ತಾಯ್ತನದ ಮೂರ್ತರೂಪಿ ಪ್ರೊ ಟಿ ವಿ ಎಂ ಇನ್ನಿಲ್ಲ..

ಕಿರಣ್ ಗಾಜನೂರ್

ಮಾನವೀಯತೆ, ತಾಯ್ತನದ ಮೂರ್ತರೂಪಿ ಪ್ರೊ. ವೆಂಕಟೇಶ್ ಮೂರ್ತಿ ನಮ್ಮೂಡನೆ ಇಲ್ಲ…! ಕಳೆದವಾರ ಹೋಗಿ ಮಾತನಾಡಿಸಿಕೊಂಡು ಬಂದಿದ್ದೆ, ತೀರಾ ಚಟುವಟಿಕೆಯಿಂದ ಮಾತನಾಡಿದ್ದರು…!

ನಾನು ಬೆಂಗಳೂರು ಕೇಂದ್ರ ವಿವಿಯಲ್ಲಿ ಇದ್ದಾಗ ಒಟ್ಟಿಗೆ ಒಂದು ವರ್ಷಗಳ ಕಾಲ ಕೆಲಸ ಮಾಡಿದ್ದೇವು, ಅತಿಥಿ ಉಪನ್ಯಾಸಕನಾಗಿ ಇದ್ದ ಕಾರಣ ಒಂದೂ ದಿನವೂ ನನ್ನ ಜೇಬಿನಿಂದ ಪರ್ಸ್ ತೆಗೆಯಲು ಬಿಡುತ್ತಿರಲಿಲ್ಲ, ಒಮ್ಮೊಮ್ಮೆ ಮನೆಗೆ ಡ್ರಾಪ್ ಮಾಡು ಅನ್ನೋರು ಹೋಗುವ ದಾರಿಯಲ್ಲಿ ಪೆಟ್ರೋಲ್‌ ಬಂಕ್‌ನಲ್ಲಿ ಗಾಡಿಫುಲ್ ಪೆಟ್ರೋಲ್ ಹಾಕಿಸಿ ಎರಡುವಾರ ಸಾಕಾಗುತ್ತದೆ ನೋಡು ಅಂದು ನಗೋರು…! ಅದೊಂದು ಮಗುವಿನ ನಗು ಅವರು ಎಂದಿಗೂ ಯಾರನ್ನು ದ್ವೇಷಿಸಿದ್ದು ನೋಡಿಯೇ ಇಲ್ಲ…!

ಕರ್ನಾಟಕದ ಜನ-ಚಳುವಳಿಯಲ್ಲಿ ಆದರಲ್ಲೂ ಮುಖ್ಯವಾಗಿ ಸಮುದಾಯವನ್ನು ಕಟ್ಟಿ ಬೆಳೆಸುವಲ್ಲಿ ಇವರ ಶ್ರಮ ದೊಡ್ಡದು…! .ಇವರ ಮನೆಯಲ್ಲಿ ಉಂಡು ಬೆಳೆದ ನೂರಾರು ಮಂದಿ ಇಂದು ಒಳ್ಳೋಳ್ಳೆ ಸ್ಥಾನದಲ್ಲಿ ಇದ್ದಾರೆ, ಇವರ ಮನೆ ಒಂದು ಮಾದರಿ ಅನ್ನಛತ್ರ ಎಂಬ ಮಾತುಗಳನ್ನು ಕೇಳಿದ್ದೇನೆ, ಒಮ್ಮೆ ಸ್ವತಃ ಎಳ್ಳಿಕಾಯಿ ಚಿತ್ರನ್ನ ಮಾಡಿ ಕೊಟ್ಟಿದ್ದರು..! ಎನೂ ಇಲ್ಲದೇ ಚಿತ್ರನ್ನ ಮಾಡುವುದು ಹೇಗೆ ಎಂದು ವಿವರಿಸಿ ನಕ್ಕಿದ್ದರು, ಮೊನ್ನೆ ಹೋದಾಗಲೂ ಇನ್ನೊಮ್ಮೆ ಮಾಡಿಕೊಡಿ ಸಾರ್ ಅಂದಿದ್ದೆ…! ಮಗು ನಕ್ಕು ಒಕೆ ಒಕೆ ಅಂದಿತ್ತು…!

ಯಾವಾಗ ಜೊತೆಯಿದ್ದರೂ ಪಟಪಟ ಮಾತನಾಡುವ, ತಾನು ನೋಡಿದ ಬೆಂಗಳೂರನ್ನು, ನಡೆಸಿದ ಹೋರಾಟವನ್ನು ವಿವರಿಸುವ, ಅವರ ಬ್ರಾಂಡಿನ ಸಿಗರೇಟ್ ಸಿಗುವ ಅಂಗಡಿ ಹುಡುಕುವ, ರಾತ್ರಿ ಒಮ್ಮೆಮ್ಮೊ ವಿಹಾರಧಾಮ ಕ್ಲಬ್ಬಿಗೆ ಹೋಗುವ ಮನಬಿಚ್ಚಿ ಮಾತನಾಡುವ ಟಿವಿಎಮ್ ಇಲ್ಲ ಅನ್ನುವುದು ನಂಬಲು ಸಾಧ್ಯವಿಲ್ಲ…!

ಕಳೆದ ಎರಡು ವರ್ಷಗಳ ಹಿಂದೆ ಮಗಳ ಮದುವೆ ಮಾಡಿದ್ದರು, ಆಗ ಬಂದು ನೋಡಿ ಕಿರಣ್ ನನ್ನ ಮಗಳ ಮದುವೆ ನನಗೆ ಆತ್ಮಿಯ 50 ಜನ ಸ್ನೇಹಿತರನ್ನು ಕರೆಯುವ ಉದ್ದೇಶ ಇದೆ, ನೀವು ಆ ಪಟ್ಟಿಯಲ್ಲಿ ಇಲ್ಲ ಆ ಕಾರಣಕ್ಕೆ ನಿಮಗೆ ಆಹ್ವಾನ ಇಲ್ಲ ಅಂದಿದ್ದರು…! ನಾನು ಒಕೆ ಸಾರ್ ಅಂದಿದ್ದೆ….! ಒಂದು ವಾರಬಿಟ್ಟು ಈಗ ಆಹ್ವಾನಿಸುವವರ ಮಟ್ಟಿಗೆ 100ಕ್ಕೆ ಏರಿದೆ ನನ್ನ ನೂರು ಜನ ಆತ್ಮಿಯರ ಪಟ್ಟಿಯಲ್ಲಿ ನೀವು ಇದ್ದಿರಾ ಸೊ ಮದುವೆಗೆ ಬನ್ನಿ ಅಂದಿದ್ದರು…! ನಾನು ಹೋಗಿ ಒಳ್ಳೆಯ ಊಟ ಮಾಡಿಕೊಂಡು ಬಂದಿದ್ದೆ.! ಯಾವ ಸಂಪ್ರದಾಯವೂ ಇಲ್ಲದ ಅದೊಂದು ಪ್ರಗತಿಪರ ಮದುವೆ..! ಇದು ಟಿವಿಎಮ್ ಇದ್ದ/ಬದುಕಿನ ಬಗೆ …!

ನನ್ನ ಪಾಲಿಗೆ ಅವರ ನಗು, ತೋರಿದ ತಾಯ್ತನ, ಬದುಕನ್ನು ಅವರು ಅನುಭವಿಸಿದ ರೀತಿ ಎಲ್ಲವೂ ಪಾಠಗಳೇ…! ಹೋಗಿಬನ್ನಿ ಸಾರ್…! ನಿಮ್ಮ ನಗು ಚಿರಕಾಲ ನನ್ನೊಂದಿಗೆ ಉಳಿಯಲಿದೆ…!

ಹರವೂ ಕೇಸರಿ

ಪ್ರೊ. ಟಿವಿಎಂ ಎಂದೇ ಎಲ್ಲರಿಗೂ ಪರಿಚಿತರಿದ್ದ ಪ್ರೊ.ವೆಂಕಟೇಶಮೂರ್ತಿ ಇಂದು ನಮ್ಮನ್ನು ಅಗಲಿದ್ದಾರೆ. ನನ್ನ ಚಿಕ್ಕ ಚಿಕ್ಕ ಕೆಲಸಗಳನ್ನೂ ತುಂಬಾ ಆಸ್ಥೆಯಿಂದ ನೋಡುತ್ತಿದ್ದವರು ಅವರು. ಹೆಚ್ಚೆನ್ ಸ್ಮಾರಕ ಉಪನ್ಯಾಸ ಮಾಲಿಕೆಯಲ್ಲಿ ನಾನು ಜಾಗತೀಕರಣದ ಬಗ್ಗೆ ಮಾತಾಡಿದಾಗ ಅವರು ನನ್ನ ಬೆನ್ನು ತಟ್ಟಿದ್ದರು. ಮುಂದೆ ಲಾಕ್’ಡೌನ್ ವಿಡಿಯೋ ಸರಣಿ ಮಾಡುವೆನೆಂದು ದೇಣಿಗೆ ಸಂಗ್ರಹಿಸುವಾಗ, ಗುಂಡಣ್ಣನಿಂದ ವಿಷಯ ತಿಳಿದುಕೊಂಡ ಟಿವಿಎಂ ನನ್ನ ಬ್ಯಾಂಕಿಗೆ ಒಂದಿಷ್ಟು ರವಾನಿಸಿದ್ದರು.

ದೆಹಲಿಯ ರೈತ ಹೋರಾಟದ ಚಿತ್ರ ಕೈಗೆತ್ತಿಕೊಂಡಾಗ ನನ್ನ ಅರಿವಿಗೂ ಬರದಂತೆ ದೇಣಿಗೆ ರವಾನಿಸಿದ್ದರು. ‘ಕಿಸಾನ್ ಸತ್ಯಾಗ್ರಹ’ ಚಿತ್ರದ ಮೊದಲ ಪ್ರದರ್ಶನಕ್ಕೆ ಆಹ್ವಾನಿಸಲು ಕರೆ ಮಾಡಿದಾಗ ಅವರಿಗೆ ಶಸ್ತ್ರಚಿಕಿತ್ಸೆ ಆಗಿದೆ, ಈಗ ತಾನೇ ಆಸ್ಪತ್ರೆಯ್ಂದ ಮನೆಗೆ ಬಂದೆವು, ಮುಂದೆ ಯಾವಾಗಲಾದರೂ ಶೋ ಇದ್ದಾಗ ಬರುತ್ತೇವೆ ಎಂದಿದ್ದರು ಅವರ ಮಡದಿ ಗಾಯತ್ರಿಯವರು.

ನಿಮ್ಮ ಪ್ರೋತ್ಸಾಹ ನನ್ನನ್ನು ಹುರಿದುಂಬಿಸಿದೆ ಸರ್. ಇನ್ನಷ್ಟು ಕಾಲ ನಮ್ಮೊಡನೆ ಇರಬೇಕಿತ್ತು ನೀವು.

‍ಲೇಖಕರು Admin

November 23, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: