ಜಯರಾಮಾಚಾರಿ ಕವಿತೆ- ದ್ರೌಪದಮ್ಮನ ವಂಶದವರು…

ಜಯರಾಮಾಚಾರಿ

ಬನ್ನಿ
ಇವರ ಪರಿಚಯ ಮಾಡಿಕೊಡುತ್ತೇನೆ.

ಇವರು ಮೈಸೂರು ರೋಡು ಮೆಟ್ರೊದವರು
ಬಂದು ಒಂದು ಇಲ್ಲ ಎರಡೋ ತಿಂಗಳಿರಬಹುದು
ಹೀಗೆ ಬೆಳಗ್ಗಿನ ಬಿಸಿಲಿಗೆ ಮೈ ಕಾಯಿಸಿಕೊಳ್ಳುವ
ಇವರು
ದಿನವಿಡೀ ದುಡಿಯುತ್ತಾರೆ.
ವಿಪರೀತ ಬೆವರಿದ ಗಳಿಗೆಯಲ್ಲಿ
ಇವರನ್ನು ದುಡಿಸಿಕೊಂಡವರು
ಹೀಗೆ ಬಿಸಿಲಿಗೆ ನಿಲ್ಲಿಸಿ ಹೋಗಿಬಿಡುತ್ತಾರೆ.

ಇವರು ಸ್ತ್ರೀ ಲಿಂಗದವರೆನ್ನುವುದರಲ್ಲಿ
ಸಂಶಯವಿಲ್ಲ
ನೋಡಿ ಇಳಿಬಿಟ್ಟ ಅವರ ಕೂದಲುಗಳೇ ಸಾಕ್ಷಿ
ಇವರಿಗೆ ಕಣ್ಣುಗಳಿದೆ ಬಾಯಿಲ್ಲ
ಬಾಯಿದ್ದರೆ ಹೀಗೆ ನಿಂತ ಕ್ಷಣಗಳಲ್ಲಿ
ತಮ್ಮ ಕಷ್ಟಗಳನ್ನಾದರೂ ಹಂಚಿಕೊಳ್ಳುತ್ತಿದ್ದರೇನೋ
ಸುಖವಂತೂ ಅವರ ಹಣೆಯಲ್ಲಿಲ್ಲ
ನೋಡಿ ಹೇಗೆ ಸೊರಗಿ ಹೋಗಿದ್ದಾರೆ.

ಅವಳ್ಯಾರೋ ದ್ರೌಪದಮ್ಮ ಎಂಬೋಳು
ಕೂದಲು ಕಟ್ಟದೇ ಕೌರವನ ವಂಶ ತೊಳುದ್ಳಂತೆ
ಅವಳ ಕಡೆಯವರೇ ಇವರಿರಬಹುದು
ನಾಗರಿಕ ನೆಲಗಳನ್ನ ತೊಳೆಯುತ್ತಿದ್ದಾರೆ
ಇವರು ಹೆಡೆಮುರಿ ಕಟ್ಟಿದರೇ ಏನಾಗಬಹುದು?!
ಇವರ ಆಯಸ್ಸು ಕಮ್ಮಿ ಒಂದು ಹೆಚ್ಚೆಂದರೆ ಎರಡು
ತಲೆ ಬೋಳಿಸಿ ಗುಜರಿಗೆಸೆದು ಬಿಡುತ್ತಾರೆ
ಮುಂಡವೊಂದು ಕಡೆ ರುಂಡವೊಂದು ಕಡೆ

ಪರಿಚಯವಾಯ್ತಲ್ಲ
ಮುಂದೆ ಯಾವತ್ತಾದರೂ ಮೆಟ್ರೊ ಕಡೆ ತಲೆಹಾಕಿದಾಗ
ಕತ್ತು ಬಗ್ಗಿಸಿಕೊಂಡು ಮಾಲೀಕರಿಂದ ದಂಡಿಸಿಕೊಂಡು
ತಮ್ಮ ಪಾಡಿಗೆ ಅತ್ತಿಂದಿತ್ತಿಂದತ್ತ ದುಡಿವ
ಇವರನ್ನ ನೋಡಿ
ಒಮ್ಮೆ ಮುಗುಳ್ನಕ್ಕು ಹಾಯ್ ಅನ್ನಿ !

‍ಲೇಖಕರು Admin

September 22, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: