ಜಿ ಲೋಕೇಶ ಕಂಡಂತೆ ‘ಕಂಡಕ್ಟರ್ ಕವಿತೆಗಳು’

ಈ ಕೃತಿಯನ್ನು ಕೊಳ್ಳಲು – https://rb.gy/2fx0q ಈ ಲಿಂಕ್ ಕ್ಲಿಕ್ ಮಾಡಿ

ಪುಸ್ತಕ : ಕಂಡಕ್ಟರ್ ಕವಿತೆಗಳು’
ಲೇಖಕರು : ಸದಾಶಿವ ಸೊರಟೂರು 
ಪ್ರಕಾಶನ : ಬಹುರೂಪಿ
ಬೆಲೆ :130 ರೂ

ಸಂಪರ್ಕಿಸಿ: 70191 82729

ಜಿ ಲೋಕೇಶ

ಅಪ್ಪ ಎಂದಿಗೂ ರಾತ್ರಿ ಪಾಳೆಯಗಳಲ್ಲಿ ಕೆಲಸ ನಿರ್ವಹಿಸಿ ಮಾರನೇ ಮಧ್ಯಾಹ್ನ ಮನೆಗೆ ಬರುತ್ತಿದ್ದವರು ಬಂದರೆ ನನಗೆ ಬದುಕಿನ ಪಾಠ ಪ್ರಾರಂಭ ನಾನೇನೂ ಮಾಡಿಲ್ಲ ಓದು ಚೆನ್ನಾಗಿ ಅದಷ್ಟೇ ನಿನ್ನ ಕೈ ಹಿಡಿಯುವುದು. ಎಂದು ಹೇಳಿದ್ದೆ ಹೇಳಿ.. ನನಗೂ ಸವಕಲು ಮಾತುಗಳಾಗಿ ಕೇಳುವುದನ್ನೇ ಬಿಟ್ಟು ಬಿಟ್ಟೇನು. ಆದರೆ ಬದುಕಿನ ಪಾಠಗಳನ್ನು ಅವರು ಕಲಿತದ್ದೇ ಈ ಜನಗಳ ಪ್ರಯಾಣದ ನಡುವೆ ಎ೦ದು ಇರಬೇಕು ಎನಿಸಿದ್ದೇ ಸದಾಶಿವ ಸೊರಟೂರು ಅವರ ಕಂಡಕ್ಟರ್ ಕವಿತೆಗಳು ಓದಿದ ಮೇಲೆ.

ಇಬ್ಬರು ಒಂದೇ ತಾಲೂಕಿನಲ್ಲಿ ಮೇಷ್ಟರುಗಳು ಆಗಿದ್ದರಿಂದ ಸಂಜೆಯ ಗ್ರಾಮಾಂತರ ಕಾಫಿ ಬಳಿ ಸಾಹಿತ್ಯಕ ಚರ್ಚೆಗಳಿಗೇನು ಕಡಿಮೆ ಇರಲಿಲ್ಲ. ಅವರು ಬರೆದ ಎಷ್ಟೋ ಕವಿತೆಗಳಿಗೆ ಕಥೆಗಳಿಗೆ ನಾನು ಮೊದಲ ಓದುಗ ಆಗಿ ಅಭಿಪ್ರಾಯ ತಿಳಿಸುತ್ತಿದ್ದೆ ಎಂಬುದೊಂದು ಹೆಮ್ಮೆ. ಹೀಗೆ ಒಮ್ಮೆ ಕಂಡಕ್ಟರ್ ಭಾವನೆಗಳನ್ನು ಹೇಳುವಂತೆ ಅದರಲ್ಲಿ ಬಲ್ಬ್ ಹತ್ತಿಕೊಳ್ಳುವಂತ ಸಾಲುಗಳನ್ನು ಕಳುಹಿಸಿಕೊಟ್ಟರು ಮೊದಲ ಓದಿನಲ್ಲಿ ಆಪ್ತವಾಗಿ ಇಷ್ಟವಾಗತೊಡಗಿದವು.

ನನ್ನ ತಂದೆಯು ಕಂಡಕ್ಟರ್ ಆಗಿದ್ದರಿಂದ ಈ ಸಾಲುಗಳ ಮೂಲಕ ಇರದಿರುವ ಅವರನ್ನು ಮತ್ತೆ ಕಾಣಲೆತ್ನಿಸುವ ಸ್ವಾರ್ಥದೊಂದಿಗೆ ಖಂಡಿತಾ ಮುಂದುವರಿಸಿ ನಿಲ್ಲಿಸಬೇಡಿ ಎಂಬ ಮಾತು ಮುಂದಿಟ್ಟೆ ನಿರ್ವಾಹಕನೊಬ್ಬ ಬಸ್ಸಿನೊಳಗೆ ವಿವಿಧ ಜನರ ಮನಸ್ಥಿತಿಯನ್ನು ಅದೆಷ್ಟು ಅರಿಯುತ್ತಾನೆ ಅಲ್ಲವೇ ಬಸ್ಸು ಹತ್ತುವಾಗಲೇ ಆತುರಪಡುವವರು ಟಿಕೇಟ್ ನೀಡಲು ಬಳಿ ಬಂದರೂ ಅವಾಗಿನ್ನು ದುಡ್ಡು ತಡಕಾಡುವವರು ಮುಂದೆಯು ಹೋಗದೆ ಹಿಂದೆಯು ಹೋಗದೆ ಬೇರೆಯವರಿಗೆ ತೊಂದರೆ ನೀಡುವವರು ಬಸ್ಸು ಹೊರಟಿತು ಎನ್ನುವಾಗ ಇಳಿಯುವವರು ಹತ್ತುವವರು ಚಿಲ್ಲರೆಗಾಗಿ ಜಗಳ ಆಡುವವರು ಚಿಲ್ಲರೆ ನೀಡದೆ ಸತಾಯಿಸುವವರು ಅಬ್ಬಾ! ಒಂದೇ ಎರಡೇ ಉದಾಹರಣೆಗಳು.. ಪ್ರತಿ ದಿನವೂ ತನ್ನ ವೃತ್ತಿಯಲ್ಲಿ ಅತಿ ಹೆಚ್ಚು ಸಂಭಾಷಣೆ ಮಾಡುವ ಏಕೈಕ ವ್ಯಕ್ತಿ ಈ ನಿರ್ವಾಹಕನೇ ಸರಿ.

ಸದಾಶಿವ ಅವರು ಅದ್ಯಾವ ಕಂಡಕ್ಟರ್ ನನ್ನು ಮನದಲ್ಲಿ ತಂದಿರಿಸಿಕೊಂಡು ಬಸ್ಸಿನೊಳಗೆ ಜಗವೊಂದನ್ನು ಸೃಷ್ಟಿಸಿ ಬದುಕಿನ ಸತ್ಯವನ್ನು ಆತನ ಮೂಲಕ ಹೇಳಿಸಿದರೋ ಕಾಣೇ. ಆದರೆ ಓದಿದ ಮೇಲೆ ಯಾವುದೇ ಬಸ್ಸು ಹತ್ತಿದಾಗಲೂ ಸದಾಶಿವರ ಕಂಡಕ್ಟರ್ ನನ್ನು ನಾವು ಹುಡುಕಿಕೊಳ್ಳುವುದರಲ್ಲಿ ಸಂಶಯವಿಲ್ಲ.

ತುಂಬಾ ನರಳಿದ ಮನುಷ್ಯ
ಗಟ್ಟಿಯಾಗುತ್ತಾನೆ ಸರ್
ಎಂದು ಹೇಳಿಸಿ ನಮ್ಮೆಲ್ಲ ನರಳುವಿಕೆ ಗಟ್ಟಿಯಾಗಲಿಕ್ಕೆ
ಬದುಕನ್ನು ಮುನ್ನೆಡಸಲು ಎನ್ನುತ್ತಾರೆ

ಕವಿ ಮನಸ್ಸು ಅಂದು ತುಂಬಿದಂತೆ ಕಂಡು
ತುಂಬಿದ ಬಸ್ಸು
ತುಂಬಿದ ಮನಸ್ಸು ಎರಡೂ ಭಾರ ಎ೦ದು
ಹೇಳಿಸಿ ಒಂದೇ ಸಾಲಿಗೆ ಮನಸ್ಸನ್ನು ಹಗುರಾಗಿಸುತ್ತಾರೆ

ಕಂಡಕ್ಟರ್ ನ ಮನಸ್ಥಿತಿಯು ದಿನವೂ ಒಂದೇ ಆಗಿರಲಿಕ್ಕಿಲ್ಲ ತನ್ನ ವೃತ್ತಿಯ ಬಗ್ಗೆ ಅವನಿಗೆ ಬೇಸರ ಆಗಿರಬಹುದೇನೋ ಎಂಬಂತೆ
ದೊಡ್ಡ ವೃತ್ತಿಯಲ್ಲಿ ಇದ್ದ ಮಾತ್ರಕ್ಕೆ ದೊಡ್ಡ ಸಾಲುಗಳು ಹುಟ್ಟುವುದಿಲ್ಲ ಸರ್.. ಎ೦ದು ಹೇಳುತ್ತಾನೆ.

ಸಿಕ್ಕ ಸೀಟಲ್ಲೇ ಕೂತು ಪಯಣ ಮುಗಿಸಬೇಕು

ನಾವು ದೂರಬೇಕಾದುದು ಕದ್ದವರನ್ನಲ್ಲ ಮೈ ಮರೆತವರನ್ನು

ದುಃಖ ಬೇರೆಯವರ ಬಳಿ ಆಸರೆ ಕೇಳುತ್ತೆ
ಕಂದಾಯವನ್ನಲ್ಲ

ಟಿಕೆಟ್ ಕೇಳಿ ಪಡೆಯಬೇಕು
ಒಲವನ್ನು ಕೇಳದೆ ಪಡೆಯಬೇಕು

ನಾಳೆ ಬದುಕಲಿಕ್ಕೆ ಒಂದು ನೆಪವಾದರೂ ಬೇಕು ತಾನೇ?

ಹೀಗೆ ಸಿಗುವ ಸಾಲುಗಳನ್ನು ಒಂದೇ ಗುಟುಕಿಗೆ ಅವನೊಡನೆ ಕುಡಿದರೂ ಅದರ ಸ್ವಾಧದ ಆಸ್ವಾಧನೆಗೆ ಸಮಯ ತೆಗೆದುಕೊಳ್ಳುವಂತೆ ಮಾಡುತ್ತಾನೆ ಕಂಡಕ್ಟರ್ ಇವನೇನೂ ಕನ್ಪ್ಯೂಶಿಯಸ್, ಗಾಲಿಬ್, ಝೆನ್, ಓಶೋ, ಇತ್ಯಾದಿ ದಾರ್ಶನಿಕರನ್ನು ಓದಿಕೊಳ್ಳದಯೇ ಬರಿ ಜನರು ನೀಡುವ ಮಾತುಗಳಿಂದಲೇ ನಮಗೆ ಆದರ್ಶನಾಗಿಬಿಟ್ಟನೆ ಎನಿಸುತ್ತದೆ.

ಹೀಗೆ ಹುಡುಕುತ್ತಾ ಹೋದರೆ ಬಸ್ಸಿನ ಪ್ರತಿ ಸೀಟಿನಲ್ಲೂ ಕುಳಿತುಕೊಳ್ಳಲು ತಯಾರಾಗುವಂತೆ ತನ್ನ ವಿಶಲ್ ಮೂಲಕ ನಮ್ಮನ್ನು ಪ್ರತಿ ದಿನ ಪಯಣ ತಪ್ಪದಂತೆ ಕೂಗುತ್ತಾನೆ.

ಹೀಗೆ ಪ್ರತಿ ಪುಟಗಳಲ್ಲಿನ ಕಂಡಕ್ಟರನ ಉವಾಚಗಳು
ಒಂದಿಷ್ಟು ಪುರುಸೊತ್ತು ಕೊಟ್ಟು ನಮ್ಮಲ್ಲೊಂದು
ಚಿಂತನೆಗೆ ಅಣಿಯಾಗಿಸಿ ಪ್ರಯಾಣಿಸುತ್ತಾ
ಕಂಡಕ್ಟರ್ ನ ಮುಂದಿನ ಮಾತುಗಳೇನು? ಎಂಬ ಕುತೂಹಲಕ್ಕೆ ತಂದಿರುಸುತ್ತವೆ.

ಹಿಂದೆ ಕೆ. ನಲ್ಲತಂಬಿ ಸರ್ ಅವರ ಕೋಶಿಸ್ ಕವಿತೆಗಳನ್ನು ವಿನ್ಸೆಂಟ್ ಮೂಲಕ ತಂದುಕೊಟ್ಟ ಬಹುರೂಪಿ ಇಂದು ಕಂಡಕ್ಟರ್ ಕವಿತೆಗಳನ್ನು ಸದಾಶಿವ ಅವರ ಮೂಲಕ ನೀಡಿದೆ. ಮಿಸ್ ಮಾಡದೆ ಓದಿ ಈ ನಿರ್ವಾಹಕನನ್ನು ಹುಡುಕಲಾದರೂ ಬಸ್ಸಿನೊಳಗೆ ಪ್ರಯಾಣಿಸುತ್ತೀರಿ. ನಾನಂತು ಅಪ್ಪನನ್ನು ಹುಡುಕಲು ಬಸ್ಸು ಹತ್ತಿ ಪಯಣಿಸಲು ಹೊರಟೆ.

‍ಲೇಖಕರು avadhi

May 25, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: