ಸತ್ಯಮಂಗಲ ಮಹಾದೇವ
**
ಪಶ್ಚಿಮ ಬಂಗಾಳದಲ್ಲಿ ನಡೆದ ವೈದ್ಯಯೊಬ್ಬರ ಅತ್ಯಾಚಾರ ಖಂಡಿಸುತ್ತೇನೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಆದ್ರೂ ನಾವು ಹೆಣ್ಣನ್ನು ಭೋಗ ವಸ್ತುವಾಗಿ ನೋಡುವುದನ್ನು ಬಿಟ್ಟಿಲ್ಲ: ಹೆಣ್ಣಿನ ಮೇಲಿನ ಕ್ರೌರ್ಯಕ್ಕೆ ಧಿಕ್ಕಾರ. ವರಮಹಾಲಕ್ಷ್ಮಿ ಹಬ್ಬದ ದಿನವೇ ಅಂತಹ ಘೋರ ನಡೆದದ್ದು ಖಂಡಿಸಿ ಬರೆದ ಪದ್ಯ ಇದು.
**
ಸಖಿ
ಇಂದು ಹೆಣ್ಣುಮಕ್ಕಳು ಸಂಭ್ರಮ ಪಟ್ಟು
ವರಕೊಡು ಎಂದು ಮಹಾಲಕ್ಷ್ಮಿಯನ್ನು
ಬೇಡಿಕೊಂಡಿದ್ದಾರೆ.
ಎಲ್ಲೆಲ್ಲೂ ಹೆಣ್ಣುಮಕ್ಕಳ ವ್ರತ, ಪೂಜೆ
ನಿನ್ನ ಸಂತೋಷದಲ್ಲೂ ಹಬ್ಬ ಮನೆಮಾಡಿತ್ತು
ಪೂಜೆ, ಮೌಢ್ಯ, ಆಚರಣೆ ಎಲ್ಲದರಾಚೆಗೆ
ವೈದ್ಯ ದೇವರು ಎನ್ನುವ ಈ ಜನ
ವೈದ್ಯೆಯಾದ ಹೆಣ್ಣನ್ನು ಅತ್ಯಾಚಾರ ಮಾಡಿ
ಕೊಂದುಬಿಸಾಡಿರುವ ಕೃತ್ಯಕ್ಕೆ
ನಿನ್ನ ಮನ ಮಿಡಿದು ಹಬ್ಬದ ದಿನ
ದುಃಖ ದಿಬ್ಬಣವಾಯ್ತು
ಇದೆ ಅಲ್ಲವೇ ಅಂತಃಕರಣ ಲಕ್ಷೀಯಾಗಲಿ
ವೈದ್ಯೆಯಾಗಲಿ ನೀನಾಗಲಿ ಹೆಣ್ಣಲ್ಲವೇ
ಜೀವಕ್ಕೆ ಮಿಡಿಯುವ ನಿನ್ನ ಗುಣವೇ ಹಬ್ಬ ಕಣೇ
ಕೊಂದವರು ಉಳಿವರೇ ಹೇಳೇ
ನಿನ್ನ ಭಾವಲೋಕದ ಬೆಳಕನು ಈ ಜಗಕೆ ಬಿತ್ತಬೇಕು
ಎಂದಾದರೊಂದುದಿನ ಈ ಕೌರ್ಯದ ಹೃದಯಕ್ಕೆ
ಪ್ರೀತಿಯ ಮಳೆ ಬರಲಿ ಎಂದು
ನಿನ್ನ ಜೊತೆ ನಿಂತು ಪ್ರಾರ್ಥಿಸುವೆ
ನೀನು ಹೆಣ್ಣು ನನ್ನವಳು ಎಂಬುದೇ ನನಗೆ ಸಂಭ್ರಮ
ನಿನ್ನ ಕಂಡಾಗಲೆಲ್ಲಾ ಲಕ್ಷ್ಮಿ ಹಬ್ಬ –
0 ಪ್ರತಿಕ್ರಿಯೆಗಳು