ದೂರವಾದ ಶಾಲ್ಮಲಾ…

ಕೆ ಮಹಾಂತೇಶ

ಚಂಪಾಗೆ ಭಾವಪೂರ್ಣ ನಮನಗಳು

ಕರೋನಾ ಬಂದೆರಗಿದ ಈ ಎರಡು ವರ್ಷದಿಂದ ನನ್ನ ಪ್ರೀತಿಯ ಶಾಲ್ಮಲಾ ಕವಿ ಚಂಪಾ ಅವರನ್ನು ನೋಡಿ ಮಾತನಾಡಸಬೇಕೆಂದು ಮನಸ್ಸು ಚಡಪಡಿಸುತ್ತಿತ್ತು.

ಯಲೆಚೇನಾಹಳ್ಳಿ ಎಂದರೆ ತಕ್ಷಣ ಚಂಪಾ ಮನೆ ಅಲ್ಲಿದೆ ಎಂದು ನೆನಪಾಗುತ್ತಿತ್ತು. ಇತ್ತೀಚಿನ ಆರೇಳು ತಿಂಗಳಲ್ಲಿ ನನ್ನ ಬಹುಕಾಲದ ಹಳೆಯ ಗೆಳೆಯನೊಬ್ಬ ಮತ್ತೆ ಕುಟುಂಬ ಸಹಿತ ಸಿಕ್ಕರು. ಹಾಗಾಗಿ ಅವರ ಮನೆಗೆ ಎರಡು ಮೂರು ಬಾರಿ ಯೆಲಚೇನಳ್ಳಿ ಸಮೀಪ ಮೇಟ್ರೋ ದಲ್ಲಿ ಹೋದಾಗಲೆಲ್ಲ ಚಂಪಾ ಕಾಡುತ್ತಿದ್ದರು.

ಕಳೆದ ತಿಂಗಳಷ್ಟೇ ಸಹಾಯಕ ಕಾರ್ಮಿಕ ಆಯುಕ್ತರಾಗಿರುವ ಚಂಪಾ ಅವರ ಮಗಳು ಮೀನಾ ಪಾಟೀಲ್ ಅವರನ್ನು ಸಂಗಾತಿ ಮಹೇಶ್ ಪತ್ತಾರ್ ಬೆಂಗಳೂರಿನಲ್ಲಿ ಪರಿಚಯಿಸಿದರು. ಇಬ್ಬರಿಗೂ ಪರಸ್ಪರ ದೂರದಿಂದ ಪರಿಚಯವಿದ್ದರೂ ಅವರನ್ನು ಭೇಟಿ ಮಾಡಿರಲು ಅವಕಾಶವಾಗಿರಲಿಲ್ಲ. ಆದರೆ ಇತ್ತೀಚಿಗೆ ಅದು ಸಾಧ್ಯವಾಗಿತ್ತು. ಆಗ ಮೇಡಂ ಚಂಪಾ ಅವರನ್ನು ನಾನೊಂದು ಬಾರಿ ಭೇಟಿಯಾಗಬೇಕೆಂದು ಆಶೆ ವ್ಯಕ್ತಪಡಿಸಿದ್ದೆ. ಅದಕ್ಕೇನಂತೆ ಮನೆಗೆ ಬನ್ನಿ ಎಂದು ವಿಳಾಸ ಹೇಳಿ‌ಪೋನ್ ನಂಬರ್ ನೀಡಿದ್ದರು.

ಆದರೆ ಈಗ ನಮ್ಮೆಲ್ಲರನ್ನು ಬಿಟ್ಟು ದೂರವಾಗಿದ್ದಾರೆ ಚಂಪಾ. ಬಂಡಾಯ, ದಲಿತ, ಕನ್ನಡ ಸಮಾಜವಾದದ ಕನಸುಗಳನ್ನು ಕೈಗೂಡಿಸಲು ಬನ್ನಿ ಬನ್ನಿ ನನ್ನ ಸಂಗಡ…. ಎಂದು ಪ್ರೀತಿಯಿಂದ ಕರೆಯುದ್ದ ಚಂಪಾ ಈ ಕಾಲಘಟ್ಟದಲ್ಲಿ ದೂರವಾಗಿದ್ದು ನಾಡಿನ ಇಡೀ ಜನಪರ ಚಳವಳಿಗೆ ಉಂಟಾದ ಅಪಾರ‌ ನಷ್ಟವಾಗಿದೆ..
ಹೋಗಿ ಬನ್ನಿ ಸಾರ್….

ನಾವಿರುವೆವು ಸದಾ ನಿಮ್ಮ ಸಂಗಡ.

‍ಲೇಖಕರು Admin

January 10, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: