ಪುರುಷೋತ್ತಮ ಬಿಳಿಮಲೆ
ಡಾ ಯು ಆರ್ ಅನಂತ ಮೂರ್ತಿ
ಬದುಕಿದ ಕಾಲಘಟ್ಟದ ಘನತೆ ಹೆಚ್ಚಿಸಿದ ಮಹಾನುಭಾವ
ಡಾ ಯು ಆರ್ ಅನಂತಮೂರ್ತಿಯವರು ಕಳೆದ ಅರ್ಧ ಶತಮಾನದ ಕಾಲ ಕರ್ನಾಟಕದ ಜೀವಚೈತನ್ಯವನ್ನು ಕ್ರಿಯಾಶೀಲಗೊಳಿಸುತ್ತಲೇ ಬದುಕಿದವರು.ತಾವು ಬದುಕುತ್ತಿರುವ ಸಮಾಜವನ್ನು ಸಮಗ್ರವಾಗಿ ಪರಿಭಾವಿಸುವ ಶಕ್ತಿ ಅವರಿಗಿತ್ತು.ಅದ್ವೈತ, ದೈತ.ಇಸ್ಲಾಂ, ಕ್ರಿಶ್ಚಿಯಾನಿಟಿ, ಬ್ರಾಹ್ಮಣ, ಶೂದ್ರ, ದಲಿತರು, ಇತಿಹಾಸ ವರ್ತಮಾನಗಳನ್ನೆಲ್ಲ ಒಂದು ಜನಪರ ವಾದ ಚೌಕಟ್ಟಿನಲ್ಲಿರಿಸಿ ವಿಶ್ಲೇಷಿಸುವ ಅಸಾಧಾರಣ ಸಾಮಥ್ರ್ಯವನ್ನುಅವರು ಪಡೆದಿದ್ದರು. ಈ ಶಕ್ತಿಯೇ ಅವರನ್ನು ಕೋಮುವಾದಿಗಳಿಂದ ದೂರವಿರುವಂತೆ ಮಾಡಿತು.ಅವರಿಗೆ ಸಂವಾದದಲ್ಲಿಆಸಕ್ತಿಯಿತ್ತು, ಸಂಘರ್ಷದಲ್ಲಿ ಅಲ್ಲ.
ಅವರು ಬರೆದ ಸಂಸ್ಕಾರ, ಭಾರತೀಪುರ, ಅವಸ್ಥೆಯಂಥ ಕಾದಂಬರಿಗಳು, ಪ್ರಜ್ಞೆ ಮತ್ತು ಪರಿಸರ, ಪೂರ್ವಾಪರದಂತ ವಿಮರ್ಶಾ ಕೃತಿಗಳು, ಮೌನಿ, ಪ್ರಶ್ನೆ, ಘಟಶ್ರಾದ್ಧದಂಥಸಣ್ಣ ಕತೆಗಳ ಸಂಕಲನ, ಅಜ್ಜನ ಹೆಗಲ ಸುಕ್ಕುಗಳು ಕವನಸಂಕಲನ, ಕನ್ನಡ ಸಾಹಿತ್ಯದ ಘನತೆಯನ್ನು ನಿರ್ವಿವಾದವಾಗಿ ಹೆಚ್ಚಿಸಿವೆ. ಇದರ ಜೊತೆಗೆ ಅವರು ಅಡಿಗರ ಭೂಮಿಗೀತೆಯೂ ಸೇರಿದಂತೆ ಅನೇಕ ಕೃತಿಗಳಿಗೆ ಬರೆದ ಮುನ್ನುಡಿಗಳು ಕನ್ನಡ ಸಾಹಿತ್ಯ ಪರಂಪರೆಯ ಶಕ್ತಿಯನ್ನು ಹೆಚ್ಚಿಸಿವೆ. ಅನಂತಮೂರ್ತಿ ಅವರು ಮಾಡಿದ ಭಾಷಣಗಳದ್ದೇ ಒಂದು ಪ್ರತ್ಯೇಕ ಲೋಕ. ಕನ್ನಡದ ಹಿರಿಯಕಿರಿಯ ಸಾಹಿತಿಗಳೊಡನೆ ಅವರು ಸಾಧಿಸಿಕೊಂಡ ಸಂಬಂಧಗಳು ಅತ್ಯಂತ ಸುಮಧುರವಾದುದು.ಕನ್ನಡ ಭಾಷೆಯುಅವರಕೈಯಲ್ಲಿ ಹೊಸ ಅರ್ಥ ಮತ್ತು ವಿಸ್ತಾರವನ್ನು ಪಡೆದುಕೊಂಡಿತ್ತು.ಜಗಲಿ, ಹಿತ್ತಿಲು, ಅಟ್ಟ ಮೊದಲಾದ ಪದಗಳಿಗೆ ಅವರು ನೀಡಿದ ವ್ಯಾಖ್ಯಾನಗಳು ಚಾರಿತ್ರಿಕವಾದುದು.
ಕರ್ನಾಟಕದ ಹೊರಗಡೆ ಮತ್ತುದೇಶದ ಹೊರಗಡೆಗೆಕನ್ನಡದ ಮಾನ ಹೆಚ್ಚಿಸಿದ ಬೆರಳೆಣಿಕೆಯ ಬರಹಗಾರರಲ್ಲಿಅನಂತಮೂರ್ತಿಯವರೂ ಒಬ್ಬರು. ಹವಾಯಿಯ ಹೊನುಲುಲುವಿನಲ್ಲಿ ನಡೆದಏಷಿಯಾ ವಿದ್ವಾಂಸರ ಸಮ್ಮೇಳನದಲ್ಲಿ ಅವರಉಲ್ಲೇಖವಾಗಿತ್ತು. ಇಸ್ರೇಲ್ನ ಹೀಬ್ರೂ ವಿಶ್ವವಿದ್ಯಾಲಯದಲ್ಲಿಅವರಿಗೆಅಭಿಮಾನಿಗಳಿರುವುದನ್ನು ನಾನು ಕಣ್ಣಾರೆಕಂಡಿದ್ದೇನೆ. ಅವರ ಹೆಸರು ಹೇಳಿದರೆ, ನಮ್ಮ ಮರ್ಯಾದೆ ಹೆಚ್ಚುತ್ತಿತ್ತು.ಕನ್ನಡದ ಬರೆವಣಿಗೆಗೆಅಂತಾರಾಷ್ಟ್ರೀಯ ಮನ್ನಣೆ ದೊರಕಿಸಿದವರಲ್ಲಿ ಅನಂತಮೂರ್ತಿ ಪ್ರಮುಖರು.
ನಾನು ಬದುಕಿದ ಕಾಲಘಟ್ಟದಲ್ಲಿ ಅನಂತಮೂರ್ತಿಯವರಿದ್ದರುಎಂಬುದು ನನ್ನಂತವನ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತಿತ್ತು.ಬದುಕಿದ ಕಾಲಘಟ್ಟದ ಘನತೆ ಹೆಚ್ಚಿಸಿದ ಮಹಾನುಭಾವ ಅವರು.
ನಾನು ಬದುಕಿದ ಕಾಲಘಟ್ಟದಲ್ಲಿ ಅನಂತಮೂರ್ತಿಯವರಿದ್ದರುಎಂಬುದು ನನ್ನಂತವನ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತಿತ್ತು.ಬದುಕಿದ ಕಾಲಘಟ್ಟದ ಘನತೆ ಹೆಚ್ಚಿಸಿದ ಮಹಾನುಭಾವ ಅವರು. haudu idu arthapurna satya sir…
Nimma kaakagattadalli enthavaru sikkidu nimma punyavu hwdu
URA was a great writer. Equally importantly he was a gret Public Intellectual. somewhat like chomsky
ನಾನು ಅನಂತ ಮೂರ್ತಿಯವರ ಕಾದಂಬರಿ, ಕವನ ಸಂಕಲನ ಇದಾವುದನ್ನೂ ಓದಿಲ್ಲ. ಕೆಲವರು ಅವರಿಗೆ ಸಂಬಂಧಪಟ್ಟ ಹಾಗೆ ಬರೆದದ್ದನ್ನು ಓದಿ ನಂಗೆ ತುಂಬಾ ಆಶ್ಚರ್ಯ ಆಯ್ತು.
ನೇರವಾದ ನುಡಿ ಮತ್ತು ನಡೆ, ಇದ್ದದ್ದನ್ನು ಇದ್ದ ಹಾಗೆ ಹೇಳಿ ಖಂಡಿಸುವ ರೀತಿ ತುಂಬಾನೇ ಖುಷಿ ಕೊಟ್ಟಿತು.