ದೇವನೂರು ಮಹಾದೇವ ಅವರ ಶೈಲಿಯಲ್ಲಿ

ಮರ ಹೆತ್ತ ನಗರ

(ದೇವನೂರು ಮಹಾದೇವರ ಕ್ಷಮೆ ಕೋರಿ)

ದೇವನೂರು ಮಹಾದೇವರ ಶೈಲಿಯಲ್ಲಿ
ಅಣಕು ಬರಹ ರಚನೆ : ಗೌತಮ

ಆಕಾಸದಾಗಿನ ಕೋಟಿ ಕೋಟಿ ನಕ್ಸತ್ರಗಳೋಪಾದೀಲಿ
ಬೂಮಿ ಮೇಲಿನ ಈ ರುಕ್ಸಗಳು.
ಆ ಕೋಟಿ ಕೋಟಿ ರುಕ್ಸಗಳಾಗೆ ನಮ್ದೂ ಒಂದು ಮರ. ಆಲ್ದ ಮರ.
ಅದೂ ಗೋದಾರೀ ತೀರದಲ್ಲೇ.
ಸಅಸ್ರಾರು ರೆಂಬೆ ಕೊಂಬೆಗಳ ಚಾಚಿಕೊಂಡು
ಅತ್ತೆಕರೆಗೆ ಅರಡಿಕೊಂಡಿದ್ದ ಬಾರೀ ಗಾತುರದ ಆಲ್ದ ಮರ. ಆ ರುಕ್ಸದಲ್ಲೇ
ಸಾವಿರಾರು ಅಕ್ಕಿಗಳ ನೂರಾರು ಗೂಡುಗಳು. ಅಸಿರು ಬಣ್ಣದ ಗಿಣಿಗಳಾದ
ನಾವ್ಗೋಳೆಲ್ಲ ಆ ಗೂಡುಗಳಲ್ಲೇ ಉಳಉಪ್ಟೆ ತಿನ್ಕಂಡು ಸುಕವಾಗಿ ಬದುಕ್ತಾ ಇದ್ದೋ.
ಇಂತಿರಲಾಗಿ, ಒಂಜಿನ ಕಿಷ್ಣ ಪರುಮಾತುಮ ನರಕಾಸುರನ್ನ ಅತ್ಯೆ ಮಾಡಿದ ತಿಂಗಳಲ್ಲಿ
ಜೊರೋ ಅಂತ ಮಳ ದಾರಾಕಾರ್ವಾಗಿ ಸುರಿದದ್ದೇ ಸುರಿದದ್ದು ಸುರಿದದ್ದೇ ಸುರಿದದ್ದು.
ಆ ಸೊಳಿ ಗಾಳಿಗೆ ನಾವೆಲ್ಲ ನೆಂದು ತೊಪ್ಪೆಯಾಗಿ ನಡುಗೋದೊ.
ನದೀ ತೀರದಲ್ಲೇ ಇದ್ದಂತ ವಾನರ ಕೋತಿಗಳೆಲ್ಲ
ಆ ಬಯಂಕರ ಮಳೇಗೆ ಎದರ್ಕೊಂಡು ಆ ಸೊಳೀನ ತಡಕಳ್ಳಾರ್ದೇ
ನೆಂದು ಕೆಸರುಗದ್ದೆಯಾಗಿದ್ದ ಬೂಮಿ ಮ್ಯಾಗೆ ಪಿತಪಿತ ಅಂತ ಎಜ್ಜೆ ಆಕ್ತಾ
ಓಡೋಡಿ ನಮ್ಮ ರುಕ್ಸದ ನೆಳ್ಳಿಗೇ ಬಂದೋ. ಅಂಗೆ ಬಂದ ಕೋತಿಗಳು
ಒಂದಲ್ಲ ಎಳ್ಡಲ್ಲ ಮೂರಲ್ಲ ನಾಕಲ್ಲ ಅತ್ತಲ್ಲ ಇಪ್ಪತ್ತಲ್ಲ ಒಂದು ಸಾವಿರ ಇರಬೈದೇನೋ.
ಒದ್ದೆ ಅತ್ತೀನ ಮೈಗೆ ಮೆತ್ತಿಕಂಡAಗಿದ್ದ ಕೋತಿಗಳೆಲ್ಲ ರುಕ್ಷದ ಕೆಳಗೆ ರೆಷ್ಟು ತಗಂತಾ
ಥರಥರ ನಡುಗ್ತಾ ‘ಈ ಆಳು ಮಳ ಎಷ್ಟೊತ್ತಿಗೆ ನಿಂತತೋ’ ಅಂತ ಚಿಂತುಸ್ತಾ ನಿಂತಿದ್ದೋ.
ಮಳೆರಾಯನಿಗೆ ಅವರ ಕಸ್ಟ ಅರಿವಿಗೆ ಬಂತೋ ಅತ್ವಾ ಸುರ್ದೂಸುರ್ದೂ ಸುಸ್ತಾಗೋದ್ನೋ
ಬೂಮಿ ಮ್ಯಾಗೆ ಮಳೆ ಉಯ್ಯೋದನ್ನ ನಿಲ್ಲಿಸ್ಬುಟ್ಟು ಕಂಬಳಿ ವೊದ್ಕೊಂಡು ಮನೀಕಂಬಿಟ್ಟ.


ನಮ್ಮ ವಂಸದಲ್ಲೇ ಗಿಣಿರಾಮನಂತ ಬುದ್ದಿಮಂತನ್ನ ನಾವು ಈ ನೇತ್ರಗಳಿಂದ ನೋಡಿಲ್ಲ.
ಅಂತ ಬುದ್ದಿಮಂತ ಅವ್ನು. ಆ ಚಂಜೆ ಸೂರಪ್ಪ ಪಸ್ಚುಮದಲ್ಲಿ ಮುಣುಗೋ ಟೇಮಲ್ಲಿ
ನಮ್ಮ ಗಿಣಿರಾಮ ತನ್ನ ರೆಕ್ಕೆಗಳನ್ನ ಪಟಪಟ ಬಡೀತಾ ಚಿಲಿಪಿಲಿಗುಡ್ತಿದ್ದ ನಮ್ಮೆಲ್ಲರಿಗೂನೂ
‘ಯಾರೂ ಸಬುದ ಮಾಡಬ್ಯಾಡದು’ ಅಂತ ಅಪ್ಣೆ ಮಾಡ್ದ. ಎಲ್ರೂ ಗಪ್ಚಿಪ್ಪಾದೊ.
ನಾವೆಲ್ರೂ ಸೈಲೆಂಟ್ ಆದುದನ್ನು ಕಂಡು ಕುಸಿಯಿಂದ
ನಿAತಿದ್ದಲ್ಲೇ ಎಡಗಾಲನ್ನ ಎತ್ತಿ ಮತ್ತೆ ಅಲ್ಲೇ ಮಡಗಿ, ಬಲಗಾಲನ್ನೆತ್ತಿ ಮತ್ತೆ ಅಲ್ಲೇ ಮಡಗಿ
ವಾನರ ಕೋತಿಗಳ ಕಡೆ ದುಷ್ಟಿ ಆಯಿಸ್ತಾ ಒಂದು ಕಿತ ಕ್ಯಾಕರಿಸಿ ಗಂಟಲು ಅರಿಯೋಂಗೆ
‘ಸದ್ದು’ ಅಂತ ಕಿರುಚಿದ. ಕಿಚಿಪಿಚ ಕಿಚಪಿಚ ಅಂತಿದ್ದ ಕೋತಿಗಳೆಲ್ಲಾ
ಮೂತಿ ಮ್ಯಾಗೆ ಕೈಗಳನ್ನು ಮಡಿಕ್ಕೊಂಡು ತಲವ ಮ್ಯಾಕೆತ್ತಿ ನಮ್ಮ ಕಡೆ ನೋಡಿದೋ.
ಆ ಆಗ ಪಿಂಡ್ರಾಪು ಸೈಲೆನ್ಸು ಬದ್ರವಾಗಿ ತಳವೂರಿ ಕುಂತುಕೊAತು.
ಗಿಣಿರಾಮ ‘ಅಡೈ ಕೋತಿಗಳಾ’ ಅಂತಿದ್ದAಗೆ ಒಂದು
ಮುದಿ ವಾನರ ಕೋತಿ ಮುಂದಕ ಬಂದು ತನ್ನೇಡೂ ಕಾಲುಗಳಲ್ಲಿ ನಿಂತು,
ತನ್ನೇಡೂ ಕೈಗಳನ್ನ ಎದೆ ಮ್ಯಾಕೆ ಮಡಿಕ್ಕತು.
‘ಆ ಪರುಮಾತುಮ ನಿಮ್ಗಳಿಗೆಲ್ಲಾ ಕೈನಂತ ಕೈಗಳನ್ನ ಕಾಲ್ನಂತ ಕಾಲುಗಳನ್ನ ಕೊಟ್ಟವ್ನೆ.
ಅವು ಸಾಲ್ದು ಅಂತ ನಿಮ್ಮ ಸರೀಲಕ್ಕೆ ಒಂದು ಬಾಲಾನೂ ಸಿಕ್ಸವ್ನೆ.
ಈ ರುಕ್ಸವೇ ಯಾಕೆ ನಿಮಗೆ ಆಸರೆಯಾಗಬಕು? ನನ್ನ ಮಾತ ಕ್ಯೋಳಿ.
ಮಳ ನಿಂತ ಮ್ಯಾಗೆ ನೀವೆಲ್ಲ ಒಂದೊAದು ಮನೆ ಕಟ್ಟಿಕೊಂಡು
ಆಯಾಗಿ ಬದುಕಿ’ ಅಂದ. ಎಲ್ಲಾ ಕೋತಿಗಳೂ
ಒಂದರ ಮಕಾನ ಒಂದು ನೋಡಕೊಂತಾ ‘ಆಗಲಿ’ ಅನ್ನೋಂಗೆ ತಲೆ ಆಡಿಸಿದೋ.


ಈ ಈ ಘಟನೆ ನಡೆದು ಇಪ್ಪತ್ತು ಲಕ್ಷ ವರ್ಷಗಳಾದವು. ಈ ದೀರ್ಘಾವಧಿಯಲ್ಲಿ ಆ ಕಪಿಗಳೂ ದೈತ್ಯರಂತೆ ಬೆಳೆದವು.
ನಾಲಕ್ಕು ಕಾಲುಗಳಲ್ಲಿ ನಡೀತಿದ್ದವು ಎರಡೇ ಕಾಲುಗಳಲ್ಲಿ ನಡೆಯತೊಡಗಿದವು. ಬಾಲವನ್ನು ಕಳೆದುಕೊಂಡವು.
ಸೂಟುಬೂಟುಗಳನ್ನ ತೊಟ್ಟುಕೊಂಡು ಮೆರೆದಾಡಿದವು. ಪರಮಾತ್ಮ ಕೊಟ್ಟಿದ್ದ ಕಯ್ಯಿ ಕಾಲುಗಳು ಮತ್ತು ತಮ್ಮದೇ
ಆದ ಸ್ವಂತ ದುಷ್ಟ ಬುದ್ಧಿಯಿಂದ ಪಕ್ಷಿಗಳು ವಾಸಿಸುತ್ತಿದ್ದ ಮರಗಳಿಗೆಲ್ಲಾ ಕೊಡಲಿಯ ನಾಲಿಗೆಯನ್ನು ತೋರಿಸಿ
ಕಾಡುಗಳನ್ನೆಲ್ಲಾ ಕಾಂಕ್ರಿಟ್ ನಾಡುಗಳನ್ನಾಗಿ ಕನ್ವರ್ಟ್ ಮಾಡಿ, ಕೋಟ್ಯಾಂತರ ಮನೆಗಳನ್ನು ಕಟ್ಟಿಕೊಂಡು
ಸುಖವಾಗಿ ಜೀವನ ನಡೆಸುತ್ತಿದ್ದಾರೆ. ಗಿಣಿಯಷ್ಟೇ ಅಲ್ಲ ಬೇರೆ ಯಾವ ಪಕ್ಷಿಗೂ ನೆಲೆಯಿಲ್ಲದಂತೆ ಮಾಡಿ ಗೇಟೆಡ್
ಕಮ್ಯುನಿಟಿಗಳನ್ನು ನಿರ್ಮಿಸಿಕೊಂಡು ದೇ ಆರ್ ಲಿವಿಂಗ್ ಹ್ಯಾಪ್ಪಿಲೀ.


ನೀತಿ:
ಮತಿಯೀನರಿಗೆ ಬುದ್ವಾದ
ಯೋಳೋದೂ ಒಂದೇ

ತಮ್ಮೆದೆ ಮ್ಯಾಗೆ ತಾವೇ
ಕೊಳ್ಳಿ ಮಡಿಕ್ಕಳಾದೂ ಒಂದೇ

‍ಲೇಖಕರು avadhi

October 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

ದೊರೆ..

ದೊರೆ..

೧ ಪ್ರತಿಕ್ರಿಯೆ

  1. Vasundhara k m

    ದೇವನೂರರ ಶೈಲಿಯ ಬರಹ ಇಷ್ಟವಾಯ್ತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: