ಮರುಳಸಿದ್ದಪ್ಪ ದೊಡ್ಡಮನಿ
ಗದಗ ಜಿಲ್ಲೆಯ ಹುಲಕೋಟಿಯವರು. ಕವಿತೆ, ಗಜಲ್, ಶಾಯಿರಿ ಮತ್ತು ಹನಿಗವಿತೆ ಬರವಣಿಗೆಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಎಲ್‌ಐಸಿಯಲ್ಲಿ ಉದ್ಯೋಗಿಯಾಗಿದ್ದಾರೆ.
ಖಾಲಿ ಹೃದಯದೊಳಗೆ ಕನಸು ಬಿತ್ತಿದವಳು ನೀನು
ಬರಡು ಬಿದ್ದ ಎದೆಯೊಳಗೆ ಹಸಿರು ಬೆಳೆದವಳು ನೀನು
ನೂರು ಜಟಿಲತೆಯ ಜಾಡ್ಯವ ದಾಟಿ ಬಂದು
ಹೊಸ ಹೊಳವಿನ ಬೆಳಕು ತಂದವಳು ನೀನು
ತರು ಲತೆಗಳೆಲ್ಲ ಮುಖ ಸವರಿ ಮುದ್ದಿಸಿವೆ
ಬಾನಾಡಿಗಳ ಕಣ್ಣಂಚಲಿ ನಿನ್ನ ಬಿಂಬ ತುಂಬಿದವಳು ನೀನು
ಬರಿ ಕಗ್ಗತ್ತಲ ದಾರಿಗೆ ಕಂದಿಲ ಬೆಳಕಾಗಿರುವೆ
ತೈಲದಂತೆ ಧಹಿಸಿ ಕೊಂಡು ಧರೆಗೆ ಬೆಳಕು ಹಂಚಿದವಳು ನೀನು
ಹುಸಿ ನುಡಿವವರ ಮದ್ಯೆ ಮರುಳನ ಅಕ್ಕರೆ ಇದೆ
ಅಕ್ಕರೆಯ ಸವಿ ಮಾತಿಗೆ ಕಾದವಳು ನೀನು
0 ಪ್ರತಿಕ್ರಿಯೆಗಳು