ಪುರುಷೋತ್ತಮ ಬಿಳಿಮಲೆ ಓದಿದ ‘ಸಿದ್ಧಮಾದರಿಗಳಾಚೆಗೆ’

ಸಿದ್ಧಮಾದರಿಗಳಾಚೆ ಇಟ್ಟ ಹೆಜ್ಜೆಗಳು

ಪುರುಷೋತ್ತಮ ಬಿಳಿಮಲೆ

ಮುಂಬೈ ವಾಸಿಯಾಗಿರುವ ಡಾ. ಗಿರಿಜಾ ಶಾಸ್ತ್ರಿಯವರು ಕನ್ನಡ, ಇಂಗ್ಲಿಷ್‌, ಹಿಂದಿ ಮತ್ತು ಮರಾಠಿ ಭಾಷೆಗಳನ್ನು ಬಲ್ಲ ವಿಶಿಷ್ಟ ಲೇಖಕಿ. ವಿಸ್ತಾರವಾದ ಓದು ಮತ್ತು ಅನುಭವಗಳ ಸಹಾಯದಿಂದ ಸಹಜವಾಗಿ ಹುಟ್ಟುವ ಪ್ರಖರ ವೈಚಾರಿಕತೆಗೆ ಭಾವುಕತೆಯನ್ನು ಹದವಾಗಿ ಬೆರೆಸಿ ಅವರು ಕನ್ನಡದಲ್ಲಿ ಬರೆಯುವ ವಿಧಾನ ಬಹಳ ವಿನೂತನವಾದುದು. ಕವಿ ಮತ್ತು ವಿಮರ್ಶಕರಾಗಿ ಹೆಸರು ಮಾಡಿರುವ ಅವರು ಇದೀಗ ‘ಸಿದ್ಧಮಾದರಿಗಳಾಚೆಗೆ’ ಪುಸ್ತಕವನ್ನು ಪ್ರಕಟಿಸಿದ್ದಾರೆ.

ಈ ಪುಸ್ತಕದಲ್ಲಿ ಒಟ್ಟು ಮೂರು ಭಾಗಗಳಿವೆ. ಮೊದಲನೆಯ ಭಾಗವಾದ ʼಕಲ್ಯಾಣದ ಮೂರು ದಾರಿಗಳʼಲ್ಲಿ ವಿಶ್ವದ ಶಕ್ತಿಯನ್ನು ತಮ್ಮ ಮಾನವೀಯ ಗುಣಗಳಿಂದ ತಮ್ಮದೇ ರೀತಿಯಲ್ಲಿ ಸಂವರ್ಧಿಸಿದ ಮಹನೀಯರು ಮತ್ತು ಕೆಲವು ಸಂಘಟನೆಗಳ ಬಗ್ಗೆ ವಿವರಗಳಿವೆ. ಎರಡನೇ ಭಾಗಕ್ಕೆ ʼ ಹೋರಾಟದ ಹಾದಿಯಲ್ಲಿʼ ಎಂದು ಹೆಸರಿಟ್ಟು ಇದರಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಕಟವಾದ ಕೆಲವು ಮುಖ್ಯ ಕೃತಿಗಳನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಲಾಗಿದೆ. ಮೂರನೆಯ ಭಾಗವಾದ ʼಬೇರುಂಟೆ ಜಗದೊಳಗೆʼಯಲ್ಲಿ ನಾವು ಸಾಧಾರಣವಾಗಿ ಬಹಳ ಅಮುಖ್ಯ ಎಂದು ಭಾವಿಸಲಾದ, ಆದರೆ ನಾಡಿನ ಉಳಿವಿಗೆ ಶ್ರಮಿಸುತ್ತಿರುವ ವ್ಯಕ್ತಿಗಳ ಸಾಧನೆಗಳ ಪರಿಶೀಲನೆಯಿದೆ. ಜೊತೆಗೆ ಅವರು ಶ್ರೀಲಂಕಾದಿಂದ ಆಫ್ಘಾನಿಸ್ಥಾನದವರೆಗೆ, ನೇಪಾಳದಿಂದ ಭಾರತದ ಪಶ್ಚಿಮ ಕರಾವಳಿಯವರೆಗೆ ನಮ್ಮ ಇಡೀ ನಾಗರಿಕತೆಯೇ ಸಂಕಷ್ಟದಲ್ಲಿರುವುದನ್ನು ಎಚ್ಚರದಿಂದ ಗುರುತಿಸಿ ಅದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸುತ್ತಾರೆ.

ನಾಗರಿಕ ಸಮಾಜದ ಯೋಚನಾ ಶಕ್ತಿಯೇ ಕೊಲೆಯಾಗುತ್ತಿರುವಾಗ ಲೇಖಕರು ಸುಮ್ಮನೆ ಕುಳಿತಿರುವುದು ಅಪೇಕ್ಷಣೀಯವಲ್ಲ. ಈ ಅರಿವಿನಲ್ಲಿ ಪ್ರಸ್ತುತ ಪುಸ್ತಕದ ಲೇಖನಗಳನ್ನು ಓದಿದರೆ ಶಾಸ್ತ್ರಿಯವರ ಬರವಣಿಗೆಯ ಮಹತ್ವ ತಿಳಿಯುತ್ತದೆ. ಅವರು ಯುದ್ದವನ್ನು ಖಂಡ ತುಂಡವಾಗಿ ವಿರೋಧಿಸಿ, ಬುದ್ದನ ಹಾದಿ ಹಿಡಿಯುತ್ತಾರೆ. ೧೪ ನೆಯ ಶತಮಾನದ ಮರಾಠಿ ಸಂತ ಚೋಖಮಿಳನ ಹಾಡುಗಳನ್ನಾಧರಿಸಿ ʼಹಾರುವ-ಹೊಲೆಯʼ ಅಂತರಗಳನ್ನು ನಿರಾಕರಿಸುತ್ತಾರೆ. ಅದೇ ಉಸಿರಲ್ಲಿ ಅತ್ಯಂತ ಮಾನವೀಯ ಮತ್ತು ಮುಗ್ಧವಾಗಿರುವ ರಿಹಾನಾ, ಮಾದೇವಿಯರನ್ನು ಅಪ್ಪಿಕೊಳ್ಳುತ್ತಾರೆ. ಅವರಿಬ್ಬರ ಮೂಲಕ ಈ ನೆಲದ ಸಂಪತ್ತಾದ ಕೋಮು ಸೌಹಾರ್ದತೆಯ ಬಗ್ಗೆ ಬರೆಯುತ್ತಾರೆ. ಹನುಮಂತನ ಪಾತ್ರಮಾಡುವ ಸಾಬಿಯನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಇಂಥ ವಿಷಯಗಳಿಗೆ ಕನ್ನಡ ಸಾಹಿತಿಗಳು ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂಬುದನ್ನು ಹುಡುಕಿ ತೆಗೆಯುತ್ತಾರೆ.

ಯುವ ತಲೆಮಾರಿಗೆ ಇಂಥ ಲೇಖನಗಳು ತಲುಪಬೇಕು.

ಈ ಪುಸ್ತಕವು ಇವತ್ತು ನಾವು ಗಮನ ಹರಿಸಲೇ ಬೇಕಾದ ಹಲವು ಸಂಗತಿಗಳ ಬಗ್ಗೆ ಮಾಹಿತಿ ನೀಡುತ್ತದೆ. ೨೧ನೇ ಶತಮಾನದ ಮೂರನೇ ದಶಕದಲ್ಲಿ ಕಾಲಿಟ್ಟಿರುವ ನಮಗೆ ಇಂಥ ಪುಸ್ತಕವೊಂದು ಅಗತ್ಯವಾಗಿ ಬೇಕಾಗಿತ್ತು. ಅದನ್ನು ಸಾಧ್ಯಮಾಡಿದ ಡಾ. ಗಿರಿಜಾ ಶಾಸ್ತ್ರಿಯವರಿಗೆ ಅಭಿನಂದನೆಗಳು.

ಪ್ರತಿಗಳಿಗೆ : 8976541989 / 9342274331

‍ಲೇಖಕರು avadhi

October 7, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: