ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ ಚಿಕ್ಕಮಗಳೂರಿನಲ್ಲಿ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ನೂರು ಶಾಲೆಗಳಿಗೆ ನೂರು ಪುಸ್ತಕ ಹಂಚುವ ಸಂಭ್ರಮ ಅದು.
ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಉದ್ಘಾಟಿಸಿದರು.
ಶಾಸಕ ಎಚ್ ಡಿ ತಮ್ಮಯ್ಯ ಪುಸ್ತಕಗಳನ್ನು 100 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ವಿತರಿಸಿದರು.
ಪುಸ್ತಕಗಳನ್ನು ಕಾದಂಬರಿಕಾರ ಎಂ ಆರ್ ದತ್ತಾತ್ರಿ ಅನಾವರಣಗೊಳಿಸಿದರು.
ಡಿಡಿಪಿಐ ಜಿ ರಂಗನಾಥ ಸ್ವಾಮಿ ಅವರು ಮುಖ್ಯ ಅತಿಥಿಗಳಾಗಿದ್ದರು.
ಸಂಘದ ಅಧ್ಯಕ್ಷರಾದ ನಿಡಸಾಲೆ ಪುಟ್ಟಸ್ವಾಮಯ್ಯ ಅವರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ಆರ್ ದೊಡ್ಡೆಗೌಡ ಅವರು ಸ್ವಾಗತಿಸಿದರು.
ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಜ್ಜಂಪುರ ಸೂರಿ ಶ್ರೀನಿವಾಸ್ ಉಪಸ್ಥಿತರಿದ್ದರು.
0 ಪ್ರತಿಕ್ರಿಯೆಗಳು