ಪ್ರಿಯದರ್ಶಿನಿ ಶೆಟ್ಟರ್ ಕಂಡಂತೆ ಕುಪ್ಪಳಿ ಕಮ್ಮಟ

ಪ್ರಿಯದರ್ಶಿನಿ ಶೆಟ್ಟರ್

ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಮತ್ತು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳ್ಳಿ ಇವರ ಸಹಯೋಗದಲ್ಲಿ (ಅಕ್ಟೋಬರ್ ೨೨-೨೬, ೨೦೨೧) ಆಯೋಜಿಸಲಾಗಿದ್ದ ಐದು ದಿನಗಳ ರಾಜ್ಯಮಟ್ಟದ ವಿಮರ್ಶಾ ಕಮ್ಮಟದಲ್ಲಿ ಭಾಗವಹಿಸುವ ಸುವರ್ಣಾವಕಾಶ ನನಗೆ ಲಭಿಸಿತ್ತು. ನಾನು ಕಮ್ಮಟಕ್ಕೆ ಆಯ್ಕೆಯಾದದ್ದನ್ನು ತಿಳಿದಾಗಿನಿಂದ ಕುಪ್ಪಳ್ಳಿ, ಕವಿಮನೆ, ಕವಿಶೈಲ, ಕುವೆಂಪು ಪ್ರತಿಷ್ಠಾನದ ಬಗೆಗಿದ್ದ ಕುತೂಹಲ ಹೆಚ್ಚಾಗಿ, ಈ ಜಾಗಗಳನ್ನೆಲ್ಲ ಸುತ್ತಾಡಲು ತುದಿಗಾಲಿನಲ್ಲಿರುವಂತೆ ಮಾಡಿತ್ತು, ಆ ನಿಟ್ಟಿನಲ್ಲಿ ನನ್ನ ಬಹುದಿನಗಳ ಕನಸು ಈಡೇರಿತ್ತು.

ಕಮ್ಮಟದ ಮೊದಲ ದಿನ ಬೆಳಿಗ್ಗೆ ಉದ್ಘಾಟನಾ ಸಮಾರಂಭಜರುಗಿತು. ಶ್ರೀ ಕಡಿದಾಳ್ ಪ್ರಕಾಶ್‌ರವರು ಉದ್ಘಾಟಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕಮ್ಮಟದ ನಿರ್ದೇಶಕರಾದ ಪ್ರೊ. ಬಸವರಾಜ ಕಲ್ಗುಡಿಯವರು ೧೯೭೪ರಲ್ಲಿ ಅಕಾಡೆಮಿಯಿಂದ ಡಾ. ವಿ. ಕೃ. ಗೋಕಾಕ್‌ಅವರ ಮಾರ್ಗದರ್ಶನದಲ್ಲಿ ನಡೆದ ೧೩ ದಿನಗಳ ಪ್ರಥಮ ವಿಮರ್ಶಾಕಮ್ಮಟವನ್ನು ನೆನಪಿಸಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿಯ ಅಧ್ಯಕ್ಷರಾದ ಡಾ. ಬಿ. ವಿ. ವಸಂತಕುಮಾರ್‌ಅವರು ಮೀಮಾಂಸೆ, ವಿಮರ್ಶೆಗಳ ಕುರಿತು ಪರಿಚಯಾತ್ಮಕ ನುಡಿಗಳನ್ನಾಡಿದರು.

ಡಾ. ಮಾರ್ಷಲ್ ಶರಾಂ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಮುಖ್ಯ ಅತಿಥಿಗಳಾಗಿ ಡಾ. ಕುಮಾರಚಲ್ಯ, ಡಾ. ಬಿ. ಎಂ. ಪುಟ್ಟಯ್ಯ, ಡಾ. ಎಂ. ಉಷಾ, ರಾಘವೇಂದ್ರ ತೊಗರ್ಸಿ ಅವರು ಭಾಗವಹಿಸಿದ್ದರು. ಅಕಾಡೆಮಿಯ ರಿಜಿಸ್ಟ್ರಾರ್‌ ಕರಿಯಪ್ಪ ಎನ್. ಅವರು ಸ್ವಾಗತಿಸಿದರು. ಸಾಹಿತಿ, ಶ್ರೀಮತಿ ಪಾರ್ವತಿ ಪಿಟಗಿಯವರು ವಂದನಾರ್ಪಣೆ ಮಾಡಿದರು.

ಮೊದಲ ಗೋಷ್ಠಿ ಎಲ್ಲ ಶಿಬಿರಾರ್ಥಿಗಳ ಸಂಕ್ಷಿಪ್ತ ಪರಿಚಯದೊಂದಿಗೆ ಪ್ರಾರಂಭವಾಯಿತು. ಎಲ್ಲರೂ ವಿಮರ್ಶೆಯ ಬಗೆಗೆ ತಮಗಿದ್ದಆಸಕ್ತಿಯನ್ನು ಹಂಚಿಕೊಂಡರು. ರಾಜ್ಯದ ನಾನಾ ಭಾಗಗಳಿಂದ (ಆಯ್ಕೆಯಾದ ೬೦ ಜನರಲ್ಲಿ) ೩೭ ಶಿಬಿರಾರ್ಥಿಗಳು ಕಮ್ಮಟದಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದರು. ಡಾ. ವಸಂತಕುಮಾರ್‌ಅವರು ಮೀಮಾಂಸೆ-ವಿಮರ್ಶೆಗಳ ನಡುವಿನ ಸಂಬಂಧ, ಜಾನಪದ ವಿಮರ್ಶೆಯಕುರಿತು ಮಾತನಾಡುತ್ತಾ ಅನೇಕ ಲೇಖಕರು ಹಾಗೂ ಅವರ ಕೃತಿಗಳ ಕುರಿತು ಚರ್ಚಿಸಿದರು. ಗೋಷ್ಠಿ ನಡೆಯುತ್ತಿರುವಾಗಲೇ ಶುರುವಾದ ಮಲೆನಾಡ ಮಳೆಯನ್ನು ಕಂಡು ನಾವೆಲ್ಲ ಪುಳಕಿತರಾದೆವು.

ಭೋಜನದ ನಂತರದ ಸಂವಾದದಲ್ಲಿ ಶಬ್ಧ, ಅರ್ಥ, ಭಾಷೆ, ರಚನೆ- ವಿರಚನೆ, ಶಬ್ಧದ ಶಕ್ತಿಗಳ ಕುರಿತುಚರ್ಚೆಯಾಯಿತು. ಡಾ. ಎಂ. ಉಷಾರವರು ‘ಕೃತಿ ಮತ್ತು ವಿಮರ್ಶೆ ಇವುಗಳ ನಡುವಿನ ಸಂಬಂಧ’ ಎಂಬ ವಿಷಯದ ಬಗ್ಗೆ ಮಾತನಾಡುತ್ತ ವಿಮರ್ಶಕರ ಲಕ್ಷಣಗಳು, ಮಾರುಕಟ್ಟೆಆರ್ಥಿಕತೆ (ಎಕಾನಮಿ), ಸಾಹಿತ್ಯದ ಮೇಲೆ ಇವುಗಳ ಛಾಯೆ, ಪುಸ್ತಕಗಳ ಜಾಹೀರಾತುಗಳು, ಕೆಲ ಪುಸ್ತಕಗಳು ಪ್ರಕಟವಾಗುತ್ತಲೇ ಅವುಗಳ ಜೊತೆಗೇ ಮೂಡಿಬರುವ ವಿಮರ್ಶಾ ಲೇಖನಗಳು, ಇಂತಹ ಬಹಳಷ್ಟು ಮಾಹಿತಿಗಳನ್ನು ಹಂಚಿಕೊಂಡರು.

ಸಂಜೆಯ ಪ್ರಾಯೋಗಿಕ ಸಮಯದಲ್ಲಿ ಶಿಬಿರಾರ್ಥಿಗಳನ್ನೆಲ್ಲ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಯಿತು. ಅಲ್ಲಮಪ್ರಭು ಹಾಗೂ ಬಸವಣ್ಣನವರಎರಡು ವಚನಗಳ ಕುರಿತು ಪ್ರತಿ ಗುಂಪಿನಲ್ಲಿ ನಡೆದಚರ್ಚೆಯ ಸಾರವನ್ನುಆಯಾ ಗುಂಪಿನ ಪ್ರತಿನಿಧಿ ಎಲ್ಲರೆದುರು ಪ್ರಸ್ತುತಪಡಿಸಿದರು. ರಾತ್ರಿ ಕುವೆಂಪು ಅವರಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು. ಪ್ರತಿಷ್ಠಾನದ ಮೇಲ್ಭಾಗದಲ್ಲಿ ಚಲನಚಿತ್ರ ಪ್ರದರ್ಶನಕ್ಕಾಗಿ ಪ್ರತ್ಯೇಕ ವ್ಯವಸ್ಥೆಯಿದೆ.

ಕುವೆಂಪುರವರಧ್ವನಿಯಲ್ಲಿಯೇಅವರ ಕೆಲವು ಕವನಗಳ ಸಾಲುಗಳನ್ನು ಕೇಳಿ ರೋಮಾಂಚನವಾಯಿತು. ಕುವೆಂಪು ಪ್ರತಿಷ್ಠಾನ, ಕುಪ್ಪಳ್ಳಿ, ಕವಿಮನೆ, ಕವಿಶೈಲ, ತುಂಗಾ ನದಿ, ಮುಂತಾದ ವಿವರಗಳನ್ನೊಳಗೊಂಡ ೩೫ ನಿಮಿಷಗಳ ಈ ಅಪರೂಪದ ಸಾಕ್ಷ್ಯಚಿತ್ರಎಲ್ಲರನ್ನೂ ಹಿಡಿದಿಟ್ಟಿತ್ತು. ಊಟವಾದ ನಂತರ ಹಿಂದಿನ ರಾತ್ರಿಯಿಂದ ಪ್ರಯಾಣದಲ್ಲಿ ನಿದ್ದೆಯಿಲ್ಲದೆ, ಬಿಡುವಿಲ್ಲದ ವೇಳಾಪಟ್ಟಿಯಿಂದ ದಣಿದಿದ್ದ ನಾವು ‘ಹಾಸಿಗೆ ಸಿಕ್ಕರೆ ಸಾಕು’ ಎಂಬಂತೆ ನಿದ್ದೆಹೋದೆವು.

। ಇನ್ನು ನಾಳೆಗೆ ।

‍ಲೇಖಕರು Admin

November 23, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: