಲ್ಲೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು

ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ ವೈವಿಧ್ಯತೆಯತ್ತ

ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಈ ವಾರದ ಅಂಕಣದಲ್ಲಿ ದಕ್ಶಿಣ ಕನ್ನಡ  (ಮಂಗಳೂರು)

ಜಿಲ್ಲೆಯ ಬಗ್ಗೆ ಬೆಳಕು

ಚೆಲ್ಲಲಾಗಿದೆ.

22

ದಕ್ಶಿಣ ಕನ್ನಡ (ಮಂಗಳೂರು)

ಮಂಗಳೂರು ಬಾರತ ದೇಶದಲ್ಲಿಯೆ ಬಾಶಿಕ ಸಂಕೀರ‍್ಣತೆಯನ್ನು ಹೊಂದಿರುವ ಜಿಲ್ಲೆಗಳಲ್ಲಿ ಒಂದಾಗಿದೆ. ಮಂಗಳೂರು ಜಿಲ್ಲೆಯಲ್ಲಿ ಕಾಣಿಸುವ ಹಲವು ಅತ್ಯಂತ ಕುತೂಹಲದಾಯಕ ವಿಚಾರಗಳಲ್ಲಿ ಮಹತ್ವದ್ದೆಂದರೆ ಇತರ ಎಂಬ ಗುಂಪಿನಲ್ಲಿ ಬಹು ದೊಡ್ಡ ಸಂಕೆಯ ಮಾತುಗರು ದಾಕಲಾಗಿರುವುದು. ಇತರ, ಅಂದರೆ ಹೆಸರಿಸಿಲ್ಲದ ಬಾಶೆಗಳನ್ನಾಡುವವರ ಸಂಕೆ 3,35,775. ಇದರಲ್ಲಿ ಪ್ರತಿ ಬಾಶೆಗೆ ೫,೦೦೦ ಮಂದಿ ಮಾತುಗರು ಇದ್ದಾರೆ ಎಂದು ಲೆಕ್ಕಿಸಿದರೂ ಇದರಲ್ಲಿ ಅರವತ್ತೆಂಟು ಬಾಶೆಗಳು ಇವೆ ಎಂದಾಗುತ್ತದೆ. ಹೆಸರಿಸಲಾದ ಅಯ್ವತ್ತೆಂಟು ಬಾಶೆಗಳೊಂದಿಗೆ ಇವುಗಳನ್ನು ಸೇರಿಸಿದರೆ ೧೨೬ ಆಗುತ್ತದೆ.

ವಾಸ್ತವವೆಂದರೆ ತಲಾ ೫,೦೦೦ ಮಂದಿ ಇರುವ ಬಾಶೆಗಳು ಇದರಲ್ಲಿ ಹೆಚ್ಚು ಇರಲು ಸಾದ್ಯವಿಲ್ಲ. ಈ ಅಂದಾಜನ್ನು ತೆಗೆದುಕೊಂಡರೆ ಮಂಗಳೂರಿನಲ್ಲಿ ಎರಡು ನೂರಕ್ಕಿಂತಲೂ ಹೆಚ್ಚು ಬಾಶೆಗಳು ಇವೆ ಎನ್ನಬಹುದು. ತಾಯ್ಮಾತುಗಳ ಸಂಕೆಯೂ ಮೂರು ನೂರಕ್ಕೂ ಹೆಚ್ಚು ಆಗುತ್ತದೆ. ಇನ್ನೊಂದು ವಿಶೇಶವೆಂದರೆ ಜಿಲ್ಲೆಯಲ್ಲಿ ಅತಿ ಹೆಚ್ಚು ಮಾತಾಡುವ ಬಾಶೆ ತುಳು ಆಗಿದೆ. ಎರಡನೆ ಅತಿ ಹೆಚ್ಚು ಮಂದಿ ಮಾತಾಡುವ ಬಾಶೆಗಳ ಗುಂಪು ಇತರ ಎಂಬುದಾಗಿದೆ.

ಮೂರನೆಯ ಅತಿದೊಡ್ಡ ಬಾಶೆ ಮಲಯಾಳಂ ಮತ್ತು ನಾಲ್ಕನೆ ಅತಿದೊಡ್ಡ ಬಾಶೆ ಕೊಂಕಣಿ. ಕನ್ನಡ ಜಿಲ್ಲೆಯ ಅಯ್ದನೆ ಸ್ತಾನದಲ್ಲಿ ಇದೆ. ಜಿಲ್ಲೆಯಲ್ಲಿ ಕನ್ನಡ ಮಾತಾಡುವವರ ಸಂಕೆ ಕಡಿಮೆ ಇದ್ದು ಕನ್ನಡ ಮಾತಾಡುವವರು ೧೦%ಕ್ಕಿಂತ ಕಡಿಮೆ ಇದ್ದಾರೆ. ಇದರ ಹೊರತಾಗಿ ಉರ‍್ದು ಪರಿಗಣಿಸುವಶ್ಟು ಮಂದಿ ಇರುವ ಬಾಶೆಗಳಲ್ಲಿ ಒಂದಾಗಿದೆ.

ಮಂಗಳೂರು ಕರ‍್ನಾಟಕದ ಒಂದು ಸಂಕೀರ‍್ಣ ಬಾಶಿಕ ಪರಿಸರವನ್ನು ಹೊಂದಿರುವ ಪ್ರದೇಶ. ಜಿಲ್ಲೆಯಲ್ಲಿ ಜನಗಣತಿ ಒದಗಿಸುವ ಮಾಹಿತಿಯನ್ನು ಇಲ್ಲಿ ಕೆಳಗೆ ಪಟ್ಟಿಸಿದೆ.

ಬಾಶೆಒಳನುಡಿಒಟ್ಟುಗಂಡುಹೆಣ್ಣು
ಆಸ್ಸಾಮಿ
ಆಸ್ಸಾಮಿ26521451
ಬೆಂಗಾಲಿ2,0341,642392
ಬೆಂಗಾಲಿ2,0331,641392
ಹಯ್ಜೊಂಗ್/ಹಜೊಂಗ್110
ಬೊಡೊ505
ಬೊಡೊ/ಬೊರೊ505
ಡೋಗ್ರಿ642
ಡೋಗ್ರಿ642
ಗುಜರಾತಿ3,1241,7081,416
ಗುಜರಾತಿ3,0681,6791,389
ಸವುರಾಶ್ಟ್ರ/ಸವುರಾಶ್ಟ್ರಿ221111
ಇತರ341816
ಹಿಂದಿ18,92212,5696,353
ಬಗತಿ/ಬಗತಿ ಪಹರಿ532
ಬಂಜಾರಿ814437
ಬರ‍್ಮವುರಿ/ಗಡ್ಡಿ330
ಬೋಜ್ಪುರಿ55148269
ಬ್ರಜ್ ಬಾಶಾ422
ಬುಂದೇಲಿ/ಬುಂದೇಲಿ ಕಂಡಿ110
ಚತ್ತೀಸ್‍ಗರಿ24231
ದುಂಡಾರಿ660
ಗರ‍್ವಾಲಿ17116
ಹರಿಯಾಣ್ವಿ13112
ಹಿಂದಿ15,08610,0924,994
ಕುರ‍್ಮಾಲಿ ತಾರ್220
ಲಮಾಣಿ/ಲಂಬಾಡಿ1,239636603
ಮಾರ‍್ವಾರಿ549326223
ನಾಗ್ಪುರಿಯ440
ಪವರಿ/ಪೊವರಿ101
ರಾಜಸ್ತಾನಿ902565337
ಸಾದನ್/ಸಾದ್ರಿ21912
ಸುರ‍್ಜಾಪುರಿ10100
ಇತರ40333964
ಕನ್ನಡ1,93,79799,18694,611
ಬಡಗ330
ಕನ್ನಡ1,92,81098,67994,131
ಕುರುಬ/ಕುರುಂಬ916468448
ಇತರ683632
ಕಾಶ್ಮೀರಿ342410
ಕಾಶ್ಮೀರಿ342410
ಕೊಂಕಣಿ2,07,05699,9761,07,080
ಕೊಂಕಣಿ2,04,93998,9071,06,032
ಕುಡುಬಿ/ಕುಡುಂಬಿ983496487
ನವಾಯಿತಿ1366868
ಇತರ998505493
ಮಯ್ತಿಲಿ442519
ಮಯ್ತಿಲಿ422418
ತಾತಿ211
ಮಲಯಾಳಂ2,08,3831,02,1801,06,203
ಮಲಯಾಳಂ2,08,2321,02,1121,06,120
ಯರವ1516883
ಮಣಿಪುರಿ1136449
ಮಣಿಪುರಿ1136449
ಮರಾಟಿ35,91618,06017,856
ಆರೆ17,2278,6038,624
ಮರಾಟಿ18,5859,4069,179
ಇತರ1045153
ನೇಪಾಲಿ740308432
ನೇಪಾಲಿ740308432
ಓಡಿಯಾ1,142902240
ಬಾಟ್ರಿ202
ಓಡಿಯಾ1,134899235
ಇತರ633
ಪಂಜಾಬಿ23614393
ಪಂಜಾಬಿ23314390
ಇತರ303
ಸಂಸ್ಕ್ರುತ944351
ಸಂಸ್ಕ್ರುತ944351
ಸಂತಾಲಿ553718
ಸಂತಾಲಿ543618
ಇತರ110
ಸಿಂದಿ1206159
ಕಚ್ಚಿ924844
ಸಿಂದಿ281315
ತಮಿಳು23,58812,44611,142
ಕೊರವ523
ತಮಿಳು23,58312,44411,139
ತೆಲುಗು7,9514,3633,588
ತೆಲುಗು7,9314,3553,576
ಇತರ20812
ಉರ‍್ದು33,08716,15816,929
ಉರ‍್ದು33,04516,14416,901
ಬನ್ಸಾರಿ1688
ಇತರ26620
ಆದಿ1367
ಆದಿ1266
ಆದಿ ಮಿನಿಯೊಂಗ್/ಮಿನಿಯೊಂಗ್/101
ಅಪ್ಗನ್/ಕಾಬುಲಿ/ಪಾಶ್ತೊ220
ಅಪ್ಗನ್/ಕಾಬುಲಿ/ಪಾಶ್ತೊ220
ಅಂಗಾಮಿ707
ಅಂಗಾಮಿ505
ಇತರ202
ಆವೊ110
ಆವೊ110
ಅರಾಬಿಕ್/ಅರ‍್ಬಿ219117102
ಅರಾಬಿಕ್/ಅರ‍್ಬಿ219117102
ಬಿಲಿ/ಬಿಲೊಡಿ963
ಬಿಲಾಲಿ110
ಬಿಲಿ/ಬಿಲೊಡಿ110
ಚೊದಾರಿ110
ಕೊಕ್ನ/ಕೊಕ್ನಿ/ಕುಕ್ನ633
ಬೊಟಿಯ101
ಇತರ101
ಚಕ್ರು/ಚೊಕ್ರಿ202
ಚಕ್ರು/ಚೊಕ್ರಿ202
ಕೂರ‍್ಗಿ/ಕೊಡಗು996481515
ಕೂರ‍್ಗಿ/ಕೊಡಗು299139160
ಕೊಡವ697342355
ಇಂಗ್ಲೀಶು480309171
ಇಂಗ್ಲೀಶು480309171
ಗಾರೊ312
ಗಾರೊ312
ಗೊಂಡಿ110
ಗೊಂಡಿ110
ಕಬುಇ303
ರೊಂಗ್ಮೆಯಿ303
ಕರ‍್ಬಿ/ಮಿಕಿರ್660
ಕರ‍್ಬಿ/ಮಿಕಿರ್660
ಕರಿಯಾ1165
ಕರಿಯಾ1165
ಕಾಸಿ823745
ಕಾಸಿ261016
ಪ್ನಾರ್/ಸಿಂಟೆಂಗ್562729
ಕೆಜಾ312
ಇತರ312
ಕಿಸಾನ್110
ಕಿಸಾನ್110
ಕೊಮ್1293
ಕೊಮ್1293
ಕೊರ‍್ವ623230
ಕೊರಕು211
ಇತರ603129
ಕುಕಿ202
ಕುಕಿ202
ಕುರುಕ್/ಓರಆನ್481830
ಕುರುಕ್/ಓರಆನ್481830
ಲೊತಾ202
ಲೊತಾ202
ಲುಶಾಯಿ/ಮಿಜೊ 24321
ಲುಶಾಯಿ/ಮಿಜೊ24321
ಮಾವೊ505
ಮಾವೊ505
ಮರಂ101
ಮರಂ101
ಮುಂಡ1091
ಮುಂಡ1091
ಮುಂಡಾರಿ26224
ಮುಂಡಾರಿ26224
ಪೊಚುರಿ101
ಪೊಚುರಿ101
ಸೆಮಾ431
ಸೆಮಾ431
ತಂಗ್‍ಕುಲ್101
ತಂಗ್‍ಕುಲ್101
ತಂಗ್ಸಾ734
ಇತರ734
ಟಿಬೆಟನ್1214477
ಟಿಬೆಟನ್1214477
ತ್ರಿಪುರಿ101
ಇತರ101
ತುಳು10,14,9944,96,1315,18,863
ತುಳು10,14,6384,95,9615,18,677
ಇತರ356170186
ಜೊವು110
ಜೊವು110
ಇತರ3,35,7751,67,3511,68,424

ದಕ್ಶಿಣ ಕನ್ನಡ ಜಿಲ್ಲೆಯಲ್ಲಿ ಇತರ ಎಂಬ ಗುಂಪಿನಲ್ಲಿ ಅತಿ ಹೆಚ್ಚು ಮಂದಿ ಅಂದರೆ 3,35,775 ಮಂದಿ ದಾಕಲಾಗಿದ್ದಾರೆ. ಅದಲ್ಲದೆ ಬಹುತೇಕ ಎಲ್ಲ ಬಾಶೆಗಳಲ್ಲಿಯೂ ವಿಬಿನ್ನ ತಾಯ್ಮಾತುಗಳು ದಾಕಲಾಗಿವೆ. ಹಿಂದಿಯ ಒಳಗೆ ಹೆಚ್ಚಿನ ಸಂಕೆಯ ತಾಯ್ಮಾತುಗಳು ಸೇರಿವೆ. ಒಟ್ಟಾರೆ ಇದು ದೊಡ್ಡ ಸಂಕೆಯ ತಾಯ್ಮಾತುಗಳು ದಾಕಲಾಗಿರುವ ಪ್ರದೇಶ. 

ದಕ್ಶಿಣ ಕನ್ನಡ ಜಿಲ್ಲೆಯಲ್ಲಿ ದಾಕಲಾದ ಬಾಶೆಗಳ ಸಂಕೆ ಅಯ್ವತ್ತೆಂಟು ಮತ್ತು ಇತರ ಎಂಬ ಒಂದು ಗುಂಪು. ಇತರ ಎಂಬ ಗುಂಪಿನಲ್ಲಿ ಅತಿ ಹೆಚ್ಚು ಮಂದಿ ದಾಕಲಾಗಿರುವುದರಿಂದ ಇದರಲ್ಲಿ ಹಲವು ಬಾಶೆಗಳು ಇವೆ ಎಂದಾಯಿತು. ಹಾಗೆಯೆ ಇಲ್ಲಿ ಯಾವುದೆ ಬಾಶೆಗಳೂ ಹತ್ತು ಸಾವಿರ ಮಂದಿ ಇಲ್ಲ ಎಂಬುದು ಸ್ಪಶ್ಟ. ಪ್ರತಿ ಬಾಶೆಗೆ ಗರಿಶ್ಟ 9,999 ಮಂದಿ ಎಂದು ಲೆಕ್ಕಿಸಿದರೂ ಇದರಲ್ಲಿ ಮೂವತ್ನಾಲ್ಕು ಬಾಶೆಗಳು ಇರುತ್ತವೆ. ಹಾಗಾದರೆ ದಕ್ಶಿಣ ಕನ್ನಡದಲ್ಲಿ ವರದಿಯಾದ ಬಾಶೆಗಳ ಸಂಕೆ ತೊಂಬತ್ತೆರಡು ಆಗುತ್ತದೆ. ಕಂಡಿತವಾಗಿಯೂ ಇತರ ಗುಂಪಿನಲ್ಲಿ ಇರುವ ಪ್ರತಿ ಬಾಶೆಗೆ ಅಶ್ಟು ಸಂಕೆಯ ಮಾತುಗರು ಇರುವ ಸಾದ್ಯತೆ ಇಲ್ಲ. ಹಾಗಾದರೆ ಬಾಶೆಗಳ ಸಂಕೆ ಇನ್ನೂ ಹೆಚ್ಚುತ್ತದೆ, ಇತರ ಗುಂಪಿನಲ್ಲಿ ಪ್ರತಿ ಬಾಶೆಗೆ 5,000 ಮಂದಿ ಇರುವುದೂ ಕೂಡ ಕಶ್ಟವೆನಿಸುತ್ತದೆ. ಹಾಗೆ 5,000 ಮಂದಿಯನ್ನು ಲೆಕ್ಕಿಸಿದರೆ ಕನಿಶ್ಟ ಅರವತ್ತೆಂಟು ಬಾಶೆಗಳು ಆಗುತ್ತವೆ. ಹೀಗೆ ಲೆಕ್ಕಿಸಿದರೆ ಕನಿಶ್ಟ 126 ಬಾಶೆಗಳು ಆಗುತ್ತವೆ. ಕಂಡಿತವಾಗಿಯೂ ಇದು ಇನ್ನೂ ಹೆಚ್ಚೆ ಇರುತ್ತದೆ. ಇತರದಲ್ಲಿ ಸೇರಿರುವ ಹಲವು ಬಾಶೆಗಳಿಗೆ ಬೆರಳೆಣಿಕೆಯ ಮಾತುಗರೂ ಇರಬಹುದು. ಹಾಗೆ ಲೆಕ್ಕಿಸಿದರೆ ಇತರ ಗುಂಪಿನಲ್ಲಿ ಸೇರಿರಬಹುದಾದ ಬಾಶೆಗಳ ಸಂಕೆಯೆ ಇನ್ನೂರು ತಲುಪಬಹುದು. ಹಾಗಾದರೆ ಮಂಗಳೂರು ಜಿಲ್ಲೆಯಲ್ಲಿ ದಾಕಲಾದ ಬಾಶೆಗಳ ಸಂಕೆ ಇನ್ನೂರಕ್ಕೂ ಹೆಚ್ಚಿರಬಹುದು. ಇದು ಕರ‍್ನಾಟಕದ ಮಾತ್ರವಲ್ಲದೆ ಬಾರತದಲ್ಲಿಯೆ ಅತಿ ಹೆಚ್ಚು ಬಾಶೆಗಳು ಇರುವ ಜಿಲ್ಲೆಗಳಲ್ಲಿ ಒಂದು ಎಂದೆನ್ನಬಹುದು. ಇದರೊಟ್ಟಿಗೆ ಈ ಬಾಶೆಗಳ ಒಳಗೆ ದಾಕಲಾದ ತಾಯ್ಮಾತುಗಳ ಸಂಕೆಯೂ ಬಹುದೊಡ್ಡದಿದೆ. ಜನಗಣತಿ ವರದಿಸಿದ ತಾಯ್ಮಾತುಗಳ ಸಂಕೆ 106. ಇದಕ್ಕೆ ಇತರ ಬಾಶೆಗಳ ಗುಂಪಿನಲ್ಲಿ ತಲಾ 5000 ಮಂದಿಯನ್ನು ಲೆಕ್ಕಿಸಿ ಅರವತ್ತೆಂಟು ಬಾಶೆಗಳು ಮತ್ತು ಅಶ್ಟೆ ಸಂಕೆಯ ತಾಯ್ಮಾತುಗಳು ಎಂದು ಪರಿಗಣಿಸಿದರೂ ಮಂಗಳೂರಿನ ತಾಯ್ಮಾತುಗಳ ಸಂಕೆ 174 ಆಗುತ್ತದೆ. ಇದು ಬಹುಶಾ ಎರಡು ನೂರಾ ಅಯ್ವತ್ತಕ್ಕೂ ಹೆಚ್ಚು ತಾಯ್ಮಾತುಗಳು ಇರಬಹುದು. ದಾಕಲಾದ ಒಟ್ಟು ಹದಿನಾರು ಬಾಶೆಗಳಲ್ಲಿ ಇತರ ಎಂಬ ಗುಂಪು ಇದೆ. ಇತರ ಎಂಬ ಗುಂಪು ದಾಕಲಾಗಿರುವ ಬಾಶೆಗಳನ್ನು ಇಲ್ಲಿ ಪಟ್ಟಿಸಿದೆ. ಹಿಂದಿ, ಕನ್ನಡ, ಕೊಂಕಣಿ, ಮರಾಟಿ, ಓಡಿಯಾ, ಪಂಜಾಬಿ, ಸಂತಾಲಿ, ತೆಲುಗು, ಉರ‍್ದು, ಅಂಗಾಮಿ, ಬೊಟಿಯ, ಕೆಜಾ, ಕೊರ‍್ವ, ತಂಗ್ಸಾ, ತ್ರಿಪುರಿ, ತುಳು. 

ಮಂಗಳೂರು ಹಲವಾರು ಕಾರಣಕ್ಕೆ ಗಮನ ಸೆಳೆಯುವ ಜಿಲ್ಲೆಯಾಗಿದೆ. ದಕ್ಶಿಣ ಕನ್ನಡ ಜಿಲ್ಲೆಯಲ್ಲಿ ತುಳು (10,14,994) ಅತಿ ಹೆಚ್ಚು ಮಂದಿ ಮಾತಾಡುವ ಬಾಶೆಯಾಗಿದೆ ಅಲ್ಲದೆ ಹತ್ತು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತಾಡುವ ಜಿಲ್ಲೆಯ ಒಂದೆ ಬಾಶೆಯಾಗಿದೆ. ಕರ‍್ನಾಟಕದಲ್ಲಿ ಕನ್ನಡ ಹೊರತಾದ ಬೇರೆ ಬಾಶೆಯು ಜಿಲ್ಲೆಯ ಅತಿ ದೊಡ್ಡ ಬಾಶೆಯಾಗಿರುವುದು ದಕ್ಶಿಣ ಕನ್ನಡದಲ್ಲಿ ಮಾತ್ರ. ಅಂತೆಯೆ ಕುತೂಹಲದ ಇನ್ನೊಂದು ವಿಚಾರವೆಂದರೆ ದಕ್ಶಿಣ ಕನ್ನಡದಲ್ಲಿ ಕನ್ನಡ ಮೊದಲ ಸ್ತಾನದಲ್ಲಿ ಇಲ್ಲ ಎಂಬುದು ಮಾತ್ರವಲ್ಲದೆ ಕನ್ನಡವು ಜಿಲ್ಲೆಯ ಅಯ್ದನೆ ಸ್ತಾನದಲ್ಲಿದೆ ಎಂಬುದು ಕೂಡ. ಕನ್ನಡವು ಜಿಲ್ಲೆಯ ಅಲ್ಪಸಂಕ್ಯಾತ ಬಾಶೆಯಾಗಿದೆ. ಆನಂತರದ ಅತಿದೊಡ್ಡ ಗುಂಪು ಇತರ ಎಂಬ ಗುಂಪು ಆಗಿರುವುದು ಇನ್ನೂ ಕುತೂಹಲ. 3,35,775 ಮಂದಿ ಮಾತಾಡುವ ಬಾಶೆಗಳು ಜನಗಣತಿಯಲ್ಲಿ ದಾಕಲಾಗಿಲ್ಲ.

ಇವುಗಳಲ್ಲಿ ಹತ್ತು ಲಕ್ಶಕ್ಕಿಂತ ಹೆಚ್ಚು ಮಂದಿ ಇರುವ ಒಂದೆ ಬಾಶೆ ಇದ್ದು ಅದು ತುಳು ಆಗಿದೆ. ತುಳು ಮಾತಾಡುವ 10,14,994 (48.572%) ಮಂದಿ ಇದ್ದಾರೆ. ಈ ಮೇಲೆ ಹೇಳಿದಂತೆ ಜಿಲ್ಲೆಯಲ್ಲಿ ಎರಡನೆ ಸ್ತಾನದಲ್ಲಿ ಇತರ ಎಂಬ ಗುಂಪು ಇದೆ. ಆದರೆ, ಬಾಶೆಗಳ ಲೆಕ್ಕ ಮಾಡಿದಾಗ ಅದು ದೊಡ್ಡ ಬಾಶೆಯಾಗಲು ಸಾದ್ಯವಿಲ್ಲ. ಈ ಗುಂಪಿನಲ್ಲಿ ಇರುವ ಯಾವುದೆ ಬಾಶೆಗೆ ಅತಿ ಹೆಚ್ಚೆಂದರೂ 9,999 ಮಂದಿ ಮಾತ್ರ ಇರಲು ಸಾದ್ಯ. ಆದರೆ ಆ ಕೆಳಗೆ ಇದನ್ನು ಪಟ್ಟಿಯಲ್ಲಿ ಇಟ್ಟಿದೆ. ಇದರ ಹೊರತಾಗಿ ಮಲಯಾಳಂ – 2,08,383 (9.972%), ಕೊಂಕಣಿ – 2,07,056 (9.908%) ಮತ್ತು ಕನ್ನಡ – 1,93,797 (9.274%) ಮಂದಿ ಮಾತುಗರಿದ್ದು, ಈ ಮೂರು ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತುಗರು ಇರುವ ಬಾಶೆಗಳಾಗಿವೆ. ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಇರುವ ನಾಲ್ಕು ಬಾಶೆಗಳು ಇವೆ. ಮರಾಟಿ – 35,916 (1.718%), ಉರ‍್ದು – 33,087 (1.583%), ತಮಿಳು – 23,588 (1.128%) ಮತ್ತು ಹಿಂದಿ – 18,922 (0.905%). ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಇರುವ ನಾಲ್ಕು ಬಾಶೆಗಳು ಇವೆ. ತೆಲುಗು – 7,951 (0.380%), ಗುಜರಾತಿ – 3,124 (0.149%), ಬೆಂಗಾಲಿ – 2,034 (0.097%) ಮತ್ತು ಓಡಿಯಾ – 1,142 (0.054%). ಒಂಬತ್ತು ಬಾಶೆಗಳಿಗೆ ಒಂದು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ನೂರಕ್ಕಿಂತ ಹೆಚ್ಚು ಮಂದಿ ಇದ್ದಾರೆ. ಕೊಡವ, ನೇಪಾಳಿ, ಇಂಗ್ಲೀಶು, ಆಸ್ಸಾಮಿ, ಪಂಜಾಬಿ, ಅರಾಬಿಕ್, ಟಿಬೇಟನ್, ಸಿಂದಿ ಮತ್ತು ಮಣಿಪುರಿ. ಮೂವತ್ತೇಳು ಬಾಶೆಗಳಿಗೆ ನೂರಕ್ಕಿಂತ ಕಡಿಮೆ ಮಂದಿ ಮಾತುಗರು ದಾಕಲಾಗಿದ್ದಾರೆ. ಈ ಬಾಶೆಗಳನ್ನು ಅವುಗಳ ಮಾತುಗರ ಸಂಕೆಯನ್ನು ಆದರಿಸಿ ಕೆಳಗೆ ಪಟ್ಟಿಯಲ್ಲಿ ಗುಂಪಿಸಿ ತೋರಿಸಿದೆ.

ಸಾಪೇಕ್ಶ ಸಂಕೆಬಾಶೆಸಂಕೆ%
ಹತ್ತು ಲಕ್ಶಕ್ಕಿಂತ ಹೆಚ್ಚುತುಳು10,14,99448.572%
ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚುಇತರ3,35,77516.068%
’’ಮಲಯಾಳಂ2,08,3839.972%
’’ಕೊಂಕಣಿ2,07,0569.908%
’’ಕನ್ನಡ1,93,7979.274%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುಮರಾಟಿ35,9161.718%
’’ಉರ‍್ದು33,0871.583%
’’ತಮಿಳು23,5881.128%
’’ಹಿಂದಿ 18,9220.905%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುತೆಲುಗು7,9510.380%
’’ಗುಜರಾತಿ3,1240.149%
’’ಬೆಂಗಾಲಿ2,0340.097%
’’ಓಡಿಯಾ1,1420.054%
ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚುಕೊಡವ, ನೇಪಾಳಿ, ಇಂಗ್ಲೀಶು, ಆಸ್ಸಾಮಿ, ಪಂಜಾಬಿ, ಅರಾಬಿಕ್, ಟಿಬೇಟನ್, ಸಿಂದಿ, ಮಣಿಪುರಿ3,2900.157%
ನೂರಕ್ಕಿಂತ ಕಡಿಮೆಮೂವತ್ತೇಳು ಬಾಶೆಗಳು5900.028%
ಒಟ್ಟು ಮಾತುಗರು20,89,649100%

ಜಿಲ್ಲೆಯ ತಾಯ್ಮಾತುಗಳನ್ನು ಈಗ ಮಾತುಕತೆಗೆ ತೆಗೆದುಕೊಳ್ಳಬಹುದು. ಮಂಗಳೂರು ಜಿಲ್ಲೆಯಲ್ಲಿ ತಾಯ್ಮಾತುಗಳ ಚರ‍್ಚೆಯು ಜಿಲ್ಲೆಯ ಬಾಶಿಕ ಸಂಕೀರ‍್ಣತೆಯನ್ನು ತೋರಿಸುತ್ತದೆ.

ಜಿಲ್ಲೆಯ ಒಟ್ಟು ಮರಾಟಿ ಮಾತುಗರ ಸಂಕೆ 35,916. ಮರಾಟಿಯಲ್ಲಿ ಆರೆ ಎಂಬ ತಾಯ್ಮಾತು ದೊಡ್ಡ ಸಂಕೆಯ ಅಂದರೆ 17,227 ಮಂದಿ ಮಾತುಗರನ್ನು ಹೊಂದಿದೆ. ಇದು ಜಿಲ್ಲೆಯ ಮರಾಟಿಯ 65.675% ಮತ್ತು ಜಿಲ್ಲೆಯ 0.824% ಆಗುತ್ತದೆ. ಮರಾಟಿ ಮಾತುಗರ ಸಂಕೆ 18,585 ಇದೆ. ಇದು ಜಿಲ್ಲೆಯ ಮರಾಟಿಯ 51.745% ಮತ್ತು ಜಿಲ್ಲೆಯ 0.889% ಆಗುತ್ತದೆ. ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಇರುವ ಬಾಶೆಗಳ ಪಟ್ಟಿಗೆ ಮರಾಟಿಯ ಜೊತೆಗೆ ಆರೆ ಸೇರಿಕೊಳ್ಳುತ್ತದೆ. 

ಇನ್ನು ಹಿಂದಿಯೊಳಗಿನ ಬಾಶೆಗಳನ್ನು ಗಮನಿಸಬಹುದು. ಹಿಂದಿಯ ಒಟ್ಟು ಮಾತುಗರ ಸಂಕೆ 18,922. ಹಿಂದಿಯೊಳಗಿನ ಬಾಶೆಗಳನ್ನು ಬೇರೆಯಾಗಿಸಿ ನೋಡಿದಾಗ, ಹಿಂದಿ ಮಾತುಗರ ಸಂಕೆ 15,086 ಇದೆ. ಲಂಬಾಣಿ ಮಾತುಗರ ಸಂಕೆ 1,320 ಇದೆ. ಇದರಲ್ಲಿ ಲಮಾಣಿ ಹೆಸರಿನ 1,239 ಮತ್ತು ಬಂಜಾರಿ ಹೆಸರಿನ 81 ಮಂದಿ ಸೇರಿದ್ದಾರೆ. ಈಗ ಲಂಬಾಣಿ ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರು ಇರುವ ಬಾಶೆಗಳ ಪಟ್ಟಿಗೆ ಸೇರುತ್ತದೆ. 

ಈ ಚರ‍್ಚೆಯ ನಂತರ ಜಿಲ್ಲೆಯ ತಾಯ್ಮಾತುಗಳ ಸಂಕೆಯನ್ನು ಗಮನಿಸಿ ಜಿಲ್ಲೆಯ ಬಾಶೆಗಳ ಹಂಚಿಕೆಯನ್ನು ಈ ಕೆಳಗಿನಂತೆ ಮರುವಿನ್ಯಾಸಗೊಳಿಸಿ ತೋರಿಸಬಹುದು.

ಸಾಪೇಕ್ಶ ಸಂಕೆಬಾಶೆಸಂಕೆ%
ಹತ್ತು ಲಕ್ಶಕ್ಕಿಂತ ಹೆಚ್ಚುತುಳು10,14,63848.555%
ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚುಇತರ ಬಾಶೆಗಳು3,35,77516.068%
’’ಮಲಯಾಳಂ2,08,2329.964%
’’ಕೊಂಕಣಿ2,04,9399.807%
’’ಕನ್ನಡ1,92,8109.226%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುಉರ‍್ದು33,0451.581%
’’ತಮಿಳು23,5831.128%
’’ಮರಾಟಿ18,5850.889%
’’ಆರೆ17,2270.824%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುಹಿಂದಿ15,0860.721%
’’ತೆಲುಗು7,9310.379%
’’ಗುಜರಾತಿ3,0680.146%
’’ಬೆಂಗಾಲಿ2,0330.097%
ಲಂಬಾಣಿ1,3200.063%
ಓಡಿಯಾ1,1340.054%

ಜಿಲ್ಲೆಯ ಹತ್ತು ದೊಡ್ಡ ಬಾಶೆಗಳ ಪಟ್ಟಿಯನ್ನು ಕೆಳಗೆ ಕೊಟ್ಟಿದೆ.

ಪ್ರದೇಶಜಿಲ್ಲೆಯ ಜನಸಂಕೆಬಾಶೆಮಾತುಗರುಜಿಲ್ಲೆಯ %ಜಿಲ್ಲೆಯಲ್ಲಿ ಸ್ತಾನ
ದಕ್ಶಿಣ ಕನ್ನಡ20,89,649ತುಳು10,14,63848.555%1
ಇತರ ಬಾಶೆಗಳು3,35,77516.068%
ಮಲಯಾಳಂ2,08,2329.964%2
ಕೊಂಕಣಿ2,04,9399.807%3
ಕನ್ನಡ1,92,8109.226%4
ಉರ‍್ದು33,0451.581%5
ತಮಿಳು23,5831.128%6
ಮರಾಟಿ18,5850.889%7
ಆರೆ17,2270.824%8
ಹಿಂದಿ15,0860.721%9
ತೆಲುಗು7,9310.379%10

‍ಲೇಖಕರು Admin

July 21, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: