ಪೂರ್ಣಿಮಾ ಮರಳಿಹಳ್ಳಿ ಓದಿದ ‘ಸಾರ್ಥಕ ಮನಗಳು’

ಪೂರ್ಣಿಮಾ ಮರಳಿಹಳ್ಳಿ

ಚೊಚ್ಚಲ ಕಥಾ ಸಂಕಲನ ‘ಸಾರ್ಥಕ ಮನಗಳು’ ಪುಸ್ತಕ ಪ್ರಕಟಗೊಳ್ಳುವ ಮೂಲಕ ಸಾಹಿತ್ಯ ಲೋಕಕ್ಕೆ ಕಾಲಿಡುತ್ತಿರುವ ಉದಯೋನ್ಮುಖ ಲೇಖಕಿ ಸುಪ್ರೀತಾ ಅವರ ಮೊದಲ ಪ್ರಯತ್ನಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ವೃತ್ತಿಯಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸುಪ್ರೀತಾ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಮೊಡಂಕಾಪಿನಲ್ಲಿ. ಮದುವೆ ನಂತರ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

ಸುಪ್ರೀಯಾ ಅವರ ಹವ್ಯಾಸಗಳು ನಿಜಕ್ಕೂ ಅವರೊಬ್ಬ ಸಕಲಕಲಾ ವಲ್ಲಭೆ ಎಂಬುದಕ್ಕೆ ಸಾಕ್ಷಿಯಾಗಿವೆ‌.ಹವ್ಯಾಸಿ ಬರಹಗಾರರು, ನೃತ್ಯ ಪ್ರವೀಣೆ, ರಾಜ್ಯಮಟ್ಟದ ಟೆನಿಸ್ ಮತ್ತು ಬ್ಯಾಡ್ಮಿಂಟನ್ ಆಟಗಾರ್ತಿ. ತಂತ್ರಜ್ಞಾನ ಕ್ಷೇತ್ರದಲ್ಲಿದ್ದು ಸಾಹಿತ್ಯದಲ್ಲಿ ತೋರಿಸುತ್ತಿರುವ ಲೇಖಕಿಯರ ಸಾಹಿತ್ಯ ಪ್ರೀತಿ ನಿಜಕ್ಕೂ ಅನನ್ಯ. ಸುಪ್ರೀತಾ ಅವರಿಂದ ಇನ್ನಷ್ಟು ಪುಸ್ತಕಗಳು ಪ್ರಕಟವಾಗಲಿ ಎಂದು ಹಾರೈಸುವೆ.

ಸಾರ್ಥಕ ಮನಗಳು ಕಥಾ ಸಂಕಲನದಲ್ಲಿ ಐದು ಕಥೆಗಳಿವೆ. ಅವಳ ಛಲ ಇದು ಮೊದಲ ಕಥೆ. ಯಾಂತ್ರಿಕ ಬದುಕಿನ ನಡುವೆ ಹೊಸಕಿ ಹೋದ ಬಾಲ್ಯದ ನೃತ್ಯ ಕಲೆ ಮತ್ತೆ ಸುಪ್ರಿತಾಳಲ್ಲಿ ಹೊಸ ಚೈತನ್ಯ ತರುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆಫೀಸಿನಲ್ಲಿ ಮೊದಲ ಬಾರಿ ನೃತ್ಯ ಪ್ರದರ್ಶನ ಮಾಡಿದ ಸುಪ್ರೀತಾಳಿಗೆ ತನ್ನ ನೃತ್ಯ ಪ್ರದರ್ಶನದ ಬಗ್ಗೆ ಅಸಮಾಧಾನ ಉಂಟಾಗುತ್ತದೆ. ಆದರೆ ಅದನ್ನೇ ಚಾಲೆಂಜ್ ಆಗಿ ತೆಗೆದುಕೊಂಡ ಕಥಾನಾಯಕಿಯ ಮತ್ತೊಂದು ನೃತ್ಯಕಲಾ ಸೇವೆ ಹೇಗಿತ್ತು?
ಯಾವ ರೀತಿಯಲ್ಲಿ ಯಶಸ್ವಿಯಾದಳು ಎಂಬುದನ್ನು ಕಥೆಯ ಮೂಲಕವೇ ತಿಳಿಯಬೇಕು.

ಎರಡನೇ ಕಥೆ ಶೃತಿ ಸೇರುವಳೇ ಪಲ್ಲವಿ? ಎಂಬ ಕಥೆಯಲ್ಲಿ ಅಮ್ಮನನ್ನೇ ದ್ವೇಷಿಸುತ್ತದ್ದ ಮಗಳು ಪಲ್ಲವಿ
ಕೊನೆಗೆ ಅಮ್ಮನ ಮಡಿಲನ್ನು ಸೇರುತ್ತಾಳೆ. ಆದರೆ ಅಷ್ಟರಲ್ಲಿ ಅಮ್ಮ ಶೃತಿಯ ಬದುಕಿನ ಎಷ್ಟೋ ಸುಂದರ ಕ್ಷಣಗಳು ಕೇವಲ ನೋವು, ಹತಾಶೆಯಲ್ಲೇ ಕಳೆದಿರುತ್ತವೆ. ಮಗಳು ಪಲ್ಲವಿ ಅಮ್ಮನನ್ನು ದ್ವೇಷಿಸಲು ಕಾರಣರಾದವರು ಯಾರು? ಏಕೆ? ಎಂಬುದನ್ನು ತಿಳಿಯಬೇಕೆ? ಹಾಗಾದರೆ ಸಾರ್ಥಕ ಮನಗಳು ಪುಸ್ತಕ ಓದಬೇಕು.

ಎಲ್ಲಾ ಬುರುಡೆ ಎಂಬ ಕಥೆಯಲ್ಲಿ ಅಲೋಕನ ಹಟದ ಸ್ವಭಾವ ಮತ್ತು ಆತ ತನ್ನ ಜೀವನದಲ್ಲಿ ಆಕರ್ಷಕ ಮಾತಿನ ಮೂಲಕ ಮೋಸ ಮಾಡಿದ ಸಹೋದ್ಯೋಗಿ ಪಂಗೇಶನ ವ್ಯಕ್ತಿತ್ವಗಳ ಬಗ್ಗೆ ಓದುವಾಗ ಪ್ರಸ್ತುತ ದಿನಗಳಲ್ಲಿ ಯುವಜನತೆ ಅತೀ ಗಳಿಕೆಯ ಆಸೆಯಿಂದ ಹೇಗೆ ಮೋಸ ಹೋಗಬಹುದು ಎಂಬುದನ್ನು ತಿಳಿಸಿಕೊಡುತ್ತದೆ.

ನಾಲ್ಕನೆಯ ಕಥೆ ಜ್ಞಾನವೆಂಬ ಸಂಪತ್ತು ಈ ಕಥೆಯಲ್ಲಿ ಉನ್ನತ ವಿದ್ಯೆ, ಡಿಗ್ರಿ ಪಡೆದ ಮಾತ್ರಕ್ಕೆ ಇನ್ನೊಬ್ಬರನ್ನು ಕೀಳಾಗಿ ನೋಡಬಾರದೆಂಬ ಸಂದೇಶ ನೀಡುತ್ತದೆ. ಜೊತೆಗೆ ಈ ಕಥೆಯಲ್ಲಿ ಕೃಷಿಗೆ ಸಂಬಂಧಿಸಿದ ಹೊಸ ವಿಷಯಗಳು ಹೆಚ್ಚಾಗಿ ಬಂದಿರುವುದರಿಂದ ಕಥೆ ಆಕರ್ಷಕವಾಗಿ ಓದಿಸಿಕೊಂಡು ಹೋಗುತ್ತದೆ. ವಿದ್ಯೆಗೆ ವಿನಯವೇ ಭೂಷಣ ಎಂಬ ಸಂದೇಶ ಈ ಕಥೆಯಲ್ಲಿದೆ.

ಕೊನೆಯ ಕಥೆ ಜೀವನ ಕಲೆ. ಇಂದಿನ ವಾತಾವರಣಕ್ಕೆ
ಒಳ್ಳೆಯ ಆಶಯ ಹೊತ್ತ ಕಥೆ ಇದು. ಮಕ್ಕಳ ಮಾರ್ಕ್ಸ
ಮೇಲೆ ಪಾಲಕರು ತಮ್ಮ ಸ್ಟೇಟಸ್ ಕಂಡುಕೊಳ್ಳುವ ಈಗಿನ ಟ್ರೆಂಡ್ ನಲ್ಲಿ ಮಕ್ಕಳಿಗೆ ಕೇವಲ ಅಂಕ ಗಳಿಕೆ ಒಂದೇ ಶಿಕ್ಷಣವಾಗಿದಯೇ ಹೊರತು ಜೀವನ ಕಲೆಯನ್ನು ಕಲಿಸುವಲ್ಲಿ ಪಾಲಕರು ಎಡುವುತ್ತಿದ್ದಾರೆ. 99.99% ಗಳಿಸಿದ ವಿದ್ಯಾರ್ಥಿಯ ಜೀವನದಲ್ಲಿ ಸಾಮಾನ್ಯ ಜ್ಞಾನವೂ ಅಷ್ಟೇ ಮಹತ್ವದ್ದು ಎಂಬುದನ್ನು ತಿಳಿಸುವ ಕಥೆ ಜೀವನ ಕಲೆಯಾಗಿದೆ.ಅನ್ವಿತ್ ಮತ್ತು ಶಿಖರ್ ಇವರಿಬ್ಬರೂ ಈ ಕಥೆಯ ಪ್ರಮುಖ ಪಾತ್ರಗಳು.ಪುಸ್ತಕ ಹುಳು ಆಗಿದ್ದ ಅನ್ವಿತ್ ಒಳ್ಳೆಯ ಅಂಕ ಗಳಿಸಿ ಟಾಪರ್ ಆದಾಗಲೂ ಸೋತಿದ್ದು ಯಾಕೆ? ಎಂಬುದನ್ನು ತಿಳಿಯಲು ಈ ಕಥೆ ಓದಬೇಕು.

ಒಟ್ಟಾರೆ ಒಳ್ಳೆಯ ಸಂದೇಶ ನೀಡುವ ಮೂಲಕ ಐದೂ
ಕಥೆಗಳು ಓದುಗರಿಗೆ ಹತ್ತಿರವಾಗುತ್ತವೆ. ಸುಪ್ರೀತಾ
ಅವರ ಸಾಹಿತ್ಯ ಸೇವೆ, ಈ ಚೊಚ್ಚಲ ಪುಸ್ತಕದ ಮೂಲಕ ನಿರಂತರವಾಗಿ ಅಡತಡೆ ಇಲ್ಲದೇ ಸಾಗಲಿ ಎಂದು ಹಾರೈಸುವೆ.ಉದಯೋನ್ಮುಖ ಬರಹಗಾರರಿಗೆ ಸುಪ್ರೀತಾ ಅವರು ಪ್ರೇರಣೆ ಮತ್ತು ಮಾದರಿಯಾಗಲಿ.

‍ಲೇಖಕರು Admin

May 25, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: