**
ಕರ್ನಾಟಕ ನಾಟಕ ಅಕಾಡೆಮಿಯು ದಿನಾಂಕ 03.10.2024 ರಿಂದ 07.10.2024 ರ ವರೆಗೆ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳಿ, ಶಿವಮೊಗ್ಗ ಜಿಲ್ಲೆಯಲ್ಲಿ “ರಾಜ್ಯಮಟ್ಟದ ನಾಟಕ ರಚನಾ ಶಿಬಿರ”ವನ್ನು ಆಯೋಜಿಸಿದೆ. ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಮತ್ತು ರಂಗಭೂಮಿಯಲ್ಲಿ ಹೆಸರು ಮಾಡಿರುವ 18 ರಿಂದ 40 ವರ್ಷದೊಳಗಿನ 20 ಯುವ ಬರಹಗಾರರಿಗೆ ಈ ಶಿಬಿರದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ನಾಡಿನ ಶ್ರೇಷ್ಠ ನಾಟಕಕಾರರು ಹಾಗೂ ಕಲಾವಿದರು ಈ ಶಿಬಿರದಲ್ಲಿ ಭಾಗವಹಿಸಿ ಮಾರ್ಗದರ್ಶನ ಮಾಡಲಿದ್ದಾರೆ.
ಶಿಬಿರದಲ್ಲಿ ಭಾಗವಹಿಸಲು ಇಚ್ಛಿಸುವವರು ದಿನಾಂಕ 17.09.2024 ರೊಳಗೆ ಈ ಕೆಳಗಿನ ವಿಳಾಸಕ್ಕೆ ವಿವರದೊಂದಿಗೆ ಅರ್ಜಿಯನ್ನು ಕಳುಹಿಸಬಹುದು. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು.
ಶಿಬಿರಾರ್ಥಿಗಳ ನೋಂದಣಿ ಮತ್ತು ಪ್ರವೇಶ ಉಚಿತವಾಗಿದ್ದು, ರಂಗಭೂಮಿ ಕ್ಷೇತ್ರದ ಎಲ್ಲಾ ಯುವ ಬರಹಗಾರರು ಭಾಗವಹಿಸಬೇಕಾಗಿ ಕೋರಿದೆ.
ಅರ್ಜಿ ಕಳಿಸಬೇಕಾದ ವಿಳಾಸ:
ಶ್ರೀಮತಿ ನಿರ್ಮಲಾ ಮಠಪತಿ
ರಿಜಿಸ್ಟ್ರಾರ್
ಕರ್ನಾಟಕ ನಾಟಕ ಅಕಾಡೆಮಿ
ಕನ್ನಡ ಭವನ, ನೆಲ ಮಹಡಿ, ಚಾಲುಕ್ಯ ವಿಭಾಗ,
ಜೆ. ಸಿ. ರಸ್ತೆ, ಬೆಂಗಳೂರು.
ದೂ. 080-22244176, 22237484, ಮೊಬೈಲ್ – 9481327867
0 ಪ್ರತಿಕ್ರಿಯೆಗಳು