ಬರೆಯುವವನ ಹಿಂದೆ ತರುಣಿಯರು ಫೆವಿಕಾಲಿನಂತೆ ಅಂಟಿಬಿಡುತ್ತಿದ್ದರು..

ನಂಗೊಂದು ಆಸೆ..ಸಾಹಿತ್ಯ ಸಂಚಾರಿಣಿ ಬೇಕಂತ..
ಎಲ್ಲಿ ಹೋದರು ಕವಿತೆ ಗೀಚುತ್ತಿದ್ದ ಹುಡುಗಿಯರು?

prasad shenoy r k

ಪ್ರಸಾದ್ ಶೆಣೈ ಆರ್.ಕೆ

ಬೌದ್ದಿಕ ಸಹಚಾರಿಣಿ ಅನ್ನೋ ಪರಿಕಲ್ಪನೆ ಇತ್ತೀಚಿಗೆ ತೀರಾ ಕಾಡತೊಡಗಿತು. ನಮ್ಮ ಚಿಂತನೆಗಳನ್ನು, ಕನಸುಗಳನ್ನು, ನೆನವರಿಕೆಗಳನ್ನು, ಹುಯ್ದಾಟಗಳನ್ನು ಹುಚ್ಚು ಸಾಹಸಗಳನ್ನು ಇನ್ನೂ ಆಪ್ತವಾದ, ಆಂತರ್ಯದ ಸಂಗತಿಗಳನ್ನು ಅರ್ಥಮಾಡಿಕೊಂಡು ‘ಅವಳೇ ನಾನು’ ಅನ್ನಿಸುವಂತಹ ಸಹಚಾರಿಣಿ ಸಿಗಬಹುದಾ?

-ಅಂತ ಹರೆಯದ ತೊರೆಯ ದಡದಲ್ಲಿ ಕೂತ ನನ್ನಂತ ತರುಣರು ಯಾವುದೋ ಊರಲ್ಲಿ ಕೂತು ಚಿಂತಿಸುತ್ತಿರಬಹುದೇನೋ? ಅಂತ ನಂಗೆ ತುಂಬಾ ಸಲ ಅನ್ನಿಸಿದೆ.

girl in loveಆ ತರುಣರಂತಹ ಮನಸ್ಸುಗಳಿಗಾದರೂ ನನ್ನ ಆಂತರಿಕ ತಲ್ಲಣಗಳು, ಸ್ವಚ್ಚಂಧ ಭಾವನೆಗಳು ಅರ್ಥವಾಗಬಹುದು ಅನ್ನೋ ನಿರೀಕ್ಷೆಯ ಬೆರಳುಗಳಲ್ಲಿ ಬರೆಯುತ್ತಿದ್ದೇನಷ್ಟೆ. ಮೊನ್ನೆ, ಮತ್ತೆ ಭೈರಪ್ಪನವರ “ದೂರಸರಿದರು” ಓದಿದಾಗ ಅಲ್ಲಿ ಬರುವ ಬೌದ್ದಿಕ ಸಹಚಾರಿಣಿ ಅನ್ನೋ ಪದ ಕಾಡುತ್ತಾ, ಮತ್ತೆ ಮತ್ತೆ ನನ್ನಲ್ಲಿ ಹೊಳಪಾಗುತ್ತಾ ಹೋಯಿತು.

ಕೆಲವೊಮ್ಮೆ ಸಾಹಿತ್ಯ ಗೊತ್ತಿದ್ದ ತರುಣಿಯೊಬ್ಬಳ ಜೊತೆ ಮತ್ತು ಬರಿಸೋ ಸಂಜೆಗಳಲ್ಲೋ, ತುತ್ತು ತಿನ್ನೋ ಮದ್ಯಾಹ್ನಗಳಲ್ಲೋ ಕೂತು ಸಾಹಿತ್ಯ ಬದುಕಿನ ಲಾಲಿತ್ಯ, ಜೀವನ ಪ್ರೀತಿ, ಆ ಬೆಳಗ್ಗಷ್ಟೇ ಬೀದಿಯೊಂದರಲ್ಲಿ ಸಿಕ್ಕ ಚಂದದ ಕತೆ, ಹಿತಾವಹ ಶೂನ್ಯದಲ್ಲೂ ಹುಟ್ಟಿದ ಅದಮ್ಯ ಸಾಲೊಂದರ ಕುರಿತು ಗಂಟೆಗಟ್ಟಲೇ ಹರಟಬೇಕು ಅನ್ನಿಸಿದ ಬಯಕೆಗಳಲ್ಲೇ ನಾನು ನಿರ್ಮಲನಾಗಿದ್ದುಂಟು, ನಾನು ಓದುತ್ತಿರುವ ಸಾಹಿತ್ಯ ಮತ್ತು ನನ್ನ ಹತ್ತಿರದಲ್ಲೇ ಇರುವ ಆ ಕತೆಯಂತಹದ್ದೇ ತರುಣಿ ಈ ಎಲ್ಲಾ ಅಮಿತ ಪರಿಕಲ್ಪನೆಗಳಲ್ಲೇ ಏನೋ ಉನ್ಮತ್ತವಾದದ್ದಿದೆ ಅನ್ನಿಸುತ್ತದೆ.

ಆದರೆ ಆ ಪರಿಕಲ್ಪನೆಯೇ ಕೆಲವೊಮ್ಮೆ ಹಾಸ್ಯಾಸ್ಪದ ಅನ್ನಿಸುವುದೂ ಉಂಟು. ನಾವಿನ್ನೂ ತರುಣರು ಒಂದಷ್ಟು ಬರೆದ ಕೂಡಲೇ ಬರಹಗಾರನಾದೆ ಅಂತ ಖುಷಿ ಪಡುತ್ತೇವೆ, ಮತ್ತೂ ಹುಮ್ಮಸ್ಸಿನಿಂದ ಏನೇನೋ ಗೀಚುತ್ತೇವೆ, ದೊಡ್ಡವರು ಏನಾದರೂ ಚಂದವಿದೆ ಅಂತ ಪ್ರತಿಕ್ರಿಯಿಸಿದರೆ ಶ್ರಾವಣಕ್ಕೆ ತುಂಬಿಕೊಳ್ಳುವ ಕೆರೆಯಾಗುತ್ತೇವೆ. ಆದರೆ ಸಾಹಿತ್ಯ ಪ್ರೀತಿಯಿರುವ ಹುಡುಗಿಯೊಬ್ಬಳು ” ನೀ ಬರೆದದ್ದು ಚಂದವಿದೆ ಮಾರಾಯ..ನಂಗೂ ಸ್ವಲ್ಪ ಬರೆಯೋದಕ್ಕೆ ಕಲಿಸು” ಅಂತ ಕೇಳಬಾರದಾ? ಅಂತ ಬೆಕ್ಕಿಗೆ ಮೀನಿನ ಆಸೆಯಾಗೋ ಹಾಗೇ ಆಗುತ್ತದೆ.

ಆದರೆ ಹಾಗೆ ಪ್ರತಿಕ್ರಿಯಿಸೋ ಸಾಹಿತ್ಯ ಪ್ರೀತಿಯ ತರುಣಿಯರು ಈ ಕಾಲದಲ್ಲಿಲ್ಲವಲ್ಲಾ? ಅಂತ ಭಯ, ಭ್ರಮನಿರಸನವೂ ಆಗುತ್ತದೆ. ” ಅದ್ಯಾಕೆ ತರುಣಿಯರೇ ಪ್ರತಿಕ್ರಿಯಿಸಬೇಕು? ಬೇರ್ಯಾರಾದರೂ ಓದಿ ಪ್ರತಿಕ್ರಿಯಿಸಿದರೆ ಆಗಲ್ಲವಾ? ಅಷ್ಟಕ್ಕೂ ನಿಂಗೆ ಬೇಕಾಗಿರೋದು ಪ್ರತಿಕ್ರಿಯೆ ತಾನೇ ಬೇರೇನೂ ಅಲ್ಲವಲ್ಲಾ” ಅಂತ ನೀವು ಕೇಳಬಹುದು.

ಆದರೆ ‘ಅವಳು ನನ್ನ ಬರೆಹ ಓದಿ ಪ್ರತಿಕ್ರಿಯಿಸಿದವಳು’ ಅನ್ನುವ ಸಾಲೇ ಚಂದ. ಅವಳು ಅನ್ನೋ ನುಣುಪಾದ ಅರೆಜೊಂಪು ನಿರಿರೆಯಲ್ಲಿ, ತುಂಬಿಕೊಳ್ಳುವ ಸವಿ ಸ್ವಪ್ನದಲ್ಲಿ, ಅದಮ್ಯವಾದ ಮತ್ತು ಅಷ್ಟೇ ಉನ್ಮತ್ತವಾದ ಎಚ್ಚರದಲ್ಲಿ ಗೂಢವಾದದ್ದೇನೋ ಇದೆ ಅನ್ನುವುದುನ್ನು ನನ್ನಂತಹ ಸಾಹಿತ್ಯಿಕ ಸಂವೇದನೆಯುಳ್ಳ ತರುಣರು ಒಪ್ಪಿಯೇ ಒಪ್ಪುತ್ತಾರೆ.

ಹಿಂದೆಲ್ಲಾ ಯುನಿವರ್ಸಿಟಿಯ ದಂಡೆಯಲ್ಲಿ ಕೂತು ತರುಣ ತರುಣಿಯರು ಷೇಕ್ಸ್ಪಿಯರ್, ಮಿಲ್ಟನ್, ಅಂತೆಲ್ಲಾ ತಾವು ಹೊಸದಾಗಿ ಓದಿದ ಕವಿತೆಯ ಹಾಡನ್ನೋ, ಕತೆಯ ಜಾಡನ್ನೋ ಹಿಡಿದು ಹೋಗುತ್ತಿದ್ದರು. ಸಾಹಿತ್ಯದ ವಿದ್ಯಾರ್ಥಿಗಳು ಕೂಡ ಸಾಹಿತ್ಯವನ್ನು ಬದುಕಿನ ಒಂದು ಭಾಗ ಅನ್ನುವಂತೆ ಪ್ರೀತಿಸುತ್ತಾ ಹೋಗುತ್ತಿದ್ದರು. ಅವನು ಕವಿತೆ ಬರೆದರೆ, ಅವಳು ಅದರ ಬಗ್ಗೆ ದೊಡ್ಡ ವಿಮರ್ಶೆಯನ್ನೇ ಬರೆದುಬಿಡುವಷ್ಟು ಜಾಣೆಯಾಗಿದ್ದಳು, ಅವನಿಗೆ ಯಾವುದೋ ಕಥಾ ಸ್ಪರ್ಧೆಗೆ ಪ್ರೈಜು ಬಂದರೆ ಅವನನ್ನು ನೋಡುವ ನೋಟದಲ್ಲಿಯೇ ಲೋಟ ಲೋಟ ಪ್ರೀತಿ ಹರಿಯುತ್ತಿತ್ತು..

ಬರೆಯುವವನ ಹಿಂದೆ ತರುಣಿಯರು ಫೆವಿಕಾಲಿನಂತೆ ಅಂಟಿಬಿಡುತ್ತಿದ್ದರು. ಅವಳಿಗೆ ಅವನು ಬರೆದದ್ದು ಬೇರೆ ಅಲ್ಲ, ಅವನು ಬೇರೆ ಅಲ್ಲ ಅನ್ನಿಸಿ ಎರಡನ್ನೂ ಪ್ರೀತಿಸುತ್ತಿದ್ದಳು. ಬೌದ್ದಿಕ ಸಹಚಾರಿಣಿ ಕಾಲೇಜು ದಿನಗಳಲ್ಲೇ ಅವನಿಗೆ ಸಿಕ್ಕಿ ಯೌವ್ವನವನ್ನು ಸಹನೀಯವಾಗಿಸುತ್ತಿದ್ದಳು..ಕಾಲ ದೂರ ದೂರಕ್ಕೇ ಓಡಿತು ಈಗ ವಿಶ್ವವಿದ್ಯಾನಿಲಯದಲ್ಲಿ ಆಗ ತಾನೇ ಬಂದ ಹೊಚ್ಚ ಹೊಸ ಪುಸ್ತಕದ ಕುರಿತು ಯಾವ ಹುಡುಗ ಹುಡುಗಿಯರೂ ಮಾತಾಡಿಕೊಳ್ಳುತ್ತಿಲ್ಲ, ಬೇರೆಯವರದ್ದು ಬಿಡಿ ತಮ್ಮ ಕ್ಲಾಸಿನಲ್ಲಿಯೇ ಬರಹಗಾರರಿದ್ದರೂ ಅವರಿಗೆ ಗೊತ್ತೇ ಇರುವುದಿಲ್ಲ, ತಿಳಿದುಕೊಳ್ಳುವ ಆಸಕ್ತಿಯೂ ಇರುವುದಿಲ್ಲ.

ಇನ್ನು ಭೈರಪ್ಪ, ಅನಂತಮೂರ್ತಿ, ಕುವೆಂಪು, ತೇಜಸ್ವಿ ಅಂತ ಯಾರು ಮಾತಾಡ್ತಾರೆ ಹೇಳಿ? ಬೇಜಾರೆಂದರೆ ಸಾಹಿತ್ಯದ ವಿದ್ಯಾರ್ಥಿಗಳೂ ಹೀಗೆ ಸಾಹಿತ್ಯದ ಬಗ್ಗೆಯೇ ಚರ್ಚೆ ಮಾಡುತ್ತಿಲ್ಲ ಅನ್ನೋದು. ಬರೆಯುವವನಿಗೆ ಚರ್ಚೆ ಮಾಡುವ ಆಸೆ ಇದ್ದರೂ ಚರ್ಚೆಗೆ ಯಾರೂ ಸಿಗದೇ ಹಾಗೇ ಸುಮ್ಮನೇ ಬರೆಯುತ್ತಲೇ ಇರುತ್ತಾನೆ. “ಯಾಕೋ ನಿನ್ನ ಕವನ ಚೆಂದ ಇದೆ ಮಾರಾಯ..ನಾನೂ ಒಂದು ಬರೆದಿದ್ದೇನೆ ಓದಿ ಅಭಿಪ್ರಾಯ ಬರಿ” ಅಂತ ಆಕೆ ಸಾಹಿತ್ಯದ ತುಟಿ ಚುಂಬಿಸುವ ಕಾಲದಲ್ಲಿ ನಾನಿರಬೇಕಿತ್ತು ಅನ್ನಿಸುತ್ತಿದೆ. ಸಾಹಿತ್ಯವೇ ಎಲ್ಲರ ಮಾತಾಗಿರುವ ಆ ಕಾಲದಲ್ಲಿ ನಾನು ಹುಟ್ಟಿ ಬರೆಯುತ್ತಾ ಕೂತಿದ್ದರೆ ಎಷ್ಟು ಚೆನ್ನಾಗಿತ್ತು ಅಂತ ಆಸೆಯಾಗುತ್ತಿದೆ.

ಆದರೆ ಆ ಭಾಗ್ಯ ಈಗಿನ ಕಾಲಕ್ಕೇ ಕೂತು ಬರೆಯೋ ಹುಡುಗರಿಗಿಲ್ಲವಲ್ಲಾ ಅನ್ನೋ ದೈನ್ಯ ಮರುಕದಲ್ಲಿ ತೊಯ್ದುತೊಪ್ಪೆಯಾಗುತ್ತಿದ್ದೇನೆ. ಮೊನ್ನೆ ನನ್ನ ಕಥಾ ಸಂಕಲನ ‘ಲೂಲು ಟ್ರಾವೆಲ್ಸ್’ ಬಂದ ಹೊಸತರಲ್ಲಿ ಒಂದಷ್ಟು ಪುಸ್ತಕಗಳನ್ನು ನಾನು ಕಲಿತ ಕಾಲೇಜಿನ ಲೈಬ್ರರಿಗೆ ಕೊಟ್ಟು ಬಂದೆ. ಯಾರಾದರೂ ಸಾಹಿತ್ಯಿಕ ಆಸಕ್ತಿ ಇರುವ ತರುಣಿಯರು ಓದಿ ಪ್ರತಿಕ್ರಿಯಿಸಬಹುದಾ ಅನ್ನುವ ದೂರದ ಆಸೆಯಿಂದ ಕಾಯುತ್ತಲೇ ಇದ್ದೇನೆ.

ಈ ಲೇಖನ ಬರೆದಾದ ಮೇಲೆ ಅನ್ನಿಸೋದೂ ಇಷ್ಟೇ..ಯಾರಾದರೂ ಸಾಹಿತ್ಯ ಸಂವೇದನೆ ಇರುವ ತರುಣಿಯರು ಇದಕ್ಕೆ ಪ್ರತಿಕ್ರಿಯಿಸಬಹುದಾ? ಆ ಕಾಲೇಜು ದಿನಗಳಲ್ಲಿ ಸಿಗುತ್ತಿದ್ದ ಚರ್ಚೆ, ಪಿಸುಮಾತು ಇಲ್ಲೂ ಸಿಗಬಹುದಾ? ಅಂತ. ನೋಡೋಣ ಸ್ಪೂರ್ತಿ ಅನ್ನೋದು ಇಲ್ಲಿಂದಲೂ ಬರಬಹುದು ಅನ್ನೋ ಬೆಕ್ಕಿನಂತಹ ನಿರೀಕ್ಷೆಯಲ್ಲಿದ್ದೇನೆ.

‍ಲೇಖಕರು Admin

April 21, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

49 ಪ್ರತಿಕ್ರಿಯೆಗಳು

 1. ಹಿಗ್ಗು

  ನಿಜಕ್ಕೂ ಮುದ್ದಾದ ಬರಹ.

  So cute, so humble.

  ನಾನು ಈ ಕಾಲದಲ್ಲಿ ಇರಬಾರದಿತ್ತೇ!!!?

  – ಹೆಣ್ಣು ಜೀವ

  ಪ್ರತಿಕ್ರಿಯೆ
  • ಪ್ರಸಾದ್ ಶೆಣೈ ಆರ್ ಕೆ

   ಮಹಾಂತ ಅವರೇ ಧನ್ಯವಾಧಗಳು..ಈಗಿನ ಕಾಲದಲ್ಲಿ ಅದು ಓದು ಇದು ಓದು ಅಂತ ವಿದ್ಯಾರ್ಥಿಗಳಿಗೆ ಹೇಳುವ ಗುರುಗಳೂ ಇಲ್ಲ…ಅವರಿಗೆ ಸ್ವಲ್ಪ ಸಾಹಿತ್ಯದ ರುಚಿ ತೋರಿಸುವವರು ಬೇಕನ್ನಿಸುತ್ತಿದೆ.

   ಪ್ರತಿಕ್ರಿಯೆ
  • ಪ್ರಸಾದ್ ಶೆಣೈ ಆರ್ ಕೆ

   ನಮಸ್ಕಾರ ಮತ್ತು ಧನ್ಯವಾದ,ಹಿಗ್ಗಾಗಿದೆ ಮನಸ್ಸು
   -ತರುಣ ಜೀವ

   ಪ್ರತಿಕ್ರಿಯೆ
 2. ಹಿಗ್ಗು

 3. Mahanta Satyampet

  Hello Vivak Shanai this is Mahanta from Kalaburgi.
  Your narrating style is really impressive and catchy. As you said now a days youths are not showing interest in literary discussions is true, but at the same time we should think that ‘what made them or what is the reason behind their lack of interest in these kind of discussions’. Still there are people like you, me and others who are really interested in writing, reading, discussing, criticizing and enjoying the piece of writing or other forms of literature. Even I am thinking the way you are thinking, still I wonder why “Mandanna” is an interesting and haunting character, sometimes I get nervous what if our life one or the other day stuck into the “Jugari Cross” do you really think there is a way to get rid off from that cross? If so is it possible us to just step out from the reality?
  Anyway keep up with good writing…all the best!

  ಪ್ರತಿಕ್ರಿಯೆ
  • ಪ್ರಸಾದ್ ಶೆಣೈ ಆರ್ ಕೆ

   ಮಹಾಂತ ಅವರೇ ಧನ್ಯವಾಧಗಳು..ಈಗಿನ ಕಾಲದಲ್ಲಿ ಅದು ಓದು ಇದು ಓದು ಅಂತ ವಿದ್ಯಾರ್ಥಿಗಳಿಗೆ ಹೇಳುವ ಗುರುಗಳೂ ಇಲ್ಲ…ಅವರಿಗೆ ಸ್ವಲ್ಪ ಸಾಹಿತ್ಯದ ರುಚಿ ತೋರಿಸುವವರು ಬೇಕನ್ನಿಸುತ್ತಿದೆ.

   ಪ್ರತಿಕ್ರಿಯೆ
 4. Mahanta Satyampet

 5. ಪ್ರಸಾದ್ ಶೆಣೈ ಆರ್ ಕೆ

  ಒಂದು ಹೆಣ್ಣು ಜೀವವಾದರೂ ಪ್ರತಿಕ್ರಿಯಿಸಿತಲ್ಲ!!!.ಧನ್ಯವಾದ ಆ ಹೆಣ್ಣು ಜೀವಕ್ಕೆ

  ಪ್ರತಿಕ್ರಿಯೆ
 6. ಪ್ರಸಾದ್ ಶೆಣೈ ಆರ್ ಕೆ

  ಒಂದು ಹೆಣ್ಣು ಜೀವವಾದರೂ ಪ್ರತಿಕ್ರಿಯಿಸಿತಲ್ಲ!!!.ಧನ್ಯವಾದ ಆ ಹೆಣ್ಣು ಜೀವಕ್ಕೆ

  ಪ್ರತಿಕ್ರಿಯೆ
 7. Rakshith Gowda

  Adunika Mudddanna Manorameyanthaha sangakkagi hathoreyuttide.. But let me tell u frankly, I’m an avid lover of kannada literature and always free to spend time on discussions about modern literature but very few I found!!

  ಪ್ರತಿಕ್ರಿಯೆ
  • ಪ್ರಸಾದ್ ಶೆಣೈ ಆರ್ ಕೆ

   ರಕ್ಷಿತ್ ಅವರೇ ಥ್ಯಾಂಕ್ಸ್….ನಿಮ್ಮ ಮಾತು ನಿಜ. ಆದರೂ ಸಾಹಿತ್ಯ ನಮ್ಮ ನಿಮ್ಮಂತವರಿಗೆ ಬದುಕಿನ ಮಜಾ….

   ಪ್ರತಿಕ್ರಿಯೆ
 8. Rakshith Gowda

 9. Rj

  ಪ್ರಸಾದ್ ಅವರೇ,
  ಈ ನಿಮ್ಮ ಲೇಖನ ಬೇಸಿಗೆಯ ಬಿಸಿಯಲ್ಲಿ ಒಂದು ಮುಗುಳ್ನಗೆಯನ್ನು ತರಿಸಿತು.
  “ನನಗೂ ಸ್ವಲ್ಪ ಬರೆಯೋದನ್ನು ಕಲಿಸು ಮಾರಾಯಾ..” ಅಂತ ಸಾಹಿತ್ಯದ ಪ್ರೀತಿಯಿರುವ ಹುಡುಗಿಯೊಬ್ಬಳು ಕೇಳಿಕೊಂಡು ಬರಲಿ ಅಂತ ಹಂಬಲಿಸಿದ್ದೀರಿ.
  ಹಂಬಲ ಒಳ್ಳೆಯದು. ಯಾರಿಗೆ ಗೊತ್ತು,
  “ನನಗೂ ಸ್ವಲ್ಪ ಬೆರೆಯೋದನ್ನು ಕಲಿಸು ಮಾರಾಯಾ..” ಅನ್ನುವ ಹಂಬಲವೂ ಘಟಿಸಿಬಿಡಬಹುದು!
  😉
  ಲವಲವಿಕೆಯ ಲೇಖನ.
  -Rj

  ಪ್ರತಿಕ್ರಿಯೆ
 10. Rj

   ನೀವು ಹೇಳಿದಂತೆ, ನಾನೂ ಬಯಸಿದಂತೆ ಸಾಹಿತ್ಯದ ಕಂಪೇ ತುಂಬಿದ ಹೂವೊಂದು ಮನಸ್ಸು ಸೋಕಲಿ…..ಧನ್ಯವಾದಗಳು

   ಪ್ರತಿಕ್ರಿಯೆ
 11. kusumapatel

  bareyalilla nimma haage ippattaralli , baredaddu ivattaralli , adakke irabeku nanna kavitegalu odeyada lakotegalu.

  your article is very good.

  ಪ್ರತಿಕ್ರಿಯೆ
 12. kusumapatel

  bareyalilla nimma haage ippattaralli , baredaddu ivattaralli , adakke irabeku nanna kavitegalu odeyada lakotegalu.

  your article is very good.

  ಪ್ರತಿಕ್ರಿಯೆ
  • ಪ್ರಸಾದ್ ಶೆಣೈ ಆರ್ ಕೆ

   ನೀವು ಈಗಲಾದರೂ ಬರೆಯೋದನ್ನು ಇಷ್ಟ ಪಟ್ಟಿದ್ದೇ ದೊಡ್ಡ ಖುಷಿ ಮೇಡಂ….ಬರೆಯೋದೊಂದು ಹಬ್ಬವಾಗಬೇಕು,ಸಡಗರವಾಗಬೇಕು,ಜಲಪಾತವಾಗಬೇಕು, ಅಷ್ಟೇ…ಸುಂದರ ಮಾತುಕತೆಗಳ ಜೊತಯಾಗಿ ಧನ್ಯವಾದ.

   ಪ್ರತಿಕ್ರಿಯೆ
 13. Baanu

  Saahityaka aasaktiya hudugaru nanna sutta-mutta thumbidda ghaligeyalli nannalli preeti huttalilla ; sangaati-makkalu sutta thumbiruva eee ghaligeyalli saahityakke aaspadavilla

  ಪ್ರತಿಕ್ರಿಯೆ
  • ಪ್ರಸಾದ್ ಶೆಣೈ ಆರ್ ಕೆ

   ನೀವು ಉಪನ್ಯಾಸಕರೇ ದಯವಿಟ್ಟೂ ತಿಳಿಸಿ…..

   ಪ್ರತಿಕ್ರಿಯೆ
   • Anonymous

    Upanyasaki alla; saahityada upavaasa ki anta helabahudu :). Praamaanikavaada, sahaja nireekshe/ aashaya hotta lekhana. Sanchaarini yanne, Saahitya Sanchaarini yaaguva payanada praytna hegirutte?

    ಪ್ರತಿಕ್ರಿಯೆ
    • prasad shenoy rk

     Nija……Ade ashaya…sanchariniye nannolage nuru kategalanna huttisbodu anno nirikshe kudaa

     ಪ್ರತಿಕ್ರಿಯೆ
     • Baanu

      Nimma aashayagalu heege rachanaatmakavaagi eederali.

 14. Baanu

 15. Manjula gh

  ಪ್ರಸಾದ್ ಸರ್ ನನ್ನ ಹೆಸರು ಮಂಜುಳ (ಸ್ನಾತಕೋತ್ತರ ವಿದ್ಯಾರ್ಥಿನಿ ಗುಲ್ಬರ್ಗಾ) ನಿಮ್ಮ ಲೇಖನ ನೋಡಿ ನನಗೊಂದು ಪ್ರಶ್ನೆ ಮೂಡಿತು ಸಾಹಿತ್ಯದ ಸಂವೇದನೆ ಹುಡುಗರಿಗಿಂತ ಹುಡುಗಿಯರ ಹತ್ತಿರ ಜಾಸ್ತಿ ಇದೇನಾ? ಅಂತಾ, ಪ್ರೋತ್ಸಾಹಿಸುವ ಮನಸ್ಸು ನಡೆಯುವ ಚರ್ಚೆ ಎತ್ತ ಕಡೆಯಿಂದ ಆದರೇನು ?ಸ್ವಾಗತಿಸಿ,
  ಹುಡುಗರ ಪ್ರತಿಕ್ರಿಯೆಗೆ ಜನ ಏನೂ ಯೋಚಿಸೊಲ್ಲಾ ಅದೇ ಹುಡುಗಿ ಪ್ರತಿಕ್ರಿಯೆ ನೀಡಿದರೆ ಹೀಗೆ ಯಾಕೆ ಯೋಚಿಸಿದಳು? ಹಾಗೇ ಹೀಗೆ ಅನುಮಾನದ ಪ್ರಶ್ನೆ ವಿಮರ್ಶೆ ಪ್ರಾರಂಭ ವಾಗುತ್ತವೆ ಅದಕ್ಕೆ ಪ್ರತಿಕ್ರಿಯೆ ನೀಡುವ ಮನಸ್ಸು ಮಬ್ಬು ಹಿಡಿದು ಮೂಲೆ ಹಿಡಿಯುತ್ತದೆ

  ಪ್ರತಿಕ್ರಿಯೆ
  • ಪ್ರಸಾದ್ ಶೆಣೈ ಆರ್ ಕೆ

   ನಮಸ್ಕಾರ ಮಂಜುಳ ಮೇಡಂ.ಸಾಹಿತ್ಯ ಆಸಕ್ತಿಯನ್ನು ಹುಡುಗರಲ್ಲಿ ಜಾಸ್ತಿ ಇದೆ ಹುಡುಗರಲ್ಲಿ ಕಮ್ಮಿ ಇದೆ ಅಂತ ಹೇಳೋದು ನನ್ನ ಉದ್ದೇಶ ಅಲ್ಲ. ಆದರೆ ಹಿಂದೆ ಸಾಹಿತ್ಯವನ್ನು ಓದಿ ಬೆರಗಾಗುತ್ತಿದ್ದ ಹುಡುಗಿಯರು ಈಗ ಕಮ್ಮಿಯಾಗಿದ್ದಾರೆ ಅನ್ನೋದು ಹುಡುಗಾನಾಗಿ ನಂಗೆ ಕಂಡಿದ್ದನ್ನು ಬರೆದಿದ್ದೇನಷ್ಟೇ.ನೀವು ಪ್ರತಿಕ್ರಿಯಿಸಿದ್ದು ಸಂತೋಷವಾಯ್ತು.ದಯವಿಟ್ಟೂ ಸಾಹಿತ್ಯ ಬಗೆಗೆ ಚಂದದ ಚರ್ಚೆ, ಮಾತುಕತೆ ಪಟ್ಟಾಂಗ ಆಗುತ್ತಿರಲಿ.ಕಾಲ ಎಷ್ಟೇ ಮುಂದೆ ಓಡಲಿ..ಸಾಹಿತ್ಯದ ಬಗ್ಗೆ ಇರುವ ಬೆರಗನ್ನು ಕಳಕೊಳ್ಳುವುದು ಬೇಡ ಏನಂತೀರಿ?

   ಪ್ರತಿಕ್ರಿಯೆ
 16. Manjula gh

 17. Adarsha B S

  Well ..one beautifully crafted article I can say..though too much of technology took over literature, eventually everything merges into article n literature ..and people often find their peace in literature ..it makes impact in many lives in Many ways in multiple levels in a way of secret manifestation ..

  ಇತ್ತೀಚಿನ ದಿನಗಳಿಗೆ ಹೊಂದಾಣಿಕೆಯಾಗೊ ಸೂಕ್ತ ಮತ್ತು ಉತ್ತಮ ಬರಹ ..

  ಪ್ರತಿಕ್ರಿಯೆ
 18. Adarsha B S

 19. Sangeeta Kalmane

  ನಿಮ್ಮ ಬರಹ ಓದಿ ನನಗೊಂದು ಘಟನೆ ಜ್ಞಾಪಕ್ಕೆ ಬರುತ್ತಿದೆ. 1979-80ಯಲ್ಲಿ ಆಗಾಗ ಕವನ ಬರೆಯೊ ಹುಚ್ಚು. ಇದನ್ನು ಓದಿದ ಪುಣ್ಯಾತ್ಮನೊಬ್ಬ ತಾನೂ ಬರೆದಿದ್ದೀನಿ ಓದಿ ಅಂತ ಆಗಾಗ ತೋರಿಸೋದು. ಹೌದು ಅಂತ ನಾನೂ ನಂಬಿ ಕವನದ ಬಗ್ಗೆ ಚಚೆ೯ ಮಾಡೋದು. ಮಾತಿನಲ್ಲಿ ಪಳಗಿದ ವ್ಯಕ್ತಿಗಳಿಗೆ ಇದೇನು ಕಷ್ಟ ಅಲ್ಲ. ಗೊತ್ತಾಯಿತು ಒಂದಿನ ತನ್ನ ಗೆಳೆಯನ ಹತ್ತಿರ ಬರೆಸಿಕೊಂಡು ಬರೋದು. ಉಗಿದು ಕಳಿಸಿದೆ ಬಿಡಿ. ಇಂಥಹ ಬರಹಗಾರರೂ ಇದ್ದಾರೆ,ಹುಷಾರಾಗಿರಿ!

  ಪ್ರತಿಕ್ರಿಯೆ
 20. Sangeeta Kalmane

 21. Anonymous

  ಸಾಹಿತ್ಯದ ಓದು,ಬರಹ. ಎರಡೂ ಇಂದು ಕಡಿಮೆಯಾಗಿದೆ. ಇಂದಿನ ಸಾಮಾಜಿಕ ತಾಣಗಳ ಬಳಕೆಗಳಲ್ಲಿ ಯುವಜನತೆ ಮಗ್ನವಾಗಿದೆ. ಕಾಲೇಜು ವಾರ್ಷಿಕಾಂಕಗಳಲ್ಲಿ ಬರುವ ಹೆಚ್ಚಿನ ಲೇಖನಗಳಲ್ಲಿ ಸತ್ವವಿಲ್ಲ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: