ನವಿರು ಹಾಸ್ಯದ ‘ಹನಿಮೂನ್’

ಬನಶಂಕರ ಆರಾಧ್ಯ

Voot select ನಲ್ಲಿ ಬಿಡುಗಡೆಯಾಗಿರುವ ನಾಗಭೂಷಣ್ ಹಾಗೂ ಸಂಜನಾ ಆನಂದ್ ನಟನೆಯ ಹನಿಮೂನ್ ವೆಬ್ ಸೀರೀಸ್ ನವಿರು ಹಾಸ್ಯ, ಸುಂದರ ದೃಶ್ಯ, ಉತ್ತಮ ಕಥೆಯೊಂದಿಗೆ ನೋಡಿಸಿಕೊಂಡು ಹೋಗುತ್ತದೆ.

ನಾಗಭೂಷಣ್ ಸಹಜವಾಗಿ ಅಭಿನಯಿಸಿದ್ದಾರೆ. ಸಂಜನಾ ತಾನೊಬ್ಬ ಪ್ರತಿಭಾವಂತ ನಟಿ ಎಂದು ಸಾಬೀತು ಮಾಡಿದ್ದಾರೆ.
ಶಿವರಾಜ್ ಕುಮಾರ್ ಅವರ ಮುತ್ತು ಸಿನಿ ಸರ್ವೀಸಸ್ ಹಾಗೂ ಸಕ್ಕತ್ ಸ್ಟುಡಿಯೋ ನಿರ್ಮಾಣ.

ಎನ್ ಎಸ್ ನಾಗಭೂಷಣ ಅವರದೇ ಕಥೆ ಸಂಭಾಷಣೆ. ನಿರ್ದೇಶನದ ಕ್ರೆಡಿಟ್ ಟೀಮ್ ಗೆ ನೀಡಲಾಗಿದೆ.

(ನಾಗಭೂಷಣ ಮೂಲತಃ ನಂಜನಗೂಡು ತಾಲೂಕು ನಗರ್ಲೆ ಗ್ರಾಮದವರು. ಅವರ ತಾಯಿ ಊರು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಟಗರಪುರ. ಅವರ ಬಾಲ್ಯ ಕಳೆದದ್ದು ಇಲ್ಲೇ. ಚಾಮರಾಜನಗರ ತಾಲೂಕಿನ ಹೊಂಡರಬಾಳು ನವೋದಯ ವಿದ್ಯಾಲಯದ ವಿದ್ಯಾರ್ಥಿ. ಬೆಂಗಳೂರು ಸೇರಿ ಸಿನಿಮಾ ರಂಗದಲ್ಲಿದ್ದರೂ ಚಾಮ್ರಾಜ್ನಗ್ರದ್ ಬಾಸ ಮರ್ತಿಲ್ಲ!)

ಮೊದಲೇ ಹೇಳಿದಂತೆ ನವಿರು ಹಾಸ್ಯ ಬೆರೆತು, ಕೇರಳದ ಸುಂದರ ಹೊರಾಂಗಣದೊಂದಿಗೆ ಸರಣಿ ಸಾಗುತ್ತದೆ.

ನಿರ್ದೇಶನ ಛಾಯಾಗ್ರಹಣಕ್ಕೆ ಹೆಚ್ಚು ಅಂಕ ನೀಡಬಹುದು. ವಾಸುಕಿ ಫೋಟೊಗ್ರಾಫರ್ ನಟನೆ ಮತ್ತು ಸಂಗೀತ ಎರಡರಲ್ಲೂ ಚೇಷ್ಟೆ ಮಾಡಿದ್ದಾರೆ..!
ಸರಣಿ ಎಲ್ಲೂ ಬೋರಾಗದಂತೆ ಸಹಜ ಸನ್ನಿವೇಶಗಳಿಂದ ಕೂಡಿದೆ.
ಡೈಸಿ ಬಳಿ ಹೋದಾಗ ಪ್ರವೀಣ್ ಗೆ ಅವಳು ನೀಡುವ ಸಲಹೆಗಳು ಎಲ್ಲ ಗಂಡ ಹೆಂಡತಿಗೂ ಉಪಯುಕ್ತ.
ಸಂಜನಾ ನಾಗಭೂಷಣರಂತಹ ಗಂಡನನ್ನು ಪಡೆಯಲು ಪುಣ್ಯ ಮಾಡಿದ್ದರು!!

ಆರಂಭದಲ್ಲಿ ಬರುವ ಮದುವೆ ಮನೆಯ ಸನ್ನಿವೇಶಗಳು ನೈಜವಾಗಿವೆ. ನಮ್ಮ ಮೈಸೂರು ಚಾಮರಾಜನಗರ ಕಡೆ ಛತ್ರಗಳಲ್ಲಿ ನಡೆಯುವಂತೆ! ಹೆಣ್ಣು ಗಂಡು ಊಟಕ್ಕೆ ಕೂತಾಗ ಸಿಗೋದು ಬೆಳಿಗ್ಗೆಯ ಒಣ ಇಡ್ಲಿ!!

ಟ್ರಾವೆಲ್ ಮಹದೇವ ಪಾತ್ರ ಮಾಡಿರುವ ನಟ
ಭಾಳ ಚನಾಗ್ ಮಾಡಿದಾರೆ..ಲೀಲಾಜಾಲವಾಗಿ ಸಹಜವಾಗಿ ನಟಿಸಿದ್ದಾರೆ. ಅವರೂ ನಮ್ ಕಾಡಿನವರೇ.
ನಮ್ಮಲ್ಲಿ ಬಡ್ಡಿ ಗಿಡ್ಡಿಗ್ ಬುಟ್ಕಂಡು ವ್ಯವಹಾರ ಮಾಡ್ತಾರಲ್ಲ ಹಂಗಿದಾರೆ..!
ಮೊದಲ ಸೀನ್ ನಲ್ಲಿ ದೇವರ ಮುಂದೆ ಕಿವಿ ಹಿಡಿದು ಗಲ್ಲಾ ಮೇಲೆ ಕೂತ್ಕತಾರಲ್ಲ ಅದನ್ನ ರಿಪೀಟ್ ಮಾಡಿ ನೋಡುವಷ್ಟು ನಗು ಬಂತು.

ನಾಗಭೂಷಣ ಅವರಿಗೆ ಸರಣಿ ಚೆನ್ನಾಗಿದೆ ಎಂದು ಮೆಸೇಜಿಸಿದಾಗ ಅವರ ಪ್ರತಿಕ್ರಿಯೆ ಇದು:

“Thank you sir. Kannada ದಲ್ಲಿ digital content ಕೊಡಬೇಕೆಂಬ ಆಸೆಯಿಂದ ನಿರ್ಮಿಸಿದ್ದು.‌ ನಮ್ಮ nativity ಗೆ ತಕ್ಕಂತೆ ಮಾಡಬೇಕೆಂಬ ಉದ್ದೇಶದಿಂದ ಬರೆದಿದ್ದು. ಎಲ್ಲಾ age group avru nodbeku anta vulgar ilde iro Tara clean comedy madidivi. ಹಾಸ್ಯ ಬೇಗ ಎಲ್ಲರನ್ನೂ ತಲುಪುತ್ತೆ ಅಂತ. ಎಲ್ಲರ ಪ್ರತಿಕ್ರಿಯೆ ಏನು ಎಂಬುದನ್ನು ನೋಡಲು ಕಾಯುತ್ತಿದ್ದೇನೆ.‌ ನಿಮ್ಮ ಅಭಿಪ್ರಾಯ ಕೇಳಿ ಬಹಳ ಸಂತೋಷವಾಯಿತು.”

ನಾಗಭೂಷಣ ನಿಮಗೆ ಶುಭವಾಗಲಿ. ಈ ಸರಣಿ ಯಶಸ್ಸು ಗಳಿಸಲಿ.

‍ಲೇಖಕರು Admin

May 25, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: