ಶಕೀಲ್ ಉಸ್ತಾದ್
**
ಹಾಗೆಯೇ
ಕೆಳಗೆ ಬೀಳ ಬೇಕು
ಮಳೆ ಹನಿಗಳಾಗಿ
ಧರೆಯ ಧಗೆಯನು ತಣಿಸಲು
ಹಾಗೆಯೇ
ಗುರುತು ಮೂಡ ಬೇಕು
ಕೆಸರು ಮೆತ್ತಿ ಕಾಲಿಗೆ
ಹೆಜ್ಜೆಯನ್ನಿಟ್ಟಲೆಲ್ಲಾ
ಹಾಗೆಯೇ
ಒರಟು ಬೀಜ ಸೀಳಿ
ಮೊಳಕೆಯೊಡೆಯ ಬೇಕು
ತನ್ನ ಅಸ್ತಿತ್ವ ಉಳಿಸಲು
ಹಾಗೆಯೇ
ಹಿಂದೆ-ಮುಂದೆ ಕವಲೊಡೆದು
ಹೆಮ್ಮರವಾಗಿ ಹರಡ ಬೇಕು
ಮೊಗ್ಗು-ಹೂ-ಕಾಯಿ ಬಿಡಲು
ಹಾಗೆಯೇ
ಧರೆಗುರಳ ಬೇಕು
ಬೇರು ಸಡಿಲಾಗಿ ಧನ್ಯತೆಯಿಂದ ?!
0 ಪ್ರತಿಕ್ರಿಯೆಗಳು