ಧಾರವಾಡ ‘ಕಾವ್ಯ ಸಂಸ್ಕೃತಿ ಯಾನ’ಕ್ಕೆ ಸ್ವಾಗತ

ಮಲ್ಲಿಕಾರ್ಜುನಸ್ವಾಮಿ ಮಹಾಮನೆ

ಕಾವ್ಯ ಸಂಸ್ಕೃತಿ ಯಾನ
ಜನರೆಡೆಗೆ ಕಾವ್ಯ

ನಾಡಿನ ಕವಿಗಳು.. ಅರ್ಥಪೂರ್ಣವೂ ಆದ..ಸಮಾಜಮುಖಿಯೂ ಆದ..ಕಾಲಸ್ಪಂದನೆಯೂ ಆದ.
ಚಂದವೂ ಆದ ಕವಿತೆಗಳನ್ನು ಬರೆಯುತ್ತಾ ಬಂದಿದ್ದಾರೆ.. ಕಾಲಕಾಲಕ್ಕೂ ಅನನ್ಯವಾದ ಕವಿತೆಗಳು ನಾಡಿನ ಕವಿಗಳಿಂದ ಬಂದಿವೆ.. ಕವಿಗಳೆಲ್ಲರಿಗೂ ನಾನು ಶರಣು..

ಕವಿತೆಯನ್ನು ಚಂದವಾಗಿ ಬರೆದರಷ್ಟೆ ಸಾಕೆ??..ಅದು ಸಹೃದಯರಿಗೆ ತಲುಪಬೇಕಲ್ಲವೆ..??..ಕವಿತೆ ಓದುವುದಷ್ಟೇ ಅಲ್ಲ .ಅದು ಕೇಳುವುದು..ಆಲಿಸುವುದೂ ಸಹ..!!

ಕವಿಗಳು ತಮ್ಮ ಕವಿತೆಗಳನ್ನು ಚಂದವಾಗಿ..ಸಹೃದಯರ ಮನಮುಟ್ಟುವಂತೆ ಓದಬೇಕು..ವಾಚಾನಾಭಿವ್ಯಕ್ತಿ ಎಂಬುದೊಂದು ಕಲೆ..ಅದು ಎಲ್ಲರಿಗೂ ದಕ್ಕದೇ ಇರಬಹುದು..ಆದರೆ ಕವಿತೆಯ ಓದು ನೀರಸವು ಆಗಬಾರದು..ಗೋಷ್ಠಿಗಳಲ್ಲಿ ಕವಿತೆಗಳನ್ನು ಓದಲು ಸಿದ್ದವಾಗಿ ಬರಬೇಕು..ಸ್ಪಟ್ಟವಾಗಿ..ಸ್ಪುಟವಾಗಿ..ಮನಸೆಳೆಯುವಂತೆ..ಓದಬೇಕು..ಕೇಳುಗರ ಕಣ್ಣಮುಂದೆ ಕವಿತೆಯನ್ನು ಕಡೆದು ನಿಲ್ಲಿಸಬೇಕು..ಕವಿತೆಗಳನ್ನು ಕೇಳುತ್ತಿದ್ದಾಗ ಚಿತ್ತಕಲಕದಂತೆ ಓದಬೇಕು..ಆಗ ಕವಿಗೋಷ್ಟಿಗಳು ನೀರಸವಾಗುವುದಿಲ್ಲ..ಸಹ ಕವಿಯೂ ತನ್ನ ಕವಿತೆ ಓದಿದ ನಂತರ ನಿರ್ಗಮಿಸದಂತೆ ( ಹಲವು ಕವಿಗೋಷ್ಟಿಗಳಲ್ಲಿ ತಮ್ಮ ಕವಿತೆಗಳನ್ನು ಓದಿದ ನಂತರ ಮತ್ತೊಬ್ಬರ ಕವಿತೆಗಳನ್ನು ಕೇಳಲೂ ವ್ಯವದಾನವಿಲ್ಲದಂತೆ ಗೋಷ್ಠಿಯಿಂದ ಕವಿಗಳು ನಿರ್ಗಮಿಸುತ್ತಾರಂತೆ..ನಾನು ಕೇಳಿದ..ಓದಿದ್ದು ) ಆತನನ್ನಾದರೂ ಹಿಡಿದು ಕಟ್ಟಾಕುವಂತೆ ಕವಿತೆ ಓದಬೇಕು..’ ಕವಿತಾ ವಾಚನ ಸಂಸ್ಕೃತಿ ‘ ನಮ್ಮಲ್ಲಿ ಕಡಿಮೆಯೆಂದೇ ಅನ್ನಬಹುದು..ಇರಲಿ ಆ ವಿಚಾರ ಬೇರೆ..

ಈ ನಿಟ್ಟಿನಲ್ಲಿ ನಾನೊಂದು ಪುಟ್ಟ ಪ್ರಯತ್ನ ಮಾಡಿದ್ದೇನೆ..ಅತ್ಯುತ್ತಮವಾಗಿ..ಹೃದಯಸ್ಪರ್ಶಿಯಾಗಿ.ಮನದುಂಬುವಂತೆ..ಆಕರ್ಷಕವಾಗಿ ಕವಿತೆಗಳನ್ನು ಓದುವ ಕವಿತಾ ವಾಚಕರು..ರಂಗ ಕಲಾವಿದರು.. ಸಿನಿಮಾ ಕಲಾವಿದರಗಳಲ್ಲಿ ಕವಿತೆಗಳನ್ನು ಓದಿ ವಿಡಿಯೊ ಮಾಡಿ ಕಳಿಸಿ ಎಂದು ವಿನಂತಿ ಮಾಡಿದ್ದೇನೆ..ಮಿತ್ರರು ಸ್ಪಂದಿಸಿದ್ದಾರೆ

ಗೆಳೆಯ ಮಂಡ್ಯ ರಮೇಶ್ ಕವಿತೆ ಓದಿದ್ದಾನೆ…ಕೇಳಿ..ಆಲಿಸಿ…. ರಮೇಶ್ ಕವಿತೆಯನ್ನು ಓದುವ ಪರಿಯನ್ನು ಗಮನಿಸಿ..ಹೀಗೆ ಅನೇಕ ಕಲಾವಿದರು ಕವಿತೆಗಳನ್ನು ಓದಲಿದ್ದಾರೆ..ನಿಮ್ಮೆಡಗೆ ..ಜನರೆಡೆಗೆ ಅವನ್ನು ರವಾನಿಸಲಿದ್ದೇನೆ.. ಸಾಧ್ಯವಾದರೆ ತಮ್ಮದಾಗಿಸಿಕೊಳ್ಳಿ..

ಕವಿತೆಯ ಓದು ಸಪ್ಪೆಯಾಗಬಾರದು..ಕವಿಗೋಷ್ಠಿಗಳು ನೀರಸವಾಗಬಾರದು..

‘ ಕಾವ್ಯ ವಾಚನ ಸಂಸ್ಕೃತಿ ‘ ಯನ್ನು ಬಿತ್ತಲು ಕಲಾವಿದರ ಪಾತ್ರ ಬಹು ಮುಖ್ಯ.. ಹಾಗೆಯೇ ಕವಿಗಳದೂ ಸಹ

ಧಾರವಾಡದ’ ಕಾವ್ಯ ಸಂಸ್ಕೃತಿ ಯಾನ ‘ ಕ್ಕೆ ತಮಗೆಲ್ಲರಿಗೂ ಸ್ವಾಗತ

‍ಲೇಖಕರು avadhi

August 25, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. SHRIDHAR B GASTI

    ಸಾಹಿತ್ಯದ ವಿಭಿನ್ನ ಪ್ರಾಕಾರಗಳನ್ನು ಪರಿಚಯಿಸುವುದರ ಮೂಲಕ ಉದಯೋನ್ಮುಖ ಲೇಖಕರಿಗೆ, ಕಥೆಗಾರರಿಗೆ,ಕವಿಗಳಿಗೆ ಹೊನ್ನಕಣಜವಾಗಿದೆ ಅವಧಿ. ಅಭಿನಂದನೆಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: