ಫೇಸ್‌ಬುಕ್ಕಿನಲ್ಲಿ ಬರೆಯುವುದೆಲ್ಲ ಕಳಪೆ ಎನ್ನುವ ಮಾತೊಂದು ಮತ್ತೆ ಮತ್ತೆ ಕೇಳಿಸಿ ಕಿರಿಕಿರಿಯಾಗುತ್ತಿದೆ. ಕಳಪೆ ಎಲ್ಲಿ ಬರೆದರೂ ಕಳಪೆಯೇ. ಮರ ಕಡಿದು ಬಿಡುಗಡೆ ಕಾರ್ಯಕ್ರಮ ಮಾಡಿ ಕಳಪೆ ಪದ್ಯದ ಪುಸ್ತಕ ಪ್ರಕಟಿಸುವುದಕ್ಕಿಂತ ಫೇಸ್‌ಬುಕ್ಕಲ್ಲಿ ಬರೆಯುವುದು ಒಳ್ಳೆಯದೇ ಅಲ್ಲವೆ?
ಫೇಸ್‌ಬುಕ್ ಬಹಳ ಜನರನ್ನು ಬೇಗ ಹಾಗೂ ಸಹಜವಾಗಿ ತಲುಪುವ ಹಾಗೂ ಪ್ರತಿಕ್ರಿಯೆಯ ಅವಕಾಶಗಳಿರುವ ಉಪಕರಣ. ಒಳ್ಳೆಯದನ್ನು ಬರೆಯುವುದು ನಮ್ಮ ಜವಾಬ್ದಾರಿ, ಫೇಸ್‌ಬುಕ್ಕಿಂದಲ್ಲ. ಐಪ್ಯಾಡ್ ಆರ್ಟಿಸ್ಟ್, ಡೈಲಿ ಸ್ಪಿಟ್ ಪೇಂಟ್‌ನಂಥ ಎಷ್ಟೊಂದು ಒಳ್ಳೆಯ ಕಲೆಯ ಫೇಸ್‌ಬುಕ್ ಪೇಜುಗಳು ಅದ್ಭುತವಾಗಿವೆ. ಹಾಗೆಯೇ ಇಂಗ್ಲಿಷಿನ ಹಲವು ಕಾವ್ಯ ಸಂಬಂಧೀ ಫೇಸ್ಬುಕ್ ಪುಟಗಳೂ ತುಂಬ ಉಪಯುಕ್ತವಾಗಿವೆ.
ಕೆಲವು ಅಪ್‌ಡೇಟಾಗದ ಜನರು ಹೀಗೆ ತಂತ್ರಜ್ಞಾನವನ್ನು ಹೀಗಳೆಯುವುದು ನನಗಂತೂ ಇಷ್ಟವಾಗುತ್ತಿಲ್ಲ. ಇನ್ನು ಫೇಸ್‌ಬುಕ್ಕಿನಲ್ಲಿ ನೂರಾರು ಲೈಕುಗಳು ಬಂದುಬಿಡುತ್ತವೆ ಎಂಬ ಹೊಟ್ಟೆಕಿಚ್ಚಿಗೂ ಸಕಾರಣಗಳಿಲ್ಲ. ಸರಿಯಾದ ಕವಿಗೆ ಗೊತ್ತಿರುತ್ತದೆ ಲೈಕುಗಳು ಅಷ್ಟು ಮಹತ್ವದವೇನಲ್ಲ ಅಂತ. ಅವನು ಅವುಗಳ ಲೆಕ್ಕ ಹಿಡಿದು ಮುಂದಿನ ಪದ್ಯ ಬರೆಯುವುದಿಲ್ಲ. ಅಷ್ಟಕ್ಕೂ ಮುದ್ರಿತ ಪುಸ್ತಕ ಓದಿ ಮೆಚ್ಚುಗೆ ಪತ್ರ ಬರೆಯುವ ಓದುಗನೇನೂ ಪಂಡಿತನಲ್ಲ.
ಪದ್ಯದ ಪುಸ್ತಕ ಪ್ರಕಟಿಸುವ ಪ್ರಕಾಶಕರಿಲ್ಲ, ಪದ್ಯದ ಪುಸ್ತಕ ಮಾರುವ ಅಂಗಡಿಗಳಿಲ್ಲ. ಅಂಥದ್ದರಲ್ಲಿ ಫೇಸ್‌ಬುಕ್ಕಿಗೆ ನಾವು ಕೃತಜ್ಞರಾಗಿರಬೇಕು. ಒಳ್ಳೆಯದನ್ನು ಬರೆಯಬೇಕಷ್ಟೆ. ‘ಫೇಸ್‌ಬುಕ್ ಕವಿತೆ’ಗಳು ಅಂತ ಕೋಟ್‌ನೊಳಗೆ ಮಾತಾಡುವವರೇ, ನನಗೆ ಕೇಳಿ ಕೇಳಿ ಸಾಕಾಗಿದೆ. ನಿಲ್ಲಿಸಿ
ಸರಿಯಾಗಿ ಒಂದು ವರ್ಷದ ಹಿಂದೆ
Well said.
Can’t agree more…
ಕಳಪೆ ಎಲ್ಲಿ ಬರೆದರೂ ಕಳಪೆಯೇ. ಮರ ಕಡಿದು ಬಿಡುಗಡೆ ಕಾರ್ಯಕ್ರಮ ಮಾಡಿ ಕಳಪೆ ಪದ್ಯದ ಪುಸ್ತಕ ಪ್ರಕಟಿಸುವುದಕ್ಕಿಂತ ಫೇಸ್‌ಬುಕ್ಕಲ್ಲಿ ಬರೆಯುವುದು ಒಳ್ಳೆಯದೇ ಅಲ್ಲವೆ?
ಅನುಮಾನವೇ ಇಲ್ಲ ರಘು ಅವರೇ…