ಸಂಗಮೇಶ್ ಮೆಣಸಿನಕಾಯಿ
ಉತ್ತರ ಕರ್ನಾಟಕದ ಭಾಷೆಯು ಕರ್ನಾಟಕದ ಎಲ್ಲ ಊರುಗಳ ಕನ್ನಡಕ್ಕಿಂತ ಭಿನ್ನವಾಗಿದೆ. ಅದು ಫಿಲ್ಟರ್ ಇಲ್ಲದ ಭಾಷೆಯು ಹೌದು. ಖ್ಯಾತ ಹಾಸ್ಯ ಸಾಹಿತಿ, ವಿದೂಷಕ ಗಂಗಾವತಿ ಪ್ರಾಣೇಶ್ ಅವರು ತಾವು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಜನರನ್ನು ನಗಿಸಲು ಹೆಚ್ಚಾಗಿ ಉತ್ತರ ಕರ್ನಾಟಕದ ಭಾಷೆ ಹಾಗೂ ಅಲ್ಲಿನ ಜನರ ಜೀವನ ಶೈಲಿಯ ಕುರಿತು ಮಾತನಾಡುತ್ತಾರೆ.
ಹೀಗೆ ಮಾತನಾಡುವ ಭರದಲ್ಲಿ ಭಾಷೆಯ ವೈವಿಧ್ಯತೆಯ ಬಗ್ಗೆ ಹೇಳುತ್ತ ಸುಳ್ಳುಗಳನ್ನೂ ಸೃಷ್ಟಿಸುತ್ತಿದ್ದಾರೆ. ಹಾಗೂ ಉತ್ತರ ಕರ್ನಾಟಕದ ಜನರ ಭಾಷೆಯ ವಿಷಯವಾಗಿ ಹೀಯಾಳಿಸುವುದು, ಅಲ್ಲಿನ ಜನರ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದಿದ್ದಾರೆ ಖ್ಯಾತ ಪತ್ರಕರ್ತ ಸಂಗಮೇಶ್ ಮೆಣಸಿನಕಾಯಿ.
ವಿದೂಷಕ Gangavathi B. Pranesh ಅವರು ನನಗೆ ಕಳೆದ ೧೮ ವರ್ಷಗಳಿಂದ ಪರಿಚಿತರು. ಮತ್ತೊಬ್ಬ ವಿದೂಷಕ ಬಸವರಾಜ ಮಹಾಮನೆ ಒಂದು ದಶಕದಿಂದ ಪರಿಚಿತರು. ಈ ಇಬ್ಬರೂ ಮತ್ತಿತರ ವಿದೂಷಕರು ಜನರನ್ನು ನಗಿಸಲು ಉತ್ತರ ಕರ್ನಾಟಕದ ಜನರ ಮುಗ್ಧತೆಯನ್ನು, ದಡ್ಡತನವನ್ನು, ಔದಾರ್ಯವನ್ನು ತುಂಬಾ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ನಮ್ಮೆಲ್ಲರ ನೋವನ್ನು ತಮ್ಮ ಬೇಳೆ ಬೇಯಿಸಿಕೊಳ್ಳಲು ಯದ್ವಾತದ್ವಾ ಬಳಸಿಕೊಳ್ಳುತ್ತಿದ್ದಾರೆ. ಭಾಷೆಯ ವೈವಿಧ್ಯತೆಯ ಬಗ್ಗೆ ಹೇಳುತ್ತ ಸುಳ್ಳುಗಳನ್ನೂ ಸೃಷ್ಟಿಸುತ್ತಿದ್ದಾರೆ.
ಈ ಆರೋಪಕ್ಕೆ ಒಂದು ಉದಾಹರಣೆ ಇವತ್ತು ಸಂಜೆ ೭.೩೦ಕ್ಕೆ ಟಿ.ವಿ.-೯ ಚಾನೆಲ್ನಲ್ಲಿ ಪ್ರಸಾರವಾದ ಕಾರ್ಯಕ್ರಮ. ಇದರಲ್ಲಿ ಪ್ರಾಣೇಶ್ ಅವರು ಹೇಳಿದ್ದು-‘ಚಿಕ್ಕಪ್ಪನಿಗೆ ಬಿಜಾಪುರ ಕಡೆ ಕಾಕಾ ಅಂತಾರ. ನಮ್ಮ ಹೈದರಾಬಾದ್-ಕರ್ನಾಟಕದ ಕಡೆ ಕಕ್ಕ ಅಂತಾರ’.
ನನ್ನ ಸ್ವಂತ ಊರು ಯಲಬುರ್ಗಾ ತಾಲೂಕಿನ ಕಾತರಾಳ. ನಾನು ನನ್ನ ಒಂದನೆಯ ವಯಸ್ಸಿನಿಂದ ಒಂಬತ್ತನೆಯ ವಯಸ್ಸಿನವರೆಗೆ ಅದೇ ತಾಲೂಕಿನ ಭಾನಾಪುರದಲ್ಲಿ ಬೆಳೆದಿದ್ದೇನೆ.
ಮುಂದೆ ಒಂದು ವರ್ಷದ ಹಿಂದಿ ಬಿ.ಎಡ್. ಓದಿರುವುದು ಕೊಪ್ಪಳದಲ್ಲಿಯೇ. ಅಂದರೆ ಇದೆಲ್ಲವನ್ನು ಹೈದರಾಬಾದ್-ಕರ್ನಾಟಕದಲ್ಲಿಯೇ ಕಳೆದಿದ್ದೇನೆ. ಅಲ್ಲಿಯೇ ಹುಟ್ಟಿ ಬೆಳೆದು, ಶಿಕ್ಷಕನಾಗಿ ಸೇವೆ ಮಾಡಿ ಈಗ ನಿವೃತ್ತನಾಗಿರುವ ನನ್ನ ಚಿಕ್ಕಪ್ಪನಿಗೆ ಕಾಕಾ ಎಂದೇ ಕರೆಯುತ್ತೇನೆ. ನನ್ನ ಒಟ್ಟು ಹೈ-ಕ ಜೀವನದಲ್ಲಿ ಕಾಕಾಗೆ ‘ಕಕ್ಕ’ ಎಂದು ಕರೆಯುವುದನ್ನೇ ಕೇಳಿಲ್ಲ.
ನನ್ನ ಅನುಭವದ ವ್ಯಾಪ್ತಿ ಚಿಕ್ಕದಿರಬಹುದು ಎಂಬ ಗುಮಾನಿಯಿಂದ ಕಲಬುರಗಿ, ಬಳ್ಳಾರಿ, ರಾಯಚೂರು, ಬೀದರ್ ಕಡೆ ನೆಲೆಸಿರುವ ನನ್ನ ಸಂಬಂಧಿಕರು, ಸ್ನೇಹಿತರಿಗೆ ಕರೆ ಮಾಡಿ ವಿಚಾರಿಸಿದೆ. ಎಲ್ಲರೂ ಕಾಕಾಗೆ, ‘ಕಕ್ಕ’ ಎಂದು ಕರೆಯುವುದನ್ನು ಕೇಳಿಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಾಣೇಶ್ ಅವರೇ, ನೀವು ಹೇಳಿದ ‘ಕಕ್ಕ’, ಯಾವ ‘ಕಕ್ಕಸಿನಲ್ಲಿ’ ಕೇಳಿದ್ದು?
ನಿಮ್ಮ ಗಳಿಕೆಗೆ ನಮ್ಮನ್ನು ಹೀಯಾಳಿಸುವುದನ್ನು ದಯವಿಟ್ಟು ನಿಲ್ಲಿಸುತ್ತೀರಾ? ನಿಮ್ಮ ಭಾಷಣಗಳಿಂದ ಉತ್ತರ ಕರ್ನಾಟಕದವರೆಂದರೆ ‘ದಡ್ಡರು’, ‘ಶಾಲೆಗೆ ಹೋಗದವರು’, ‘ಚಡ್ಡಿ ಹಾಕದವರು’, ‘ಸಿಂಬಳ ಒರೆಸಿಕೊಳ್ಳದವರು’, ‘ರಿಸಲ್ಟ್ ನೋಡದವರು’ ಇನ್ನೂ ಏನೇನೋ ಆಗಿಬಿಟ್ಟಿದ್ದೇವ
ವೈಯಕ್ತಿಕ ನೆಲೆಯ ಅನುಭವಗಳನ್ನು ಒಮ್ಮೆ-ಎರಡು ಸಲ ತಮಾಷೆಗೆ ಒಳಪಡಿಸಿದರೆ ಅದು ಹಾಸ್ಯ ಎನ್ನಿಸುತ್ತದೆ, ಸ್ವೀಕೃತವೂ ಆಗುತ್ತದೆ.
ಬಾಲ್ಯ ಎನ್ನುವುದು ಆಯಾ ಪರಿಸ್ಥಿತಿ-ಪ್ರದೇಶಕ್ಕೆ ತಕ್ಕಂತೆ ವಿಚಿತ್ರವೂ, ವಿಶೇಷವೂ ಆಗಿರುತ್ತದೆ. ಆದರೆ ಪ್ರತಿದಿನ ಅದನ್ನು ಗೋಳು ಹೊಯ್ಕೊಳ್ಳುವ ಹಾಸ್ಯ ಮುಂದುವರಿದರೆ ಅದು ಅಪಹಾಸ್ಯವಾಗುತ್ತದೆ, ನಮ್ಮ ಬಗ್ಗೆ ಸಾರ್ವತ್ರಿಕ ಕೀಳರಿಮೆ ಸೃಷ್ಟಿಸುತ್ತದೆ. ಊಟದಲ್ಲಿ ಉಪ್ಪಿನಕಾಯಿ ಇರಬೇಕೇ ಹೊರತು, ಉಪ್ಪಿನಕಾಯಿಯೇ ಊಟ ಆಗಬಾರದು.
ನಿಮ್ಮ ಭಾಷಣಗಳಲ್ಲಿ ಬೆಂಗಳೂರಿಗರೆಂದರೆ ಯಾವಾಗಲೂ ಶ್ರೇಷ್ಠ, ಉ.ಕ.ದವರೆಂದರೆ ಸದಾ ನಿಕೃಷ್ಟ.
ಉ.ಕ.ದ ಜನ, ಭಾಷೆ, ನೆಲದ ಬಗ್ಗೆ ಪ್ರೊ. ಕೃಷ್ಣೇಗೌಡ, ರಿಚರ್ಡ್ ಲೂಯಿಸ್, ಸುಧಾ ಬರಗೂರು ಕೂಡ ಹಾಸ್ಯ ಮಾಡುತ್ತಾರೆ. ಆದರೆ ಅವರು ಎಲ್ಲಿಯೂ ನಮ್ಮನ್ನು ಹೀಯಾಳಿಸುವುದಿಲ್ಲ. ನಮ್ಮ ನೆಲದಿಂದ ಬಂದ ಕೆಲವರಿಂದ ಈ ಹೀಯಾಳಿಸುವಿಕೆ ನಡೆದಿರುವುದು ವಿಷಾದನೀಯ.
ನಮ್ಮದೇ ಹೈ-ಕ, ಮುಂಬಯಿ-ಕರ್ನಾಟಕ ಪ್ರದೇಶದಿಂದ, ಬಡತನದಲ್ಲಿಯೇ ಕಷ್ಟಪಟ್ಟು, ಬರಗಾಲದಲ್ಲಿ ಬೆಂದು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಸಾಧನೆ ಮಾಡಿದ ಪ್ರತಿಭೆಗಳು ಸಾಕಷ್ಟಿವೆ. ಅವೆಲ್ಲವುಗಳಿಗೆ ಅವಮಾನ ಮಾಡಬೇಡಿ.
ಸಂಗಮೇಶ ಅವರೇ, ಪ್ರಾಣೇಶ್ ಅವರು ಬೆಂಗಳೂರು ಜನರನ್ನೂ ಹಿಯ್ಯಾಳಿಸುತ್ತಾರೆ.
ಬೆಂಗಳೂರು ಜನ ತುಂಬಾ sophisticated ,ಅವರಿಗೆ common sense ಇರುವುದಿಲ್ಲ, computer engi neer ಗಳು ಶತ ದಡ್ಡರು, ಎನ್ನುತ್ತಾರೆ.
ಅವರು ಹೇಳೋ bus conductor joke ಒಂದಿದೆ . ಅದರಲ್ಲಿ conductor ಮತ್ತು ಎಲ್ಲ ಪ್ರದೇಶಗಳ ಜನರ ಭಾವನೆಗಳನ್ನು ಹಿಯ್ಯಾಳಿಸುತ್ತಾರೆ.
ಅಷ್ಟೇಕೆ, ತಾಯಿ ಯನ್ನೂ ಬಿಟ್ಟಿಲ್ಲ ಅವರು.
ಬೆಂಗಳೂರು ತಾಯಿ ಹಾಲು ಕುಡಿಸಲ್ಲ , ಉತ್ತರ ಕರ್ನಾಟಕದ ತಾಯಿ ಮಗುವನ್ನು ಅರ್ಥ ಮಾಡಿಕೊಳ್ಳುತ್ತಾಳೆ, ….
ಹೀಗೆ ಪ್ರಾದೇಶಿಕ ಹಿಯ್ಯಾಳಿಕೆ ಅವರ so called ಹಾಸ್ಯದ ಮೂಲ ವಸ್ತು.
Dont worry. ಜನಕ್ಕೆ ಕಾಕಾ, ಕಕ್ಕ ಎರಡೂ ಅರ್ಥ ಆಗುತ್ತೆ. ಜನ ಖಂಡಿತ ದಡ್ಡರಲ್ಲ.
Emotional ಆಗಿ ಪ್ರತಿಕ್ರಿಯೆ ನೀಡೋ ನಾವು ದಡ್ಡರು.
ಖಂಡಿತ ಸಂಗಮೇಶ ಅವರೆ, ಕೆಲವೊಂದು ವಿಷಯಗಳಲ್ಲಿ ಅವರ ಹಾಸ್ಯ, ಅಸಹ್ಯ ಅನ್ಸುತ್ತೆ ಕೆಲ ಸಂದರ್ಭಗಳಲ್ಲಿ
ಅವರು ಎಲ್ಲರನ್ನೂ ಹೀಯಾಳಿಸುವುದಕ್ಕಿಂತ ಗೇಲಿ ಮಾಡುತ್ತಾರೆ. ಅದನ್ನು ಯಾರೂ ಸೀರಿಯಸ್ ಆ ಗಿ ತೆಗೆದುಕೊಳ್ಳುತ್ತಾರೆ? ಹೀಗೆ ನಕ್ಕು ಹಾಗೆ ಬಿಡುತ್ತಾರೆಷ್ಟೇ.
ನಮ್ಮ ವಡ್ಡು ಗ್ರಾಮ ಸೇರಿದಂತೆ ಬಳ್ಳಾರಿ ಜಿಲ್ಲೆಯ ಅನೇಕ ಊರುಗಳಲ್ಲಿ ಕಕ್ಕ, ಕಕ್ಕಿ ಪದ ಬಳಕೆಯಲ್ಲಿವೆ. ಅಜ್ಜಿಗೆ ಅವ್ವ, ತಾಯಿಗೆ ಅಮ್ಮ ಎನ್ನುತ್ತೇವೆ. ಧಾರವಾಡದ ಕಡೆ ಇದು ಉಲ್ಟಾಪಲ್ಟಾ!
Hello mr, nimge limited knowledge itkond e tara bariyok heg sahasa padtira.. Naanu Raichur avne, namkade almost kakka anta ne balsodu… Naav yavattu annodakke bejaru pattilla… And pranesh comedy madodnu naav bejar madkondilla… Kannadadalli vyvidyate ide adna khushi inda opkolli.. E tara nim pracharakke innobranne hiyalisbedi… If u want more explanation u can contact me… Dod’dag bartidare and adna publish madidare karma
ನಾನು ಕೇಳಿದಂತೆ ಕಕ್ಕ ಅನ್ನತಾರೆ. ಇದನ್ನೆಲ್ಲ ಇಷ್ಟು ಸೀರಿಯಸ್ಸಾಗಿ… ಒಂದು ಲೇಖನಾನ ಮಾಡೋದಾ…? ಅದೇ ಯಲಬುರ್ಗಾ ತಾಲ್ಲೂಕಿನಲ್ಲೇ ಹೇಳತಾರೆ. ಗಂಗಾವತಿ ಕೊಪ್ಪಳದಲ್ಲೂ ಹೇಳತಾರೆ.
ನಿಜವಾದ ಉತ್ತರ ಕನ್ನಡದ ಹಾಸ್ಯ ಶೈಲಿಯನ್ನು ನಾವು ಸುಧಾ ಮೂರ್ತಿಯವರ ಸಾಮಾನ್ಯರಲ್ಲಿ ಅಸಾಮಾನ್ಯರು, ಗೋಕಾಕರ ಸಮರಸವೇ ಜೀವನ ಅಥವಾ ರಾಜು ತಾಳಿಕೋಟೆಯವರ ಹಾಸ್ಯಾಭಿನಯ, ಪ್ರಶಾಂತ್ ಆಡೂರರ ಪ್ರಹಸನ ಮುಂತಾದ ಕಡೆಗಳಲ್ಲಿ ಯಥೇಚ್ಛವಾಗಿ ಕಾಣಬಹುದು, ಆಸ್ವಾದಿಸಬಹುದು. ಜನ ಮರುಳೋ ಜಾತ್ರೆ ಮರುಳೋ ಎಂಬುವದಕ್ಕೆ ಈತನ ಹಾಸ್ಯ ಕಾರ್ಯಕ್ರಮಗಳು ಸಾಕ್ಷಿಯಾಗಿವೆ.
ಇದ್ಕೆ ಇಷ್ಟು ಮಂಡೆ ಬಿಸಿ ಮಾಡುದು ಯಾಕೆ ಮಾರಾಯ್ರೇ ? ದಕ್ಷಿಣ ಕನ್ನಡದಲ್ಲಿ ಕಕ್ಕ ವರ್ಡ್ ಯೂಸ್ ಮಾಡುದು ತುಂಬಾ ಕಡಿಮೆ. ಅದರ ಅರ್ಥ ತಿಳಿದಿರಬಹುದು ಆ ಮಾತು ಬೇರೆ! ಹೀಗಾಗಿ ನಿಮ್ ಗೆ ಅವ್ ಮಾನ ಆಗಿರುದು ಅವ್ರಿಗೆ ಗೊತ್ತಾಗುದಿಲ್ಲ ಇನ್ನು ಅಸಹಿಷ್ಣುತೆ ವಿರುದ್ಧ ಅಸಹಿಷ್ಣುತೆ ಮಾಡುವವ್ರು ನಿಮ್ಮನ್ನು ಸುಮ್ನೆ ಬಿಡ್ ಲಿಕಿಲ್ಲ!
ಸ್ವಾಮಿ, ನಾನ್ ಗಂಗಾವತಿ ಅಲ್ಲೆ ಕಕ್ಕಾ, ಕಕ್ಕಪ್ಪ ಕೆಲೀರುವೆ
ಭ್ರಷ್ಟರು ಸಾಕಷ್ಟು ಜನ ಇದ್ದಾರೆ ಅವರ ಬಗ್ಗೆ ಬರೀರಿ. ಕರೋನಾ ಸಂದಭದಲ್ಲಿ ಹಗಲು ದರೋಡೆ ನಡೆದಿದೆ. ಜನರಿಗೆ ನಗು ಬೇಕಾಗಿದೆ. ಸಿನಿಮಾಗಳಲ್ಲಿ , ರಿಯಾಲಿಟಿ ಶೋಗಳಲ್ಲಿ ಬೇಕಾದಷ್ಟು ಡಬಲ್ ಮೀನಿಂಗ್ ಇದೆ. ಅವರಾರು ಜನರನ್ನು ದುರುಪಯೋಗ ಪಡಿಸಿಕೊಳ್ಳೋದಿಲ್ಲವೇ? ನಗು ಸಮಾಜದ ಆರೋಗ್ಯ. ನಗಿಸುವವರನ್ನು ನಗಿಸಲು ಬಿಡಿ. ಬರೆಯಲು ಬೇಕಾದಷ್ಟು ವಿಷಯಗಳಿವೆ. ಸಣ್ಣದು ದೊಡ್ಡದು ಮಾಡಬೇಡಿ.
Itthichina yavude haasya karyakramagalaagali athava haasyakke sambandhisida t.v. riyaliti sho galallagali sadabhiruchiya haasyavennuvude illa.
bari apahasya, parihaasyavE tumbide. manemandiyella kulitu nOduva yaavude kaaryakramagalu ivalla. hagag, imthavugalannu nodade dooraviruvudu uttama.
ಲೇಖನ ಬರೆಯಲು ಸಮಾಜದಲ್ಲಿ ಅನೇಕ ವಿಷಯಗಳಿವೆ. ಹಾಸ್ಯಕ್ಕಾಗಿ ಹೇಳುವ ಮಾತಿನಲ್ಲಿ ಯಾಕೆ ತಪ್ಪು ಕಂಡು ಹಿಡಿಯುತ್ತೀರಿ? ಜನರು ನಕ್ಕು ತಮ್ಮ ನೋವುಗಳನ್ನೂ ಕೆಲವು ಕ್ಷಣಕ್ಕಾದ್ರೂ ಮರೆತು ಸಂತೋಷಪಡುತ್ತಾರೆ.
ಬಳ್ಳಾರಿ ಜಿಲ್ಲೆಯ ಯಾವ ಭಾಗದಲ್ಲೂ ಈ ಪದದ ಬಳಕೆ ಇಲ್ಲ ಅನ್ನುವುದು ತಪ್ಪು. ನಿಮ್ಮ ಸ್ನೇಹಿತರು ನಿಮಗೆ ನಿಜವಾದ ಮಾಹತಿ ಕೊಟ್ಟಿಲ್ಲ ಅಥವಾ ಅವರ ತಿಳುವಳಿಕೆಯೇ ಅಷ್ಟಿರಬಹುದು. ನಮ್ಮ ಊರು ಹೂವಿನ ಹಡಗಲಿ. ಅಲ್ಲಿ ಎಲ್ಲರೂ ಚಿಕ್ಕಪ್ಪನಿಗೆ ಕಕ್ಕ ಚಿಕ್ಕಮ್ಮನಿಗೆ ಕಕ್ಕಿ ಎಂದೇ ಹೇಳುತ್ತಾರೆ. ಅಷ್ಟೇಕೆ ದಾವಣಗೆರೆಯ ನಮ್ಮ ಅಜ್ಜಿ ಕೂಡ ಇದೇ ಮಾತು ಬಳಸುತ್ತಿದ್ದರು. ಹಾಗಾಗಿ ಪ್ರಾಣೇಶ್ ಹೇಳಿರುವುದರಲ್ಲಿ ಏನೂ ತಪ್ಪಿಲ್ಲ.
ಅಷ್ಟಕ್ಕೂ ನೀವು ಕನ್ನಡದ ವೈವಿಧ್ಯತೆ ಬಗ್ಗೆ ಪ್ರಾಣೇಶ್ ಹಾಸ್ಯವಾಗಿ ಜನರನ್ನು ರಂಜಿಸುವುದಕ್ಕೆ ಹೇಳಿರುವುದನ್ನು ಇಷ್ಟು ಗಂಭೀರವಾಗಿ ಅವರೇನೋ ಮಹಾಪರಾಧ ಮಾಡಿದ್ದಾರೆ ಎನ್ನುವಂತೆ ಓವರ್ ರಿಯಾಕ್ಟ್ ಮಾಡುತ್ತಿರುವುದು ಆಶ್ಚರ್ಯಕರ !
ಸಂಗಮೇಶ ಅವರೇ ನಮಸ್ಕಾರ..
ನಾನು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗೊರೇಬಾಳ್ ಗ್ರಾಮದವನು.. ನಮ್ಮ ಕಡೆ ಜನ ಚಿಕ್ಕಪ್ಪ ಚಿಕ್ಕಮ್ಮ ರಿಗೆ ಕಕ್ಕ ಕಕ್ಕಿ ಅನ್ನುವುದಂತು ನೂರಕ್ಕೆ ನೂರರಷ್ಟು ನಿಜ.. ಈ ವಿಚಾರದಲ್ಲಿ ಪ್ರಾಣೇಶ್ ಸರ್ ಸರಿಯಾಗಿ ಹೇಳಿದ್ದಾರೆ..
ತಂದೆಯ ತಮ್ಮ/ಅಣ್ಣ ನಿಗೆ ಕಾಕಾ ಎಂದು ಕರೆಯುವ ಪದ್ಧತಿಯಂತೆ ಕಕ್ಕ(ಉತ್ತರ ಕರ್ನಾಟಕದ ನಿರ್ದಿಷ್ಚ ಪ್ರದೇಶದಲ್ಲಿ ಈ ಪದ ಬಳಕೆಯಲ್ಲಿದೆ ಎನ್ನಲಿಕ್ಕಾಗುವುದಿಲ್ಲ, ಏಕೆಂದರೆ ಧಾರವಾಡದವನಾದ ನಾನು ಇದನ್ನು ಅನೇಕ ಬಾರಿ ಕೇಳಿದ್ದೇನೆ), ಕಕ್ಕಿ ಎಂದು ಕರೆಯುವ ರೂಢಿಯೂ ಇದೆ.. ಇತ್ತೀಚಿನ ರಿಯಾಲಿಟಿ ಶೋಗಳಲ್ಲಿ ಬರುವ ಸೊಂಟದ ಕೆಳಗಿನ ಹೊಲಸು ಹಾಸ್ಯವನ್ನು ತಾವೊಮ್ಮೆ ಗಮನಿಸಿ. ಇನ್ನು ಪ್ರಾಣೇಶ್ ಅವರ ಮಾತುಗಳು ತಿಳಿಹಾಸ್ಯದಿಂದ ಕೂಡಿರುತ್ತವೆಯೇ ಹೊರತು ವ್ಯಂಗ್ಯದಿಂದಲ್ಲ. ಅವರ ಮಾತುಗಳಲ್ಲಿ ಅದರ ಹಿಂದಿರುವ ಅಗಾಧ ಓದು ಕೂಡ ಅರಿವಾಗುತ್ತದೆ.
NAAVU BALLARI DIST. NAM KADENUU KAKKA KAKKI ANNO RUDI IDE. IDRALLI ENTHA TAPPU HUDUKTEERI NEEVU…ADU TAPPU TAPPPAGI.
ಗಂಗಾವತಿ, ಹೊಸಪೇಟೆ, ಬಳ್ಳಾರಿ, ಕೊಪ್ಪಳ ಈ ಭಾಗದಲ್ಲಿ ಇರುವವರು ಸಾಮಾನ್ಯವಾಗಿ ಕಕ್ಕಪ್ಪ ಅಂತಾನೆ ಕರೆಯುವುದು ರೂಢಿ ಕಕ್ಕ ಬಂದ ನೋಡೋ ಅನ್ನೋದು ಉಂಟು.. ಆದ್ರೆ ಶೇಕಡಾ 20 ರಷ್ಟು ಬಳಸುವದಿಲ್ಲವೇನೋ ಗೊತ್ತಿಲ್ಲ ಆದ್ರೆ ಸಾಕಷ್ಟು ಜನ ಮಾತಾಡುತ್ತಾರೆ, ಮಾತಾಡಿದ್ದಾರೆ, ಮಾತನಾಡುತ್ತಿರುತ್ತಾರೆ.. ಯಾರ ಮನಸ್ಸನ್ನು ನೋಯಿಸಲು ಹೇಳಿರುವುದಿಲ್ಲ