ಶಚೀತೀರ್ಥದಲ್ಲಿ ಕಳೆದುಕೊಂಡ, ಕೈ ಬೆರಳಿನಿಂದ ಜಾರಿಹೋದ ಉಂಗುರಗಳ ಲೆಕ್ಕವಿಟ್ಟವರ್ಯಾರು?
ಫೇಸ್ ಬುಕ್ಕಿನಲ್ಲಿ ಕಳೆದುಕೊಂಡ ಉಂಗುರಗಳ ಬಗ್ಗೆ ಕವನಗಳು ಕಂಡವು.
ಈ ಉಂಗುರದ ಕಥೆ ಓದಿ, ನೀವು ಕಳೆದುಕೊಂಡ ಉಂಗುರ ನೆನಪಾಗಲಿ ಅನ್ನೋದು ನಮ್ಮ ಬಯಕೆ
ಜೋಗಿ
ವ್ಯಾಲಂಟೇನ್ಸ್ ಡೇ ಅಂದ್ರೆ ಏನಪ್ಪಾ?
ಮಗಳು ಕೇಳಿದಳು.
ಕಳೆದುಹೋದ ಶಕುಂತಲೆಯ ಉಂಗುರ
ದುಷ್ಯಂತನಿಗೆ ಸಿಕ್ಕ ದಿನ
ಅಂದೆ.
ಮಹಾನಗರ ಎಂಬ
ಶಚೀತೀರ್ಥದಲ್ಲಿ ಕಳೆದುಹೋದ
ನಿಮ್ಮ ಉಂಗುರ
ಸಿಕ್ತಾ?
ಮಂಜುಳಾ ಬಬಲಾದಿ
ಉಂಗುರವನ್ನೇನೋ ಕಳಚಿಟ್ಟುಬಿಟ್ಟೆ
ಅದರ ಅನುಭೂತಿ ಮಾತ್ರ
ಬೆರಳುಗಳಲ್ಲೇ ಉಳಿದುಬಿಟ್ಟಿದೆ!
ಮನಸಾದಾಗಲೆಲ್ಲ
ತಡವುತ್ತವೆ ಬೆರಳುಗಳು
ಉಂಗುರವಲ್ಲದಿದ್ದರೂ
ಅದರನುಭೂತಿಯ ನೆನಪನ್ನು…
ರಾಘವೇಂದ್ರ ಜೋಶಿ
ಕಳೆಯಬಹುದು,
ಉಂಗರ ಕಳೆಯಬಹುದು.
ಹಾಗೆಯೇ
ಬೆರಳ ಕಲೆಯೂ.
ಅರೇ?
ಇದ್ಯಾವ ಕಲೆ;
ಬಿಳಿಯ ಕಲೆ;
ಬೆರಳಿಗೇ ಕಳೆ!
nice..ee jugalbandi..!!!
“ungurada sukha kshana -bhangura” yendu jogi-joshi babalaadigalu nevidisiruvudu chennagide ; ring iddare jeevanadalli SPRING iddante – kaledu hodare suffeRING !!