ಗ್ಯಾಜೆಟ್.. ಗ್ಯಾಜೆಟ್.. ಗ್ಯಾಜೆಟ್

ಸುಮಾ ಸತೀಶ್

ಬೆಳಗೆದ್ದು ಶಾಲೆಯ ಮುಖ ನೋಡುತ್ತಿದ್ದ ಮಕ್ಕಳು ಕೋವಿಡ್-19 ನಿಂದಾಗಿ ಮೊಬೈಲ್, ಟಿ.ವಿ, ಲ್ಯಾಪ್ ಟ್ಯಾಪ್ ಗಳ ಮುಂದೆ ಲಾಕ್ ಡೌನ್ ಆಗಿ ಕೂರುವ ಪರಿಸ್ಥಿತಿ ಬಂದೊದಗಿದೆ. ಶಾಲೆಯಲ್ಲಿ ನೀಡುತ್ತಿರುವ ಹೋಂ ವರ್ಕಗಳ ಪಟ್ಟಿ, ಒನ್ ಲೈನ್ ಶಿಕ್ಷಣ ಅಂತ ಇಲೆಕ್ಟ್ರಾನಿಕ್ ಗ್ಯಾಜೆಟ್ ಗಳ ಮುಖ ನೊಡುವುದು ಅನಿವಾರ್ಯವಾಗಿದೆ. ಇದರ ಹೊರತಾಗಿಯೂ ಟಿ.ವಿ, ಮೊಬೈಲ್, ಟ್ಯಾಬ್ ಗಳ ನಡುವೆ ಸದಾ ತೊಡಗಿರುವುದು ಪೋಷಕರಿಗೆ ತಲೆನೋವಾಗಿ ಪರಿಣಮಿಸಿದೆ. ಯಾಕಂದ್ರೇ ಇಡೀ ದಿನ ಗ್ಯಾಜೆಟ್ ಗಳ ಬಳಕೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಮಾರಕ!.

ಇದೊಂದು ಆತಂತಕಾರಿ ವಿಷಯ ಮತ್ತು ಆರೋಗ್ಯಕ್ಕೂ ಒಳ್ಳೆಯದಲ್ಲ. ಕಲಿಕೆಯ ಹೊರತಾಗಿ, ಗ್ಯಾಜೆಟ್ ಗಳ ಸೆಳೆತದಿಂದ ಆದಷ್ಟೂ ಮಕ್ಕಳನ್ನು ಹೊರಗೆ ತರಲು ಪ್ರಯತ್ನಿಸಬೇಕು ಹಾಗೂ ಪೋಷಕರಾಗಿ ನಮ್ಮ ಜವಾಬ್ಧಾರಿಯೂ ಹೌದು!. ಅದಕ್ಕಾಗಿ ಕೆಲವೊಂದು ಮಾರ್ಗಗಳನ್ನ ನಾವೇ ಹುಡುಕಿಕೋಳ್ಳೋಣ.

1. ಮಕ್ಕಳಿಗಾಗಿ ಸಮಯ ಮೀಸಲಿರಿಸಿ: ನಮ್ಮ ಮಕ್ಕಳಿಗಾಗಿ ಸ್ವಲ್ಫ ಸಮುವನ್ನು ಅವರಿಗಂತಲೇ ಮೀಸಲಿಡಬೇಕು. ಎಲ್.ಕೆಜಿ ಮತ್ತು ಪೈಮರಿ ಹೋಗುವ ಮಕ್ಕಳಾದರೆ, ನೀವೂ ಅವರೊಂದಿಗೆ ಆಟವಾಡಿ. ಬಾಲ್ಯದಲ್ಲಿ ನಾವಾಡಿದ ಅಗುಳಿ ಮನೆ, ಪಗಡೆ, ಹಾವು-ಏಣಿ, ಚೌಕಾ ಬಾರ… ಹೀಗೆ!.
ಹಳ್ಳಿಗಾಡಿನ ಸೊಗಸು ಆಟಗಳು ಉತ್ಸಾಹ ತುಂಬುವುದರೊಂದಿಗೆ, ಉಲ್ಲಾಸ ನೀಡಿ ಮಕ್ಕಳ ಬುದ್ಧಿಶಕ್ತಿ, ಸಾಮರ್ಥ್ಯ ಹೆಚ್ಚಿಸುವಲ್ಲಿ ಸಹಾಯವಾಗುತ್ತದೆ.

ಆಟದ ಜೊತೆ ಪಾಠವೆನ್ನುವಂತೆ ಕಥೆ ಪುಸ್ತಕಗಳು, ನೀತಿಯುಕ್ತ ವೀರಶೂರರ ಜೀವನಗಾಥೆಗಳು, ದೊಡ್ಡ ಮಕ್ಕಳಿಗೆ ಉಪಯುಕ್ತವಾಗುವಂಥ ವ್ಯಕ್ತಿತ್ವ ವಿಕಸನಕ್ಕೆ ಪೂರಕವುಳ್ಳ ಪುಸ್ತಕಳನ್ನ ಓದುವ ರುಚಿ ಹತ್ತಿಸಿ ಮತ್ತು ಪ್ರೋತ್ಸಾಹಿಸಿ. ಓದುವ ಹವ್ಯಾಸ ಕಲಿಕೆಗೂ ಮೆಟ್ಟಿಲಾಗುವುದಲ್ಲದೆ, ಏಕಾಗ್ರತೆಯ ವೃದ್ಧಿಕೆಗೆ ಸಹಾಯಕ.    

2. ಚಿಕ್ಕ ಮಕ್ಕಳನ್ನು  ಇಲೆಕ್ಟ್ರಾನಿಕ್  ಗ್ಯಾಜೆಟ್ ಗಳಿಂದ ದೂರವಿಡಿ: ಎರಡು ವರ್ಷದ ಒಳಗಿನ ಮಕ್ಕಳಿಗೆ ಟಿ.ವಿ, ಮೊಬೈಲ್ ಗಳ ಸಂಪರ್ಕವಿಲ್ಲದಿದ್ದರೆನೇ ಒಳಿತು. ಮಕ್ಕಳು ತುಂಬಾ ಚಿಕ್ಕವರಾಗಿರುವುದರಿಂದ, ಅವರ ಅಂಗಾಂಗಗಳು ಅತಿ ಸೂಕ್ಷವಾಗಿರುತ್ತವೆ ಮತ್ತು ಬೆಳವಣಿಗೆಯ ಹಂತದಲ್ಲಿರುತ್ತದೆ. ಈ ಸಂದರ್ಭದಲ್ಲಿ ಅಂತರ್ಜಾಲಗಳ ಬಳಕೆ ಆರೋಗ್ಯಕ್ಕೆ ಅಪಾಯಕಾರಿ ಹಾಗೂ ಮುಂದಿನ ದಿನಗಳಲ್ಲಿ ಆರೋಗ್ಯ ಸಮಸ್ಯೆಯನ್ನು ಹುಟ್ಟುಹಾಕಬಹುದು.

ಮೊಬೈಲ್ ನ ಸಿಗ್ನಲ್ ಗಳಿಂದ ಉತ್ಪತ್ತಿಯಾಗುವ ಕ್ಷ-ಕಿರಣಗಳು ಸ್ಮರಣ ಶಕ್ತಿ, ದೃಷ್ಠಿ, ನರಗಳ ಮೇಲು ಪರಿಣಾಮ ಬೀರುವ ಸಂಭವವಿದೆಯೆನ್ನುವುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಇತ್ತಿಚೀನ ದಿನಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕೂಡಾ ಮಕ್ಕಳ ವಯಸ್ಸಿಗೆ ಅನುಗುಣವಾಗಿ ಗ್ಯಾಜೆಟ್ ಗಳ ಬಳಕೆಗೆ ನಿರ್ದೇಶನ ನೀಡಿದ್ದು, ಇದರ ಬಗ್ಗೆ ಪೋಷಕರಲ್ಲಿ ಅರಿವು ಮೂಡಿಸಲು ಮುಂದಾಗಿದೆ.

3. ಸ್ಕ್ರಿನ್ ಟೈಮ್: ‘ಸ್ಕ್ರೀನ್ ಟೈಮ್’ ಎನ್ನುವದರ ಅರ್ಥ ಮಕ್ಕಳು ದಿನದ 24ಗಂಟೆಯಲ್ಲಿ ಎಷ್ಟು ಸಮಯವನ್ನ ಟ.ವಿ, ಮೊಬೈಲ್, ಲ್ಯಾಬ್ ಟ್ಯಾಪ್, ಟ್ಯಾಬ್… ಹೀಗೆ ಇನ್ನಿತರ ಗ್ಯಾಜೆಟ್ ಗಳೊಂದಿಗೆ ಕಳೆಯುತ್ತಾರೆಯೆನ್ನುವುದು. ಮಕ್ಕಳು ದಿನದ ಹೆಚ್ಚಿನ ವೇಳೆಯನ್ನು ಟಿ.ವಿ, ಮೊಬೈಲ್, ಲ್ಯಾಬ್ ಟ್ಯಾಪ್ ಗಳ ಜೊತೆ ಕಳೆಯುತ್ತಾ ಹೋದಂತೆ, ಅಂತರ್ ಜಾಲಗಳ ಬಳಕೆಯ ಮಿತಿಯು ಹೆಚ್ಚುತ್ತಾ ಹೋಗುತ್ತದೆ.

ಕೆಲವೊಂದು ಸಂದರ್ಭಗಳಲ್ಲಿ ನಮ್ಮ ಕೆಲಸಕ್ಕೆ ಅಡಚಣೆಯಾಗುವುದೆಂದು, ನಾವೇ ನಮ್ಮ ಮಕ್ಕಳಿಗೆ ಟಿ.ವಿ, ಮೊಬೈಲ್ ಗಳ ನಂಟು ಬೆಳೆಸಿ, ಕೊನೆಗೆ ಅದಿಲ್ಲದಿದ್ದರೆ ಹಠ, ಸಿಟ್ಟು, ಮಾತು ಕೇಳದ ಮೊಂಡು ಸ್ವಭಾವ… ಎಲ್ಲವನ್ನು ರೂಢಿಸಿಕೊಳ್ಳುತ್ತ ಹೋಗುತ್ತಾರೆ. 6 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಉತ್ತಮ ಗುಣಮಟ್ಟದಿಂದ ಕೂಡಿದ ಸಕಾರಾತ್ಮಕ ಕಾರ್ಯಕ್ರಮಗಳನ್ನು ನೋಡಲಿ. ಟಿ.ವಿ, ಮೊಬೈಲ್ ಗಳನ್ನು ವೀಕ್ಷಿಸುವ ಅವಧಿ ದಿನಕ್ಕೆ 1ರಿಂದ 2ಗಂಟೆ ಇದ್ದರೆ ಒಳ್ಳೆಯದು.

4. ಮಕ್ಕಳ ಮೇಲೆ ಗಮನವಿರಲಿ: ಕೆಲವು ಅಧ್ಯಯನಗಳ ಪ್ರಕಾರ ಬೆಳವಣಿಗೆಯ ಹಂತದಲ್ಲಿರುವ ಮಕ್ಕಳು ಮತ್ತು ಆಗ ತಾನೇ ಕಿಶೋರಾವಸ್ಥೆಗೆ ಕಾಲಿಡುತ್ತರುವ ಮಕ್ಕಳು 5,6 ಗಂಟೆಗಳಿಗಿಂತ ಹೆಚ್ಚು ಗೆಜೆಟ್ ಗಳ ವೀಕ್ಷಣೆ ಮಾಡುತ್ತಿದ್ದರೆ, ಒಂಟಿತನ, ಒಂಥರಾ ಆಲಸ್ಯ ಭಾವ, ಆತ್ಮವಿಶ್ವಾಸದ ಕೊರತೆ ಹಗುರವಾಗಿ ಆವರಿಸಲ್ಪಡುತ್ತವೆ.

ಇದು ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ತೊಡಕೆನ್ನುವುದು ಕೂಡಾ ಅಷ್ಟೇ ನೈಜ ಸತ್ಯ!. ಮಕ್ಕಳು ಪರಸ್ಪರ ಎಲ್ಲರೊಂದಿಗೆ ಬೆರೆಯುವುದು, ಹೊರಾಂಗಣ ಕ್ರೀಡೆಗಳಲ್ಲಿ ತಮ್ಮನ್ನ ತೊಡಗಿಸಿಕೊಳ್ಳುವುದು, ಪ್ರಕೃತಿಯ ಪರಿಸರದಲ್ಲಿ ಮುಗ್ಧ ಬಾಲ್ಯವನ್ನು ಮುಕ್ತವಾಗಿ ಕಳೆಯುವುದೆಲ್ಲ ಕಡಿಮೆಯಾಗುತ್ತಿದ್ದು, ಮಕ್ಕಳಲ್ಲಿ ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತಿದ್ದು ಬೊಜ್ಜುತನ ಮತ್ತು ಅದಕ್ಕೆ ಸಂಬಂಧಿಸಿದ ಕಾಯಿಲೆಗಳ ಪ್ರಮಾಣ ಹೆಚ್ಚಾಗುತ್ತಿವೆ

ಸಾಮಾಜಿಕ ಮಾಧ್ಯಮಗಳಿಂದ ಹರಡುವ ಸುದ್ದಿಗಳು, ಫ್ಯಾಷನ್, ಜಾಹಿರಾತುಗಳು ಮಕ್ಕಳನ್ನ ಬೇಗ ಸೆಳೆಯುವುದರಿಂದ ಮನಸ್ಸಿನ ಮೇಲೆ ಬೀರುವ ಒತ್ತಡದ ಪ್ರಮಸಣವೂ ಹೆಚ್ಚು. ಆದ್ದರಿಂದ ಎಷ್ಟು ಅಗತ್ಯ ಮತ್ತು ಅವಶ್ಯಕತೆಗಷ್ಟೇ ಟಿ.ವಿ, ಮೊಬೈಲ್, ಲ್ಯಾಬ್ ಟ್ಯಾಪ್ ಗಳ ಬಳಕೆ ಸೀಮಿತಗೊಳಿಸಿ, ಮಕ್ಕಳ ಆರೋಗ್ಯ,ಪೂರಕ ಬೆಳವಣಿಗೆಯತ್ತ ಪಾಲಕರ ಗಮನವಿರಲಿ.

6. ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ: ಕೋವಿಡ್-19 ನಿಂದಾಗಿ ಎಲ್ಲಾ ಶಾಲೆಗಳು ಬಂದಾಗಿ, ಮಕ್ಕಳ ಪಾಠ-ಪಠ್ಯಗಳು ಆನ್ ಲೈನ್ ಲ್ಲೇ ಸಾಗುತ್ತಿದ್ದು, ಟಿ.ವಿ, ಮೊಬೈಲ್, ಲ್ಯಾಬ್ ಟ್ಯಾಪ್ ಗಳ ಬಳಕೆ ಅನಿವಾರ್ಯದ ಜೊತೆಗೆ ಅಗತ್ಯವೂ ಆಗಿದೆ. ಹಾಗಂತ ಅಗತ್ಯತೆಗಿಂತ ಜಾಸ್ತಿ ಸಮಯ ಮಕ್ಕಳು ಇದರೊಂದಿಗೆ ಕಳೆಯತೊಡಗಿದರೆ, ಅದರ ದುಷ್ಪರಿಣಾಮವೂ ಮಕ್ಕಳ ಮೇಲೆ ಆಗುತ್ತದೆ.

