
ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು.
ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕ. ನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು, ಡಯಟಿಂಗ ಪುರಾಣ ಹಾಸ್ಯ ಲೇಖನ ಸಂಕಲನ… ಮಕ್ಕಳಿಗಾಗಿ ಅಜ್ಜನ ಹಲ್ಲುಸೆಟ್ಟು (ಮಕ್ಕಳ ಕವಿತೆಗಳ ಸಂಕಲನ) ಮಾಸಂಗಿ (ಮಕ್ಕಳು ಬರೆದ ಕತೆಗಳ ಸಂಪಾದನೆ) ಮಕ್ಕಳೇನು ಸಣ್ಣವರಲ್ಲ (ಮಕ್ಕಳ ಕತಾ ಸಂಕಲನ) ಕೃತಿಗಳು…
ಬಹತೇಕ ನಾಡಿನ ಎಲ್ಲಾ ಪತ್ರಿಕೆಗಳಲ್ಲೂ ಲಲಿತ ಪ್ರಬಂಧ, ಹಾಸ್ಯ ಲೇಖನ, ಮಕ್ಕಳ ಕತೆ, ಕವಿತೆ, ನಾಟಕಗಳು ಪ್ರಕಟವಾಗಿವೆ. ಅಕ್ಷರ ಸಾಹಿತ್ಯ ವೇದಿಕೆ ಸಂಚಾಲಕರಾಗಿ ಹಲವಾರು ಮಕ್ಕಳ ಕಮ್ಮಟ, ರಂಗಶಿಬಿರ, ಸಾಹಿತ್ಯಿಕ ಚಟುವಟಿಕೆಗಳನ್ನು ಸಂಘಟಿಸಿದ್ದಾರೆ…
16
ಕಣ್ತರೆದು ನೋಡಿದೆ…. ಮನೆಯೂ ಅಲ್ಲ.. ನೆನಪಿಸಿಕೊಂಡೆ… ಹಿ೦ದೆ ಇದ್ದಿದ್ದ ಸೊಳ್ಳೆಗಳ ತಾಣವು ಅಲ್ಲ… ಕಣ್ತರೆದು ನೋಡಿದೆ… ಟಿವಿಯಲ್ಲಿ, ನಾನು ಮಾಡಿದ್ದೆ ಸುದ್ದಿ… ರಂಗು ರಂಗಿನಿ೦ದ ಪ್ರಸಾರಗೋಳ್ಳುತ್ತಿದ್ದವು.
“ಇದಕ್ಕೆ ಕಾರಣವೇನು….ಇಂತಹ ಸೊಳ್ಳ ಇರುವುದಾದರೂ ಹೇಗೆ,…”
“ಸೊಳ್ಳೆ ಕುಲಾನ… ನಾಶ ಮಾಡುವಂತಹ ಔಷಧ ಕಂಡುಹಿಡಿಯಬೇಕು”
“ಇಲ್ಲ… ಆ ಸೊಳ್ಳೆನ ಸೂಕ್ಷ್ಮವಾಗಿ ಗಮನಿಸಿದರೆ… ಅದು ಸೊಳ್ಳೆ ಅಲ್ಲ”
“ನಿಜ.. ನಿಜ… ಸೊಳ್ಳೆ ಅಲ್ಲ… ಅನ್ಯ ಗ್ರಹದ ಜೀವಿ”
“ಆ ಸೊಳ್ಳೆಗೆ ಇಷ್ಟು ಬುದ್ಧೀ ಇರಲಿಕ್ಕೆ ಸಾಧ್ಯ ಇಲ್ಲ… ನಾನು ಅದರ ಕೊಂಕು, ಉಗಿದಿರುವ ರೀತಿ ನೋಡಿದ್ರೆ ಇದು ಬೇರೆ ಗ್ರಹದ ಜೀವಯ ಕೆಲಸವೇ ಇರಬೇಕು” ಸಾಲು ಸಾಲು ಟಿ.ವಿಗಳಲ್ಲಿ ಇದೆ ಸುದ್ದಿ… ಚರ್ಚೆ..
ಒಂದು ಚಾನಲ್‌ನಲ್ಲಿ ಗಂಭೀರವಾದ ಚರ್ಚೆ ನಡೆದಿತ್ತು. “ಹೌದು… ಇವು ಸೊಳ್ಳೆ ಕೆಲಸ ಅಲ್ಲ ಅನ್ನೋದು ಪಕ್ಕಾ… ಈಗೇನು ಮಾಡೋದು?”
“ಆಪರೇಶನ್ ಏಲಿಯನ್ಸ್ ಅಂತ ಮಾಡಬೇಕು…. ಇಷ್ಟು ದಿನ ಹಾರುವ ತಟ್ಟೆಗಳ ಮೂಲಕ ದಾಳಿ ಮಾಡುತಿದ್ರು.. ಆಗಲಿ ಎಂದು ಸುಮ್ಮನಿದ್ರೆ… ಈಗ ಇಂತಹ ನ್ಯಾನೋ ತಂತ್ರಜ್ಞಾನದ ಮೂಲಕ ನಮ್ಮ ಮೇಲೆ ಅಟ್ಯಾಕ ಮಾಡೋದಾ! ಅಲಕ್ಷ ಮಾಡಿದರೆ ನಮಗೆ ತೊಂದ್ರೆ… ಈಗ ನಮ್ಮ ಇಸ್ರೋ ನೂರಾರು ಕ್ಷೀಪಣಿ ಉಡಾಯಿಸಿದ ಹಿರಿಮೆ ಇದೆ… ಭೂಮಿಯನ್ನು ಬಿಟ್ಟು ಉಳಿದೆಲ್ಲಾ ಗ್ರಹಗಳಿಗೆಲ್ಲ ಮಾರಕವಾಗಬಹುದಾದ ನಮ್ಮ ಕೊನೆಯ ಹೈಜೇನ್ ತಂತ್ರಜಾನ ಬಳಸೋಣ.. ನಾವು ಎಷ್ಟು ಸಂದೇಶಗಳನ್ನು ಕಳಿಸಿದರು ಅನ್ಯಗ್ರಹದ ಜೀವಿಗಳು ನಮ್ಮ ಇರುವಿಕೆ ಬಗ್ಗೆ ಮಾಹಿತಿ ನೀಡುತ್ತಿಲ್ಲ… ಬರಿ ಆಗಾಗ ಫ್ಲೈಯಿಂಗ ಸಾರಸ್ ಮೂಲಕ ಬರೋದು ಬಿಟ್ಟಿಲ್ಲ.. ಈಗ ಇಂತಹ ಕೃತ್ಯಕ್ಕೆ ಇಳಿದಿದ್ದಾರೆ… ಸಹಿಸಲಾಗದು…ತಡೆದಷ್ಟು ಅಪಾಐ ನಮಗೆ… ಈಗ ಇದು.. ಇಲ್ಲ.. ಅಟ್ಯಾಕ್ ಮಾಡಲೇಬೇಕು” ಎಂದು ವೈಜ್ಞಾನಿಕ ಸಲಹೆಗಾರರು ಮಾತಾಡತಿದ್ರು.
ಇನ್ನೊಂದು ಚಾನಲ್ ನಲ್ಲಿ ಪರಿಸರಕ್ಕೆ ಮಾರಕವಾಗುವ ಅಂತಹ ಯೋಜನೆ ಕೈಬಿಡಬೇಕು ಅಂತ ಪ್ರತಿಭಟನೆಗಳು ನಡಿತಿದ್ವು,
“ನನ್ನೇನಾದರೂ ವಿಜ್ಞಾನಿಗಳು ಲ್ಯಾಬ್ ಗೆ ತಂದು ಹಾಕಿದ್ದಾರಾ?” ಎಂದು ಸುತ್ತಲೂ ನೋಡಿದೆ.. ಅದು ಲ್ಯಾಬೆ ಆಗಿತ್ತು… ಭಯದಿಂದ “ಅಯ್ಯೊ.. ವಿಜ್ಞಾನಿಗಳು ಬಂದು ನನ್ನನ್ನು ಕೊಯ್ದರೆ… ನಾನು ಸತ್ತೆ ಹೋಗಿ ಬಿಡೀನಿ… ಏನು ಮಾಡೋದು… ಛೇ… ಸೊಳ್ಳೆ ಫ್ರೆಂಡು .. ಎಲ್ಲಿದ್ದಿಯೋ… ಬಾರೋ…”ಎಂದು ಕೂಗಿದೆ..
ಟಿ.ವಿ ಎಲ್ಲಾನೂ ಆಫ್ ಆದವು… ಸೊಳ್ಳೆ ಫ್ರೆಂಡು.. ಕಾಣಲಿಲ್ಲ. “ಅಯ್ಯೊ… ಸುಡಾಗಡು ಏನೊ ಒಣ ಆಸೆಯಿಂದ ಇಷ್ಟೆಲ್ಲ… ಆಗತಿದೆ… ಅತಿ ಆಸೆ ಆತಂಕಕ್ಕೆ… ತೊ೦ದರೆ.. ಅಪಾಯ ಅನ್ನದು ಸತ್ಯ… ಅನಸ್ತಿದೆ… ಏನು ಮಾಡಲಿ” ಎಲ್ಲರಿಗೂ ಕೇಳುವ ಹಾಗೆ “ನಾನು ಸೊಳ್ಳೇ ಅಲ್ಲ ನಾನು ಮನುಷ್ಯ ಪ್ಲೀಜ್ ಪ್ಳೀಜ… ನಂಬಿ ನಂಬಿ ನಂಬಿ…” ಎ೦ದು ಹೇಳುತ್ತಿರುವಂತೆ…

“ಹೌದು…. ಹೌದು…. ನೀನು ಮನುಷ್ಯ ನಮಗೆ ಗೊತ್ತು” ಎನ್ನುವ ಧ್ವನಿ ಕಂಪ್ಯೂಟರ್ ಪರದೆಯಿಂದ ಒಡಕು ಒಡಕು ಧ್ವನಿ ಕೇಳಿ ಬಂತು.
“ಹಾಗಾದರೆ ಬಿಟ್ಟುಬಿಡಿ.. ನಾನು ಹೋಗುವೆ…ಯಾಕೆ ನನ್ನ ಕರೆದುಕೊಂಡು ಬಂದಿದ್ದೀರಿ…?”
“ನೀನೆ ಕರೆದುಕೊಂಡು ಬರೊ ಹಾಗೆ ಮಾಡಿದ್ದು”
“ನಾನಾ….”
“ಹೌದು ನೀನೇ…”
“ನಾನು ಈಗ ಎಲ್ಲಿದ್ದೇನೆ….”
“ನಮ್ಮ ಗ್ರಹದಲ್ಲಿ”
“ಅಂದ್ರೆ…”
“ಅದೆ ನಮ್ಮ ಏಲಿಯನ್ಸ್ ಗ್ರಹದಲ್ಲಿ”
“ಯಾಕೆ ಕರಕೊಂಡು ಬಂದ್ರಿ?”
“ನೀನು ಮಾಡಿದ ಘನಂದಾರಿ ಕೆಲಸಗಳಿಗೆ ನಾವು ತೊಂದರೆ ಅನುಭವಿಸಬೇಕಾಗಿದೆ… ನೋಡಿದಿ ಇಲ್ಲೊ… ಇಷ್ಟು ಹೊತ್ತು… ನಿಮ್ಮ ಭುಮಿಯಲ್ಲಿ ಏನೆಲ್ಲಾ ಚರ್ಚೆ ನಡೆದಿವೆ ಅಂತ”
“ನನಗೆ.. ಇಷ್ಟೆಲ್ಲ… ಆಗುತ್ತದೆ.. ಅ೦ತ ಅಂದುಕೊ೦ಡಿರಲಿಲ್ಲ…”
“ನೀನು ಏನೋ ಮಾಡಿದೆ.. ಆದರೆ ನಿಮ್ಮವರು ಇದು ಅನ್ಯಗ್ರಹದ ಜೀವಿಯ ಕೆಲಸ ಅಂತ ಹೇಳುತ್ತಿದ್ದಾರೆ”
“ನಾನು ನಿಜಕ್ಕೂ ಎಲ್ಲಿದ್ದೀನಿ..,,? ಇದು ಲ್ಯಾಬ್ ತರಹ ಇದೆ.. ಏನು ಕಾಣುತ್ತಿಲ್ಲ.. ಯಾರು ಇಲ್ಲ….”
“ಹೌದಾ..ನೋಡ್ತೀಯಾ?” ಎಂದು ಮಾತಢುವ ಕಂಪ್ಯೂಟರ್ ಒಳಗಿಂದ ವಿಚಿತ್ರ ಆಕಾರದ ಐದಾರು ಪ್ರಾಣಿಗಳು ಬಂದವು.
ನನಗೆ ಹೆದರಿಕೆ ಆಯಿತು… “ಯಾರು ನೀವು.. ಯಾರು ನೀವು… ಸೊಳ್ಳೆಗಳಾ?”
“ಅಲ್ಲ ನೀವು ಅಂದುಕೊ೦ಡಿರುವ ಏಲಿಯನ್ಸ್ ಗಳು”
“ಹೇಗಿರುವಿರಲ್ಲಾ.. ಎಷ್ಟು ವಿಚಿತ್ರವಾಗಿದೆ ನಿಮ್ಮ ನೋಟ… ನಾವು ನೋಡಿದ ಏಲಿಯನ್ಸ ತರಹ ಇಲ್ಲ”
“ಎಲ್ಲಿ ನೋಡಿದಿರಿ..?
“ಚಿತ್ರಗಳಲ್ಲಿ… ಸಿನೇಮಾಗಳಲ್ಲಿ”
“ಅದು ನಿಮ್ಮ ಕಲಾವಿದರು… ಚಿತ್ರಸಿದ್ದು.. ಕಲ್ಪನೆಯಲ್ಲಿ… ನಾವು ಇರೋದು ಹೀಗೆ”
ವಿಚಿತ್ರ ಕಾಲು, ಮುಖ… ಮೂರು ಕೈ… ಮೂರುಕಾಲು.. ಅರ್ಧ ದೇಹದ ತುಂಬಾ ಕೂದಲು.. ಉಳಿದರ್ದ ಇಲ್ಲ… ಮುಖ ಪ್ರತ್ಯೇಕ ಇರದೆ…ಎದೆಯಭಾಗದಲ್ಲಿತ್ತು… ನನಗಂತು ಆ ವಿಚಿತ್ರ ಆಕೃತಿಗಳನ್ನು ನೋಡಿ.. ಎದಿ ಡವಡವ ಬಡೆದುಕೊಳ್ಳ ಹತ್ತಿತು.. ಅದರಲ್ಲಿ ಅವರ ಮಾತುಗಳು ಒಡಕು ಒಡಕು ಧ್ವನಿ..
ಅದು ಮುಂದುವರೆದು “ಇನ್ನೂ ಒಂದು ದಿನ ಕಳೆದರೆ ಇಲ್ಲಿಯ ಹವಾಮಾನಕ್ಕೆ ತಕ್ಕಂತೆ… ನೀನು ಬದಲಾಗತಿಯಾ…? ಈಗ ನೋಡು ಮುಖ ಮನ್ಯಷ್ಯಂದು.. ದೇಹ ಸೊಳ್ಳೆದು”
ಸುತ್ತಲೂ ನೋಡಿಕೊಂಡು “ಅಯ್ಯೊ.. ಹೌದಲ್ಲ… ಏನಾಗತಿದೆ? ಏನಾಗಿಬಿಟ್ಟೆ… ಅರ್ಧ ಮನುಷ್ಯ ಅರ್ಧ ಸೊಳ್ಳೆ… ಅಯ್ಯೊ ನಾನು ಒಲ್ಲೆ..ನನ್ನನ್ನು ಬಿಟ್ಟು ಬಿಡಿ… ಏನೋ ಕೆಟ್ಟ ಆಸೆಯಿಂದ ಏನೊ ಸೊಳ್ಳೆ ಆಗ ಬಯಸಿದೆ.. ಇಷ್ಟೆಲ್ಲ ಆಗುತ್ತದೆಂದು ಗೊತ್ತಿರಲಿಲ್ಲ”
“ಓ…ಹೋ…. ಏನು ಗೊತ್ತಿರಲಿಲ್ಲವೇ?”
“ಇಲ್ಲ.. ಪ್ಲೀಜ್… ನಾನು ಏನೊ ಮಾಡಲು..ಆಗಲು..ಹೋಗಿ ಹೀಗೆಲ್ಲಾ ಆಗಿದೆ…”
“ನೀನು ಮಾಡಿದ್ದಕ್ಕಾಗಿ ಏನೆಲ್ಲಾ ಗಿದೆ ಗೊತ್ತಾ?
“ಏನಾಗಿದೆ?”
“ನಿಮ್ಮ ಗ್ರಹದಲ್ಲಿ ನಮ್ಮ ಬಗ್ಗೆ ಡೀಪ್ ಡಿಸ್ಕಶನ್ ನಡೆದಿದೆ..ಇಡಿ ಪ್ರಪಂಚವನ್ನೆ ನಾಶ ಮಾಡಲಿಕ್ಕೆ ಹೈಜಿನ್ ತಂತ್ರಜ್ಞಾನ ಬಳಸ್ತಿದ್ದಾರೆ”
“ಅಂದ್ರೆ …”
“ಭ್ರಹ್ಮಾಸ್ತ್ರ ಅಂತ ಕೇಳಿರಬೇಕಲ್ಲ… ನಿಮ್ಮ ಅಣುಬಾಂಬಗಿ೦ತಲೂ ಭಯಂಕರವಾದದ್ದು”
“ಅಯ್ಯೊ….!ಯಾಕೆ..?”
“ಅದೆ ನೀನು ಮಾಡಿದ್ದಕ್ಕಾಗಿ… ಅದು ನಮ್ಮದೆ ಕೆಲಸ ಎಂದು ತಪ್ಪು ಭಾವಿಸಿ”
ನನಗೆ ಅವುಗಳೊಂದಿಗಿನ ಮಾತುಕತೆ ವಿಶೇಷ ಅನಸಕತಿತು… ಅವುಗಳ ವಿಚಿತ್ರ ನೋಟ.. ದೈನ್ಯತಾಭಾವ… ಏನೊ ಹೇಳಲು ಯತ್ನಿಸುತ್ತಿದ್ದವು. ಅವರ ಮಾತುಗಳೆಲ್ಲವು ಕಂಪ್ಯೂಟರ್ ಮೂಲಕ ಹೋಗಿ ನನ್ನಭಾಷೆಯಲ್ಲಿ.. ನನ್ನ ಮಾತುಗಳೆ ಅದೆ ಮಾರ್ಗದಿಂದ ಹೋಗಿ ಅವರ ಭಾಷೆಯಲ್ಲಿ ಕೇಳುತ್ತಿದ್ದವು…
ಅವುಗಳ ಮಾತು ನನಗೆ ಒಂದು ಅರ್ಥ ಆಗತಿರಲಿಲ್ಲ
“ಇರಲಿ. ನೀನು ವಿಶೇಷ ವ್ಯಕ್ತಿ ಇದ್ದಿಯಾ… ಅದಕ್ಕೆ ನಮ್ಮ ಬಗ್ಗೆ ಹೇಳುತಿವಿ ಕೇಳಿತಿಯಾ?” ಎಂದ ನಾಯಕ
ನಾನು “ಹುಂ…. ಕೇಳುವೆ… ನನ್ನ ಮನೆಗೆ ಕಳಸ್ತಿರಲ್ಲ”
“ಆಯ್ತು ಕಳಿಸುವೆವು”
“ ಆದರೆ… ಆದರೆ… ಆದರೆ”
“ಏನು… ಆ… ದ… ರೆ….”
“ ನನಗೆ ಈಗ ಹಸಿವು ಆಗತಿದೆ” ಎಂದೆ… ಹಿ೦ದು ಮುಂದು ಎಲ್ಲಿರುವೆ ಎಂಬುದರ ಅರಿವಿಲ್ಲದೆ.
ಒಂದು ಆಕೃತಿ ತಟ್ಟೆಯಲ್ಲಿ ಪಾಕೇಟ್ ತಂದು ಕೊಟ್ಟಿತು. ಬಿಚ್ಚಿ ನೋಡಿದರೆ ಗುಳಿಗೆ.
“ಗುಳಿಗೆ ಇವು?” ಎಂದೆ
“ಇದು ನಮ್ಮ ಫುಡ್. ನುಂಗು ಹೊಟ್ಟೆ ತುಂಬುತ್ತದೆ”
“ನೀರು….”
“ನೋ.. ವಾಟರ್…” ಎಂದು ಸ್ಟೀಮ್ ಮಿಶನ್ ಹಿಡಿದು…” ಒಪೆನ ಯವುರ್ ಮೌಥ್..” ಎಂದಿತು
“ಏನಿದು…”
“ವಾಟರ್..” ಎಂದು ಬಾಯಲ್ಲಿ ಇಟ್ಟಿತು. ಅದು ಒಳ ಹೋದ ಕೂಡಲೆ ನೀರಾಯಿತು…
ನುಂಗಿದ ಕೂಡಲೆ ಹಸಿವು ಇಂಗಿ ಹೋಯಿತು. ಆಶ್ಚರ್ಯ ಅದೇಗೆ…? ನನ್ನ ಪ್ರೊಜೆಕ್ಟದು ವಿಷಯನೂ ಮನುಷ್ಯನಲ್ಲಿ ಪತ್ರಹರಿತ್ತು ಪ್ಲಾಂಟು ಮಾಡೋದಿತ್ತು… ಇವುಗಳ ಐಡಿಯಾನೂ ಚೆನ್ನಾಗಿದೆ… ಬಡವರಿಗೆ ಇದು ಅನುಕೂಲವಾಗುತ್ತದೆ… ಎಂದು ಮನದಲ್ಲಿ ಅಂದುಕೊ೦ಡೆ.
“ಹೌದು ನಿಮ್ಮಲ್ಲೂ ಎಲ್ಲಾ ಹಾಳಾದ ಮೇಲೆ… ತಿನ್ನೊಕೆ ಇಂತಹವೆ ನೀವು ಕಂಡು ಹಿಡಿತಿರಾ…”
“ಅಂದ್ರೆ…”
“ನಿನಗೆ ಅರ್ಥ ಆಗಲ್ಲ… ನಮ್ಮ ವಾಹನದಲ್ಲಿ ಒಂದು ರೌಂಡ ಹೋಗಿ ಬಾ” ಎಂದು ತನ್ನ ಬಳಗಕ್ಕೆ ಅದೇಶಿಸಿತು… ಏಲಿಯನ್ಸ್ ನಾಯಕ.
ನನ್ನ ಮುಂದೆ ಎರಡು ಏಲಿಯನ್ನಗಳು ಬಂದು “ಕಮ್ ಸಮು… ಮಾಸ್ಕಿಟೊ”ಎಂದು ಪ್ರೀತಿಯಿಂದ ಅದೆ ಪ್ರಯೋಗಾಲಯದಲ್ಲಿದ್ದ ಒಂದು ವಾಹನದಲ್ಲಿ ಕರೆದುಕೊಂಡು ಹೋಗಿ ಕುಳ್ಳರಿಸಿ ಹೋಗೋಣಾ?”ಎಂದವು. “ಸರಿ…ಸರಿ…ನಡಿರಿ” ಎಂದೆ.
। ಇನ್ನು ಮುಂದಿನ ವಾರಕ್ಕೆ ।
0 ಪ್ರತಿಕ್ರಿಯೆಗಳು