ದಾದಾಪೀರ್ ಜೈಮನ್
**
ನಿನ್ನ ಹೆಸರೇನು?
ಹೆಸರು ಅಂತ!
ಯಾವಾಗ ಬರುತ್ತೀ?
ಇಂತ ವರ‍್ಷದ ಇಂತ ಮಾಸದ ಇಂತಿಪ್ಪ ವಾರದ
ಇಂತಿoತ ದಿನಾಂಕದ ಕಾಲ ಆದ ಮೇಲೆ!
ಕಾಲವಾದ ಮೇಲೆ ಯಾರು ಇರುತ್ತಾರೆ?
ಅಲ್ಲಿಯವರೆಗೂ ಕಾಯುವವರು!
ಕಾಯುವುದು ಕಷ್ಟವಾದರೆ?
ಅಂತ ಮತ್ತು ಆಗುವುದನ್ನು ಕಳಚಿಟ್ಟುಬರಬೇಕಾಗುತ್ತದೆ!
ಬೇಡ ಬೇಡ…ಆಗಿಯೇ ಬಾ! ಅಂತಲೇ ಬಾ!
ಅಲ್ಲಿಯವರೆಗೂ ಕಾಯುತ್ತೀಯೇ?
ಕಾಯುತ್ತಾ ಕೂತರೆ ಈ ಕಾಯದ ಕಥೆ?
ಕೂತು ಕಾದರೆ ಮಾತ್ರ ಕಾಯುವುದೇ?
ಮತ್ತೆ?
ಕಡೆಪಕ್ಷ ಕಾಯುವುದನ್ನಾದರೂ ಧ್ಯಾನಿಸಿದರೆ?
ಕಾಯದಿದ್ದರೆ?
ಬಂದದ್ದು ನಾನೆ ಎಂದು ತಿಳಿಯುವುದೇ ಕಾಯಕ್ಕೆ?
0 Comments