**
ವಿಶ್ವವಿಖ್ಯಾತ ಸರೋದ್ ವಾದಕರಾದ ಪಂಡಿತ್ ತಾರಾನಾಥ್ ಈ ದೇಶ ಕಂಡ ಅಪ್ರತಿಮ ಸಂಗೀತಗಾರರು, ಸೃಜನಶೀಲ ಗುರುಗಳು ಹಾಗೂ ಅತ್ಯಂತ ಮೇಧಾವಿ ಸಾಹಿತಿ ಹಾಗೂ ವಿಮರ್ಶಕರು. ಸಂಗೀತದ ಮೂಲಕವೇ ಬಹುತ್ವ, ಸಮಾನತೆ, ಹಾಗೂ ಮಾನವ ಪ್ರೀತಿಯನ್ನು ಪಸರಿಸುತ್ತಿದ್ದ ಅನನ್ಯ ಕಲಾವಿದರು. ಭಾರತ ಸರ್ಕಾರದ ಪದ್ಮಶ್ರೀ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗಿದ್ದವರು. ಇದೇ ಆಗಸ್ಟ್ ೧೧ರಂದು ಮೈಸೂರಿನ ಕಲಾಮಂದಿರದಲ್ಲಿ ಪಂಡಿತ್ ರಾಜೀವ್ ತಾರಾನಾಥ್ ಮೆಮೋರಿಯಲ್ ಟ್ರಸ್ಟ್ ಅವರ ನೆನಪುಗಳನ್ನು ಹಂಚಿಕೊಳ್ಳುವ ಕಾರ್ಯಕ್ರಮವನ್ನು ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದೆ.
ಶ್ರೀ ಅಂಶನ್‌ಕುಮಾರ್ ನಿರ್ದೇಶನದ ರಾಜೀವ್ ನೆನಪಿನ ಚಿತ್ರಗಳು ಕಿರು ಸಾಕ್ಷ್ಯಚಿತ್ರದ ಆಯ್ದ ಭಾಗಗಳು. ಕಾರ್ಯಕ್ರಮದಲ್ಲಿ ನೆನಪುಗಳನ್ನು ಹಂಚಿಕೊಳ್ಳುತ್ತಾರೆ. ಡಾ ವಿಜಯಾ ಬೆಂಗಳೂರು, ಪಂಡಿತ್ ನಯನ್ ಘೋಷ್ ಕಲ್ಕತ್ತಾ, ಡಾ ಜಯಂತ್ ಕಾಯ್ಕಿಣಿ ಬೆಂಗಳೂರು ಮತ್ತು ವಿದ್ವಾನ್ ಟಿ ಎಂ ಕೃಷ್ಣ ಚೆನ್ನೈ. ಡಾ ಧರಣೀದೇವೀ ಮಾಲಗತ್ತಿ, ನಿರ್ದೇಶಕರು ಕನ್ನಡ ಸಂಸ್ಕೃತಿ ಇಲಾಖೆ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುತ್ತಾರೆ. ಪಂಡಿತ್ ರಾಜೀವ್ ತಾರನಾಥ್ ನಿರ್ದೇಶನದ ’ಕುರಿ’ ನಾಟಕದ ಹಾಡುಗಳನ್ನು ಪ್ರಸ್ತುತ ಪಡಿಸುತ್ತಾರೆ ಶ್ರೀ ಜನಾರ್ದನ್, ವಿಶ್ರಾಂತ ನಿರ್ದೇಶಕರು, ರಂಗಾಯಣ, ಮೈಸೂರು. ಪಂಡಿತ್ ನಯನ್ ಘೋಷ್ ಸಿತಾರ್‌ವಾದನದ ಮೂಲಕ ನಾದನಮನ ಸಲ್ಲಿಸುತ್ತಾರೆ. ಅವರಿಗೆ ತಬಲಾ ಸಹಕಾರ ಪಂಡಿತ್ ಇಷಾನ್ ಘೋಷ್. ಕಾರ್ಯಕ್ರಮ ಸಂಜೆ ೫ ಗಂಟೆಗೆ. ದಯವಿಟ್ಟು ನೀವು ಬನ್ನಿ ಮತ್ತು ನಿಮ್ಮ ಗೆಳೆಯರನ್ನು ಆತ್ಮೀಯರನ್ನು ಕರೆತನ್ನಿ.
**
0 ಪ್ರತಿಕ್ರಿಯೆಗಳು