**
ಈ ತಿಂಗಳ 28ರಂದು ‘ರಾಜಮಾತೆ ಕೆಂಪನಂಜಮ್ಮಣ್ಣಿ’ ಎಂಬ ನನ್ನ ನಾಲ್ಕನೆಯ ಕಾದಂಬರಿಯ ಬಿಡುಗಡೆ ಕಾರ್ಯಕ್ರಮವಿದೆ. ತಮಗೆ ಗೌರವ ಪೂರ್ವಕ ಆಹ್ವಾನ. ಯಾವ ತಾಯಿಯ ಕಾರಣದಿಂದ ಬೆಂಗಳೂರು ಮೊದಲಬಾರಿಗೆ ನಲ್ಲಿ ನೀರು ಕುಡಿಯಿತೋ, ಯಾವ ತಾಯಿಯ ಕಾರಣದಿಂದ ಶಿವನ ಸಮುದ್ರ ವಿದ್ಯುತ್ ಸ್ಥಾವರ ಆರಂಭಗೊಂಡು ಬೆಂಗಳೂರಿನಲ್ಲಿ ಮೊದಲ ವಿದ್ಯುತ್ ದೀಪ ಬೆಳಗಿತೋ, ಯಾವ ತಾಯಿ ಟಾಟಾ ವಿಜ್ಞಾನ ಮಂದಿರಕ್ಕೆ ಭೂಮಿಯನ್ನು ಕೊಟ್ಟು ಅದು ಬೆಂಗಳೂರಿನಲ್ಲಿ ಸ್ಥಾಪನೆ ಗೊಳ್ಳುವಂತೆ ಮಾಡಿದರೋ, ಯಾರು ವಿಕ್ಟೋರಿಯಾದಂತಹ ಆಸ್ಪತ್ರೆಯನ್ನು ಸ್ಥಾಪಿಸಿದರೋ, ಎಲ್ಲಕ್ಕಿಂತ ಹೆಚ್ಚಾಗಿ ಯಾರು ನಾಡಿಗೆ ನಾಲ್ವಡಿಯಂತಹ ಮಹಾನ್ ಆಡಳಿತಗಾರರನ್ನು ಕೊಟ್ಟರೋ ಆ ಮಹಾ ತಾಯಿಯ ಜೀವನ ಕಥನವಿದು.
ನಮ್ಮ ಬದುಕು ಇಂದು ಈ ಹಂತ ತಲುಪಿದೆ ಎಂದರೆ ಅದಕ್ಕೆ ವಾಣಿವಿಲಾಸ ಸನ್ನಿಧಾನದ ಕೆಂಪನಂಜಮ್ಮಣ್ಣಿಯಂತವರ ಕೊಡುಗೆಗಳು ಕಾರಣ. ಅವರ ಕುರಿತು ಬರೆದ ಕಾದಂಬರಿಯ ಬಿಡುಗಡೆಗೆ ತಮ್ಮಂತಹ, ಪ್ರಾಜ್ಞರು ತಿಳುವಳಿಕೆಯುಳ್ಳವರು ಬಂದು ಶುಭ ಹಾರೈಸಿದರೆ ನನ್ನಂತಹವರಿಗೊಂದು ಉತ್ತೇಜನ. ತಮಗಿದು ನನ್ನ ಪ್ರೀತಿಯ ಆಹ್ವಾನ, ಎಲ್ಲರೂ ಬನ್ನಿ..
ಧನ್ಯವಾದಗಳು
0 ಪ್ರತಿಕ್ರಿಯೆಗಳು