ಇಂಥ ಕ್ಲಿಷ್ಠ ಪರಿಸ್ಥಿತಿಯಲ್ಲಿ ಗ್ಯಾಜೆಟ್ ಗಳ ಸರಿಯಾದ ಬಳಕೆ ಮತ್ತು ಮಕ್ಕಳ ಆರೋಗ್ಯ ಕಾಪಾಡುವುದು ಪೋಷಕರ ಕರ್ತವ್ಯ ಹಾಗೂ ಜವಾಬ್ಧಾರಿ ಕೂಡಾ ನಮ್ಮ ಮೇಲಿದೆ. ಪೋಷಕರು ಕೂಡಾ ಅವಶ್ಯಕತೆಗಿಂತ ಜಾಸ್ತಿ ಮೊಬೈಲ್, ಲ್ಯಾಪ್ ಟಾಪ್ ಗಳ ಕೈಗೊಂಬೆಯಾಗದೆ, ನಿಮ್ಮ ಮಕ್ಕಳೊಂದಿಗೆ ಆದಷ್ಟೂ ಹೆಚ್ಚಿನ ಸಮಯವನ್ನು ಕಳೆಯಿರಿ. ಪ್ರೀತಿ, ಆತ್ಮೀಯತೆಯ ಕ್ಷಣಗಳು ಮೌಲ್ಯಾಧರಿತ ಜೀವನ ಕಟ್ಟಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಮೊಬೈಲ್, ಲ್ಯಾಬ್ ಟ್ಯಾಪ್ ಗಳ ಬಳಕೆಯಲ್ಲಿ ಕೆಲವೊಂದು ಸಲಹೆ ಮತ್ತು ಮಾರ್ಗ:
1)ಆನ್ ಲೈನ್ ಕಲಿಕೆಯ ಸಮಯದಲ್ಲಿ ಮಕ್ಕಳು ನಿರಂತರವಾಗಿ ಮೊಬೈಲ್, ಲ್ಯಾಬ್ ಟ್ಯಾಪ್ ಗಳ ಮುಂದೆ ಕೂರದೇ, ಮಧ್ಯೆ ಮಧ್ಯೆ ಅಂತರವಿಟ್ಟು ಕಲಿಕೆ ಮುಂದುವರೆಸಿದರೆ ಒಳಿತು.
2) ಗ್ಯಾಜೆಟ್ ಗಳ ಸ್ಕ್ರೀನ್ ನ್ನು ನೋಡುವಾಗ ಪ್ರತಿ ಹದಿನೈದು ನಿಮಿಷಕ್ಕೊಮ್ಮೆ ನಿಮ್ಮ ಕಣ್ಣು ಮುಚ್ಚಿ ರಿಲಾಕ್ಸ್ ಮಾಡಿಕೊಳ್ಳಿ. ಒಂದೇ ಕಡೆ ಜಾಸ್ತಿ ಹೊತ್ತು ಕುಳಿತುಕೊಳ್ಳದೇ, ವಾಕ್ ಮಾಡುತ್ತಾ ನಿಮ್ಮ ಲಕ್ಷವನ್ನ ಸ್ವಲ್ಫ ಹೊತ್ತು ಬೇರೆಡೆ ತಿರುಗಿಸಿ. ಇದರಿಂದ ಮನಸ್ಸು ಮತ್ತು ದೇಹ ಎರಡೂ ಹಗುರವಾಗತ್ತೆ. ಮತ್ತೆ ಕಲಿಕೆಗೆ ಅನುಕೂಲವಾಗಿ, ಉತ್ಸಾಹವು ಹೆಚ್ಚತ್ತೆ.
3) ಗ್ಯಾಜೆಟ್ ಗಳ ಸ್ಕ್ರೀನ್ ದೊಡ್ಡದಾಗಿದ್ದರೆ ಮಕ್ಕಳ ಕಣ್ಣಿಗೆ ಅಷ್ಟೊಂದು ಪರಿಣಾಮ ಬೀರಲಾರದು.
4) ಮೊಬೈಲ್, ಲ್ಯಾಬ್ ಟ್ಯಾಪ್ ಗಳ ಸ್ಕ್ರೀನ್ ಹಾಗೂ ಮಕ್ಕಳು ನೋಡುವ ದೃಷ್ಠಿ ಸಮಾಂತರ ಅಳತೆಯಲ್ಲಿದ್ದರೆ ಒಳ್ಳೆಯದು. ಆದಷ್ಟೂ ನೇರ ಕುಳಿತು, ಕುತ್ತಿಗೆ, ತಲೆಯನ್ನ ಹೆಚ್ಚು ಬಗ್ಗಿಸದೆ ನೋಡಿದರೆ ಉತ್ತಮ.
5) ಮಕ್ಕಳು ಮತ್ತು ಗ್ಯಾಜೆಟ್ ಗಳ ಸ್ಕ್ರೀನ್ ನಡುವಿನ ಅಂತರ ಎರಡು ಅಡಿಯಷ್ಟದರೂ ಇದ್ದರೆ ತುಂಬಾ ಒಳ್ಳೆಯದು.

‍ಲೇಖಕರು Avadhi

June 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: