ಸುಗ್ಗಿ ಸಂಭ್ರಮ
ಸಂಕ್ರಾಂತಿಯಂದು ನನ್ನ ತಾಯಿ ಎಲೆಯಡಿಕೆ ಬಾಳೆಹಣ್ಣಿನೊಂದಿಗೆ ಎಳ್ಳು ಬೆಲ್ಲ, ಅವರೆಕಾಯಿ, ಕಬ್ಬು, ಸಿಹಿ ಗೆಣಸು, ಕಡಲೆಕಾಯಿ, ಬೋರೆ ಹಣ್ಣುಗಳನ್ನು ಹೊಸ ಐದು ಮಡಕೆಗಳಲ್ಲಿಟ್ಟು ಪೂಜೆ ಮಾಡುತ್ತಿದ್ದರು.
ಭೂತಾಯಿಯ ಸಮೃದ್ಧ ಸಿರಿವಂತಿಕೆಯನ್ನು ಭೌತಿಕವಾಗಿ ಅನುಭವಿಸಿ ಸಂಭ್ರಮಿಸುವ ಸಿರಿಸುಗ್ಗಿ ಪರಿಸರ ಇಂದು ಮತ್ತೆ ನೆನಪಿಗೆ ಬಂತು.
ಸಿಹಿ ಪೊಂಗಲು, ಎಳ್ಳು ಹಾಕಿದ ತಟ್ಟಿದ ಅಕ್ಕಿ ರೊಟ್ಟಿ ಮತ್ತು ಎಲ್ಲ ಬಗೆಯ ತರಕಾರಿ ಬಳಸಿ ಮಾಡಿದ ಗಿಜ್ಜಿ ಪದಾರ್ಥ ಈ ಹಬ್ಬದ ವಿಶೇಷ.
ಈ ಬಾರಿ ಇದೇ ಸಂದರ್ಭಕ್ಕೆ ಸರಿಯಾಗಿ ಭಾರತೀಯ ವಿವಿಧ ಭಾಷೆಗಳಿಂದ ಇಂಗ್ಲಿಷ್ ಮೂಲಕ ಆಗಾಗ ಅನುವಾದ ಮಾಡಿದ್ದ ಮೂವತ್ತೆರಡು ಕತೆಗಳೊಂದಿಗೆ ಸಿಂಗರ್ ನ ಕತೆಯೊಂದು ಕೂಡಿರುವ ಅನುವಾದ ಕತೆಗಳ ಸಂಕಲನ ‘ಹಸಿರು ನಿಶಾನೆ’ ಹೆಸರಿನಲ್ಲಿ ಹೊರಬಂದಿದೆ.
ಇದು ಈ ಹಬ್ಬದ ಸಂತಸದ ಸಂಗತಿ. ಇವೆಲ್ಲವೂ ಲಿಂಗ ಸಂಬಂಧಿ ಕತೆಗಳಾಗಿವೆ.
ಈ ಪುಸ್ತಕವನ್ನು ಮೈಸೂರಿನ ‘ಸಾಹಿತ್ಯ ಸುಧೆ’ ಪ್ರಕಾಶನ ಪ್ರಕಟಿಸಿದೆ.
ಇವರ ಮೊಬೈಲ್ ಸಂಖ್ಯೆ ೯೩೪೨೨ ೭೪೩೩೧.
ಓದುಗ ಮಿತ್ರರು ಈ ಅನುವಾದ ಕತೆಗಳ ಕುರಿತು ಪ್ರತಿಕ್ರಿಯಿಸುವಿರೆಂದು ಭಾವಿಸುತ್ತೇನೆ.
ಇದು ಹೊಸ ವರುಷದ ಹೊಸ ಕೊಡುಗೆಯಾಗಲೆಂದು ಆಶಿಸುವೆ.
-ಶ್ರೀಧರ ಪಿಸ್ಸೆ
0 ಪ್ರತಿಕ್ರಿಯೆಗಳು