ನನ್ನನ್ನು ನಾಮಕಾವಸ್ತೆಗೆ ಇಲ್ಲಿ “ಇಡಲಾಗಿದೆ”

amrita preetam1

ಅಮೃತಾ ಪ್ರೀತಮ್

ಅನುವಾದ: ಮಹಿಮಾ (ಶಮ್ಮಿ ಮಹಿ)

ಇಲ್ಲೆ ಅಲಮೇರಾದ ಮೂಲೆಯಲ್ಲಿ ಬಿದ್ದುಕೊಂಡ ನಾನು..
ಪುಸ್ತಕ…
ಬೆರಳುಗಳು ತವಕದಿಂದ ಹಾಳೆಗಳ ಮಡಿವ ಶಬುದಗಳಿಗೆ .
ಕಾತರಿಕೆ
sheಬಹುಶಃ ನಾನು ಧರ್ಮಗ್ರಂಥವೆ??
ಇರಲಿಕ್ಕಿಲ್ಲ
ಉಗುರ ತುದಿಯ ನಾಟು, ತುಟಿಯ ತುದಿಯ ಉಚ್ಛಾರಣೆ
ಕೇಳಲಿಲ್ಲ
ಪ್ರೇಮ ಕಾದಂಬರಿಯೆ? ಕಾಮ ಸೂತ್ರದ ಪಠ್ಯವೆ?
ಇಲ್ಲ ಇಲ್ಲ..(ಹಾಗಿದ್ದರೆ ಆಗಲೇ ಹರಿದ ಸ್ಥಿತಿಯಲ್ಲಿರುತ್ತಿದ್ದೆನಲ್ಲ…)

ನಾಮಾಂಕಿತ ಶಾಸನ ಸಭೆಯಲ್ಲಿ ಬಹುಚರ್ಚಿತ
ಕ್ರಾಂತಿಕಾರಕ ನಿರ್ಣಯಗಳ ಕರಡು ಪ್ರತಿ
ಎಂದೂ ಜಾರಿಯಾಗದ ಯೋಜನೆಗಳ ಮೇಲೆ
ಆರಕ್ಷಕ ಇಲಾಖೆಯ ಠಸ್ಸೆ ಬಿದ್ದಿದೆ
ನನ್ನನ್ನು ನಾಮಕಾವಸ್ತೆಗೆ ಇಲ್ಲಿ “ಇಡಲಾಗಿದೆ”

ಈಗ ಕೇವಲ ಕೆಲ ಗುಬ್ಬಿಗಳು ಬರುತ್ತವೆ
ತಮ್ಮ ಕೊಕ್ಕಿನಿಂದ ಕುಕ್ಕಿ ಕುಕ್ಕೀ
ನನ್ನ ಮೇಲೆ ಕುಳಿತು ತಮ್ಮ ನಂತರದ
ಪೀಳಿಗೆಯ ಭವಿಷ್ಯದ ಬಗ್ಗೆ ಯೋಚಿಸುತ್ತವೆ
(ಆಹಾ..ಎಂಥ ಅಧ್ಭುತ ಅಲ್ವೇ ನಮ್ಮ ನಂತರದ
ಪೀಳಿಗೆಯ ಭವಿಷ್ಯದ ಬಗ್ಗೆ ಯೋಚಿಸುವುದು!!)
ಗುಬ್ಬಿಗಳಿಗೆ ರೆಕ್ಕೆಗಳಿವೆ
ನಿರ್ಣಯಗಳಿಗಿಲ್ಲ.. (ಅಥವಾ ನಿರ್ಣಯಗಳಿಗೆ ಮತ್ತೊಂದು ಪೀಳಿಗೆಯೇ ಇಲ್ಲ!)

ಕೆಲವೊಮ್ಮೆ ವಾಸನೆಯ ಜಾಡು ಹಿಡಿದು
ನನ್ನ ಭವ್ಯ ಭವಿಷ್ಯವ ಅರಿಯಲೆತ್ನಿಸುತ್ತೇನೆ
ಪ್ರಬಲ ಯೋಚನೆಯ ಧಾಳಿಗೆ ನನ್ನ ಬೈಂಡಿಂಗ್ ಕಿತ್ತು ಬರುತ್ತದೆ
ಹೀಗೆ ಮೂಗೊಡ್ಡಿದಾಗೆಲ್ಲ
ಧೂಳು ಮತ್ತು ಗುಬ್ಬಿ ಹಿಕ್ಕೆಯ ಗಬ್ಬು ವಾಸನೆ ಅಡರುತ್ತದೆ
ಓ ನನ್ನ ನೆಲ…
ನಿನ್ನ ಭವಿಷ್ಯ!
ನಾನು….ನಿನ್ನ ವರ್ತಮಾನದ ಸ್ಥಿತಿಯಲ್ಲಿ!!

‍ಲೇಖಕರು Admin

June 1, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Arathi ghatikar

    ಚೆಂದದ ಕವನ. ಪುಸ್ತಕದ ಮಸ್ತಕ ಸಾಲು ಸಾಲಾಗಿ ಹರಿಸುವ ಪ್ರಬುದ್ದ ಲಹರಿ. ಅನುವಾದ ಸೂಪರ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: