ಗಣೇಶನ ಹಬ್ಬ ಬಂತು ಎಂದರೆ ಸಾಕು ಚಂದ್ರಕೀರ್ತಿ ಈ ಬಾರಿ ಯಾವ ರೀತಿ ಗಣೇಶ ಮಾಡಬಹುದು ಎಂದು ಕಾದು ಕೂರುವ ದೊಡ್ಡ ಬಳಗವೇ ಇದೆ.
ಯಾಕೆ ಅಂತೀರಾ…?
ಚಂದ್ರಕೀರ್ತಿ ಗಣೇಶನ್ನ ಯಾವುದರಲ್ಲಿ ಬೇಕಾದರೂ ಸೃಷ್ಟಿಸುತ್ತಾನೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಚಂದ್ರಕೀರ್ತಿಗೆ ಕ್ಷಣ ಮಾತ್ರದಲ್ಲಿ ಗಣಪನ ಮಾಡಿ ಕೂಡಿಸಲು ಬರುತ್ತೆ
ತಟ್ಟೆ ಲೋಟ ಕೊಡಿ, ಇಲ್ಲ ಅಕ್ಕಿ ಕೇರುವ ಮೊರ ಕೊಡಿ, ಸೌಟು ಸ್ಪೂನು ಕೊಡಿ, ಅಡಿಕೆ ಹಾಳೆ ಕೊಡಿ, ಇಡ್ಲಿ ಮಾಡೋ ಕುಕ್ಕರ್ ಕೊಡಿ- ಗಣೇಶ ಸಿದ್ಧ.
ಈ ಬಾರಿ ಚಂದ್ರಕೀರ್ತಿ ಕೈಗೆತ್ತಿಕೊಂಡದ್ದು ನಾಟಕದ ವಸ್ತುಗಳನ್ನು
ಚಂದ್ರಕೀರ್ತಿ ನಟ, ನಿರ್ದೇಶಕ. ಈಗ ನಾಟವನ್ನೇ ಮಕ್ಕಳಿಗೆ ಪಾಠ ಮಾಡುತ್ತಿರುವವನು
ಆತ ತನ್ನ ತಂಡದಿಂದ ರೂಪಿಸಿದ ಬ್ರೆಕ್ಟ್ ನ ‘ಕಕೇಶಿಯನ್ ಚಾಕ್ ಸರ್ಕಲ್’ ನಾಟಕದ ಪ್ರಾಪರ್ಟಿಗಳನ್ನೇ ಇಟ್ಟುಕೊಂಡು ಈ ಬಾರಿಯ ಗಣಪನನ್ನು ನಮ್ಮ ಮುಂದೆ ಕೂರಿಸಿದ್ದಾನೆ.
ಚಂದ್ರಕೀರ್ತಿ ಕಳೆದ ವರ್ಷಗಳಲ್ಲಿ ಮಾಡಿದ ಗಣಪನ ವಿಶೇಷತೆ ತಿಳಿಯಲು
ಇಲ್ಲಿ ಕ್ಲಿಕ್ಕಿಸಿ
ತುಂಬು ಹೃದಯದ ಧನ್ಯವಾದಗಳು ಜಿ. ಎನ್. ಮೋಹನ್ ಸರ್ ☺