ಗಿರಿಧರ ಗಾಡಿಕೊಪ್ಪ ಓದಿದ ‘ಕಾಳಿಗುಡ್ಡದ ಕೌತುಕ’

ಗಿರಿಧರ ಗಾಡಿಕೊಪ್ಪ

ಬೆಂಗಳೂರು‌ ಜಯನಗರದ ಪ್ರತಿಷ್ಠಿತ ವಸಂತ ಪ್ರಕಾಶನವು ‘ವಸಂತ ಬಾಲ ಸಾಹಿತ್ಯ ಮಾಲೆ-3’ಯಲ್ಲಿ ಪ್ರಕಟಿಸಿರುವ ಕೃತಿ ‘ಕಾಳಿಗುಡ್ಡದ ಕೌತುಕ’ ಮಕ್ಳಳ ನಾಟಕ.

ಮಾಲೆಯ ಸಂಪಾದಕರು ಹಿರಿಯ ಕವಿ, ಸಾಹಿತಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ. ಹಿರಿಯ ಹಾಸ್ಯ ಸಾಹಿತಿ, ಕವಿ ಎಚ್.ಡುಂಡಿರಾಜ್ ಈ ಕೃತಿಯ ಲೇಖಕರು. ಈ ಕೃತಿಯ‌ ಬೆನ್ನುಡಿಯನ್ನು ಓದಿಯೇ ಪ್ರಕಾಶಕರಾದ ಕೆ.ಎಸ್.ಮುರಳಿ ಅವರಿಗೆ ಈ ಕೃತಿಯನ್ನು ಕೊಡುವಂತೆ ಕೇಳಿದೆ. ಅವರು ನೀಡಿದ ಈ ಕೃತಿಯನ್ನು ಓದಲು‌ ನಾನು ನಾಲ್ಕೈದು ದಿನಗಳು‌ ಬೇಕಾದವು. ಅರ್ಧ ಮುಕ್ಕಾಲು ತಾಸಿನಲ್ಲಿ ಓದಬಹುದಾಗಿರುವ ಸಣ್ಣ ಕೃತಿಯನ್ನು ಇಷ್ಟು ತಾಸು ತೆಗೆದುಕೊಂಡಿದ್ದರ ಹಿಂದೆ ಕೆಲ ಪುಸ್ತಕಗಳ ಓದೂ ಇತ್ತು.

ಅಂದಹಾಗೆ, ಪಂಜೆ ಮಂಗೇಶರಾಯರ ಮಕ್ಕಳ ಸಾಹಿತ್ಯ ಕೃತಿಯೊಂದರ ಓದಿನ ರುಚಿ ಕಂಡಿದ್ದ ನನಗೆ ‘ಕಾಳಿಗುಡ್ಡದ ರಹಸ್ಯ’ ಸಹ ಆ ರುಚಿಯನ್ನು ಪುನಃ ಕೊಟ್ಟಿದ್ದು ಸುಳ್ಳಲ್ಲ. ಮಕ್ಕಳ ಸಾಹಿತ್ಯ ಎಂದರೇನು ಎಂದು ತಿಳಿಯದವರಿಗೆ ಈ ಮಾಲೆಯ ಸಂಪಾದಕರು ಕಟ್ಟಿಕೊಟ್ಟಿರುವ (ಮುನ್ನುಡಿ?) ಮಾತು ಖಂಡಿತಾ ಮಕ್ಕಳ ಸಾಹಿತಿ ಆಗಬಯಸುವವರಿಗೆ ಚಿನ್ನದ ಖಜಾನೆ ಎಂಬುದು‌ ನನ್ನ ಮಾತು.

ಕೃತಿಯು ಮೌಢನಂಬಿಕೆ ಅಥವಾ ಅಂಜಿಕೆ ಕೋಟೆಯನ್ನು ಬೇಧಿಸುವ ನಿಟ್ಟಿನಲ್ಲಿ ಮಕ್ಕಳ ಮನಸನ್ನು ಪರಿವರ್ತಿಸುವ, ರೂಪಿಸುವ ಶಕ್ತಿ ಹೊಂದಿದೆ. ಈ ಮಕ್ಕಳ‌ ನಾಟಕ ಕೃತಿಯ ಲೇಖಕ ಎಚ್.ಡುಂಡಿರಾಜರು ನವುರು ಹಾಸ್ಯಮಯದಿಂದ ರೂಪಿಸಿರುವುದು ಕೃತಿಯ ಓದಿನ ಆಸಕ್ತಿಗೆ ಕಸುವು ಓದಗಿಸಿದಂತಿದೆ. ಈ ಕೃತಿಯ ಮೂಲಕ ಅವರು ಹಲವು ವರ್ಷಗಳ ಹಿಂದಿನ ಆಶೆಯಾದ ಹೊಸ ನಾಟಕ ರಚನೆಯನ್ನು ಈಡೇರಿಸಿಕೊಂಡಿದ್ದಾರೆ. ಜೊತೆಗೆ ಅಚ್ಚುಕಟ್ಟಾದ, ಆಕರ್ಷಕ ಮುಖಪುಟ, ಒಳಪುಟ ವಿನ್ಯಾಸಗಳು, ಚಿತ್ರಗಳ ಅಳವಡಿಕೆ ತಂತ್ರಗಳು ಮನ ಸೆಳೆಯುವಂತಿವೆ. ಈ ಕೃತಿಯನ್ನು ಅಂದವಾಗಿ ಮುದ್ರಿಸಿರುವ ಕ್ರೆಡಿಟ್ಟು ನೇಹ ಕ್ರಿಯೇಷನ್ಸ್ಗೆ ಸಲ್ಲುತ್ತದೆ. ಹಿರಿಯ ಕಲಾವಿದರಾದ ಪ.ಸ.ಕುಮಾರ್ ಹಾಗೂ ಸಂತೋಷ್ ಸಸಿಹಿತ್ಲು ಚಿತ್ರಗಳನ್ನು ರಚಿಸಿದ್ದಾರೆ. ಮುಖಪುಟ ರಚನೆ ಸೌಮ್ಯ ಕಲ್ಯಾಣಕರ್ ಸೇವೆ ಕೃತಿಗಿದೆ.

ಸಂಪಾದಕರ ಮಕ್ಕಳ ಮನಸ್ಸನ್ನು ಕಂಡಿರುವ ಪ್ರಕಾಶಕರು ಸ್ಮರಿಸಿರುವಂತೆ, ಈ ಕೃತಿ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅವರ ಜೀವನದ ಬಹು ಆಪ್ತ ಸಂಪಾದನೆಗಳಲ್ಲಿ ಒಂದು ಎಂಬುದರಲ್ಲಿ ಖಂಡಿತಾ ಸಂಶಯವಿಲ್ಲ ಅನಿಸಿದೆ. 96 ಪುಟಗಳ ಈ ಕೃತಿಯ ಬೆಲೆ: 115.

ಮಂಗನಹಳ್ಳಿ ಹೆಸರಿ‌ನ ಊರು, ಡಂಗುರದವನು ಬೀದಿನಾಟಕ ಸಾರುವಾಗ ಪಂಡಿತನ ಜತೆಗಿನ ಸಂಭಾಷಣೆ, ಕಾಡು ನೋಡಲು‌ ಹೋಗುವ ಮಕ್ಕಳು, ದೂರದ ಕಾಳಿಗುಡ್ಡದಲ್ಲಿ ಕೇಳಿಬಂದ ಸದ್ದು, ಆ ಸದ್ದಿನ ಮೂಲ ಬೇಧಿಸುವುದು.. ಹೀಗೆ ಆರಂಭದಿಂದ ಹಾಡುಗಳ ದೃಶ್ಯಗಳೂ ಇರುವ, ಭರಪೂರ ಮನರಂಜನೆ ನೀಡುವ ಸೊಗಸಾದ ಕೃತಿಯಾಗಿದೆ ಕಾಳಿಗುಡ್ಡದ ರಹಸ್ಯ.

ನಾನಂತೂ ಓದಿ, ಖಂಡಿತಾ ಮೆಚ್ಚಿಕೊಂಡೆ. ನಿಮಗೂ ಸಹ ಈ ಓದಿನ ರುಚಿ ಲಭಿಸುವಂತಾಗಲಿ…

‍ಲೇಖಕರು Admin

November 11, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: