ಅಮೃತಾ ಪ್ರೀತಂ
ಕನ್ನಡಕ್ಕೆ: ನಿವೇದಿತಾ ಎಚ್
**
ಮಧ್ಯ ರಾತ್ರಿಯಲ್ಲಿ
ನಿನ್ನ ನೆನಪು ನನ್ನ ಕದ ತಟ್ಟುವುದು
ಈ ಪದಗಳು ಹಾಡ ಕಟ್ಟುಲು ಬರುವ ನುಡಿಗಳಲ್ಲ
ಆದರೆ ಹಣೆಯ ಮೇಲಿನ ಬೆವರಿನ ಬಿಂದುಗಳು
ಈ ಪದಗಳು ಹಾಡ ಕಟ್ಟಲು ಬರುವ ನುಡಿಗಳಲ್ಲ
ಆದರೆ ನನ್ನ ಲೇಖನಿಯನ್ನು ಜಡವಾಗಿಸುವ ಕಣ್ಣಹನಿಗಳು
ಈ ಪದಗಳು ಹಾಡ ಕಟ್ಟಲು ಬರುವ ನುಡಿಗಳಲ್ಲ
ಗಾಯಗೊಂಡ ಮೌನದ ಅಳಲು
ಪ್ರೀತಿ ನನಗೆ ನೀಡಿದ ಸಾಲಗಳನ್ನೆಲ್ಲಾ ತೀರಿಸಿರುವೆ
ಸಾಲಗಳಿರುವುದೇ ತೀರಿಸಲಲ್ಲವೇ?
ಆದರೆ ಅದೇಕೆ ಅವು ಬೆಳೆಯುತ್ತಲೇ ಹೋಗುತ್ತವೆ?
ನಿನ್ನ ನೆನಪು ಚಿರಶಾಂತಿಯ ಬೇಡಿಕೆಯೊಂದಿಗೆ ಬರುತ್ತದೆ
ದಿನಾಂಕ ನಮೂದಿಸದ ಸಾವಿನ ಪತ್ರಕ್ಕೆ
ಬದುಕನ್ನು ಸಹಿ ಹಾಕಲು ಒತ್ತಾಯಿಸುತ್ತಾ
ನಿನ್ನ ನೆನಪು ನನ್ನ ಕದ ತಟ್ಟುವುದು
0 ಪ್ರತಿಕ್ರಿಯೆಗಳು