ನಮ್ಮ ತಲ್ಲೂರು ಫ್ಯಾಮಿಲಿ ಟ್ರಸ್ಟ್ 2017 ರಿಂದ ಆರೋಗ್ಯಕರವಾದ “ಕರಾವಳಿ ಕಟ್ಟು”ವ ಚಿಂತನೆಯಡಿ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ. ಅವುಗಳಲ್ಲಿ ತಲ್ಲೂರು ನುಡಿಮಾಲೆಯೂ ಒಂದು.
ಈ ಸರಣಿ ದತ್ತಿ ಉಪನ್ಯಾಸಗಳ ಅಡಿಯಲ್ಲಿ ಇಲ್ಲಿಯ ತನಕ ಹಿರಿಯ ಪತ್ರಕರ್ತ ಪಿ. ಸಾಯಿನಾಥ್, ಹಿರಿಯ ಚಿಂತಕ ಪ್ರೊ| ರಹಮತ್ ತರೀಕೆರೆ ಉಪನ್ಯಾಸ ನೀಡಿದ್ದಾರೆ.
ಈ ಬಾರಿ ಉಪನ್ಯಾಸ ನೀಡಲಿರುವವರು ದೇಶದ ಪ್ರಮುಖ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾದ, ಯೋಜನಾ ಆಯೋಗದ ಕೊನೆಯ 10 ವರ್ಷಗಳ ಕಾಲ ಅದರ ಮುಖ್ಯಸ್ಥರಾಗಿದ್ದ ಮತ್ತು ದೇಶದ ಉದಾರೀಕರಣ ಪ್ರಕ್ರಿಯೆಯ ಆಧಾರಕಂಬವೂ ಆಗಿದ್ದ ಶ್ರೀ. ಮೊಂಟೆಕ್ ಸಿಂಗ್ ಅಹ್ಲೂವಾಲಿಯಾ.
ದೇಶದ ಇಲ್ಲಿಯ ತನಕದ ಉದಾರೀಕರಣದ ಹಾದಿ ಮತ್ತು ಮುಂದಿನ 25 ವರ್ಷಗಳ ಸಾಧ್ಯತೆಯ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲವರು ಅವರು. ಒಳ್ಳೆಯ ಮಾತುಗಾರ ಕೂಡ. 82 ವರ್ಷದ ಈ ಹಿರಿಯರು ನಮ್ಮೊಡನೆ ಇರಲು, ತನ್ನ ಚಿಂತನೆಗಳನ್ನು ಹಂಚಿಕೊಳ್ಳಲು ಒಪ್ಪಿರುವುದು ನಮ್ಮ ಸೌಭಾಗ್ಯ.
ಉಪನ್ಯಾಸದ ಬಳಿಕ, ನಾಡಿನ ಹಿರಿಯ ಆರ್ಥಿಕ ಚಿಂತಕರಲ್ಲಿ ಒಬ್ಬರೂ, ಕಥೆಗಾರರೂ ಆಗಿರುವ ಪ್ರೊ| ಎಂ. ಎಸ್. ಶ್ರೀರಾಂ (IIMB) ಅವರು ಮೊಂಟೆಕ್ ಸಿಂಗ್ ಅವರೊಂದಿಗೆ ಸಂವಾದ ನಡೆಸಲಿದ್ದಾರೆ.
ಮುಂದಿನ ತಿಂಗಳು ಸೆಪ್ಟಂಬರ್ 24 ಭಾನುವಾರ ಉಡುಪಿ ಟೌನ್‍ಹಾಲಿನಲ್ಲಿ ಈ ಮಹತ್ವದ ಕಾರ್ಯಕ್ರಮಕ್ಕೆ ತಾವು ನಮ್ಮೊಂದಿಗಿರಬೇಕು. ಸೀಮಿತ ಸ್ಥಳಾವಕಾಶ ಇರುವುದರಿಂದ ಆಸಕ್ತರು ದಯಮಾಡಿ ಮುಂಚಿತವಾಗಿ ತಮ್ಮ “ಉಚಿತ ಪ್ರವೇಶ” ಪಾಸ್‌ಗಳನ್ನು ಪಡೆದುಕೊಳ್ಳಬೇಕು. ಪಾಸ್ ಬೇಕಾಗಿರುವವರು 98455 48478 ಅಥವಾ 95388 55776 ಗೆ ವಾಟ್ಸಾಪ್/SMS ಸಂದೇಶ ಕಳುಹಿಸಬಹುದು.
ಉತ್ತಮ ಲೇಖನಗಳು