ನಾಗರಾಜ್ ಕಾಂಬಳೆ
ನಿನಗೆ ಅರ್ಥವಾಗುವುದಿಲ್ಲ
ತಕ್ಷಣಕ್ಕೆ ಯಾವುದೂ ಹೊಳೆಯುವುದಿಲ್ಲ
ನೆನಪಾಗುವುದೂ ಇಲ್ಲ
ಬದುಕಿನ ದಾರಿ ಅಡ್ಡಾದಿಡ್ಡಿ
ಬಂದೂಕಿನದ್ದು ಹಾಗಿಲ್ಲ
ಗುಂಡು ಹಾರಿಸುವ ಮುನ್ನ
ಜಾಗ್ರತೆ
ಕಾಣಲಾರದ ಹೊಡೆತಗಳನ್ನು ತಡೆಯುವುದು ಹೇಗೆ?
ನಿನ್ನ ಮಾತಿಗಿಂತಲೂ ನಿನ್ನ ಕಣ್ಣೀರು ಮಾಡುವ ಗಾಯ ಬಹಳ ದೊಡ್ಡದು
ಒಂದೊಂದು ಹನಿ ಬಿದ್ದಷ್ಟು ಹಿಗ್ಗುತ್ತದೆ ಗಾಯದ ವ್ಯಾಪ್ತಿ
ಒಮ್ಮಿಂದೊಮ್ಮೆಗೆ ಏಳುವ ಎದೆನೋವು ತುಂಬಾ ಅಪಾಯಕಾರಿ ಸಖಿ
ಎದೆನೋವಿಗೆ ಔಷಧಿಯ ಉಪಚಾರಕ್ಕಿಂತ
ಪ್ರೇಮದ ಸ್ಪರ್ಶವಿರಲಿ ಸಾಕು

ಕಂಡದ್ದೆಲ್ಲ ಕೇಳಿದ್ದೆಲ್ಲ ಸತ್ಯವಲ್ಲ
ಭೂತ ಬೆನ್ನತ್ತಿದೆ ನೆರಳಿನಂತೆ
ಆಚೆ ಹೋದರೂ ಈಚೆ ನಿಂತರೂ ಹೆದರಿಕೆ
ಮುಂದಿದ್ದರೂ ಇಲ್ಲದಿದ್ದರೂ ನಿಲ್ಲದ ಚಟುವಟಿಕೆ
ಭವಿಷ್ಯದ ವ್ಯಾಖ್ಯಾನ ಯಾರಿಗೂ ಅರ್ಥವಾಗಿಲ್ಲ ಸಖಿ
ಕಣ್ಣಮುಂದಿನ ನಗುವಿಗಿಂತಲೂ
ಬೆನ್ನ ಹಿಂದಿನ ವಿಶ್ವಾಸ ಸಾಕು
ದಾರಿ ಮುಂದಿದೆ
ಆಯ್ಕೆ ಮಾತ್ರ ನಿನ್ನದೇ ಸಖಿ
ಬಂದೂಕಿನದ್ದೋ, ಬದುಕಿನದ್ದೋ..
ಚೆನ್ನಾಗಿದೆ