ಪಿ ಪಿ ಉಪಾಧ್ಯ
—–
ಬದುಕೆಂದರೆ ಬಲು ಬೆಲೆ ಬಾಳುವ ವಸ್ತು
ನಶಿಸದಂತೆ ನೋಡಿಕೊಳ್ಳಿ
ಬದುಕೆಂದರೆ ಅದು ಬಳಕೆಯ ವಸ್ತು.
ಹಾಳಾಗದಂತೆ ಕಾಯ್ದುಕೊಳ್ಳಿ
ಬದುಕುವುದೆಂದರೆ ಸುಲಭವೇನಲ್ಲ
ಕಲಿಯಬೇಕು ಒಲಿಯಬೇಕು
ಒಲಿಸಬೇಕು ಕಲಿಸಬೇಕು.
ಒಲುಮೆಯಿಂದ ಇರಲೇಬೇಕು.
ಬದುಕೆಂದರೆ ಅದೊಂದು ಕಲೆ
ಕಲಿಯಲೆಷ್ಟು ಕಾಲ ಬೇಕು…
ಉಳಿಸಲೆಷ್ಟು ಕಷ್ಟ ಪಡಬೇಕು
ಹುಟ್ಟಿನಿಂದ ಸಾಯೋವರೆಗೂ
ಕಲಿತು ಕಲಿತು ಸುಸ್ತು
ಕೊನೆಗೂ ಅಂತ್ಯವಿಲ್ಲ ಕಲಿಕೆಗೆ.

ಅಂತ್ಯವಿದೆ ಈ ಬದುಕಿಗೆ
ನಾನು ನಮ್ಮವರೆಲ್ಲ ನಿಜವೇ
ಬದುಕಿರುವವರೆಗೆ ಮಾತ್ರ
ಬದುಕು ಮುಗಿಯಿತೆಂದ ಕ್ಷಣವೇ
ನೀವೂ ಮಾಯ ಅವರೂ ಮಾಯ
ಬೇಕೆನ್ನುವ ಆಸೆಯೂ ಮಾಯ…!
ಎಲ್ಲ ತಿಳಿದ ನಮಗೆ ನಿಮಗೆ
ಎಲ್ಲಿದೆ ಆಶ್ಚರ್ಯ.. ಎಲ್ಲಿದೆ ವಿಸ್ಮಯ..?
ಅದುವೆ ನಮ್ಮ ಜೀವನ
ಅದುವೇ ನಮ್ಮ ಬದುಕು..!!
ಆಹಾ…
ಮಿತಿಯಿಲ್ಲದ ಕ್ರೂರ ವಿಧಿಯೇ
ನಡೆಸುವುದು ಜೀವನ.
ಅದುವೇ ನಿಯಮ ಜಗದಲಿ..
ನಾವು ನೀವು ಬದುಕಿಕೊಂಡ ಬದುಕಲಿ
ಎಲ್ಲ ತಿಳಿದು ಬದುಕುವವ
ಬದುಕುತ್ತಲೇ ಸಾಯುವವ
ಅವನೇ ಬುದ್ಧಿವಂತ…
ಅವನೇ ಶೀಲವಂತ…
0 ಪ್ರತಿಕ್ರಿಯೆಗಳು