ನಾನಿನ್ನೂ ಅದೇ ಗುಂಗಿನಲ್ಲಿದೇನೆ..

 

ಬಿ ಎ ಸನದಿ ಅವರಿಗೆ ೮೨ ತುಂಬಿದಾಗ ಖ್ಯಾತ ನಾಟಕಕಾರ

ಗೋಪಾಲ ವಾಜಪೇಯಿ ಅವರು ಬರೆದಬರಹ

ನಾನಿನ್ನೂ ಅದೇ ಗುಂಗಿನಲ್ಲಿದೇನೆ…
ಎಷ್ಟು ಸರಳ ಬದುಕು, ಉನ್ನತ ವಿಚಾರ…!
ಎಳ್ಳಷ್ಟೂ ತೋರಿಕೆಯಿಲ್ಲದ, ಆಡಂಬರ ಗೊತ್ತಿರದ ನಡಾವಳಿ.

ಮುಕ್ತವಾಗಿ ನಕ್ಕು ಬಿಟ್ಟರೆ ಅದು ಅವರ ತಲೆಗೂದಲನ್ನೂ ಮೀರಿಸುವಷ್ಟು ಶುಭ್ರ ನಗೆ.
ಅವರು ಬಿ. ಎ. ಸನದಿ. ಈ ಸಾಲಿನ ಪಂಪ ಪ್ರಶಸ್ತಿ ವಿಜೇತ ಕವಿ.

ಹೃದಯದ ತುಂಬ ಅಪಾರ ಮಾನವ ಕಾಳಜಿ ತುಂಬಿಕೊಂಡ ಸಂವೇದನಶೀಲ.
ಎರಡು ದಶಕಗಳ ಕಾಲ ಮುಂಬಯಿ ಆಕಾಶವಾಣಿಯ ಉನ್ನತ ಹುದ್ದೆಯಲ್ಲಿದ್ದವರು.
ಆಕಾಶವಾಣಿಯನ್ನು ಜನಪರವನ್ನಾಗಿ ಮಾಡಿ, ಅಲ್ಲಿ ಕನ್ನಡದ ‘ಹೂಮಳೆ’ ಸುರಿಸಿದವರು.

ಇಂಥ ಮಾನವತಾವಾದಿ ಕವಿಯ ಸಂದರ್ಶನ ಈ ಸಂಜೆ ಚಂದನದಲ್ಲಿ ಪ್ರಸಾರವಾಯಿತು.
ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಕಡಲತಡಿಯ ಕುಮಟಾದಲ್ಲಿ ವಾಸಿಸಿರುವ ಸನದಿಯವರ
ಈ ಸಂದರ್ಶನ ಒಂದು ರೀತಿಯಿಂದ ಅವರ ಬದುಕಿನ ಝಲಕನ್ನೂ ಸಾಹಿತ್ಯದ ಸೆಳಕನ್ನೂ ತೋರಿಸಿತು.
”ಕಾವ್ಯ ಮಾನನಿಷ್ಠವಾಗಬೇಕು, ಜಾತಿನಿಷ್ಠವಾಗಲಿ, ಧರ್ಮನಿಷ್ಠವಾಗಲಿ ಆಗಕೂಡದು,” ಎಂಬ ಅವರ ಮಾತು
ಮತ್ತೆ ಮತ್ತೆ ಮೆಲಕು ಹಾಕುವಂಥದು.

ಮೂರುವರೆ ದಶಕಗಳಿಂದ ನನ್ನನ್ನು ಕಿರಿಯ ತಮ್ಮನ ಹಾಗೆ ನೋಡಿಕೊಂಡು ಬಂದ ಹಿರಿಯಣ್ಣ ಸನದಿಯವರು ಇದೀಗ ೮೩ನೆಯ ವರ್ಷದಲ್ಲಿ ಮುನ್ನಡಿಯಿಡುತ್ತಿದ್ದಾರೆ.
ಅವರು ಶತಾಯುಷಿಯಾಗಲಿ.

‍ಲೇಖಕರು Admin

March 31, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Beeru Devaramani

    ಒಂದು ಸುಂದರ ಆರ್ಟಿಕಲ್ ಓದಿ ಸಂತೋಷ ಆಯ್ತು ಗೋಪಾಲ್ ವಾಜಪೇಯಿ ಸರ್..
    ಬಿ ಎ ಸನದಿ ಕವಿಯವರು ಶತಾಯುಷಿಯಾಗಲಿ.
    ಅವರು ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಇನ್ನಷ್ಟು ಕಾಣಿಕೆ ನೀಡಲಿ ಮತ್ತು ಅವರ ಆರೋಗ್ಯ ವೃದ್ಧಿಸಲಿ ಸದಾ ಚೇತನದಿಂದಿರಲಿ.

    ಪ್ರತಿಕ್ರಿಯೆ
  2. lalitha sid

    ಈ ಸಂದರ್ಶನವನ್ನು ನೋಡಿದೆ. ಬಹಳ ಚೆನ್ನಾಗಿ ಚಿತ್ರೀಕರಿಸಲ್ಪಟ್ಟಿದೆ. ಸನದಿ ಸರ್ ಅವರ ಮುಗ್ಧತೆ ಅವರ ಪ್ರತಿ ನೇರ ಉತ್ತರದಲ್ಲೂ ಎದ್ದು ತೋರುತ್ತಿತ್ತು.

    ಪ್ರತಿಕ್ರಿಯೆ
  3. ರಾಜೀವ ನಾರಾಯಣ ನಾಯಕ

    ಮುಗ್ಧತೆಯೇ ಸನದಿಯವರ ಜೀವ ಮತ್ತು ಕಾವ್ಯದ್ರವ್ಯ ಅನಿಸುತ್ತದೆ. ಮುಂಬಯಿಯಂಥ ಯಾಂತ್ರಿಕ ಬದುಕಿನಲ್ಲೂ ಅವರು ಅಂಥ ಮುಗ್ಧತೆಯನ್ನು ಕಾದುಕೊಂಡಿದ್ದು ಪ್ರಜ್ಞಾಪೂರ್ವಕವೇ ಇದ್ದೀತು! ಒಂದೆರಡು ತಿಂಗಳ ಹಿಂದೆ ಕುಮಟಾದಲ್ಲಿಯ ಅವರ ಮನೆಗೆ ಹೋದಾಗ ಹತ್ತನೇ ಕ್ಲಾಸಲ್ಲಿರುವ ನನ್ನ ಮಗ(ಆಕಾಶ) ಸನದಿಯವರ ಮತ್ತು ಶ್ರೀಮತಿ ಸನದಿಯವರ ಭಾವಚಿತ್ರಗಳನ್ನು ತೆಗೆದಿದ್ದ. ಅವನು ಕ್ಲಿಕ್ಕಿಸಿದ ಪ್ರತಿ ಫ್ರೇಮಿನಲ್ಲೂ ಸನದಿಯವರ ಹರ್ಷಚಿತ್ತ ಮತ್ತು ಸರಳತೆ ಸುಂದರವಾಗಿ ಅಚ್ಚಾಗಿತ್ತು.
    ಕುಮಟಾ ಬೀಚ್ ಮೇಲಿನ ಸಂದರ್ಶನದ ಚಿತ್ರಗಳು ಖುಶಿಕೊಟ್ಟವು.

    ಪ್ರತಿಕ್ರಿಯೆ
  4. Vihi wadawadagi

    Prati chitradallu sanadiyavara saralate maanavate eddu kaanuttade naave dhanyaru Ee mahaneeyara naadalli janisiddakke

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: