‘ನಾವೂ ಇತಿಹಾಸ ಕಟ್ಟಿದೆವು’ ಬಿಡುಗಡೆ…

ಮರಾಠಿ ಲೇಖಕಿಯರಾದ ಊರ್ಮಿಳಾ ಪವಾರ್ ಮತ್ತು ಮೀನಾಕ್ಷಿ ಮೂನ್ ಅವರು ಬಾಬಾಸಾಹೇಬ್ ಅಂಬೇಡ್ಕರರ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಮಹಿಳೆಯರ ಕುರಿತು ಅಧ್ಯಯನ ಮಾಡಿ ಮರಾಠಿಯಲ್ಲಿ ‘ಆಮ್ಹಿಹಿ ಇತಿಹಾಸ್ ಘಡವಲಾ’ ಎಂಬ ಪುಸ್ತಕವನ್ನು ಪ್ರಕಟಿಸಿದ್ದರು. ಅದೇ ಪುಸ್ತಕವನ್ನು ಲೇಖಕಿ ವಂದನಾ ಸೋನಾಲ್ಕರ್ ಅವರು ‘We also made history’ ಅನ್ನುವ ಹೆಸರಿನಲ್ಲಿ ಇಂಗ್ಲಿಷಿಗೆ ಅನುವಾದಿಸಿದ್ದರು. ಇದೇ ಪುಸ್ತಕವನ್ನು ಕನ್ನಡದ ಹಿರಿಯ ಲೇಖಕಿ ದು.ಸರಸ್ವತಿ ಅವರು ಕನ್ನಡಕ್ಕೆ
‘ನಾವೂ ಇತಿಹಾಸ ಕಟ್ಟಿದೆವು’ ಅನ್ನುವ ಹೆಸರಿನಲ್ಲಿ ಅನುವಾದಿಸಿದ್ದಾರೆ.

ಹೊನ್ನಾವರದ ಕವಲಕ್ಕಿಯ ‘ಕವಿ ಪ್ರಕಾಶನ’ ಈ ಪುಸ್ತಕವನ್ನು ಪ್ರಕಟಿಸಿದ್ದು, ದಿನಾಂಕ: 04.09.2022 ನೇ ಭಾನುವಾರ ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಗಾಂಧಿಭವನದಲ್ಲಿ ಈ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಪುಸ್ತಕವನ್ನು ಲೋಕಾರ್ಪಣೆ ಮಾಡಲು ಬಾಬಾಸಾಹೇಬ್ ಅಂಬೇಡ್ಕರರ ಮೊಮ್ಮಗಳಾದ ಶ್ರೀಮತಿ ರಮಾಬಾಯಿ ಅಂಬೇಡ್ಕರ್ ಆನಂದ್ ತೇಲ್ತುಂಬ್ಡೆ ಅವರು ಆಗಮಿಸುತ್ತಿದ್ದಾರೆ. ಅವರೊಂದಿಗೆ ಬಾಬು ಜಗಜೀವನರಾಮ್ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ವೆಂಕಮ್ಮನವರು ಕೈಜೋಡಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ದಲಿತ ಹೋರಾಟಗಾರ ಶ್ರೀ ಎನ್.ವೆಂಕಟೇಶ್ ವಹಿಸಲಿದ್ದು, ಅಕ್ಕಮಹಾದೇವಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ.ಸಬೀಹಾ ಭೂಮಿಗೌಡ ಹಾಗೂ ಸಾಹಿತಿ, ಚಿಂತಕರಾದ ಪೀರ್ ಭಾಷಾ ಪುಸ್ತಕವನ್ನು ಕುರಿತು ಮಾತನಾಡಲಿದ್ದಾರೆ.

ಪ್ರಕಾಶಕಿ ಡಾ.ಎಚ್.ಎಸ್.ಅನುಪಮಾ ಮತ್ತು ಅನುವಾದಕಿ ಡಾ.ದು.ಸರಸ್ವತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ ಹಾಗೂ ಡಾ.ಕೆ.ವಿ.ನೇತ್ರಾವತಿ, ಅಶ್ವಿನಿ ಬೋಧ್, ಭರತ್, ಮಲ್ಲಮ್ಮ ಕಂಬಾರ್, ರೂಮಿ ಹರೀಶ್, ಕೆಸ್ತಾರ ಮೌರ್ಯ ಹಾಗೂ ವಿ ಎಲ್ ನರಸಿಂಹಮೂರ್ತಿ ಪುಸ್ತಕ ಕುರಿತು ಯುವ ಸ್ಪಂಧನೆ ನೀಡಲಿದ್ದಾರೆ.

‍ಲೇಖಕರು Admin

September 2, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: