ಶಿವಪ್ರಸಾದ ಪಟ್ಟಣಗೆರೆ
ತಾಯಂದಿರ ದಿನವಂತೆ ಎಲ್ಲರೂ ಅವರವರ ಅಮ್ಮಂದಿರ ಬಗ್ಗೆ ಬರೆಯುತ್ತಲೇ ಇದ್ದಾರೆ. ಏನು ಮಾಡೋದು ನನಗೂ ತಾಯೆಂಬುವವಳು ಒಬ್ಬಳೇ ಇದ್ದಿದ್ದರೆ ಚನ್ನಾಗಿರುತ್ತಿತ್ತು. ಈಗ ನಾನು ಹೇಳ ಹೊರಟಿರೋದು ಪಾಲಾಕ್ಷಮ್ಮ ಎಂಬ ಅಮ್ಮನ ಕತೆ. ನಾನು ಕೆಲಸ ಮಾಡುವ ಕಾಲೇಜಿನಲ್ಲಿ ಕಸಗುಡಿಸುತ್ತಿದ್ದಳು. ಸುಮಾರು ವರ್ಷದಿಂದ ಕೆಲಸ ಮಾಡುತ್ತಿದ್ದಳಂತೆ ಇತ್ತೀಚೆಗಷ್ಟೆ ಗಂಡ, ಮಕ್ಕಳೆಲ್ಲ ಕೊರೋನಾಗೆ ಹೀನಾಯ ಸತ್ತು ಹೋದರು.
ಖಾಸಗಿ ಸಂಸ್ಥೆಗಳು ಈ ಜನರನ್ನ ತುಚ್ಚವಾಗಿ ನಡೆಸಿಕೊಳ್ಳುತ್ತಾರೆ. ಒಂದು ದಿನ ಈಕೆ ಆ ಕಚಡಾ ಜನಗಳಿಗೆ “ನಿನ್ನೊಂತೋರ್ ನೂರ್ ಜನಕ್ಕೆ ಊಟ ಹಾಕ್ತೀನಿ ಕನೋ ಹೋಗಲೋ” ಎಂದು ಹವಾ ಹಾಕಿ ಹೊರಟೇ ಬಿಟ್ಟಿದ್ದಳು ನನಗೆ ಅವಳ ಬದುಕಿನ ಧೈರ್ಯ ತುಂಬಾ ಇಷ್ಟವಾಯ್ತು. ಎಷ್ಟಾದರೂ ಅವಳು ತಾಯಲ್ಲವೇ… ಕಳೆದ ೨ ವಾರದಿಂದ ಭಾನುವಾರ ಮಾತ್ರ ಸಂತೆಯಲ್ಲಿ ೨ ತಾಸು ಅವಳೊಂದಿಗೆ ತರಕಾರಿ ಮಾರಲು ಕುಳಿತಿರುವೆ… ಈ ದಿನ ೨ ಇಡ್ಲಿ ಕೊಡಿಸಿದಳು ಯಾಕೋ ಕಣ್ಣು ತೋಯಿಸಿತು…
(ಅವಳು ನನ್ನಂತೆ ಹೆಚ್ಚಾಗಿ ಪೋಟೋ ಎಂದರೆ ಉರಿದು ಬೀಳುತ್ತಾಳೆ.)
0 Comments