
ಮೂವತ್ತೈದು ವರ್ಷಗಳ ಹಿಂದೆ ನನಗೆ ಕವಿತೆಯ ರುಚಿ ಹತ್ತಿಸಿದ….
ಗಂಗಾಧರ ಚಿತ್ತಾಲರ ” ಹರಿವ ನೀರಿದು”
ರಾಮಾನುಜನ್ ರ ” ಹೊಕ್ಕಳಲ್ಲಿ ಹೂವಿಲ್ಲ”,
ತಿರುಮಲೇಶರ ” ಮುಖಾಮುಖಿ”……ಕವನ ಸಂಕಲನಗಳಿಗೆ…

ಒಂದು ಜಿಲೇಬಿ
ಅವರ ಕಂಗಳ ಹಾಗೆ ಕಣ್ಣು ತುಸು ಮಲಗಿದವರನ್ನು ಹಾಗೆ
ಗೇಲಿಯಲ್ಲಿ ಎಬ್ಬಿಸಬೇಡಿ.ಅವರ ಕಂಗಳೆ ಹಾಗೆ
ಲೂಟಿಯಾದ ಪೇಟೆಯಂತೆ
ಸಪ್ಪೆ ಕಿರಣವೊಂದು ದಾರದಂತೆ ತೆರೆದ ಕಣ್ಣಿಂದ
ಹೊರಬರುತ್ತಲೇ ಇದೆ ಸಿಕ್ಕ ಗಿಡಮರ ಕಂಬ
ಸೈಕಲ್ಲುಗಳ ಕಟ್ಟಿ ಹೆಡೆಮುರಿ ಬೀಳಿಸುತ್ತ
ದಣಿಯದ ಅಭಯಹಸ್ತಗಳೂ ಇದರಲ್ಲಿ
ಸಿಕ್ಕುಬಿದ್ದಿವೆ.ಹೂಗಳ ಕತ್ತನ್ನೆ ಕುಯ್ದೀತು ಎಚ್ಚರ
ಬಗ್ಗಿಸಿ ಹಿಡಿಯಿರಿ ಹಾಗೆ
ಇವರ ಹುರುಬುರುಕು ಅಂಗಾಂಗುಗಳ ತಪ್ಪಿಸಿಯೇ
ಅಡ್ಡಾಡುವನು ದಿನಮಣಿ.ಉಪಖಂಡದಿಂದೆದ್ದ ಕಂಬನಿಯ ಮೋಡ
ಸದ್ದಿಲ್ಲದೆ ನೆತ್ತಿಗೆ ಬಂದ ಕರಿಗಟ್ಟಿವೆ
ಚಹಾ ತಿಂಡಿ ಆದವರು ಅಲ್ಲಲ್ಲೆ ನಿಂತುಕೊಳ್ಳಿ.
ಹೀಗೆ ನೋಡಿ.ತಟತಟ ಉಪ್ಪುಮಳೆಗೂ ಎವೆಯಿಕ್ಕದ ಆ ಕಂಗಳಲ್ಲಿ
ಎಲ್ಲಾ ಕಾಣುತ್ತಿದೆ
ರಾತ್ರಿಯೊಂದನ್ನು ಕಾಲಲ್ಲಿ ಅಳಿಸಿ ಹಾಕುತ್ತಿದೆ ನಸುಕಿದ ಪೇಟೆ
ಮೊಲೆಗಳ ಎಲ್ಲೆಲ್ಲೋ ಅಡವಿಟ್ಟು ಬಂದ ಯಾರ್ಯಾರದೋ ಅಕ್ಕ ತಂಗಿ
ಸಾಲಾಗಿ ನೀಲಿ ವ್ಯಾನಿನಲ್ಲಿ ಹತ್ತುತ್ತುದ್ದಾರೆ
|
0 Comments