ಸುಧಾ ಚಿದಾನಂದಗೌಡ
**
ಮೊನ್ನೆ ಖಾಲಿತನವಿತ್ತು ಅಲ್ಲಿ
ನಿನ್ನೆ ಒಂದಿಷ್ಟು ಹಸಿರು ನೆಟ್ಟೆ
ಇಂದು ಕೆಂಪು, ಬಿಳಿ, ಗುಲಾಬಿ ಹೂ
ಜೊತೆಗೊಂದಿಷ್ಟು ನೀಲಿ,ಕಪ್ಪುಚಿಟ್ಟೆ
ಖಾಲಿಯು ನಳನಳಿಸಿ ತುಂಬಿಕೊಂಡಿದೆ
ಹೊಸ ಸಂಭ್ರಮ ಸಡಗರವ
ಹಮ್ಮಿಕೊಂಡಿದೆ
ಚಂದ್ರನಿಲ್ಲವೀ ರಾತ್ರಿಯಲಿ ಎಂದೇಕೆ
ಕೊರಗು
ನಾಳೆ ಜಗಮಗಿಸುವ ಸೂರ್ಯನ
ಬೆಳಕಿನಲುಗು
ಹೊಳೆಹೊಳೆಯುವ ಬಣ್ಣಗಳೋ
ರಕ್ತಕೀವಿನ ಹುಣ್ಣುಗಳೋ
ಯಾವುದೂ ಸ್ಥಿರವಲ್ಲ
ಒಳ್ಳೆಯ ದಿನಗಳ ನೆರಳಿನಲಿ
ಕಡು ಕಷ್ಟಗಳೂ ಕಳೆದುಹೋಗುತ್ತದೆ
ಜಗದ ನಿಯಮವಿದು, ಸಹನೆಯಿರಲಿ
ನಿನ್ನೆ ವಸಂತ ಕವಿಗೋಷ್ಠಿಯಲ್ಲಿ ನಿಮ್ಮ ಕವನದ ಕೆಲವು ಸಾಲುಗಳನ್ನು ಕೋಟ್ ಮಾಡಿದೆ