ಪ್ರಸನ್ನ ನೇತೃತ್ವದಲ್ಲಿ ‘ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ’

ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ (Indian Institute of Educational Theatre -IIET)

ಭಾರತೀಯ ರಂಗಭೂಮಿ ಫೌಂಡೇಷನ್ (Indian Theatre Foundation (R)) ಒಂದು ಟ್ರಸ್ಟ್ ಆಗಿ ನೋಂದಾಯಿತವಾದ ಸಂಸ್ಥೆ, ಹೆಸರಾಂತ ರಂಗಕರ್ಮಿ ಹಾಗೂ ‘ಚರಕ’ ಸಂಸ್ಥೆ ಸ್ಥಾಪಕರಾದ ಶ್ರೀ ಪ್ರಸನ್ನ ಹೆಗ್ಗೋಡು ಇದರ ಮಾರ್ಗದರ್ಶಕರಾಗಿದ್ದಾರೆ.

ಸಂಸ್ಥೆಯ ಮೂಲ ಉದ್ದೇಶ ಶೈಕ್ಷಣಿಕ ರಂಗಭೂಮಿಯ (Theatre in Education TIE) ಚಟುವಟಿಕೆಗಳನ್ನು ಮುನ್ನೆಲೆಗೆ ತರುವುದಾಗಿದೆ. ಕರ್ನಾಟಕವು ದೇಶದಲ್ಲಿಯೇ ಶೈಕ್ಷಣಿಕ ರಂಗಭೂಮಿಯ ತವರಾಗಿದೆ. ಹೆಸರಾಂತ ನಾಟಕಕಾರರಾದ ದಿ. ಆದ್ಯರಂಗಾಚಾರ್ಯರು (ಶ್ರೀರಂಗ) 60ರ ದಶಕದಲ್ಲಿಯೇ ಶಿಕ್ಷಕರಿಗೆ ರಂಗತರಬೇತಿ ಕಾರ್ಯಾಗಾರ ಏರ್ಪಡಿಸಿ ರಾಜ್ಯದಲ್ಲಿ ಶೈಕ್ಷಣಿಕ ರಂಗಭೂಮಿಗೆ ನಾಂದಿ ಹಾಡಿದ್ದಾರೆ. ಮಕ್ಕಳಲ್ಲಿ ಈಗಿರುವ ಕಲಿಕೆಯ ಹೊರೆಯನ್ನು ಹಗುರಾಗಿಸಿ, ನಲಿಕೆಯ ಮೂಲಕ ಲವಲವಿಕೆಯಿಂದ ಕಲಿಕೆಯಲ್ಲಿ ತೊಡಗಲು ಉತ್ತೇಜಿಸುವುದು ಇದರಿಂದ ಸಾಧ್ಯವಾಗಲಿದೆ. ಯೂರೋಪು ಮತ್ತಿತರ ಮುಂದುವರೆದ ದೇಶಗಳಲ್ಲಿ ಹಲವು ದಶಕಗಳಿಂದ ಶೈಕ್ಷಣಿಕ ರಂಗಭೂಮಿ ಕಾರ್ಯಕ್ರಮವನ್ನು ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸಿ ಮುಂದುವರೆಸಿಕೊಂಡು ಬರಲಾಗುತ್ತಿದೆ.

ಭಾರತೀಯ ರಂಗಭೂಮಿ ಫೌಂಡೇಷನ್ ಕಳೆದ ಒಂದೂವರೆ ವರ್ಷಗಳಿಂದ ‘acting ಶಾಸ್ತ್ರ’ ಹೆಸರಿನ ರಾಷ್ಟ್ರೀಯ ನಟನಾ ರಂಗ ತರಬೇತಿ ಕಾರ್ಯಾಗಾರಗಳನ್ನು ರಂಗನಟರಿಗೆ ಏರ್ಪಡಿಸುತ್ತಿದ್ದು ಅಂತಹ ಆರು ಕಾರ್ಯಾಗಾರಗಳನ್ನು ಯಶಸ್ವಿಯಾಗಿ ಪೂರೈಸಿದೆ. ದೇಶದಾದ್ಯಂತ ಹೆಸರಾಂತ ರಂಗ ಹಾಗೂ ಚಲನಚಿತ್ರ ಕಲಾವಿದರು ಈ ಕಾರ್ಯಾಗಾರದಲ್ಲಿ ಭಾಗಿಯಾಗಲು ಹಾತೊರೆಯುವುದು ಇದರ ಮಹತ್ವ ತಿಳಿಸುತ್ತದೆ. ಈವರೆಗೆ ಸುಮಾರು 150 ಕ್ಕೂ ಹೆಚ್ಚಿನ ನಟರು ಕಾರ್ಯಾಗಾರಗಳಲ್ಲಿ ತರಬೇತಿ ಹೊಂದಿದ್ದಾರೆ. ಅಲ್ಲದೆ, ಫೌಂಡೇಷನ್ ‘ನವೋದಯ’ ಹೆಸರಿನ ನಾಟಕ ರೆಪರ್ಟರಿ ಹೊಂದಿದ್ದು, ಈಗಾಗಲೇ ಎರಡು ಪೂರ್ಣ ಪ್ರಮಾಣದ ನಾಟಕಗಳನ್ನು ಯಶಸ್ವಿಯಾಗಿ ಪ್ರದರ್ಶಿಸುತ್ತಾ ಬಂದಿದೆ ಮತ್ತು ಶೈಕ್ಷಣಿಕ ರಂಗಭೂಮಿಗೆ ಸಂಬಂಧಿಸಿದ ನಾಟಕಗಳ ತಯಾರಿಯಲ್ಲಿದೆ.

ಸಂಸ್ಥೆಯ ಮೂಲ ಉದ್ದೇಶವಾದ ಶೈಕ್ಷಣಿಕ ರಂಗಭೂಮಿಯ’ (Theatre in Education-TIE) ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಾಧ್ಯವಾಗುವಂತೆ ಭಾರತೀಯ ರಂಗಭೂಮಿ ಫೌಂಡೇಷನ್‌,  ಹಾರ್ಡ್ವಿಕ್  ಪಿ.ಯು. ಕಾಲೇಜಿನ ಸಹಯೋಗದಲ್ಲಿ, ಕಾಲೇಜಿನ ಆವರಣದಲ್ಲಿರುವ ಪಾರಂಪರಿಕ ಕಟ್ಟಡದಲ್ಲಿ ‘ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ’ ಯನ್ನು (Indian Institute of Educational Theatre -IET) ಸ್ಥಾಪಿಸಿದೆ, ಸಂಸ್ಥೆಯ ಕಛೇರಿ, 50-60 ಪ್ರೇಕ್ಷಕರ ಸಣ್ಣ ರಂಗಮಂದಿರ, ತರಬೇತಿ ಕೊಠಡಿಗಳನ್ನು ಹೊಂದಿದ ಈ ಸಂಸ್ಥೆಯ ಉದ್ಘಾಟನೆಯು ಇದೇ ಸೆಪ್ಟೆಂಬರ್ 4 ರಂದು ಸಂಜೆ 6.30 ಗಂಟೆಗೆ ನಡೆಯಲಿದೆ. ಈ ಸಂಸ್ಥೆಯ ಉದ್ದೇಶ, ಮಕ್ಕಳ ಕಲಿಕೆಯನ್ನು ನಲಿಕೆಯಿಂದ ಕೂಡಿರುವಂತೆ ಮಾಡುವುದು ಹಾಗೂ ಆ ಮೂಲಕ ನಟರಾಗಿ ತರಬೇತಾದ ಸಾವಿರಾರು ಯುವಜನರಿಗೆ ತಮ್ಮ ತಮ್ಮ ಊರುಗಳಲ್ಲಿ ಉಳಿದು ಸಮಾಜಕ್ಕೆ ಉಪಯುಕ್ತವಾದ ಕೆಲಸವೊಂದರಲ್ಲಿ ತೊಡಗಿಕೊಂಡು ಒಂದಿಷ್ಟು ವರಮಾನ ಗಳಿಸುವುದಕ್ಕೆ ಆಸ್ಪದ ಮಾಡಿಕೊಡುವುದು ಆಗಿರುತ್ತದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 9945158970

‍ಲೇಖಕರು avadhi

September 2, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: