ಬಸವರಾಜ ಕೋಡಗುಂಟಿ ಅಂಕಣ –  ಕುರುಬ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ

ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ

ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಕರ‍್ನಾಟಕದ ಒಂದೊಂದು ಬಾಶೆಯ ಮೇಲೆ ಮೂವತ್ತಕ್ಕೂ

ಹೆಚ್ಚು ಬಿಡಿ ಬರಹಗಳನ್ನು ಇಲ್ಲಿ ಬರೆದಿದ್ದಾರೆ.

ರ‍್ನಾಟಕದ ಸುಮಾರು ನಲವತ್ತು ಬಾಶೆಗಳ ಹಂಚಿಕೆಯನ್ನ

ಇನ್ನು ಮುಂದೆ ಪರಿಚಯಿಸಲಾಗುವುದು.

49

ಕುರುಬ

ಕುರುಬ ಕನ್ನಡ ಬಾಶೆಯ ಒಳಗೆ ಒಂದು ತಾಯ್ಮಾತು ಎಂದು ದಾಕಲಾಗಿದೆ. ಕರ‍್ನಾಟಕದಲ್ಲಿ ಕುರುಬಕ್ಕೆ ೧೫,೬೭೪ ಮಂದಿ ಮಾತುಗರು ದಾಕಲಾಗಿದ್ದಾರೆ. ಕರ‍್ನಾಟಕದ ದೊಡ್ಡ ಬಾಶೆಗಳ ಪಟ್ಟಿಯಲ್ಲಿ ಕುರುಬ ಇಪ್ಪತ್ಮೂರನೆ ಸ್ತಾನದಲ್ಲಿ ಬರುತ್ತದೆ. ಕುರುಬ ಕರ‍್ನಾಟಕ ರಾಜ್ಯದ ೦.೦೨೫% ಮಂದಿಯನ್ನು ಒಳಗೊಂಡಿದೆ. ಒಟ್ಟು ಬಾರತದಾಗ ಕುರುಬ ಮಾತುಗರು ೨೪,೧೮೯ ಮಂದಿ ಮತ್ತು ಇದರಲ್ಲಿ ಕರ‍್ನಾಟಕದಲ್ಲಿ ಇರುವವರು ೧೫,೬೭೪, ಅಂದರೆ, ಒಟ್ಟು ಕುರುಬದ ೬೪.೭೯೮% ಆಗುತ್ತದೆ. ಕರ‍್ನಾಟಕದಲ್ಲಿ ಇರುವ ಕುರುಬರಲ್ಲಿ ಹೆಚ್ಚಿನವರು ಎರಡು ಜಿಲ್ಲೆಗಳಲ್ಲಿ ಕಂಡುಬರುತ್ತಾರೆ. ಕೊಡಗು ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ ೯,೬೫೭ ಮಂದಿ ಮತ್ತು ಮಯ್ಸೂರು ಜಿಲ್ಲೆಯಲ್ಲಿ ೪,೧೧೬ ಮಂದಿ ಇದ್ದಾರೆ. ಅಂದರೆ ಇದು ಕ್ರಮವಾಗಿ ಒಟ್ಟು ಕರ‍್ನಾಟಕದ ಕುರುಬರ ೬೧.೬೧೧% ಮತ್ತು ೨೬.೨೬೦% ಆಗುತ್ತದೆ. ಕೊಡಗು ಮತ್ತು ಮಯ್ಸೂರು ಜಿಲ್ಲೆಗಳನ್ನು ಹೊರತುಪಡಿಸಿ ಮಂಗಳೂರು ಜಿಲ್ಲೆಯಲ್ಲಿ ೯೧೬ ಮಂದಿ ಇದ್ದಾರೆ. ಉಳಿದ ಜಿಲ್ಲೆಗಳಲ್ಲಿ ಕಡಿಮೆ ಮಂದಿ ದಾಕಲಾಗಿದ್ದಾರೆ. ಕುರುಬ ಬಹುತೇಕ ಎಲ್ಲ ಜಿಲ್ಲೆಗಳಿಂದಲೂ ವರದಿಯಾಗಿದೆ.

ಕರ‍್ನಾಟಕದಲ್ಲಿ ಹಾಗೆಯೆ ದಕ್ಶಿಣ ಬಾರತದಲ್ಲಿ ವ್ಯಾಪಕವಾಗಿ ಕಂಡುಬರುವ ಕುರುಬ ಎಂಬ ಒಂದು ಸಮುದಾಯ ಇದೆ. ಆದರೆ ಕುರುಬ ಸಮುದಾಯದವರು ಹೆಚ್ಚಾಗಿ ಕನ್ನಡ ಮಾತಾಡುತ್ತಾರೆ. ಇಲ್ಲಿ ದಾಕಲಾಗಿರುವ ಕುರುಬ ಬಾಶೆ ಕನ್ನಡಕ್ಕಿಂತ ತುಸು ಬಿನ್ನವಾದ, ಕನ್ನಡಕ್ಕೆ ಬಹು ಹತ್ತಿರದ ದಕ್ಶಿಣ ಕರ‍್ನಾಟಕದ ತುದಿಯ ಗುಡ್ಡಸಾಲಿನಲ್ಲಿ ಕಂಡುಬರುವ ಕುರುಬರ ಬಾಶೆಯಾಗಿದೆ.

ಇಲ್ಲಿ ಕೆಳಗೆ ಕರ‍್ನಾಟಕದ ಕುರುಬ ಮಾತುಗರ ಜಿಲ್ಲಾವಾರು ಪಟ್ಟಿಯನ್ನು ಕೊಟ್ಟಿದೆ.

ಪ್ರದೇಶಜಿಲ್ಲೆಯ ಜನಸಂಕೆಮಾತುಗರು  ಜಿಲ್ಲೆಯ % ಆ ಬಾಶೆಯ % 
ಕರ‍್ನಾಟಕ 6,10,95,29715,6740.025%100%
ಕೊಡಗು 5,54,5199,6571.741%61.611%
ಮಯ್ಸೂರು  30,01,1274,1160.137%26.260%
ದಕ್ಶಿಣ ಕನ್ನಡ  20,89,6499160.043%5.844%
ಉತ್ತರ ಕನ್ನಡ 14,37,1692040.014%1.301%
ಹಾಸನ 17,76,4211720.011%1.097%
ಬೆಂಗಳೂರು ನಗರ  96,21,5511280.001%0.816%
ಉಡುಪಿ  11,77,361840.007%0.535%
ರಾಮನಗರ  10,82,636680.006%0.433%
ಕೊಪ್ಪಳ 13,89,921450.003%0.287%
ರಾಯಚೂರು  19,28,812420.002%0.267%
ಯಾದಗಿರಿ  11,74,271380.003%0.242%
ದಾವಣಗೆರೆ 19,45,497240.001%0.153%
ಗದಗ  10,20,791190.001%0.121%
ಮಂಡ್ಯ 18,05,769190.001%0.121%
ಚಿತ್ರದುರ‍್ಗ 16,59,456170.001%0.108%
ಬೆಳಗಾವಿ 47,79,661163.347%0.102%
ಬಾಗಲಕೋಟೆ  18,89,752136.879%0.082%
ಕೋಲಾರ 15,36,401127.810%0.076%
ಹಾವೇರಿ 15,97,668117.159%0.070%
ವಿಜಯಪುರ 21,77,331104.592%0.063%
ದಾರವಾಡ  18,47,023105.414%0.063%
ಬಳ್ಳಾರಿ 24,52,595104.077%0.063%
ಶಿವಮೊಗ್ಗ 17,52,753105.705%0.063%
ಚಿಕ್ಕಮಗಳೂರು 11,37,96197.908%0.057%
ಬೀದರ  17,03,30084.696%0.051%
ಚಿಕ್ಕಬಳ್ಳಾಪುರ 12,55,10486.373%0.051%
ಬೆಂಗಳೂರು ಗ್ರಾಮಂತರ 9,90,92333.027%0.019%
ಚಾಮರಾಜನಗರ 10,20,79121.959%0.012%
ಕಲಬುರಗಿ  25,66,32627.793%0.012%
ತುಮಕೂರು 26,78,98013.732%0.006%

ಕುರುಬ ಮಾತುಗರ ಹಂಚಿಕೆ

D:\writings\ನೂರು ಕೊರಳು\bashe\work-sept22\done\to final\NEW maps\Distribution of Kuruba.jpg

‍ಲೇಖಕರು Admin

March 9, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: