ಬದ್ಧತೆಯಿಂದ ಪ್ರತಿ ವರ್ಷ ಮಾಡ್ತಾ ಇರೋ ಕಾರ್ಯಕ್ರಮ ” ಅಮ್ಮ ಪ್ರಶಸ್ತಿ’.
ನವೆಂಬರ್ 26 ಫಿಕ್ಸ್ ಡೇಟ್
ಸಂಜೆ 5.30 ಫಿಕ್ಸ್ ಟೈಮ್
ಶಾಂಭವಿ ರಂಗಮಂಟಪ ಫಿಕ್ಸ್ ಸ್ಥಳ
ಸಾನಿಧ್ಯ ನಾಲವಾರ ಶ್ರೀಗಳದ್ದೆ..
ಶಾಸಕರೇ ಅಧ್ಯಕ್ಷತೆ ..ಇದೂ ಫಿಕ್ಸ್.
.
ಎಂತಹದ್ದೆ ಕಾರಣ ಎದುರಾದರೂ ಇವ್ಯಾವು ಬದಲಾಗಿಲ್ಲ.
ಒಂದು ಸಲ ನ.25 ರಾತ್ರಿ ನಮ್ಮ ಮನೆಯಲ್ಲಿ ಚಿಕ್ಕಪ್ಪ ನಿಧನರಾದ್ರು.26 ರಂದು ಮಧ್ಯಾಹ್ನ 3 ರೊಳಗೆ ಪ್ರಕ್ರಿಯೆ ಮುಗಿಸಿ, ಸಂಜೆಗೆ ಕಾರ್ಯಕ್ರಮ ನಡೆಸಲಾಯಿತು. ಸೂತಕ ಕಾರಣಕ್ಕಾಗಿ ನಾನೂ ಸೇರಿ ನಮ್ಮ ಕುಟುಂಬದರು ಭಾಗಿಯಾಗಿಲ್ಲ. ಆದರೆ ಪ್ರತಿಷ್ಠಾನದ ಪ್ರಮುಖರು ಮತ್ತು ಊರಿನ ಸಾಹಿತ್ಯಾಸಕ್ತರು ಸೇರಿ ‘ ಇದು ನಮ್ಮೂರಿನ ಕಾರ್ಯಕ್ರಮ. ಅಮ್ಮ ನಮಗೆಲ್ಲ ಅಮ್ಮನೇ. ನಿಲ್ಲಬಾರದು ಎಂದು ಕಾರ್ಯಕ್ರಮ ನಡೆಯಿತು’ ..
ಹೀಗೆ ಬದ್ಧತೆಯ ಕಾರ್ಯಕ್ರಮ ಮಾಡಲಾಗುತ್ತೆ. ಕಾಟಾಚಾರದ್ದಲ್ಲ. ಇದರಲ್ಲಿ ಪ್ರೀತಿ, ಅಂತಃಕರುಣೆ, ತವರು ಮನೆ ಸನ್ಮಾನವಿದೆ.
ತವರು ಎಂದರೆ, ಅಮ್ಮನದು. ಹಾಗೆ ಕನ್ನಡದ ಮೊದಲ ಲಾಕ್ಷಣಿಕ ಗ್ರಂಥ ‘ ಕವಿರಾಜಮಾರ್ಗ’ .. ತಾಲೂಕು ಇದೆಯಲ್ಲವೇ
-ಮಹಿಪಾಲರೆಡ್ಡಿ ಮುನ್ನೂರ್
0 ಪ್ರತಿಕ್ರಿಯೆಗಳು