
ಲೋಕೇಶ್ ಮೊಸಳೆ
—-
ಡಿ ಬಿ ಚಂದ್ರೇಗೌಡ ( ದಾರದಹಳ್ಳಿ ಬೈರೇಗೌಡ ಚಂದ್ರೇಗೌಡ ) ಅವರೊಂದಿಗೆ ನನಗೆ ಭಾವಾನಾತ್ಮಕ ಸಂಭಂದಗಳಿವೆ. ಅಪ್ಪ ದಾರದಹಳ್ಳಿಯ ಸರ್ಕಾರಿ ಶಾಲೆಯ ಮೇಷ್ಟರಾಗಿದ್ದರು. ಚಂದ್ರೇಗೌಡರ ಅಣ್ಣ ಡಿ ಬಿ ಬಿಳಿಗೌಡರು ಆ ಶಾಲೆಯ ಮುಖ್ಯ ಶಿಕ್ಷಕ , ಹೀಗಾಗಿ ನಮ್ಮ ಅವರ ಮನೆಯ ಒಡನಾಟ….
ನನ್ನ ಬಾಲ್ಯದಲ್ಲಿ ಆವರ ಮನೆಗೆ ಆಟವಾಡಲು ಹೋಗುತ್ತಿದ್ದೆ. ಆವರ ಮನೆಯ ಅಕ್ಕಿ ರೊಟ್ಟಿ…. ಆವರ ಮನೆಯ ಸುತ್ತಲ ಪರಿಸರದಿಂದ ಪ್ರಭಾವಿತನಾಗಿರುವೆ…
ನಾನು ಮೂರನೇ ತರಗತಿ ವರೆಗೆ ದಾರದಹಳ್ಳಿ ಶಾಲೆ ಯಲ್ಲೇ ಓದಿದ್ದು…., ನನ್ನ ಅಜ್ಜಿ ತೀರಿ ಹೋದ ನಂತರ ಅಪ್ಪ ನನ್ನೂರು ಮೊಸಳೆಗೆ ಬಂದರು. ನನ್ನೂರಿಗೆ ಬಂದ ಮೇಲೆ ನಮ್ಮ ಮನೆ ನರಕ ಸದೃಶ್ಯ. ದೊಡ್ಡ ಹೊಲದ ರಾಗಿ, ತೊಗರಿ, ಅವರೆ, ಬಿತ್ತನೆ ಹೊಲದಲ್ಲೇ ಅಪ್ಪ -ಆಮ್ಮನ ಮೇಲೆ ಪೌರುಷ ತೋರಿಸಿದ್ದ ಆ ರಣ ಬಿಸಿಲಿನಲ್ಲಿ ಮೈ ತುಂಬಾ ಬಾಸುಂಡೆ, ನಾನಾಗ ಅಲ್ಲೇ ಮಾವಿನಮರದಲ್ಲಿ ಆಟವಾಡುತ್ತ ಅಪ್ಪನ ಆರ್ಭಟ… ಅಮ್ಮನ ಚಂಡಿತನ ಮತ್ತಿತರ ಜನರ ಕಾಳಜಿ ಗಳು ನೋಡಿದ್ದೆ…
ಅಂದಿನ ನನ್ನ ನೆನಪಿಗೆ ಸಾಕ್ಷಿಯಾಗಿ ಆ ರಸಪೂರಿ ಮಾವಿನ ಮರ ಇಂದಿಗೂ ಸಾಕ್ಷಿಯಾಗಿದೆ . ಅಜ್ಜಿ ಸತ್ತಳು “ಉದ್ದಾರ ಮಾಡಲು” ಊರಿಗೆ ಬಂದ ಅಪ್ಪ ಯಾರನ್ನು ಉದ್ದಾರ ಮಾಡಿದನೋ ಬಿಟ್ಟನೋ ಗೊತ್ತಿಲ್ಲ… ಇತ್ತೀಚೆಗೆ ಸಾಯುವ ವಯಸ್ಸಲ್ಲಿ ತನ್ನವರ ಒಡಹುಟ್ಟಿದವರ ನಡುವೆ ‘ಅಪರಾಧಿ’ ಸ್ಥಾನದಲ್ಲಿ ನಿಂತಿದ್ದಾನೆ, ಅದು ಬೇರೆ ಕತೆ.

ಒಟ್ಟಿನಲ್ಲಿ ನನಗೆ ದಕ್ಕಬೇಕಾದ ; ನನ್ನ ಸುಂದರ ಮಲೆನಾಡಿನ ಚಿತ್ರಗಳು ಛಿದ್ರವಾದವು ಹಾಗೆಯೇ ಅಪ್ಪನ ಬದುಕೂ ಕೂಡ. ಆದರೆ ಮೊಸಳೆಯ ಅಡ್ಡಬೋರೆ ಜಮೀನಿಗೆ ಸಗಣಿ ಹೊರಬೇಕಾಗಿದ್ದ ಚಿಕ್ಕಪ್ಪಂದಿರು ಬದಲಾದರು, ಆವರ ವಸ್ತ್ರ ವಿನ್ಯಾಸ ಬದಲಾಯಿತೇ ಹೊರತು ಅವರ ಆಳದ ಬೌದ್ಧಿಕ ವಿಕಾಸ ಸುದಾರಿಸದೇ ಮಾನಸಿಕವಾಗಿ ಇನ್ನೂ ಸೆಗಣಿ ಹೊರುತ್ತಲೇ ಇದ್ದಾರೆ, ನಾಜುಕಯ್ಯರ ರೀತಿ !!! .
ಥೂ ಥೂ… ಏನೆಲ್ಲಾ ನೆನಪು ಬರುತ್ತಿವೆ… ಇಲ್ಲಿ ಬೇಡ. ಆ ಕಥನ ಮುಂದೆ ಇದೆ ಸಾಧ್ಯ ವಾದರೆ…!
ಮತ್ತೆ “ದಾರದಹಳ್ಳಿ”, ನಾನಿನ್ನೂ ಒಂದೂ ಎರಡನೇ ತರಗತಿ ಹುಡುಗ ನನ್ನ ಹುಟ್ಟು ಹಬ್ಬಕ್ಕೆ ಬಿಳಿಗೌಡರೊಂದಿಗೆ ಚಂದ್ರೇಗೌಡರೂ ಊಟಕ್ಕೆ ಬಂದಿದ್ದರು…. ಕೋಳಿ ಹೆಸ್ರು ಮುದ್ದೆ ಊಟ ನೆಲದಲ್ಲಿ ಕುಳಿತು ಊಟ ಮಾಡುವ ಸಂಪ್ರದಾಯ ಇವರಿಗೆ ಗೊತ್ತಿಲ್ಲ. ನಮ್ಮನೆಯಲ್ಲಿ ಊಟದ ಟೇಬಲ್ ಇಲ್ಲ. ಹೀಗಾಗಿ ಅಣ್ಣ ತಮ್ಮಂದಿರು ತಮ್ಮ ತಮ್ಮ ಬಿಳೀ ಪಂಚೆಗಳಿಗೂ ಕೋಳಿ ಹೆಸ್ರು ರುಚಿ ತೋರಿಸಿ ಕೊಂಡಿದ್ದರು, ನಂತರದ ದಿನಗಳಲ್ಲಿ ನಮ್ಮನೆಗೆ ಮಲೆನಾಡು ಶೈಲಿಯ ಊಟದ ಟೇಬಲ್, ಮೂರು ಮಂಚ, ಬಟ್ಟೆ ಸ್ಟ್ಯಾಂಡ್, ಮೂಲೆ ಸ್ಟ್ಯಾಂಡ್,… ತರಾವರಿ ಫರ್ನೀಚರ್ ಮನೆ ತುಂಬಿವೆ. ಇಂದಿಗೂ ಕೂಡ ನಮ್ಮೊಂದಿಗಿವೆ. ಹೇಗೆಂದರೆ, ಬಿಳೀಗೌಡರು ಒಬ್ಬ ಆಚಾರಿಯನ್ನ ಕರೆಸಿ ತೋಟದಲ್ಲಿ ಒಳ್ಳೆ ಮರನೋಡಿ ಮನೆಗೆ ಬೇಕಾದ ಎಲ್ಲವನ್ನೂ ಮಾಡಿಕೊಡು ಎಂದಿದ್ದರಂತೆ…. ಇದು ನನ್ನೊಂದಿಗೆ ಇರುವ ದಾರದಹಳ್ಳಿಯ ನೆನಪಿನ ಋಣ.
ನಮ್ಮನೆಗೆ ಬರುತ್ತಿದ್ದ ಲಕ್ಷ್ಮಣ… ಅವರ ಮನೆಗೆ ಬೇಲಿ ದಾಟಿ ಹೋಗುತ್ತಿದ್ದ ದೂರದ ಕಾಫಿ ತೋಟದ ಓಣಿ ರಸ್ತೆ…. ಅಪರೂಪಕ್ಕೆ ಬರುತ್ತಿದ್ದ ಖಾಸಗೀ ಬಸ್…. ಅಲ್ಲಿನ ಚಾಲಕರು ಅವರು ಅಂಗಡಿಗಳಿಗೆ ತರುತ್ತಿದ್ದ ಸಾಮಾನು ಮೂಟೆ… ಎಲ್ಲಾ ನೆನಪಾಗುತ್ತಿದೆ.

ಚಂದ್ರೇಗೌಡರ ನಿಧನ ಬೇಸರ ತಂದಿದೆ. ಹಾಗೆಯೇ ಅವರ ಮನೆಯಲ್ಲಿ ಕೊಡುತ್ತಿದ್ದ ಬಿಸಿ ಬಿಸಿ ರೊಟ್ಟಿ ಚಿಕನ್ ಸಾರು, ಅವರ ಮನೆಗೆ ಹೋಗುವಾಗ ಮರದ ಕೋಲು ಗೇಟ್, ಉದ್ದದ ಗುಡ್ಡದ ರಸ್ತೆ ಎರಡೂ ಬದಿಯಲ್ಲಿ ಇದ್ದ ಕಾಲುವೆ… ಕಾಫಿ ಗಿಡ, ಮನೆಗೆ ಹೊಂದಿ ಕೊಂಡಂತೆ ಇದ್ದ ಭಾವಿ ಎಲ್ಲಾ ನೆನಪಾಗುತ್ತಿವೆ. ದಾರದಹಳ್ಳಿ, ಅಲ್ಲಿನ ಸರ್ಕಾರಿ ಶಾಲೆ ಮಲೆನಾಡಿನ ಮಳೆ… ಕಾಫಿ ಗಿಡ, Handpost, ದೂಳೆಬ್ಬಿಸಿಕೊಂಡು ಬರುತ್ತಿದ್ದ ಬಸ್ಸು…. ಹೀಗೆ… ಹೀಗೆ…. , ನನ್ನ ಬಾಲ್ಯದ ನಂತರ ಚಂದ್ರೇಗೌಡರ ರಾಜಕಾರಣ ನಾಯಕತ್ವ ಎಲ್ಲವನ್ನೂ ನೋಡಿದ್ದೇನೆ.. ಹಲವು ವರ್ಷಗಳಿಂದ ಅವರು ಪಾರ್ಕಿನ್ಸನ್ ರೋಗದಿಂದ ನರಳುತ್ತಿದ್ದರು.
ಇಂದು ಬೆಳಗ್ಗೆ 6ಕ್ಕೆ, ಮಹೇಶ ನಂಜಯ್ಯ ಫೋನ್ ಮಾಡಿ ವಿಷಯ ತಿಳಿಸಿದರು… WhatsApp ಮೀಡಿಯಾ ಫ್ರೆಂಡ್ಸ್ ಗ್ರೂಪ್ ನೋಡಿದೆ ವಿಷಯ ಅಲ್ಲಿರಲಿಲ್ಲ… ಸುದ್ದಿ ಹಾಕಿ. ಸುಮ್ಮನಾದೆ. ಆದರೂ ಬಿಡ ಬೇಕಲ್ಲ ನೆನಪುಗಳು….. ಬಾಲ್ಯ, ಅನ್ನ, ಸ್ಥಳದ…. ಋಣ,
ಋಣದ ಸಂದಾಯ ಆಗಲಾರದು, ಹೀಗಾಗಿ ಒಂದಷ್ಟು ಪ್ರೀತಿ ಮಮತೆಯಿಂದ ನಮಸ್ಕಾರ ದಾರದಹಳ್ಳಿ ಬದುಕಿಗೆ… ನೆನಪಿಗೆ….
0 ಪ್ರತಿಕ್ರಿಯೆಗಳು